Kannada letter writing examples | Official Letter in Kannada Format
kannada letter writing to gram panchayat | how to write a letter to gram panchayat in kannada | gram panchayat letter in kannada | official letter in kannada | how to write a complaint letter to gram panchayat in kannada
Here you will find kannada letter writing examples and official letter in kannada format with examples.
How to write a letter of acknowledgement in Kannada
kannada letter writing examples 1:
ನೀವು ಶಾಲೆಯೊಂದರ ಗ್ರಂಥಪಾಲಕರಾಗಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಎಂದು ಭಾವಿಸಿ ಶಾಲಾ ಮಕ್ಕಳಿಗೋಸ್ಕರ 200 ಬರೆಯುವ ಪುಸ್ತಕ ಕಳಿಸುವಂತೆ ಸಪ್ನಾ ಬುಕ್ ಹೌಸ್ ಗೆ ಪತ್ರ ಬರೆಯಿರಿ (Assume that you are working as a librarian in a school ,write a letter to sapna book house to send 200 note books for the school children and also mention whether they have received it or not).
ಇಂದ,
ಸಂಪಿಗೆ ಶಾಲೆ , ಜಯನಗರ
ಬೆಂಗಳೂರು – 560001
ದಿನಾಂಕ : 15 ಜೂನ್ 2021
ರಿಗೆ,
ಮ್ಯಾನೇಜರ್
ಸಪ್ನಾ ಬುಕ್ ಹೌಸ್ , 5ನೇ ಕ್ರಾಸ್
ಅವೆನ್ಯೂ ರಸ್ತೆ
ಬೆಂಗಳೂರು – 560002
ಮಾನ್ಯರೇ,
ವಿಷಯ: ಶಾಲೆಗೆ 200 ಬರೆಯುವ ಪುಸ್ತಕಗಳನ್ನು ಕಳಿಸುವಂತೆ ಪತ್ರ.
ಮೊದಲನೇದಾಗಿ ಸಪ್ನಾ ಬುಕ್ ಹೌಸ್ ಹಲವಾರು ವರ್ಷಗಳಿಂದ ಸಮಯಕ್ಕೆ ಸರಿಯಾಗಿ ಪುಸ್ತಕಗಳನ್ನು ನೀಡುವುದರ ಮೂಲಕ ಶಾಲೆಗೇ ನೀಡುತ್ತಿರುವ ಸೇವೆಯ ಬಗ್ಗೆ ನಮಗೆ ಅಪಾರ ಗೌರವವಿದೆ ಹಾಗೂ ನಿಮ್ಮ ನಿರಂತರ ಸೇವೆಗಾಗಿ ಧನ್ಯವಾದಗಳನ್ನು ಸಲ್ಲಿಸಲು ಬಯಸುತ್ತೇನೆ. ನಮ್ಮ ಶಾಲೆಯ ವಿದ್ಯಾರ್ಥಿಗಳಿಗೆ 200 ಬರೆಯುವ ಪುಸ್ತಕಗಳ ಅಗತ್ಯವಿದೆ. ಶಾಲೆ ಆರಂಭವಾಗಿರುವುದರಿಂದ ತಾವು ಕೂಡಲೇ ಪುಸ್ತಕಗಳನ್ನು ಕಳಿಸಬೇಕೆಂದು ತಮ್ಮಲ್ಲಿ ಈ ಪತ್ರದ ಮೂಲಕ ಮನವಿ ಮಾಡುತ್ತಿದ್ದೇನೆ ಮತ್ತು ಈ ಪತ್ರದ ಸ್ವೀಕೃತಿಯನ್ನು ದಯವಿಟ್ಟು ಅಂಗೀಕರಿಸಬೇಕೆಂದು ತಮ್ಮಲ್ಲಿ ವಿನಂತಿಸುತ್ತೇನೆ.
ತಮ್ಮ ವಿಶ್ವಾಸಿ
ಗಣೇಶ್
(ಗ್ರಂಥಪಾಲಕ)
How to write a complaint letter to BBMP in Kannada
kannada letter writing examples 2:
ನೀವು ಬೆಂಗಳೂರಿನ ಜಯನಗರದ ನಿವಾಸಿ ಎಂದು ಭಾವಿಸಿ, ನಿಮ್ಮ ಪ್ರದೇಶದಲ್ಲಿನ ಮಳೆಗಾಲದ ಸಮಯದಲ್ಲಿ ನೀರಿನಿಂದ ಉಂಟಾಗುವ ಸಮಸ್ಯೆಯ ಬಗ್ಗೆ ಬಿಬಿಎಂಪಿ ಗೆ ಪತ್ರ ಬರೆಯಿರಿ (Assume that you are resident of Jayanagar ,Bangalore. Write a complaint letter to BBMP mentioning water logging after heavy rainfall along with the water logging problems).
ಇಂದ,
#15, 2 ನೇ ಕ್ರಾಸ್
ಕೃಷ್ಣ ಕಾಲೋನಿ, ಜಯನಗರ
ಬೆಂಗಳೂರು
ದಿನಾಂಕ: 20 ಮೇ 2021
ರಿಗೆ,
ಮೇಯರ್
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ
ಬೆಂಗಳೂರು
ವಿಷಯ: ಜಯನಗರದ ಕಾಲೋನಿಯಲ್ಲಿ ಮಳೆಯ ನೀರಿನಿಂದ ಉಂಟಾಗಿರುವ ಸಮಸ್ಯೆಯ ಬಗ್ಗೆ ದೂರು.
ಮಾನ್ಯರೇ,
ನಾನು ಕುಮಾರ್, ಜಯನಗರದ ಕಾಲೋನಿ ನಿವಾಸಿ. ಪ್ರತಿ ವರ್ಷ ಮಳೆಗಾಲದ ಸಮಯದಲ್ಲಿ ನೀರು ಹೆಚ್ಚಾಗಿ ಈ ಪ್ರದೇಶ ನೀರಿನಿಂದ ತುಂಬಿಕೊಳ್ಳುತ್ತದೆ. ಹಲವು ದಿನಗಳವರೆಗೆ ನೀರು ನಿಲ್ಲುವುದರಿಂದ ಇಲ್ಲಿನ ನಿವಾಸಿಗಳು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಪ್ರದೇಶ ಸಮಿತಿಗೆ ಹಲವು ಬಾರಿ ಮನವಿ ಮಾಡಿದ್ದರೂ ಇಲ್ಲಿಯವರೆಗೂ ಯಾವುದೇ ಪರಿಹಾರವಾಗಿಲ್ಲ ಇನ್ನೂ ಕೂಡ ಪರಿಸ್ಥಿತಿ ಹಾಗೆಯೇ ಇದೆ.
ನೀರಿನಿಂದ ಹರಡುವ ರೋಗಗಳು ಹೆಚ್ಚುತ್ತಿರುವುದರಿಂದ ಇಲ್ಲಿನ ನಿವಾಸಿಗಳ ಬದುಕು ದುಸ್ತರವಾಗಿದೆ. ಮನೆಗಗಳಲ್ಲೆಲ್ಲ ನೀರು ನುಗ್ಗಿ ಮನೆಯ ಸಾಮಾನುಗಳೆಲ್ಲ ಹಾಳಾಗಿದೆ. ಮಕ್ಕಳು ಶಾಲಾ ಕಾಲೇಜಿಗೆ, ಉದ್ಯೋಗಿಗಳು ಕಚೇರಿ ತೆರಳಲಾಗದೆ ಮನೆಯಲ್ಲೇ ಉಳಿಯುವಂತಾಗಿ ಸಮಸ್ಯೆ ಎದುರಿಸುತ್ತಿದ್ದಾರೆ. ದಯವಿಟ್ಟು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಮತ್ತು ಆದಷ್ಟು ಬೇಗ ಸಮಸ್ಯೆಯನ್ನು ಬಗೆಹರಿಸುವಂತೆ ತಮ್ಮಲ್ಲಿ ವಿನಂತಿ ಮಾಡುತ್ತಿದ್ದೇನೆ.
ನಿಮ್ಮ ವಿಶ್ವಾಸಿ
ಕುಮಾರ್
Writing a letter to BESCOM office about bad condition of street lamps in Kannada
kannada letter writing examples 3:
ನಿಮ್ಮ ನಗರದ ಬೀದಿ ದೀಪಗಳ ದುಸ್ಥಿತಿಯ ಬಗ್ಗೆ ಬೆಸ್ಕಾಂಗೆ ಪತ್ರ ಬರೆಯಿರಿ (Write a letter to BESCOM office about the bad condition of street lamps in kannada).
ಇಂದ,
#15, 2 ನೇ ಕ್ರಾಸ್
ಕೃಷ್ಣ ಕಾಲೋನಿ, ಜಯನಗರ
ಬೆಂಗಳೂರು – 560061
ದಿನಾಂಕ: 20 ಮೇ 2021
ರಿಗೆ,
ಇಂಜಿನಿಯರ್
ಬೆಸ್ಕಾಂ
ಬೆಂಗಳೂರು
ವಿಷಯ: ಬೀದಿ ದೀಪಗಳ ಕಳಪೆ ಸ್ಥಿತಿಯ ಬಗ್ಗೆ ದೂರು.
ಮಾನ್ಯರೇ,
ನಾನು ಜಯನಗರದ ಕೃಷ್ಣ ಕಾಲೋನಿಯ ನಿವಾಸಿಯಾಗಿದ್ದೇನೆ ಮತ್ತು ನಮ್ಮ ಪ್ರದೇಶದಲ್ಲಿನ ನಿವಾಸಿಗಳು ಬೀದಿ ದೀಪಗಳು ಕೆಟ್ಟುಹೋಗಿರುವುದರಿಂದ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ನಾನು ನಿಮ್ಮ ಗಮನಕ್ಕೆ ತರಲು ಬಯಸುತ್ತೇನೆ.
ಬೀದಿ ದೀಪಗಳಿಲ್ಲದೇ ರಾತ್ರಿ ವೇಳೆ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಸುರಕ್ಷಿತವಾಗಿ ರಸ್ತೆಗಳನ್ನು ದಾಟಲು ಸಾಧ್ಯವಾಗುತ್ತಿಲ್ಲ.
ಸರಿಯಾದ ಬೀದಿ ದೀಪಗಳ ಕೊರತೆಯಿಂದ ಕಳ್ಳತನ ಹೆಚ್ಚಾಗಿದೆ. ಮನೆಗೆ ಬೀಗ ಹಾಕಿಕೊಂಡು ಹೋಗುವುದು ಕಷ್ಟವಾಗಿದೆ. ಇದರ ಜೊತೆಗೆ, ಹೆಚ್ಚಿನ ನಿವಾಸಿಗಳು ವೃದ್ಧಾಪ್ಯ ಮತ್ತು ನಿವೃತ್ತರಾಗಿರುವುದರಿಂದ ಜನರು ದರೋಡೆಯ ಭೀತಿಯಿಂದ ಜೀವನ ನಡೆಸುವಂತಾಗಿದೆ.
ಆದುದರಿಂದ ಆದಷ್ಟು ಬೇಗ ಅಗತ್ಯ ಕ್ರಮಗಳನ್ನು ಕೈಗೊಂಡು ಬೀದಿ ದೀಪಗಳನ್ನು ಸರಿಪಡಿಸಿ ಅಥವಾ ಬದಲಾಯಿಸುವಂತೆ ಕಾಲೋನಿ ಹಾಗೂ ನಿವಾಸಿಗಳ ಪರವಾಗಿ ತಮ್ಮಲ್ಲಿ ವಿನಂತಿಸುತ್ತೇನೆ.
ನಿಮ್ಮ ವಿಶ್ವಾಸಿ
ಕುಮಾರ್
ಜಯನಗರದ ನಿವಾಸಿ
How to write Health upset leave letter for class teacher in Kannada
kannada letter writing examples 4:
ನೀವು 5 ನೇ ತರಗತಿಯ ‘ಸಿ’ ವಿಭಾಗದ ವಿದ್ಯಾರ್ಥಿಯಾಗಿದ್ದು ಜ್ವರದ ಕಾರಣದಿಂದ 3 ದಿನಗಳ ರಜೆ ಕೋರಿ ನಿಮ್ಮ ತರಗತಿಯ ಶಿಕ್ಷಕರಿಗೆ ಪತ್ರ ಬರೆಯಿರಿ (Write a health upset leave letter for your class teacher requesting for leave as you are not feeling well).
ರಿಗೆ,
ವರ್ಗ ಶಿಕ್ಷಕ 5 ನೇ ತರಗತಿ
ಸಂಪಿಗೆ ಹಿರಿಯ ಪ್ರಾಥಮಿಕ ಶಾಲೆ
ವಿವೇಕ ನಗರ
ಬೆಂಗಳೂರು – 560041
ದಿನಾಂಕ : 2 ಆಗಸ್ಟ್ 2021
ವಿಷಯ: ಅನಾರೋಗ್ಯದ ಕಾರಣ ರಜೆಯ ಪತ್ರ.
ಆತ್ಮೀಯ ಗುರುಗಳೇ,
ನಾನು ಸುರೇಶ, 5 ನೇ ತರಗತಿಯ ‘ಸಿ’ ವಿಭಾಗದ ವಿದ್ಯಾರ್ಥಿ. ನಿನ್ನೆಯಿಂದ ನಾನು ಜ್ವರ ಮತ್ತು ತಲೆನೋವಿನಿಂದ ಬಳಲುತ್ತಿದ್ದೇನೆ. ತೀವ್ರವಾದ ಜ್ವರವಿರುವ ಕಾರಣ ವೈದ್ಯರು ಕನಿಷ್ಠ 1 ದಿನ ವಿಶ್ರಾಂತಿ ಪಡೆಯುವಂತೆ ಸಲಹೆ ನೀಡಿದ್ದಾರೆ. ಹಾಗಾಗಿ ನಾಳೆಯಂದು ಶಾಲೆಗೆ ಹಾಜರಾಗಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಈ ಪತ್ರದ ಮೂಲಕ ಒಂದು ದಿನದ ಮಟ್ಟಿಗೆ ರಜೆಯನ್ನು ನೀಡಬೇಕೆಂದು ತಮ್ಮಲ್ಲಿ ಕೋರುತ್ತೇನೆ ಹಾಗೂ ವೈದ್ಯರು ನೀಡಿರುವ ಪ್ರಮಾಣ ಪತ್ರವನ್ನು ಇದರೊಂದಿಗೆ ಲಗತ್ತಿಸಿದ್ದೇನೆ.
ಧನ್ಯವಾದಗಳು
ನಿಮ್ಮ ವಿಶ್ವಾಸಿ
ಸುರೇಶ
ರೋಲ್ ನಂಬರ್ – 10
5 ನೇ ತರಗತಿ
ವಿಭಾಗ ಸಿ
ಸಂಪಿಗೆ ಹಿರಿಯ ಪ್ರಾಥಮಿಕ ಶಾಲೆ
Write a letter to your librarian to order books for library in Kannada
kannada letter writing examples 5:
ಈಗಿರುವ ಪುಸ್ತಕಗಳು ಹಳೆಯದಾಗಿರುವುದರಿಂದ ಹೊಸ ಪುಸ್ತಕಗಳನ್ನು ತರಿಸುವಂತೆ ನಿಮ್ಮ ಶಾಲೆಯ ಗ್ರಂಥಪಾಲಕರಿಗೆ ಪತ್ರ ಬರೆಯಿರಿ (Write a letter to your school librarian requesting to order new books as the existing books have become old).
ರಿಗೆ,
ಗ್ರಂಥಪಾಲಕ
ಸಂಪಿಗೆ ಶಾಲೆ, ಜಯನಗರ
ಬೆಂಗಳೂರು – 560061
ವಿಷಯ : ಗ್ರಂಥಾಲಯಕ್ಕೆ ಹೊಸ ಪುಸ್ತಕಗಳನ್ನು ಆರ್ಡರ್ ಮಾಡಲು ವಿನಂತಿ.
ಗೌರವಾನ್ವಿತ ಸರ್/ಮೇಡಂ,
ನನ್ನ ಹೆಸರು ರಾಮ್ ಮತ್ತು ನನ್ನ ನೋಂದಣಿ ಸಂಖ್ಯೆ 10 (ರೋಲ್ ಸಂಖ್ಯೆ). ನಾನು ನಿಮ್ಮ ಶಾಲೆಯ 8 ನೇಯ ತರಗತಿಯ ‘ಸಿ’ ವಿಭಾಗದ ವಿದ್ಯಾರ್ಥಿಯಾಗಿದ್ದೇನೆ.
ಗ್ರಂಥಾಲಯದಲ್ಲಿ ಲಭ್ಯವಿರುವ ಪುಸ್ತಕಗಳು ಹಳೆಯದಾಗಿದೆ ಮತ್ತು ಹೆಚ್ಚಿನ ಪುಸ್ತಕಗಳು ನಮಗೆ ಅಗತ್ಯವಿರುವ ಪಠ್ಯಕ್ರಮದ ವಿಷಯ ಅಥವಾ ಅಧ್ಯಾಯಗಳನ್ನು ಒಳಗೊಂಡಿಲ್ಲ. ಅಲ್ಲದೆ ಇರುವ ಪುಸ್ತಕಗಳಲ್ಲಿ ಕೆಲ ಪುಸ್ತಕಗಳು ಹರಿದಿವೆ ಅಥವಾ ಮುಖಪುಟವನ್ನು ಹೊಂದಿರುವುದಿಲ್ಲ. ಇದರಿಂದ ಸಮಸ್ಯೆ ಉಂಟಾಗುತ್ತಿದ್ದು ನಮಗೆ ಅಗತ್ಯವಿರುವ ವಿಷಯಗಳ ಬಗ್ಗೆ ಅಧ್ಯಯನ ನಡೆಸಲು ಸಾಧ್ಯವಾಗುತ್ತಿಲ್ಲ.
ಆದ್ದರಿಂದ ಗ್ರಂಥಾಲಯಕ್ಕಾಗಿ ಹೊಸ ಪುಸ್ತಕಗಳನ್ನು ದಯವಿಟ್ಟು ತರಿಸಿ ಎಂದು ಈ ಪತ್ರದ ಮೂಲಕ ನಾನು ನಿಮ್ಮಲ್ಲಿ ಮನವಿ ಮಾಡುತ್ತೇನೆ.
ಧನ್ಯವಾದಗಳು,
ರಾಮ್
8 ನೇಯ ತರಗತಿ
‘ಸಿ’ ವಿಭಾಗ
ನೋಂದಣಿ ಸಂಖ್ಯೆ 10
How to Write bank statement request letter format in Kannada
kannada letter writing examples 6:
ಆದಾಯ ತೆರಿಗೆ ಸಲ್ಲಿಸಲು ಬ್ಯಾಂಕ್ ಸ್ಟೇಟ್ಮೆಂಟ್ ನ ಅಗತ್ಯ ಇರುವುದರಿಂದ, ಕಳೆದ ಆರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್ ಪಡೆಯಲು ಬ್ಯಾಂಕ್ ಮ್ಯಾನೇಜರ್ ಗೆ ಮನವಿ ಪತ್ರ ಬರೆಯಿರಿ (Write a letter to bank manager requesting for bank statement of last six months as you need the bank statement for income tax declaration).
ರಿಗೆ,
ಬ್ರಾಂಚ್ ಮ್ಯಾನೇಜರ್
[ಬ್ಯಾಂಕ್ ಹೆಸರು]
[ಶಾಖೆ ವಿಳಾಸ]
ದಿನಾಂಕ : 20-ಜನವರಿ-2021
ಇಂದ,
ರಾಮ್
[ನಿಮ್ಮ ಬ್ಯಾಂಕ್ ಖಾತೆ ವಿವರಗಳು]
[ನಿಮ್ಮ ವಿಳಾಸ]
[ಮೊಬೈಲ್ ಸಂಖ್ಯೆ]
ವಿಷಯ: ಜುಲೈ 2020 ರಿಂದ ಡಿಸೆಂಬರ್ 2020 ರವರೆಗಿನ ಬ್ಯಾಂಕ್ ಸ್ಟೇಟ್ಮೆಂಟ್ ಗಾಗಿ ಅರ್ಜಿ ಪತ್ರ.
ಮಾನ್ಯರೇ,
ನಿಮ್ಮ ಬ್ಯಾಂಕ್ ಶಾಖೆಯಲ್ಲಿ ನಾನು ಉಳಿತಾಯ ಖಾತೆಯನ್ನು ಹೊಂದಿದ್ದೇನೆ. ನನ್ನ ಖಾತೆಯ ಸಂಖ್ಯೆ ____________ [ನಿಮ್ಮ ಖಾತೆ ಸಂಖ್ಯೆಯನ್ನು ಬರೆಯಿರಿ] ಆಗಿದೆ. ಆದಾಯ ತೆರಿಗೆಯನ್ನು ಸಲ್ಲಿಸಲು ನನ್ನ ಬ್ಯಾಂಕ್ ಖಾತೆಯ ಕೊನೆಯ 6 ತಿಂಗಳ ಸ್ಟೇಟ್ಮೆಂಟ್ ಅಗತ್ಯವಿದೆ. [ಇಲ್ಲಿ ನೀವು ನಿಮ್ಮ ನಿಖರವಾದ ಕಾರಣವನ್ನು ಸೂಚಿಸಬಹುದು]
ಆದ್ದರಿಂದ, ದಯವಿಟ್ಟು ನನ್ನ ಕೊನೆಯ 6 ತಿಂಗಳ ಬ್ಯಾಂಕ್ ಖಾತೆಯ ಸ್ಟೇಟ್ಮೆಂಟ್ ಆದಷ್ಟು ಶೀಘ್ರವಾಗಿ ನೀಡಬೇಕೆಂದು ಈ ಪತ್ರದ ಮೂಲಕ ತಮ್ಮಲ್ಲಿ ಮನವಿ ಮಾಡುತ್ತೇನೆ. ಬ್ಯಾಂಕ್ ಖಾತೆಯ ಸ್ಟೇಟ್ಮೆಂಟ್ ಇಂದ ನಾನು ನನ್ನ ಆದಾಯ ತೆರಿಗೆಯನ್ನು ಸಮಯಕ್ಕೆ ಸರಿಯಾಗಿ ಸಲ್ಲಿಸಲು ಸಾಧ್ಯವಾಗುತ್ತದೆ.
ಈ ವಿಷಯದಲ್ಲಿ ನಿಮ್ಮ ಸಹಕಾರವನ್ನು ಹೆಚ್ಚು ಪ್ರಶಂಸಿಸಲಾಗುತ್ತದೆ.
ಧನ್ಯವಾದಗಳು
ನಿಮ್ಮ ವಿಶ್ವಾಸಿ
ರಾಮ್
ಸಹಿ
How to write a complaint letter to gram panchayat in Kannada
kannada letter writing examples 7:
ನಿಮ್ಮ ಗ್ರಾಮದ ನೀರಿನ ಘಟಕ ಕೆಟ್ಟು ಹೋಗಿದೆ ಎಂದು ಭಾವಿಸಿ, ನೀರಿನ ಘಟಕ ಸರಿಪಡಿಸುವಂತೆ ಗ್ರಾಮ ಪಂಚಾಯಿತಿಗೆ ಮನವಿ ಪತ್ರ ಬರೆಯಿರಿ (Assume that water filter in your village is not functioning, write a complaint letter to gram panchayat requesting to repair water filter).
ಇಂದ,
ಕುಮಾರ್
ದೊಡ್ಡಕಟ್ಟೆ ಗ್ರಾಮ
ಮಂಡ್ಯ ತಾಲ್ಲೂಕು
ಮೈಸೂರು ಜಿಲ್ಲೆ
ರಿಗೆ,
ಅಧ್ಯಕ್ಷರು
ಗ್ರಾಮ ಪಂಚಾಯಿತಿ
ದೊಡ್ಡಕಟ್ಟೆ ಗ್ರಾಮ
ಮಂಡ್ಯ ತಾಲ್ಲೂಕು
ಮೈಸೂರು ಜಿಲ್ಲೆ
ವಿಷಯ : ಗ್ರಾಮದ ನೀರು ಶುದ್ಧೀಕರಿಸುವ ಘಟಕ ಸರಿಪಡಿಸುವಂತೆ ಮನವಿ.
ಮಾನ್ಯರೇ,
ಮೇಲೆ ತಿಳಿಸಿರುವ ವಿಷಯದಂತೆ, ನಮ್ಮ ಗ್ರಾಮದ ನೀರು ಶುದ್ಧೀಕರಿಸುವ ಘಟಕ ಕೆಟ್ಟು ಹೋಗಿ ಇಂದಿಗೆ ಒಂದು ತಿಂಗಳಾಗಿದೆ. ನಮ್ಮ ಗ್ರಾಮದ ಹತ್ತಿರ ಸುಮಾರು 5 ಕಿಲೊಮೀಟರ್ ದೂರದವರೆಗೂ ಯಾವುದೇ ನೀರಿನ ಘಟಕ ಇಲ್ಲದಿರುವುದರಿಂದ, ಜನ ವಿಧಿಯಿಲ್ಲದೇ ಬೋರ್ವೆಲ್ ನೀರನ್ನು ಸೇವಿಸಿ ಒಂದಿಲ್ಲೊಂದು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ಈ ಬಗ್ಗೆ ಈಗಾಗಲೇ ಗ್ರಾಮದ ಹಲವಾರು ಜನ ನೀರು ಶುದ್ಧೀಕರಿಸುವ ಘಟಕವನ್ನು ಸರಿಪಡಿಸುವಂತೆ ದೂರನ್ನು ಸಲ್ಲಿಸಿರುತ್ತಾರೆ. ಆದರೂ ನೀರಿನ ಘಟಕ ರಿಪೇರಿ ಆಗಿರುವುದಿಲ್ಲ ಆದ್ದರಿಂದ ದಯವಿಟ್ಟುಆದಷ್ಟು ಬೇಗನೆ ನೀರು ಶುದ್ಧೀಕರಿಸುವ ಘಟಕವನ್ನು ಸರಿಪಡಿಸಬೇಕೆಂದು ಈ ಪತ್ರದ ಮೂಲಕ ತಮ್ಮಲ್ಲಿ ಮನವಿ ಗ್ರಾಮದ ಜನರ ಪರವಾಗಿ ಮನವಿ ಮಾಡುತ್ತೇನೆ.
ವಂದನೆಗಳೊಂದಿಗೆ
ತಮ್ಮ ವಿಶ್ವಾಸಿ
ಕುಮಾರ್
ದೊಡ್ಡಕಟ್ಟೆ ಗ್ರಾಮದ ನಿವಾಸಿ
ಪತ್ರ ಬರೆಯಲು ಸಹಾಯವಾಗುವಂತೆ ಕೆಲ ಉದಾಹರಣೆಗಳನ್ನು ಇಲ್ಲಿ ಕೊಡಲಾಗಿದೆ.
Click on the below link for Hindi letter writing हिंदी में पत्र लेखन