Vyavaharika Patra in Kannada

Vyavaharika Patra in Kannada | ವ್ಯಾವಹಾರಿಕ ಪತ್ರ ಕನ್ನಡ

letter writing

Vyavaharika Patra in Kannada | ವ್ಯಾವಹಾರಿಕ ಪತ್ರ ಕನ್ನಡ

Here you will find details regarding Vyavaharika Patra or letter in Kannada along with tips on how to write Vyavaharika Patra, it’s format, subjects for which we need to write Vyavaharika Patra in Kannada and few examples of it.

ವ್ಯಾವಹಾರಿಕ ಪತ್ರ ಎಂದರೇನು? | Vyavaharika Patra meaning in Kannada

ವ್ಯಾವಹಾರಿಕ ಪತ್ರವನ್ನು ಕ್ರಮಬದ್ಧವಾದ ಮತ್ತು ಸಾಂಪ್ರದಾಯಿಕ ಭಾಷೆಯಲ್ಲಿ ಬರೆಯಲಾಗುತ್ತದೆ. ವ್ಯಾವಹಾರಿಕ ಪತ್ರವನ್ನು ನಿಗದಿತ ಸ್ವರೂಪದಂತೆ ಬರೆಯಬೇಕು. ಈ ಪತ್ರಗಳನ್ನು ಅಧಿಕೃತ ಉದ್ದೇಶಗಳಿಗಾಗಿ ಮಾತ್ರ ಬರೆಯಲಾಗುತ್ತದೆ. ಉದಾಹರಣೆಗೆ ವ್ಯವಸ್ಥಾಪಕರಿಗೆ, ಇಲಾಖೆಯ ಅಧಿಕಾರಿಗಳಿಗೆ, ಮಾನವ ಸಂಪನ್ಮೂಲ ವ್ಯವಸ್ಥಾಪಕರಿಗೆ, ಉದ್ಯೋಗಿಗೆ, ಕಾಲೇಜು ಪ್ರಾಂಶುಪಾಲರಿಗೆ ಅಥವಾ ಶಾಲೆಯ ಮುಖ್ಯೋಪಾಧ್ಯಾಯರಿಗೆ, ಶಿಕ್ಷಕರಿಗೆ ಪತ್ರ ಬರೆಯುವುದು ಇತ್ಯಾದಿ. ನಾವು ವ್ಯಾವಹಾರಿಕ ಪತ್ರವನ್ನು ನಮ್ಮ ಕುಟುಂಬ, ಸಂಬಂಧಿಕರು ಅಥವಾ ಸ್ನೇಹಿತರಿಗೆ ಬರೆಯುವುದಕ್ಕೆ ಬಳಸುವುದಿಲ್ಲ.

ಸಾಮಾನ್ಯವಾಗಿ, ಈ ವ್ಯಾವಹಾರಿಕ ಪತ್ರಗಳನ್ನು ಖಾಸಗಿ ಕಂಪನಿಗಳಲ್ಲಿ ಇಂಗ್ಲಿಷ್‌ ಭಾಷೆಯಲ್ಲಿ ಬರೆಯಲಾಗುತ್ತದೆ. ಆದರೆ ಕೆಲ ಕಂಪನಿಗಳು, ವಿಶೇಷವಾಗಿ ಸರ್ಕಾರಿ ಸಂಸ್ಥೆಗಳಿಗೆ ಕನ್ನಡ ಭಾಷೆಯಲ್ಲಿ ಬರೆದ ವ್ಯಾವಹಾರಿಕ ಪತ್ರಗಳನ್ನು ಬರೆಯಬೇಕು.

Tips for writing Vyavaharika Patra in Kannada | ವ್ಯಾವಹಾರಿಕ ಪತ್ರವನ್ನು ಬರೆಯಲು  ಸಲಹೆಗಳು

ಇಲ್ಲಿ ನೀವು ವ್ಯಾವಹಾರಿಕ ಪತ್ರವನ್ನು ಬರೆಯಲು ಕೆಲ ಸಲಹೆಗಳನ್ನು ನೀಡಲಾಗಿದೆ.

  • ಸಂಬಂಧಪಟ್ಟ ವ್ಯಕ್ತಿಯನ್ನು ಅಂದರೆ ಯಾರಿಗೆ ಪತ್ರ ಬರೆಯುತ್ತೀರಿ ಅವರನ್ನು ಆತ್ಮೀಯ ಸರ್/ಮೇಡಂ ಎಂದು ಸಂಬೋಧಿಸಬೇಕು.
  • ಪತ್ರ ಬರೆಯುವ ವಿಷಯವನ್ನು ತಪ್ಪದೆ ಉಲ್ಲೇಖಿಸಬೇಕು.
  • ಪತ್ರ ಸಂಕ್ಷಿಪ್ತವಾಗಿರಲಿ. ಪತ್ರವನ್ನು ಬರೆಯಲು ಕಾರಣವನ್ನು ಮೊದಲ ಪ್ಯಾರಾಗ್ರಾಫ್ನಲ್ಲಿ ಬರೆಯಿರಿ.
  • ಪತ್ರದ ಭಾಷೆ ತುಂಬಾ ಸಭ್ಯವಾಗಿರುವಂತೆ ನೋಡಿಕೊಳ್ಳಿ.
  • ವಿಳಾಸ ಮತ್ತು ದಿನಾಂಕವನ್ನು ತಪ್ಪದೆ ಸರಿಯಾಗಿ ನಮೂದಿಸಿ.
  • ಸ್ವೀಕರಿಸುವವರ ಹೆಸರು ಮತ್ತು ಹೆಸರನ್ನು ಸರಿಯಾಗಿ ನಮೂದಿಸಿ.
  • ಪತ್ರದ ಅಂತ್ಯದಲ್ಲಿ ಕೃತಜ್ಞತೆ ಇರಬೇಕು. ಇದಕ್ಕಾಗಿ ನೀವು “ಧನ್ಯವಾದಗಳು” ಎಂಬ ಪದವನ್ನು ಬಳಸಿ ಮತ್ತು ನಂತರ ನಿಮ್ಮ ಹೆಸರು ಮತ್ತು ಸಹಿಯೊಂದಿಗೆ “ನಿಮ್ಮ ವಿಶ್ವಾಸಿ” ಎಂದು ನಮೂದಿಸಿ.

Format of Vyavaharika Patra in Kannada | ವ್ಯಾವಹಾರಿಕ ಪತ್ರದ ಮಾದರಿ ಕನ್ನಡದಲ್ಲಿ

ಇಲ್ಲಿ ನೀವು ವ್ಯಾವಹಾರಿಕ ಪತ್ರದ ಮಾದರಿಯನ್ನು ಕಾಣಬಹುದು.

ಸಂಪರ್ಕಿಸುವ ಮಾಹಿತಿ (ಇಲ್ಲಿ ನೀವು ನಿಮ್ಮ ಸಂಪೂರ್ಣ ವಿಳಾಸ ಅಂದರೆ ನಿಮ್ಮನ್ನು ಸಂಪರ್ಕಿಸುವ ಮಾಹಿತಿಯನ್ನು ನಮೂದಿಸಬೇಕು)
ನಿಮ್ಮ ಹೆಸರು
ನೀವು ವಾಸಿಸುವ ಸಂಪೂರ್ಣ ವಿಳಾಸ
ನಿಮ್ಮ ನಗರ, ರಾಜ್ಯ ಪಿನ್ ಕೋಡ್
ನಿಮ್ಮ ಮೊಬೈಲ್ ಅಥವಾ ಫೋನ್ ಸಂಖ್ಯೆ

ದಿನಾಂಕ (ಪತ್ರ ಬರೆಯುತ್ತಿರುವ ದಿನಾಂಕವನ್ನು ನಮೂದಿಸಿ. ಈ ದಿನಾಂಕ ಬಹು ಮುಖ್ಯ ಏಕೆಂದರೆ ಪತ್ರ ಎಂದು ಬರೆಯಲಾಗಿತ್ತು ಎಂದು ಈ ದಿನಾಂಕ ಸೂಚಿಸುತ್ತದೆ)

ಸಂಪರ್ಕ ಮಾಹಿತಿ (ನೀವು ಬರೆಯುತ್ತಿರುವ ವ್ಯಕ್ತಿ, ಇಲಾಖೆ ಅಥವಾ ಕಂಪನಿಗೆ ಸಂಬಂಧಪಟ್ಟಿದ್ದು)
ಹೆಸರು
ಶೀರ್ಷಿಕೆ
ಕಂಪನಿ
ವಿಳಾಸ
ನಗರ, ರಾಜ್ಯ ಪಿನ್ ಕೋಡ್

ಶುಭಾಶಯ (ವಂದನೆ)

ಆತ್ಮೀಯ ಶ್ರೀ/ಶ್ರೀಮತಿ ಹೆಸರು:
ನೀವು ಯಾರಿಗೆ ಪತ್ರ ಬರೆಯುತ್ತೀರಿ ಆ ವ್ಯಕ್ತಿ ನಿಮಗೆ ತಿಳಿದಿದ್ದರೆ ಔಪಚಾರಿಕ ನಮಸ್ಕಾರವನ್ನು ಬಳಸಿ. ವ್ಯಕ್ತಿಯ ಲಿಂಗ ನಿಮಗೆ ತಿಳಿದಿದ್ದರೆ, ನೀವು ಅವರ ಪೂರ್ಣ ಹೆಸರನ್ನು ಬರೆಯಬಹುದು. ಸ್ವೀಕರಿಸುವವರ ಹೆಸರು ನಿಮಗೆ ತಿಳಿದಿಲ್ಲದಿದ್ದರೆ, “ಆತ್ಮೀಯ ಶ್ರೀ/ಶ್ರೀಮತಿ” ಅನ್ನು ಬಳಸಬಹುದು.

ವಿಷಯ (ಇಲ್ಲಿ ನೀವು ಪತ್ರ ಏಕೆ ಬರೆಯುತ್ತಿದ್ದೀರಿ ಎಂಬ ವಿಷಯವನ್ನು ಸ್ಪಷ್ಟ ಪಡಿಸಬೇಕು. ವಿಷಯ ಪತ್ರದ ಮೂಲ ಉದ್ದೇಶವನ್ನು ಸ್ಪಷ್ಟ ಪಡಿಸುವಂತಿರಬೇಕು ಮತ್ತು ಇದು ಸಂಕ್ಷಿಪ್ತವಾಗಿರಬೇಕು ಅಂದರೆ ಒಂದು ಅಥವಾ ಎರಡು ಸಾಲಿದ್ದರೆ ಸಾಕು)

ಪತ್ರದ ಸಾರಾಂಶ

ನೀವು ಪತ್ರ ಬರೆಯುವಾಗ ಪತ್ರದ ಮೊದಲ ಪ್ಯಾರಾಗ್ರಾಫ್ ನೀವು ಏಕೆ ಬರೆಯುತ್ತಿರುವಿರಿ ಎಂಬುದರ ಪರಿಚಯವನ್ನು ಸೂಚಿಸಬೇಕು. ಇದು ನೀವು ಪಾತ್ರವನ್ನು ಏಕೆ ಬರೆಯುತ್ತೀರಿ ಎಂಬುದನ್ನು ಮೊದಲಿಗೆ ಸ್ಪಷ್ಟ ಪಡಿಸುತ್ತದೆ. ನಂತರ, ನೀವು ಬರೆಯಬೇಕಾಗಿರುವ ಅಗತ್ಯ ಮಾಹಿತಿಯನ್ನು ಇಲ್ಲಿ ನೀಡಬಹುದು.

ನಿಮ್ಮ ಪತ್ರದ ಕೊನೆಯ ಪ್ಯಾರಾಗ್ರಾಫ್ ನೀವು ಬರೆಯುತ್ತಿರುವ ಉದ್ದೇಶವನ್ನು ಇನ್ನೊಮ್ಮೆ ಸ್ಪಷ್ಟ ಪಡಿಸುವಂತಿರಬೇಕು. ಒಂದು ವೇಳೆ ನೀವು ವಿನಂತಿಸುತ್ತಿದ್ದರೆ ಇಲ್ಲಿ ನಿಮ್ಮ ವಿನಂತಿಯನ್ನು ನಯವಾದ ಭಾಷೆಯಲ್ಲಿ ಬರೆಯಬೇಕು. ಒಂದು ವೇಳೆ ನೀವು ಅವರ ಪ್ರತಿ ಉತ್ತರಕ್ಕಾಗಿ ಕಾಯುತ್ತಿದ್ದರೆ ಅದನ್ನು ಇಲ್ಲಿ ಸ್ಪಷ್ಟ ಪಡಿಸಬೇಕು.

ಪತ್ರವನ್ನು ಕೊನೆಗೊಳಿಸುವಿಕೆ
ಧನ್ಯವಾದಗಳು (ಇಲ್ಲಿ ಧನ್ಯವಾದಗಳ ನಂತರ ನೀವು “ನಿಮ್ಮ ವಿಶ್ವಾಸಿ” ಎಂಬ ಪದಗಳನ್ನು ಬಳಸಬೇಕು)

ಸಹಿ
ಹೆಸರು (ನಿಮ್ಮ ಹೆಸರು)
ಕೈಬರಹದ ಸಹಿ (ಇಲ್ಲಿ ನಿಮ್ಮ ಕೈ ಬರಹದ ಸಹಿ ಅಥವಾ ಟೈಪ್ ಮಾಡಿದ ಸಹಿ ಇರುತ್ತದೆ)


Subjects for writing Vyavaharika Patra in Kannada | ವ್ಯಾವಹಾರಿಕ ಪತ್ರ ಬರೆಯುವ ವಿಷಯಗಳು

ವ್ಯಾವಹಾರಿಕ ಪತ್ರವನ್ನು ಬರೆಯಲು ಹಲವು ಕಾರಣಗಳಿರಬಹುದು. ಅವುಗಳೆಂದರೆ

ವಿಚಾರಣೆ ಪತ್ರ : ನಿರ್ದಿಷ್ಟ ಸಂಸ್ಥೆಯಿಂದ/ವ್ಯಾಪಾರ ಉತ್ಪನ್ನ/ಸೇವೆಗಳು ಇತ್ಯಾದಿಗಳಿಗೆ ಸಂಬಂಧಿಸಿದ ವಿವರಗಳನ್ನು ಪಡೆಯುವದಕ್ಕಾಗಿ ಬರೆಯುವ ಪತ್ರ.

ಆದೇಶ ಪತ್ರ : ಮಾರಾಟಗಾರರಿಂದ ಸೇವೆ ಅಥವಾ ಉತ್ಪನ್ನ ಪಡೆಯಲು ಖರೀದಿದಾರರಿಂದ ಬರೆಯಲ್ಪಡುವ ಪತ್ರ.

ದೂರಿನ ಪತ್ರ : ಯಾವುದಾದರೂ ಉತ್ಪನ್ನ/ಸೇವೆಗೆ ಸಂಬಂಧಿಸಿದಂತೆ ದೂರು ನೀಡಲು ಬಳಸುವ ಪತ್ರ.

ದೂರಿನ ಪತ್ರಕ್ಕೆ ಪ್ರತ್ಯುತ್ತರ : ಇದು ದೂರಿನ ಪತ್ರಕ್ಕೆ ಪ್ರತ್ಯುತ್ತರವಾಗಿ ಬರೆಯಲ್ಪುಡುವ ಪತ್ರವಾಗಿರುತ್ತದೆ.

ಪ್ರಚಾರ ಪತ್ರ : ಗ್ರಾಹಕರಿಗೆ ಕೆಲವು ಉತ್ಪನ್ನಗಳು ಅಥವಾ ಸೇವೆಗಳ ಜಾಹೀರಾತುಗಳಿಗಾಗಿ.

ಮಾರಾಟ ಪತ್ರಗಳು : ಮಾರಾಟದ ಪ್ರಚಾರಗಳಿಗಾಗಿ ಮಾರಾಟ ಪತ್ರವನ್ನು ತನ್ನ ಗ್ರಾಹಕರಿಗೆ ಅವರ ಉತ್ಪನ್ನಗಳು ಮತ್ತು ಸೇವೆಗಳ ಬಗ್ಗೆ ತಿಳಿಸಲು.

ರಿಕವರಿ ಲೆಟರ್ಸ್ : ತಮ್ಮ ಉತ್ಪನ್ನಗಳು ಅಥವಾ ಸೇವೆಗಳಿಗೆ ಪಾವತಿಸದ ಗ್ರಾಹಕರಿಂದ ಹಣವನ್ನು ಮರುಪಡೆಯಲು ಪತ್ರ ಬರೆಯಲಾಗುತ್ತದೆ.


Examples for Vyavaharika Patra in Kannada | ವ್ಯಾವಹಾರಿಕ ಪತ್ರದ ಉದಾಹರಣೆಗಳು

ನೀವು ಜಯನಗರದ ನಿವಾಸಿ ಎಂದು ಭಾವಿಸಿ ನಿಮ್ಮ ನಗರದಲ್ಲಿ ಒಳಚರಂಡಿ ಪೈಪ್ ಒಡೆದು ನೀರು ನಿಂತಿರುವುದರಿಂದ ನಿಮ್ಮ ನಗರದ ಮುನ್ಸಿಪಲ್ ಕಮಿಷನರ್ ಗೆ ಸಮಸ್ಯೆ ಬಗೆಹರಿಸುವಂತೆ ವ್ಯಾವಹಾರಿಕ ಪತ್ರ ಬರೆಯಿರಿ (Assume that you are the resident of Jayanagara colony, write a Vyavaharika letter to your city Muncipal Commisioner regarding the sewage problem in your area).

ಇಂದ,
#15, 2 ನೇ ಕ್ರಾಸ್
ಕೃಷ್ಣ ಕಾಲೋನಿ, ಜಯನಗರ
ಬೆಂಗಳೂರು – 560041

ದಿನಾಂಕ: 20 ಮೇ 2021

ರಿಗೆ,
ಮುನ್ಸಿಪಲ್ ಕಮಿಷನರ್
ಬ್ರಿಗೇಡ್ ರೋಡ್
ಬೆಂಗಳೂರು – 560001

ವಿಷಯ: ಜಯನಗರದಲ್ಲಿ ರಸ್ತೆಯಲ್ಲಿ ಕಳಪೆ ಒಳಚರಂಡಿ ವ್ಯವಸ್ಥೆಗೆ ಸಂಬಂಧಿಸಿದಂತೆ.

ಮಾನ್ಯರೇ,

ನಾನು ಜಯನಗರದ ನಿವಾಸಿ ಕುಮಾರ್. ಈ ಪತ್ರದ ಮೂಲಕ, ನನ್ನ ಪ್ರದೇಶದಲ್ಲಿನ ಒಳಚರಂಡಿ ವ್ಯವಸ್ಥೆಯ ಬಗ್ಗೆ ನಿಮ್ಮ ಗಮನವನ್ನು ಸೆಳೆಯಲು ನಾನು ಬಯಸುತ್ತೇನೆ. ಒಳಚರಂಡಿ ವ್ಯವಸ್ಥೆಯಲ್ಲಿ ಪೈಪ್‌ಲೈನ್ ಒಡೆದಿದ್ದರಿಂದ ನಮ್ಮ ಪ್ರದೇಶದ ಜನರು ಅನೇಕ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಮುಂಗಾರು ಹಂಗಾಮು ಆರಂಭವಾಗಿದ್ದು, ಈಗ ಸಮಸ್ಯೆ ಇನ್ನೂ ಹೆಚ್ಚಾಗಿದೆ.

ಕೊಳಚೆ ನೀರಿನ ಸಮಸ್ಯೆಯಿಂದ ಸುತ್ತಮುತ್ತಲಿನ ಪ್ರದೇಶದ ಜನರಿಗೆ ತೊಂದರೆ ಉಂಟಾಗಿದೆ. ಕೆಲವು ದಿನಗಳ ಹಿಂದೆ ಜೋರಾಗಿ ಮಳೆ ಬಂದಿದ್ದರಿಂದ ಹೆಚ್ಚು ನೀರು ನಿಂತು ಮಕ್ಕಳು ಶಾಲೆಗೆ ಹೋಗಲು ಮತ್ತು ಉದ್ಯೋಗಿಗಳು ಕಚೇರಿಗೆ ತೆರಳಲಾಗದೆ ತೊಂದರೆ ಅನುಭವಿಸುತ್ತಿದ್ದಾರೆ.

ಆದುದರಿಂದ ದಯವಿಟ್ಟು ಈ ವಿಷಯವನ್ನು ಆದಷ್ಟು ಬೇಗ ಗಂಭೀರವಾಗಿ ಪರಿಗಣಿಸಿ ಈ ಸಮಸ್ಯೆಯನ್ನು ನಿವಾರಿಸಬೇಕೆಂದು ನಿಮ್ಮಲ್ಲಿ ವಿನಂತಿಸುತ್ತೇನೆ.

ನಿಮ್ಮ ವಿಶ್ವಾಸಿ
ಕುಮಾರ್
ಜಯನಗರದ ನಿವಾಸಿ


ಉನ್ನತ ವ್ಯಾಸಂಗಕ್ಕಾಗಿ ಮೆಡಿಕಲ್ ಕಾಲೇಜಿನಲ್ಲಿ ಸೀಟು ದೊರೆತಿರುವುದರಿಂದ ಶೆಕ್ಷಣಿಕ ಸಾಲಕ್ಕಾಗಿ ವ್ಯಾವಹಾರಿಕ ಪತ್ರ ಬರೆಯಿರಿ (Write a letter to bank manager requesting for the education loan for your higher studies as you have a got a seat in medical college).

ಇಂದ,
ಕುಮಾರ್
ಕೃಷ್ಣ ಕಾಲೋನಿ
ಜಯನಗರ
ಬೆಂಗಳೂರು

ದಿನಾಂಕ : 24 ಜೂನ್ 2021

ರಿಗೆ,
ಬ್ಯಾಂಕ್ ಮ್ಯಾನೇಜರ್
ಬ್ಯಾಂಕಿನ ಹೆಸರು
ಬ್ಯಾಂಕಿನ ವಿಳಾಸ
ಬೆಂಗಳೂರು

ವಿಷಯ : ಉನ್ನತ ವ್ಯಾಸಂಗಕ್ಕಾಗಿ ಶೈಕ್ಷಣಿಕ ಸಾಲಕ್ಕಾಗಿ ಪತ್ರ.

ಮಾನ್ಯರೆ,

ನಾನು ಬೆಂಗಳೂರು ನಗರದ ಕೆ ರ್ ಮೆಡಿಕಲ್ ಕಾಲೇಜಿನಲ್ಲಿ ಮೆಡಿಕಲ್ ವಿಭಾಗದಲ್ಲಿ ದಂತ ವೈದ್ಯಕೀಯ ಕೋರ್ಸ್ ಅಧ್ಯಯನ ಮಾಡಲು ಪ್ರವೇಶ ಪಡೆದಿದ್ದೇನೆ.

ನನ್ನ ಉನ್ನತ ವ್ಯಾಸಂಗವನ್ನು ಮುಂದುವರಿಸಲು ನನಗೆ ಶಿಕ್ಷಣ ಸಾಲದ ಅಗತ್ಯವಿರುತ್ತದೆ. ಆದ್ದರಿಂದ ಮೂರು ಲಕ್ಷ ಮೊತ್ತದ ಶಿಕ್ಷಣ ಸಾಲವನ್ನು ಮಂಜೂರು ಮಾಡುವಂತೆ ನಾನು ಈ ಪತ್ರದ ಮೂಲಕ ತಮ್ಮಲ್ಲಿ ವಿನಂತಿ ಮಾಡುತ್ತೇನೆ.

ಈ ಪತ್ರದೊಂದಿಗೆ ನನ್ನ ಪಿ ಯು ಸಿ, ಹತ್ತನೆಯ ತರಗತಿ ಮತ್ತು ಸಿ ಇ ಟಿ ಯಲ್ಲಿ ದೊರೆತ ಅಂಕ ಪಟ್ಟಿಯನ್ನು (ಮಾರ್ಕ್ಸ್ ಕಾರ್ಡ್) ಹಾಗೂ ಮೆಡಿಕಲ್ ಕಾಲೇಜಿನಲ್ಲಿ ದಂತ ವೈದ್ಯಕೀಯ ಕೋರ್ಸ್ ಅಧ್ಯಯನ ಮಾಡಲು ಸೀಟು ದೊರೆತ ಪ್ರವೇಶ ಪತ್ರವನ್ನು ಲಗತ್ತಿಸಲಾಗಿದೆ.

ಧನ್ಯವಾದಗಳು
ಇಂತಿ
ನಿಮ್ಮ ವಿಶ್ವಾಸಿ
ಕುಮಾರ್


ನೀವು ಗ್ರಾಮದ ನಿವಾಸಿಯಾಗಿದ್ದು ನಿಮ್ಮ ಗ್ರಾಮದಲ್ಲಿ ನೀರಿನ ಘಟಕ ಇಲ್ಲವಾದ್ದರಿಂದ ನೀರಿನ ಘಟಕ ಸ್ಥಾಪಿಸುವಂತೆ ಗ್ರಾಮ ಪಂಚಾಯಿತಿಗೆ ವ್ಯಾವಹಾರಿಕ ಮನವಿ ಪತ್ರ ಬರೆಯಿರಿ (Assume that you are a resident of a village write a request letter to gram panchayat for installing water filter in your village).

ಇಂದ,
ಕುಮಾರ್
ಬಸವನಪುರ ಗ್ರಾಮ
ಮಂಡ್ಯ ತಾಲ್ಲೂಕು
ಮೈಸೂರು ಜಿಲ್ಲೆ

ರಿಗೆ,
ಅಧ್ಯಕ್ಷರು
ಗ್ರಾಮ ಪಂಚಾಯಿತಿ
ಬಸವನಪುರ ಗ್ರಾಮ
ಮಂಡ್ಯ ತಾಲ್ಲೂಕು
ಮೈಸೂರು ಜಿಲ್ಲೆ

ವಿಷಯ : ಗ್ರಾಮದಲ್ಲಿ ನೀರು ಶುದ್ಧೀಕರಿಸುವ ಘಟಕ ಸ್ಥಾಪಿಸುವಂತೆ ಮನವಿ ಪತ್ರ.

ಮಾನ್ಯರೇ,

ನಾನು ಮಂಡ್ಯ ತಾಲ್ಲೂಕಿನ ಬಸವನಪುರದ ನಿವಾಸಿ ಕುಮಾರ್. ಮೇಲೆ ತಿಳಿಸಿರುವ ವಿಷಯದಂತೆ, ಇನ್ನೂವರೆಗೂ ನಮ್ಮ ಗ್ರಾಮದಲ್ಲಿ ನೀರು ಶುದ್ಧೀಕರಿಸುವ ಘಟಕ ಸ್ಥಾಪಿಸಲಾಗಿಲ್ಲ. ನಮ್ಮ ಗ್ರಾಮದ ಹತ್ತಿರದಲ್ಲಿ 3 ಮೈಲುಗಳಷ್ಟು ದೂರದವರೆಗೂ ಯಾವುದೇ ನೀರಿನ ಘಟಕ ಇರುವುದಿಲ್ಲ. ವಾಹನ ಇರುವವರು ತಮ್ಮ ವಾಹನದಲ್ಲಿ ಹೋಗಿ ಪಕ್ಕದ ಗ್ರಾಮದಲ್ಲಿರುವ ನೀರು ಶುದ್ಧೀಕರಿಸುವ ಘಟಕದಿಂದ ನೀರನ್ನು ತರುತ್ತಾರೆ. ಆದರೆ ವಾಹನ ಇಲ್ಲದಿರುವವರು ಗ್ರಾಮದ ಜನ ನೀರನ್ನು ತರಲಾರದೆ ಬೇರೆ ದಾರಿ ಇಲ್ಲದೆ ಬೋರ್ವೆಲ್ ನೀರನ್ನು ಸೇವಿಸಿ ಒಂದಿಲ್ಲೊಂದು ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ.

ಈ ಬಗ್ಗೆ ಈಗಾಗಲೇ ಗ್ರಾಮದ ಹಲವಾರು ಜನ ನೀರು ಶುದ್ಧೀಕರಿಸುವ ಘಟಕವನ್ನು ಸ್ಥಾಪಿಸುವಂತೆ ಮನವಿ ಸಲ್ಲಿಸಿರುತ್ತಾರೆ. ಆದರೂ  ನೀರಿನ ಘಟಕ ಸ್ಥಾಪನೆಯಾಗಿಲ್ಲ. ಆದ್ದರಿಂದ ದಯವಿಟ್ಟುಆದಷ್ಟು ಬೇಗನೆ ನೀರು ಶುದ್ಧೀಕರಿಸುವ ಘಟಕವನ್ನು ಸ್ಥಾಪಿಸಬೇಕೆಂದು ಈ ಪತ್ರದ ಮೂಲಕ ತಮ್ಮಲ್ಲಿ ಮನವಿ ಗ್ರಾಮದ ಜನರ ಪರವಾಗಿ ಮನವಿ ಮಾಡುತ್ತೇನೆ.

ವಂದನೆಗಳೊಂದಿಗೆ
ತಮ್ಮ ವಿಶ್ವಾಸಿ
ಕುಮಾರ್
ಬಸವನಪುರ ಗ್ರಾಮದ ನಿವಾಸಿ


ವ್ಯಾವಹಾರಿಕ ಪತ್ರದ ಬಗ್ಗೆ ಕೆಲ ಪ್ರಶ್ನೋತ್ತರಗಳು | FAQ on Vyavaharika Patra in Kannada

ಪ್ರ. ವ್ಯಾವಹಾರಿಕ ಪತ್ರದ ಯಾವ ಭಾಗದಲ್ಲಿ ಮುಖ್ಯ ಅಂಶವನ್ನು ಬರೆಯಲಾಗುತ್ತದೆ?
ಉ. ವ್ಯಾವಹಾರಿಕ ಪತ್ರದ ಮುಖ್ಯ ಅಂಶಗಳನ್ನು ದೇಹದ ಭಾಗದಲ್ಲಿ ಬರೆಯಲಾಗುತ್ತದೆ.

ಪ್ರ. ವ್ಯಾವಹಾರಿಕ ಪತ್ರದ ಮುಖ್ಯ ಭಾಗವನ್ನು ನೀವು ಹೇಗೆ ಕೊನೆಗೊಳಿಸುತ್ತೀರಿ?
ಉ. ವ್ಯಾವಹಾರಿಕ ಪತ್ರದ ಅಂತ್ಯದಲ್ಲಿ ನೀವು ಏನನ್ನು ನಿರೀಕ್ಷಿಸುತ್ತೀರಿ ಎಂಬುದನ್ನು ಉಲ್ಲೇಖಿಸಬೇಕು.

ಪ್ರ. ಎರಡು ರೀತಿಯ ಪತ್ರಗಳು ಯಾವುವು?
ಉ. ಎರಡು ವಿಧದ ಪತ್ರಗಳು ಯಾವುವೆಂದರೆ, ವ್ಯಾವಹಾರಿಕ ಪತ್ರ ಮತ್ತು ವೈಯಕ್ತಿಕ ಪತ್ರ.

ಪ್ರ. ವ್ಯಾವಹಾರಿಕ ಪತ್ರ ಎಂದರೇನು ?
ಉ. ಅಧಿಕೃತ ಉದ್ದೇಶಗಳಿಗಾಗಿ ಬರೆಯುವ ಪತ್ರವನ್ನು  ವ್ಯಾವಹಾರಿಕ ಪತ್ರ ಎನ್ನುತ್ತಾರೆ.

ಪ್ರ. ವ್ಯಾವಹಾರಿಕ ಪತ್ರದ ಸ್ವರೂಪ ಹೇಗಿರುತ್ತದೆ ?
ಉ. ವ್ಯಾವಹಾರಿಕ ಪತ್ರದ ರಚನೆ :

ಕಳುಹಿಸುವವರ ವಿಳಾಸ
ದಿನಾಂಕ
ವಿಳಾಸದಾರರ ಹೆಸರು / ಹುದ್ದೆ
ವಿಳಾಸದಾರರ ವಿಳಾಸ
ನಮಸ್ಕಾರ
ವಿಷಯ
ದೇಹ [ಪರಿಚಯ, ವಿಷಯ, ತೀರ್ಮಾನ]
ಪತ್ರ ಮುಕ್ತಾಯಗೊಳಿಸುವಿಕೆ
ಕಳುಹಿಸುವವರ ಸಹಿ / ಹೆಸರು
ಕಳುಹಿಸುವವರ ಹುದ್ದೆ

Also Read

Leave letter in Kannada

Click on the below link for letter writing हिंदी में पत्र लेखन

Letter Writing in Hindi

How to know me meaning in Hindi