Life Quotes in Kannada
Here you will find life quotes in Kannada. These quotes on life will help you in understand the meaning of life along with what you have to do in life and inspire you about the life. These life quotes are from some of the successful people. These quotes will change your mood and suit for any situation.
Best Life Quotes in Kannada
ಜೀವನದ ಶ್ರೇಷ್ಟತೆ ಇರುವುದು ಬೀಳದೆ ಇರುವುದರಲ್ಲಿ ಅಲ್ಲ, ಪ್ರತಿ ಬಾರಿ ಬಿದ್ದಾಗಲೂ ಏಳುವುದರಲ್ಲಿ.
ಜಗತ್ತಿನ ಅತ್ಯುತ್ತಮ ಮತ್ತು ಸುಂದರ ವಸ್ತುಗಳನ್ನು ನೋಡಲಾಗಲಿ ಅಥವಾ ಸ್ಪರ್ಶಿಸಲಾಗಲಿ ಸಾಧ್ಯವಿಲ್ಲ ಅವುಗಳನ್ನು ಹೃದಯದಲ್ಲಿ ಅನುಭವಿಸಲು ಮಾತ್ರ ಸಾಧ್ಯ.
ದಾರಿ ಇರುವಲ್ಲಿಗೆ ಹೋಗಬೇಡಿ, ಬದಲಾಗಿ ದಾರಿಯಿಲ್ಲದ ಕಡೆಗೆ ಸಾಗಿ ಹಾಗೂ ನಿಮ್ಮ ಗುರುತನ್ನು ಮೂಡಿಸಿ.
ಭೂತಕಾಲದ ಬಗ್ಗೆ ಕೊರಗಬೇಡ, ಭವಿಷ್ಯದ ಬಗ್ಗೆ ಚಿಂತಿಸಬೇಡ, ವರ್ತಮಾನದಲ್ಲಿ ಜೀವಿಸು.
ಒಂದು ಗಂಟೆಯ ಸಮಯವನ್ನು ವ್ಯರ್ಥ ಮಾಡುವ ಧೈರ್ಯವಿರುವ ಮನುಷ್ಯನಿಗೆ ಜೀವನದ ಮೌಲ್ಯ ತಿಳಿದಿಲ್ಲವೆಂದೇ ಅರ್ಥ.
ಯಶಸ್ಸಿನ ಮನುಷ್ಯನಾಗುವ ಬದಲು ಮೌಲ್ಯವುಳ್ಳ ವ್ಯಕ್ತಿಯಾಗಲು ಪ್ರಯತ್ನಿಸು.
ಒಬ್ಬ ಯಶಸ್ವಿ ವ್ಯಕ್ತಿ ಎಂದರೆ ಇತರರು ಅವನ ಮೇಲೆ ಎಸೆಯುವ ಕಲ್ಲುಗಳಿಂದ ಭದ್ರವಾದ ಬುನಾದಿ ಹಾಕುವವನು.
ನೀವು ನಿಮ್ಮ ಆಲೋಚನೆಯನ್ನು ಬದಲಾಯಿಸಿದರೆ ನಿಮ್ಮ ಪ್ರಪಂಚವನ್ನೇ ಬದಲಾಯಿಸಿದಂತೆ.
ಜೀವನದುದ್ದಕ್ಕೂ ಕುರಿಯಂತೆ ಬದುಕುವುದರ ಬದಲು ಒಂದು ದಿನ ಸಿಂಹದಂತೆ ಬದುಕುವುದು ಲೇಸು.
ಯಾವುದಾದರೂ ನಿಮ್ಮಿಂದ ಸಾಧ್ಯ ಎಂದು ಭಾವಿಸಿದರೆ ನೀವು ನೀವು ಅರ್ಧದಾರಿ ಸಾಗಿದಂತೆ.
Top Life Quotes in Kannada
ಜೀವನವು ಒಂದು ಪ್ರಶ್ನೆ ಮತ್ತು ನಾವು ಅದನ್ನು ಹೇಗೆ ಜೀವಿಸುತ್ತೇವೆ ಎಂಬುದು ನಮ್ಮ ಉತ್ತರ.
ಯಾವುದೇ ಕೆಲಸವಾಗಲಿ ಮುಗಿಯುವವರೆಗೆ ಅದು ಅಸಾಧ್ಯವೆಂದೆ ತೋರುತ್ತದೆ.
ಮನಸ್ಸೇ ಸರ್ವಸ್ವ. ನೀವು ಏನು ಭಾವಿಸುತ್ತೀರೋ ಅದೇ ಆಗುತ್ತೀರಿ
ಸಾವಿರ ಮೈಲುಗಳ ಪ್ರಯಾಣವಾದರೂ ಪ್ರಾರಂಭವಾಗುವುದು ಮಾತ್ರ ಒಂದು ಹೆಜ್ಜೆಯಿಂದಲೇ.
ಜೀವನವು ನಿಜವಾಗಿಯೂ ಸರಳವಾಗಿದೆ, ಆದರೆ ನಾವು ಅದನ್ನು ಕ್ಲಿಷ್ಟಕರವಾಗಿ ಮಾಡಿಕೊಳ್ಳುತ್ತೇವೆ.
ಒಬ್ಬ ವ್ಯಕ್ತಿಯ ಜೀವನದಲ್ಲಿ ಎರಡು ಉತ್ತಮ ದಿನಗಳಿವೆ – ನಾವು ಹುಟ್ಟಿದ ದಿನ ಮತ್ತು ಏಕೆ ಎಂದು ನಾವು ಏಕೆ ಹುಟ್ಟಿದೇವೆಂದು ಕಂಡುಕೊಳ್ಳುವ ದಿನ.
ನೀವು ಎಂದಿಗೂ ಹೊಂದಿರದ ಏನನ್ನಾದರೂ ಬಯಸಿದರೆ, ನೀವು ಎಂದಿಗೂ ಮಾಡದಿರುವದನ್ನು ಮಾಡಬೇಕು.
ಇಂದು ನೀವು ಏನು ಮಾಡುತ್ತಿದ್ದೀರಿಯೋ ಅದು ನಾಳೆ ನೀವು ಎಲ್ಲಿಗೆ ತಲುಪಲು ಬಯಸುತ್ತಿರುವಿರೋ ಅಲ್ಲಿಗೆ ನಿಮ್ಮನ್ನು ತಲಪಿಸಲು ಸಹಾಯ ಮಾಡುತ್ತದೆಯೇ ಎಂದು ನಿಮ್ಮನ್ನು ನೀವೇ ಕೇಳಿಕೊಳ್ಳಿ.
ನೀವು ಏನಾದರೂ ಮಾಡಲು ನಿರ್ಧರಿಸಿದರೇ ಅದು ನಿಮಗೆ ಸಂತೋಷವನ್ನು ನೀಡುತ್ತದೆಯೇ ಎಂಬುದನ್ನು ಮೊದಲು ಖಚಿತಪಡಿಸಿಕೊಳ್ಳಿ.
ನಿಮ್ಮ ಜೀವನದ ಅತ್ಯುತ್ತಮ ದಿನಗಳನ್ನು ಗಳಿಸಲು ನೀವು ಕೆಲ ಕೆಟ್ಟ ದಿನಗಳನ್ನು ಎದುರಿಸಲೇಬೇಕಾಗುತ್ತದೆ.
ಬಾಣವನ್ನು ಹಿಂದಕ್ಕೆ ಎಳೆಯುವ ಮೂಲಕ ಮಾತ್ರ ಗುರಿ ತಲುಪಲು ಸಾಧ್ಯ. ಆದ್ದರಿಂದ ಜೀವನವು ನಿಮ್ಮನ್ನು ಹಿಂದಕ್ಕೆ ಎಳೆಯುತ್ತಿದೆ ಎಂದರೆ, ಅದು ಯಾವುದೋ ಮಹತ್ತರ ಕೆಲಸದ ಪ್ರಾರಂಭ. ಆದ್ದರಿಂದ ನಿಮ್ಮ ಗಮನ ಕೇವಲ ಗುರಿಯ ಮೇಲೆ ಮಾತ್ರ ಇರಲಿ.
More Life Quotes in Kannada
ನೀವು ಲಘುವಾಗಿ ತೆಗೆದುಕೊಳ್ಳುವ ಪ್ರತಿಯೊಂದು ಬೇರೆಯವರ ಪ್ರಾರ್ಥನೆಯಿಂದ ದೊರೆತ ಫಲ ಎನ್ನುವುದನ್ನು ಮರೆಯಬೇಡಿ.
ಒಳ್ಳೆಯ ಮನಸ್ಸುಗಳು ವಿಚಾರಗಳ ಬಗ್ಗೆ ಚಿಂತಿಸುತ್ತವೆ, ಹಾಗೂ ಸಣ್ಣ ಮನಸ್ಸುಗಳು ಜನರ ಬಗ್ಗೆ ಚರ್ಚಿಸುತ್ತವೆ.
ಪ್ರತಿದಿನ ನಿಮ್ಮ ಬಳಿ ಎರಡು ಆಯ್ಕೆಗಳಿವೆ: ನಿಮ್ಮ ಕನಸುಗಳೊಂದಿಗೆ ಮಲಗುವುದನ್ನು ಮುಂದುವರಿಸಿ ಅಥವಾ ಎಚ್ಚರಗೊಂಡು ಅವುಗಳನ್ನು ಬೆನ್ನಟ್ಟಿರಿ.
ಮುಗಿದುದರ ಬಗ್ಗೆ ಕೊರಗಬೇಡ, ಭವಿಷ್ಯದ ಬಗ್ಗೆ ಒತ್ತು ನೀಡಬೇಡ. ವರ್ತಮಾನದಲ್ಲಿ ಜೀವಿಸು ಮತ್ತು ಅದನ್ನು ಸುಂದರಗೊಳಿಸು.
ಒಬ್ಬ ವ್ಯಕ್ತಿ ಏನಾದರು ಸಾಧನೆ ಮಾಡಿದಾಗ ಸುಲಭವಾಗಿ ಟೀಕೆ ಮಾಡುತ್ತೇವೆ. ಆದರೆ ಆ ಸಾಧನೆ ಹಿಂದೆ ಆ ವ್ಯಕ್ತಿಯ ಎಷ್ಟು ಪರಿಶ್ರಮವಿದೆ ಎಂಬುದನ್ನು ಎಂದು ಯೋಚಿಸುವುದಿಲ್ಲ.
ಒಬ್ಬರಿಗೆ ಕಷ್ಟ ಬಂದಾಗ ನೋಡಿ ಸಂತೋಷಗೂಳ್ಳುವ ಜನಗಳು ಮುಂದೆ ತಮಗೂ ಕೂಡ ಅದೇ ಪರಿಸ್ಥಿತಿ ಬರುತ್ತದೆ ಎಂಬುದನ್ನು ಮರೆಯುತ್ತಾರೆ.
ಹಿಂದೆ ಮನುಷ್ಯನ ಮನಸ್ಸು ಬಂಗಾರವಾಗಿತ್ತು ಮತ್ತು ಗುಡಿಯಲ್ಲಿನ ಮೂರ್ತಿಗಳು ಕಲ್ಲಾಗಿದ್ದವು. ಆದರೆ ಈಗ ಗುಡಿಯಲ್ಲಿನ ಮೂರ್ತಿಗಳು ಬಂಗಾರವಾಗಿವೆ ಹಾಗೂ ಮನುಷ್ಯನ ಮನಸ್ಸು ಕಲ್ಲಾಗಿದೆ.
ನಮ್ಮನ್ನು ಬೇರೆಯವರೊಂದಿಗೆ ಹೋಲಿಕೆ ಮಾಡಿಕೊಳ್ಳುವುದು ನಮಗೆ ನಾವೇ ಮಾಡಿಕೊಳ್ಳುವ ಅತಿ ದೊಡ್ಡ ಅವಮಾನ.
ಕಬ್ಬಿಣದ ನಾಶವಾಗುವುದು ಅದಕ್ಕೆ ತುಕ್ಕು ಹಿಡಿಯುವುದರಿಂದ, ಹಾಗೆ ಮನುಷ್ಯ ನಾಶನಾಗುವುದು ಅವನ ಕೆಟ್ಟ ಯೋಚನೆಗಳಿಂದ.
ಶಾಲೆಯಲ್ಲಿ ಕಲಿತ ಪಾಠಗಳು ಸುಲಭವಾಗಿ ಮರೆಯಬಹುದು ಆದರೆ ಬದುಕೆಂಬ ಶಾಲೆ ಕಲಿಸುವ ಪಾಠ ಎಂದಿಗೂ ಮರೆಯಲು ಸಾಧ್ಯವಿಲ್ಲ.
Nice Life Quotes in Kannada
ಜಗತ್ತಿನಲ್ಲಿ ಜನ ನಾವು ಹೇಳುವ ಸತ್ಯಕ್ಕಿಂತ ಬೇರೆಯವರು ನಮ್ಮ ಬಗ್ಗೆ ಹೇಳುವ ಸುಳ್ಳಿಗೆ ಹೆಚ್ಚು ಮಹತ್ವ ಕೊಡುತ್ತಾರೆ.
ಜೀವನ ಒಂದು ಪ್ರಯೋಗ ಶಾಲೆಯಿದ್ದಂತೆ. ನೀವು ಹೆಚ್ಚು ಪ್ರಯೋಗಗಳನ್ನು ಮಾಡಿದಷ್ಟು ಜೀವನದ ಬಗ್ಗೆ ಹೆಚ್ಚು ತಿಳಿಯುತ್ತೀರಿ.
ಜೀವನವು ಎಷ್ಟೇ ಕಷ್ಟಕರವಾಗಿ ಕಂಡರೂ, ನೀವು ಯಾವಾಗಲೂ ಏನನ್ನಾದರೂ ಮಾಡಬಹುದು ಮತ್ತು ಯಶಸ್ವಿಯಾಗಬಹುದು.
ಜೀವನದಲ್ಲಿ ಯಶಸ್ವಿಯಾಗಬೇಕೆಂದರೆ ಮಾತನಾಡುವುದಕ್ಕಿಂತ ಹೆಚ್ಚಾಗಿ ಕೇಳಿಸಿಕೊಳ್ಳುವ ಅಭ್ಯಾಸವನ್ನು ರೂಢಿಸಿಕೋ.
ಸೋಲುವ ಭಯವಿದ್ದರೆ ನೀವು ಗೆಲುವನ್ನು ಎಂದಿಗೂ ಸಾಧಿಸಲು ಸಾಧ್ಯವಿಲ್ಲ.
ಶ್ರೀಮಂತರಾಗಿ ಹುಟ್ಟಲಿಲ್ಲವಾದರೂ ಬಡವರಾಗಿ ಹುಟ್ಟಿದ ಮೇಲೆ ಶ್ರೀಮಂತರಾಗುವ ಬಯಕೆ ಇದ್ದರೆ ಸಾಕು.
ಮಾಡುವವರೆಗೂ ಎಲ್ಲವೂ ಅಸಾಧ್ಯವೆಂದೇ ತೋರುತ್ತದೆ.
ನೀವು ನಕಾರಾತ್ಮಕ ಆಲೋಚನೆಗಳನ್ನು ಧನಾತ್ಮಕವಾಗಿ ಬದಲಾಯಿಸಿದರೆ, ನೀವು ಸಕಾರಾತ್ಮಕ ಫಲಿತಾಂಶಗಳನ್ನು ಕಾಣುತ್ತೀರಿ.
ನೀವು ನಿಜವಾಗಿ ವಿಫಲಗೊಳ್ಳುವುದು ಕೆಳಗೆ ಬಿದ್ದಾಗ ಅಲ್ಲ, ಮೇಲೇಳದೆ ಕೆಳಗೆ ಉಳಿದಾಗ.
ಜಗತ್ತನ್ನು ಬದಲಾಯಿಸಬಹುದು ಎಂದು ಯೋಚಿಸುವವರಿಂದ ಮಾತ್ರ ಜಗತ್ತನ್ನು ಬದಲಾಯಿಸಲು ಸಾಧ್ಯ.
ನೀವು ನಿಜವಾಗಿಯೂ ಏನನ್ನಾದರೂ ಮಾಡಲು ಬಯಸಿದರೆ, ನೀವು ಒಂದು ಮಾರ್ಗವನ್ನು ಕಂಡುಕೊಳ್ಳುತ್ತೀರಿ ಇಲ್ಲವಾದರೆ ಏನಾದರೂ ಕಾರಣ ಹುಡುಕುತ್ತೀರಿ.
ಯಶಸ್ಸು ಎಂದರೆ ನಿಮ್ಮ ಜೀವನದಲ್ಲಿ ನೀವು ಸಾಧಿಸುವುದರ ಬಗ್ಗೆ ಅಲ್ಲ, ನೀವು ಇತರರನ್ನು ಹೇಗೆ ಪ್ರೇರೇಪಿಸುತ್ತೀರಿ ಎಂಬುದೇ ನಿಜವಾದ ಯಶಸ್ಸು.
ಉದ್ದೇಶವಿಲ್ಲದ ವ್ಯಕ್ತಿಯು ಚುಕ್ಕಾಣಿ ಇಲ್ಲದ ಹಡಗಿನಂತೆ.
ದೇವರು ಪ್ರತಿಯೊಬ್ಬರನ್ನು ಕೆಲವು ನಿರ್ದಿಷ್ಟ ಕೆಲಸಕ್ಕಾಗಿ ರೂಪಿಸಿದ್ದಾನೆ ಮತ್ತು ಆ ಕೆಲಸದ ಬಯಕೆಯನ್ನು ಪ್ರತಿ ವ್ಯಕ್ತಿಯ ಹೃದಯದಲ್ಲಿ ಬಿಟ್ಟಿರುತ್ತಾನೆ.
ನಾವು ಗಾಳಿಯ ದಿಕ್ಕನ್ನು ಬದಲಾಯಿಸಲು ಸಾಧ್ಯವಿಲ್ಲ, ಆದರೆ ಹಡಗಿನ ನೌಕೆಯನ್ನು ಬದಲಿಸುವ ಮೂಲಕ ಗುರಿಯನ್ನು ತಲುಪಬಹುದು.
ಹೆಚ್ಚು ಲೈಫ್ quotesಗಳನ್ನು ಇಲ್ಲಿ ಅಪ್ಡೇಟ್ ಮಾಡಲಾಗುತ್ತಿರುತ್ತದೆ. ಈ ಲೈಫ್ quotesಗಳು ನಿಮಗೆ ಇಷ್ಟವಾಗಿವೆ ಎಂದು ಭಾವಿಸುತ್ತೇನೆ (Will be adding more Life Quotes in Kannada in this page. Hope you liked these Life Quotes in Kannada).