Domain Meaning in Kannada | ಡೊಮೈನ್ ಬಗ್ಗೆ ಕನ್ನಡದಲ್ಲಿ
Here you will find domain meaning in Kannada, how domain works, domain types, difference between domain and hosting, how to buy and choose a domain name, some commonly asked questions related to domain in kannada language.
ಇಲ್ಲಿ ನೀವು ಡೊಮೇನ್ ಎಂದರೆ ಏನು ಮತ್ತು ಡೊಮೇನ್‌ಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂದು ತಿಳಿಯಬಹುದು. ಒಂದು ವೇಳೆ ನೀವು ವೆಬ್‌ಸೈಟ್ ತಯಾರಿಸಬೇಕೆಂದಿದ್ದರೆ ಸರಿಯಾದ ಡೊಮೇನ್ ಅನ್ನು ಹೇಗೆ ಆಯ್ಕೆ ಮಾಡಿಕೊಳ್ಳಬೇಕು ಎಂದು ಇಲ್ಲಿ ತಿಳಿಯಬಹುದು.
ಡೊಮೈನ್ ಎಂದರೇನು ? | What is a Domain Name?
ಡೊಮೇನ್ ಎನ್ನುವುದು ನಿಮ್ಮ ವೆಬ್‌ಸೈಟ್‌ನ ವಿಳಾಸವಾಗಿದ್ದು, ಒಂದು ವೇಳೆ ಜನರು ನಿಮ್ಮ ವೆಬ್‌ಸೈಟ್‌ಗೆ ಭೇಟಿ ಮಾಡಬೇಕೆಂದರೆ ಬ್ರೌಸರ್ URL ಬಾರ್‌ನಲ್ಲಿ ನಿಮ್ಮ ವೆಬ್‌ಸೈಟ್‌ನ ವಿಳಾಸವನ್ನು ಟೈಪ್ ಮಾಡುತ್ತಾರೆ. ಇನ್ನೂ ಸರಳವಾಗಿ ಹೇಳಬೇಕೆಂದರೆ, ವೆಬ್‌ಸೈಟ್ ಎನ್ನುವುದು ನಿಮ್ಮ ಮನೆಯಾಗಿದ್ದರೆ, ಡೊಮೇನ್ ಹೆಸರು ಅನ್ನುವುದು ಅದರ ವಿಳಾಸವಾಗಿರುತ್ತದೆ.
ಇಂಟರ್ನೆಟ್ ಎನ್ನುವುದು ಕೇಬಲ್‌ಗಳ ಜಾಲದ ಮೂಲಕ ಪರಸ್ಪರ ಸಂಪರ್ಕ ಹೊಂದಿದ ಕಂಪ್ಯೂಟರ್‌ಗಳ ದೈತ್ಯ ಜಾಲವಾಗಿದೆ. ಈ ನೆಟ್‌ವರ್ಕ್‌ನಲ್ಲಿರುವ ಪ್ರತಿಯೊಂದು ಕಂಪ್ಯೂಟರ್ ಇತರ ಕಂಪ್ಯೂಟರ್‌ಗಳೊಂದಿಗೆ ಸಂಪರ್ಕ ಸಾಧಿಸಬಹುದು.
ಪ್ರತಿ ಕಂಪ್ಯೂಟರ್ ಅನ್ನು ಬೇರ್ಪಡಿಸಲು ಪ್ರತಿ ಕಂಪ್ಯೂಟರ್ ಗೆ ಒಂದು IP ವಿಳಾಸವನ್ನು ನಿಗದಿಪಡಿಸಲಾಗಿರುತ್ತದೆ. ಇದು ಅಂತರ್ಜಾಲದಲ್ಲಿ ನಿರ್ದಿಷ್ಟ ಕಂಪ್ಯೂಟರ್ ಅನ್ನು ಗುರುತಿಸುವ ಸಂಖ್ಯೆಗಳ ಸರಣಿಯಾಗಿದೆ.
IP ವಿಳಾಸವು ಈ ರೀತಿ ಇರುತ್ತದೆ :
66.249.66.1
ಈ ರೀತಿಯ IP ವಿಳಾಸವನ್ನು ನೆನಪಿಟ್ಟುಕೊಳ್ಳುವುದು ತುಂಬಾ ಕಷ್ಟ. ಈ ಸಮಸ್ಯೆಯನ್ನು ಪರಿಹರಿಸಲು ಡೊಮೇನ್ ಹೆಸರುಗಳನ್ನು ಕಂಡುಹಿಡಿಯಲಾಯಿತು.
ಈಗ ನೀವು ವೆಬ್‌ಸೈಟ್‌ಗೆ ಭೇಟಿ ನೀಡಲು ಬಯಸಿದರೆ, ನೀವು ಸಂಖ್ಯೆಯನ್ನು ನಮೂದಿಸುವ ಅಗತ್ಯವಿಲ್ಲ. ಬದಲಾಗಿ, ನಿಮ್ಮ ಬ್ರೌಸರ್‌ನ ವಿಳಾಸ ಪಟ್ಟಿಯಲ್ಲಿ ಸುಲಭವಾಗಿ ನೆನಪಿಡುವ ಡೊಮೇನ್ ಹೆಸರನ್ನು ಟೈಪ್ ಮಾಡುವ ಮೂಲಕ ನೀವು ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಉದಾಹರಣೆಗೆ, kannadajnaana.com
How domain names work ? | ಡೊಮೇನ್ ಹೆಸರುಗಳು ಹೇಗೆ ಕೆಲಸ ಮಾಡುತ್ತವೆ?
ಡೊಮೇನ್ ಹೆಸರುಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಲು, ನೀವು ಡೊಮೇನ್ ವಿಳಾಸವನ್ನು ನಿಮ್ಮ ಬ್ರೌಸರ್‌ನಲ್ಲಿ ನಮೂದಿಸಿದಾಗ ಏನಾಗುತ್ತದೆ ಎಂಬುದನ್ನು ತಿಳಿಯುವ ಅಗತ್ಯವಿದೆ.
ನಿಮ್ಮ ವೆಬ್ ಬ್ರೌಸರ್‌ನಲ್ಲಿ ನೀವು ಡೊಮೇನ್ ಹೆಸರನ್ನು ನಮೂದಿಸಿದಾಗ, ಅದು ಮೊದಲು ಡೊಮೈನ್ ನೇಮ್ ಸಿಸ್ಟಮ್ (DNS) ಅನ್ನು ರೂಪಿಸುವ ಸರ್ವರ್‌ಗಳ ನೆಟ್‌ವರ್ಕ್‌ಗೆ ರಿಕ್ವೆಸ್ಟ್ ಅನ್ನು ಕಳುಹಿಸುತ್ತದೆ.
ಈ ಸರ್ವರ್‌ಗಳು ನಂತರ ಆ ಡೊಮೇನ್‌ಗೆ ಸಂಬಂಧಿಸಿದ ನೇಮ್ ಸರ್ವರ್‌ಗಳಿಗಾಗಿ ಹುಡುಕುತ್ತವೆ ಮತ್ತು ಆ ನೇಮ್ ಸರ್ವರ್‌ಗಳಿಗೆ ವಿನಂತಿಯನ್ನು ಫಾರ್ವರ್ಡ್ ಮಾಡುತ್ತವೆ.
ಉದಾಹರಣೆಗೆ, ನಿಮ್ಮ ವೆಬ್‌ಸೈಟ್ Godaddy ವೆಬ್ಸೈಟ್ ಹೋಸ್ಟಿಂಗ್ ನಲ್ಲಿ ಹೋಸ್ಟ್ ಮಾಡಿದ್ದರೆ, ಅದರ ಹೆಸರಿನ ಸರ್ವರ್ ಮಾಹಿತಿಯು ಈ ರೀತಿ ಇರುತ್ತದೆ:
ns53.domaincontrol.com
ns53.domaincontrol.com
ಈ ನೇಮ್ ಸರ್ವರ್‌ಗಳು ನಿಮ್ಮ ಹೋಸ್ಟಿಂಗ್ ಕಂಪನಿಯಿಂದ ನಿರ್ವಹಿಸಲ್ಪಡುವ ಕಂಪ್ಯೂಟರ್‌ಗಳಾಗಿವೆ. ನಿಮ್ಮ ವೆಬ್‌ಸೈಟ್ ಸಂಗ್ರಹವಾಗಿರುವ ಕಂಪ್ಯೂಟರ್‌ಗೆ ನಿಮ್ಮ ಹೋಸ್ಟಿಂಗ್ ಕಂಪನಿಯು ನಿಮ್ಮ ರಿಕ್ವೆಸ್ಟ್ ಅನ್ನು ರವಾನಿಸುತ್ತದೆ.
ಈ ಕಂಪ್ಯೂಟರ್ ಅನ್ನು ವೆಬ್ ಸರ್ವರ್ ಎಂದು ಕರೆಯಲಾಗುತ್ತದೆ. ವೆಬ್ ಸರ್ವರ್ ಈಗ ವೆಬ್ ಪುಟ ಮತ್ತು ಅದಕ್ಕೆ ಸಂಬಂಧಿಸಿದ ಮಾಹಿತಿಯನ್ನು ಪಡೆಯುತ್ತದೆ.
ಅಂತಿಮವಾಗಿ, ಅದು ಈ ಮಾಹಿತಿಯನ್ನು ಬ್ರೌಸರ್‌ಗೆ ರವಾನಿಸುತ್ತದೆ.
ವೆಬ್‌ಸೈಟ್, ವೆಬ್ ಹೋಸ್ಟಿಂಗ್‌ನಿಂದ ಮತ್ತು ಡೊಮೇನ್ ನಡುವಿನ ವ್ಯತ್ಯಾಸ | How is Domain Name Different from a Website and Web Hosting?
ವೆಬ್‌ಸೈಟ್ HTML ಪೇಜ್ ಗಳು, ವೆಬ್‌ಸೈಟ್ ಬಿಲ್ಡರ್ ಸಾಫ್ಟ್‌ವೇರ್, ಇಮೇಜ್ ಗಳು ಮತ್ತು ಹೆಚ್ಚಿನವುಗಳಂತಹ ಫೈಲ್‌ಗಳಿಂದ ಮಾಡಲ್ಪಟ್ಟಿದೆ.
ಇದು ನಿಮ್ಮ ವೆಬ್‌ಸೈಟ್‌ನ ಫೈಲ್‌ಗಳನ್ನು ಸಂಗ್ರಹಿಸಲಾಗಿರುವ ಕಂಪ್ಯೂಟರ್ ಗೆ ಸರ್ವರ್ ಎಂದು ಕರೆಯುತ್ತಾರೆ. ಇವುಗಳನ್ನು ಹೋಸ್ಟಿಂಗ್ ಕಂಪನಿಗಳು ಸೇವೆಯಾಗಿ ನೀಡುತ್ತವೆ.
ನಿಮ್ಮ ವೆಬ್‌ಸೈಟ್ ರಚಿಸಲು, ನಿಮಗೆ ಡೊಮೇನ್ ಹೆಸರು ಮತ್ತು ವೆಬ್ ಹೋಸ್ಟಿಂಗ್ ಎರಡೂ ಅಗತ್ಯವಿದೆ.
ಇವೆರಡನ್ನೂ ನೀವು ಬೇರೆ ಬೇರೆ ಕಂಪನಿಯಿಂದ ಖರೀದಿಸಬಹುದು ಅಥವಾ ಒಂದೇ ಕಂಪನಿಯಿಂದ ಖರೀದಿಸಬಹುದು.
ಡೊಮೇನ್ ನ ವಿವಿಧ ಪ್ರಕಾರಗಳು | Different Types of Domain Names
Top Level Domain
Top Level Domain ಅಥವಾ TLD, ಡೊಮೇನ್ ವ್ಯವಸ್ಥೆಯಲ್ಲಿ ಉನ್ನತ ಮಟ್ಟದಲ್ಲಿ ಪಟ್ಟಿ ಮಾಡಲಾದ ಜೆನೆರಿಕ್ ಡೊಮೇನ್ಗಳಾಗಿವೆ.
ಹಲವು TLD ಗಳಿವೆ. ಅದರಲ್ಲಿ ಹೆಚ್ಚು ಜನಪ್ರಿಯವಾದವುಗಳು .com, .org, ಮತ್ತು .net. ಇತರ TLD ಗಳನ್ನು ಹೆಚ್ಚಾಗಿ ಜನ ಬಳಸುವುದಿಲ್ಲ. ಉದಾಹರಣೆಗೆ, .biz, .club, .info, .agency, ಮತ್ತು ಇನ್ನೂ ಅನೇಕ.
Country Code Top Level Domain
Country Code Top Level Domain ಅಥವಾ ccTLD ಇವು ಒಂದು ನಿರ್ದಿಷ್ಟ ದೇಶಕ್ಕೆ ಸಂಬಂಧಿಸಿದ ಡೊಮೇನ್ ಹೆಸರುಗಳಾಗಿವೆ. ಉದಾಹರಣೆಗೆ ಭಾರತಕ್ಕೆ .in, ಯುನೈಟೆಡ್ ಕಿಂಗ್‌ಡಮ್‌ಗೆ .uk ನಂತಹ ಎಕ್ಸಟೆನ್ಶನ್ ನೊಂದಿಗೆ ಕೊನೆಗೊಳ್ಳುತ್ತದೆ.
ನಿರ್ದಿಷ್ಟ ದೇಶದಲ್ಲಿ ಪ್ರೇಕ್ಷಕರನ್ನು ಗುರಿಯಾಗಿಸಲು ಬಯಸುವವರು ಅವುಗಳನ್ನು ಬಳಸುತ್ತಾರೆ.
Sponsored Top Level Domain
Sponsored Top Level Domain ಅಥವಾ sTLD ಎಂಬುದು TLD ಗಳ ಒಂದು ವರ್ಗವಾಗಿದ್ದು ಅದು ಒಂದು ನಿರ್ದಿಷ್ಟ ಸಮುದಾಯವನ್ನು ಪ್ರತಿನಿಧಿಸುತ್ತದೆ ಮತ್ತು ಈ ಡೊಮೇನ್ ಆ ಸಮುದಾಯದ ನಿರ್ದಿಷ್ಟ ಎಕ್ಸಟೆನ್ಶನ್ ನೊಂದಿಗೆ ಕೊನೆಗೊಳ್ಳುತ್ತದೆ.
ಉದಾಹರಣೆಗೆ, ಶಿಕ್ಷಣ ಸಂಬಂಧಿತ ಸಂಸ್ಥೆಗಳಿಗೆ .edu, ಸರ್ಕಾರದ ಡೊಮೇನ್ಗಳಿಗೆ .gov, ಇನ್ನಷ್ಟು.
ಡೊಮೈನ್ ಹೆಸರನ್ನು ಖರೀದಿಸುವುದು ಹೇಗೆ? | How to buy a domain ?
ಡೊಮೇನ್ ಖರೀದಿಸಿದ ಮೇಲೆ ನೀವು ವೆಬ್ಸೈಟ್ ಮಾಡಲು ಸಾಧ್ಯವಾಗುವುದಿಲ್ಲ. ಅದಕ್ಕೆ ನೀವು ಹೋಸ್ಟಿಂಗ್ ಸೇವೆಯನ್ನು ಪಡೆಯುವುದು ಅನಿವಾರ್ಯ. ಇದನ್ನು ನೀವು ಮೇಲೆ ತಿಳಿಸಿದಂತೆ ಹೋಸ್ಟಿಂಗ್ ಸೇವೆಯನ್ನು ನೀವು ಅದೇ ಕಂಪನಿಯಿಂದ ಪಡೆಯಬಹುದು ಇಲ್ಲವಾದರೆ ಬೇರೆ ಕಂಪನಿಯಿಂದ ಪಡೆಯಬಹುದು.
ಡೊಮೇನ್ ಹೆಸರನ್ನು ನೀವು ಉದಾಹರಣೆಗೆ Godaddy ಯಂತಹ ಕಂಪನಿಗಳಿಂದ ಪಡೆಯಬಹುದು. ಒಂದು ವೇಳೆ ನೀವು ಹೋಸ್ಟಿಂಗ್ ಪಡೆಯುತ್ತೀರೆಂದಾದರೆ ಪ್ಲಾನಿನ ಆಧಾರದ ಮೇಲೆ ಕೆಲ ಕಂಪನಿಗಳು ಉಚಿತವಾಗಿ ಡೊಮೇನ್ ಅನ್ನು ನೀಡುತ್ತವೆ. ಆದ್ದರಿಂದ ಯಾವ ಕಂಪನಿಗಳು ಯಾವ ಪ್ಲಾನ್ ಆಧಾರದ ಮೇಲೆ ಏನೆಲ್ಲಾ ಸೇವೆಗಳನ್ನು ನೀಡುತ್ತವೆ ಎಂಬುದನ್ನು ಪರಿಶೀಲಿಸಿ ನಂತರ ನೀವು ನಿಮಗೆ ಅನುಕೂಲವಾಗುವಂತಹ ಪ್ಲಾನ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು.
ನಿಮ್ಮ ವೆಬ್‌ಸೈಟ್‌ಗಾಗಿ ಡೊಮೇನ್ ಹೆಸರನ್ನು ಹೇಗೆ ಆರಿಸುವುದು ? | How to choose a domain name for your website ?
ನಿಮ್ಮ ವೆಬ್‌ಸೈಟ್‌ಗಾಗಿ ಡೊಮೇನ್ ಹೆಸರನ್ನು ಆಯ್ಕೆ ಮಾಡಬೇಕೆಂದಿದ್ದರೆ .com ಡೊಮೇನ್ ಹೆಸರನ್ನು ಪಡೆಯುವುದು ಉತ್ತಮ. ಡೊಮೇನ್ ಹೆಸರು ಚಿಕ್ಕದಾಗಿರಲಿ ಮತ್ತು ಸುಲಭವಾಗಿ ನೆನಪಿನಲ್ಲಿ ಇಟ್ಟುಕೊಳ್ಳುವಂತಿರಲಿ. ಡೊಮೇನ್ ಹೆಸರುಗಳಲ್ಲಿ ಸಂಖ್ಯೆ ಅಥವಾ ಹೈಫನ್‌ಗಳನ್ನು ಬಳಸಬೇಡಿ. ಡೊಮೇನ್ ಹೆಸರು ಯಾವಾಗಲೂ ನಿಮ್ಮ ಬಿಸಿನೆಸ್ ಗೆ ಸಂಬಧಿಸಿದ್ದಾಗಿರಲಿ.
ಡೊಮೇನ್ ಗೆ ಸಂಬಂಧಿಸಿದ ಕೆಲ ಪ್ರಶ್ನೋತ್ತರಗಳು | FAQ related to Domain
ಪ್ರ. Domain ಖರೀದಿಸಿದರೆ Website ತಯಾರಿ ಆದಂತೆಯೇ ?
ಉ. ಇಲ್ಲ. ಡೊಮೇನ್ ಎನ್ನುವುದು ಒಂದು ವೆಬ್ಸೈಟ್ ವಿಳಾಸ. ವೆಬ್ಸೈಟ್ ತಯಾರಿಸಲು ಇರುವ ಅವಶ್ಯಕತೆಗಳಲ್ಲಿ ಡೊಮೇನ್ ಮೊದಲನೆಯದು. ಡೊಮೇನ್ ನಂತರ ವೆಬ್ಸೈಟ್ ಫೈಲುಗಳನ್ನು ಸಂಗ್ರಹಿಸಲು ಬೇಕಾದ ವ್ಯವಸ್ಥೆಯನ್ನು ಹೋಸ್ಟಿಂಗ್ ಎನ್ನುತ್ತಾರೆ. ವೆಬ್ಸೈಟ್ ತಯಾರಿಸಲು ಹೋಸ್ಟಿಂಗ್ ಅವಶ್ಯಕ.
ಪ್ರ. Domain ಖರೀದಿಸಿದ ನಂತರ ಒಂದು ವೇಳೆ Domain ಹೆಸರು ಬದಲಾಯಿಸಬಹುದೇ ?
ಉ. ಡೊಮೇನ್ ಖರೀದಿಸುವ ಮುನ್ನವೇ ನೀವು ಯಾವ ರೀತಿಯ ಡೊಮೇನ್ ಖರೀದಿಸಬೇಕೆಂದು ಆಲೋಚಿಸಿ ಖರೀದಿಸುವುದು ಉತ್ತಮ. ಕೆಲ ಕಂಪನಿಗಳು ಬದಲಾಯಿಸಲು ಅವಕಾಶ ನೀಡುತ್ತವೆ, ಇನ್ನೂ ಕೆಲ ಕಂಪನಿಗಳು ಅವಕಾಶ ನೀಡುವುದಿಲ್ಲ. ಕೆಲ ಕಂಪನಿಗಳು ಒಂದು ವೇಳೆ ನೀವು ಒಂದು ವರ್ಷದ ಪ್ಲಾನ್ ಆಯ್ಕೆ ಮಾಡಿಕೊಂಡಿದ್ದರೆ ಆಗ 30 ದಿನಗಳವರೆಗೆ ನಿಮಗೆ ಡೊಮೇನ್ ಹೆಸರನ್ನು ಬದಲಾಯಿಸಲು ಅವಕಾಶ ಇರುತ್ತದೆ. ನೀವು ಒಂದು ತಿಂಗಳ ಪ್ಲಾನ್ ಆಯ್ಕೆ ಮಾಡಿಕೊಂಡಿದ್ದಾರೆ ಆಗ 48 ಗಂಟೆಗಳ ಒಳಗೆ ಬದಲಾಯಿಸಲು ಅವಕಾಶವಿರುತ್ತದೆ. ಡೊಮೇನ್ ಖರೀದಿಸುವ ಮುನ್ನ ಆಯಾ ಗ್ರಾಹಕ ಸೇವಾ ಸಿಬ್ಬಂದಿಯೊಂದಿಗೆ ಮಾತನಾಡಿ ಮುಂದುವರಿಯುವುದು ಉತ್ತಮ.
ಪ್ರ. Domain ಮತ್ತು Hosting ಎರಡನ್ನು ಬೇರೆ ಕಂಪನಿಗಳಿಂದ ಖರೀದಿಸಬಹುದೇ ?
ಉ. ಹೌದು. ಡೊಮೇನ್ ಮತ್ತು ಹೋಸ್ಟಿಂಗ್ ಎರಡನ್ನು ಬೇರೆ ಬೇರೆ ಕಂಪನಿಗಳಿಂದ ಖರೀದಿಸಬಹುದು. ಆದರೆ ಎರಡನ್ನು ಒಂದೇ ಕಂಪನಿಯಿಂದ ಖರೀದಿಸುವುದು ಉತ್ತಮ. ಏಕೆಂದರೆ ಇದರಿಂದ ಡೊಮೇನ್ ಮತ್ತು ಹೋಸ್ಟಿಂಗ್ ಅನ್ನು ಸುಲಭವಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ ಹಾಗೂ ಡೊಮೇನ್ ಮತ್ತು ಹೋಸ್ಟಿಂಗ್ ನಡುವೆ ಸುಲಭವಾಗಿ ಪಾಯಿಂಟ್ ಮಾಡಬಹುದು. ಒಂದು ವೇಳೆ ನಿಮಗೆ ಡೊಮೇನ್ ಮತ್ತು ಹೋಸ್ಟಿಂಗ್ ಹೇಗೆ ಕನೆಕ್ಟ್ ಮಾಡಬೇಕೆಂದು ತಿಳಿದಿದ್ದರೆ, ಹೋಸ್ಟಿಂಗ್ ಸೇವೆಯನ್ನು ಬೇರೆ ಕಂಪನಿಯಲ್ಲಿ ಪಡೆದಿದ್ದರೂ ಕೂಡ ನೀವು ಇದನ್ನು ಸುಲಭವಾಗಿ ಮಾಡಬಹುದು.
ಪ್ರ. Domain ಹೆಸರನ್ನು ಮಾರಬಹುದೇ ?
ಉ. ಹೌದು, ನಿಮ್ಮ ಡೊಮೇನ್ ಹೆಸರನ್ನು ನೀವು ಮಾರಾಟ ಮಾಡಬಹುದು. ಉತ್ತಮ ಬೇಡಿಕೆ ಇರುವ ಡೊಮೇನ್ ಹೆಸರುಗಳಿಗೆ ಭಾರಿ ಬೇಡಿಕೆಯಿದೆ.
ಡೊಮೇನ್ ಹೆಸರುಗಳನ್ನು ವ್ಯಾಪಾರ ಮಾಡುವುದು ಒಂದು ಉದ್ಯಮವಾಗಿದೆ. ಕೆಲ ಜನರು ಮುಂಚೆಯೇ ಕಡಿಮೆ ಬೆಲೆಗೆ ಡೊಮೇನ್ ಹೆಸರುಗಳನ್ನು ಖರೀದಿ ಮಾಡಿಟ್ಟುಕೊಂಡಿರುತ್ತಾರೆ. ಯಾರಾದರೂ ಆ ನಿರ್ದಿಷ್ಟವಾದ ಡೊಮೇನ್ ಖರೀದಿಸಲು ಮುಂದಾದರೆ ಅಂಥವರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಾರೆ.
ನಿಮ್ಮ ಡೊಮೇನ್ ಹೆಸರನ್ನು ಮಾರಾಟ ಮಾಡಲು ನೀವು ಬಯಸಿದರೆ, GoDaddy ಮತ್ತು ಇತರವುಗಳಂತಹ ಅನೇಕ ವೆಬ್‌ಸೈಟ್‌ಗಳಿವೆ, ಅಲ್ಲಿ ನೀವು ನಿಮ್ಮ ಡೊಮೇನ್ ಅನ್ನು ಮಾರಾಟ ಮಾಡಬಹುದು.
ಪ್ರ. Custom domain ಗಳು ಉಚಿತವಾಗಿ ದೊರೆಯುವ ಸಾಧ್ಯತೆ ಇದೆಯೇ ?
ಉ. ಇಲ್ಲ. ಕಸ್ಟಮ್ ಡೊಮೇನ್ ಗಳು ಉಚಿತವಾಗಿ ದೊರೆಯುವುದಿಲ್ಲ. ಆದರೆ ಕೆಲ ನಿರ್ದಿಷ್ಟ ಡೊಮೇನ್ಗಳು ಅಂದರೆ .in, .co.in, .org ಡೊಮೇನ್ ಗಳು .com ಡೊಮೇನ್ ಬೆಲೆಗಿಂತ ಕಡಿಮೆ ಬೆಲೆಯಲ್ಲಿ ದೊರೆಯುತ್ತವೆ.
ಡೊಮೇನ್ ಹೆಸರಿನ ನಂತರ ಯಾವುದಾದರೂ ಕಂಪನಿಯ ಹೆಸರು ಸೇರಿದ್ದರೆ ಅಂತಹ ಡೊಮೇನ್ಗಳು ಉಚಿತವಾಗಿ ದೊರೆಯುತ್ತವೆ.
ಪ್ರ. Custom domain ಎಂದರೇನು ?
ಉ. ಕಸ್ಟಮ್ ಡೊಮೇನ್ ಎಂದರೆ ಆ ಡೊಮೇನ್ ಮೇಲೆ ನಿಮಗೆ ಸಂಪೂರ್ಣ ಅಧಿಕಾರ ಇರುತ್ತದೆ. ಅಂದರೆ www.example.com ಇದು ಒಂದು ಕಸ್ಟಮ್ ಡೊಮೇನ್ ಗೆ ಉದಾಹರಣೆ.
ಒಂದು ವೇಳೆ ನಿಮ್ಮ ಡೊಮೇನ್ ಹೆಸರಿನ ನಂತರ ಯಾವುದಾದರೂ ಕಂಪನಿಯ ಹೆಸರು ಸೇರಿದ್ದರೆ ಆಗ ಅದನ್ನು ಕಸ್ಟಮ್ ಡೊಮೇನ್ ಎನ್ನುವುದಿಲ್ಲ.
ಉದಾಹರಣೆಗೆ www.example.blogspot.com ಅಥವಾ www.example.wordpress.com ಇಲ್ಲಿ ನೀವು ನಿಮ್ಮ ಡೊಮೇನ್ ಹೆಸರಿನ ನಂತರ blogspot.com ಮತ್ತು wordpress.com ಹೆಸರುಗಳನ್ನು ನೋಡುತ್ತಿದ್ದೀರಿ ಇವು ಉಚಿತ ಡೊಮೇನ್ ಗಳಾಗಿವೆ.
ಪ್ರ. ಉಚಿತವಾಗಿ ದೊರೆಯುವ ಇಂತಹ domain ಗಳನ್ನು ಬಳಸಬಹುದೇ ?
ಉ. ಉಚಿತವಾಗಿ ದೊರೆಯುವ ಡೊಮೇನ್ ಗಳನ್ನು ಬಳಸಬಹುದು ಆದರೆ ಇಂತಹ ಡೊಮೇನ್ಗಳು ಮತ್ತು ಅವು ನೀಡುವ ಸೇವೆಗಳು ಸೀಮಿತವಾಗಿರುತ್ತವೆ. ಕಸ್ಟಮ್ ಡೊಮೇನ್ ಮತ್ತು ಹೋಸ್ಟಿಂಗ್ ಕಂಪನಿಗಳು ನೀಡುವ ಅನೇಕ ಸೇವೆಗಳು ಇಲ್ಲಿ ಲಭ್ಯವಿರುವುದಿಲ್ಲ.
Hope this information regarding Domain in Kannada helped you to what exactly a domain is, how domain works and many other important information related to the domain.