Leave Letter in Kannada

Leave Letter in Kannada | ಕನ್ನಡದಲ್ಲಿ ರಜೆ ಪತ್ರ

Here you will find some examples leave letter in Kannada. Leave letter is written when we require leave on various occasions. These  leave letter examples in Kannada will help you to understand how to write leave letter.

letter writing

ಇಲ್ಲಿ ಕನ್ನಡದಲ್ಲಿ ರಜೆ ಪತ್ರ ಬರೆಯುವ (Leave Letter in Kannada) ವಿಧಾನದ ಜೊತೆ ರಜೆ ಪತ್ರದ ಕೆಲ ಉದಾಹರಣೆಗಳನ್ನು ಕೊಡಲಾಗಿದೆ.

ರಜೆ ಪತ್ರ ಎಂದರೇನು ? | Leave letter meaning in Kannada
ರಜೆ ಅರ್ಜಿ ಪತ್ರವು ನೀವು ರಜೆಗೆ ಕೋರಿ ಸಂಬಂಧಪಟ್ಟ ವ್ಯಕ್ತಿಗೆ ಸಲ್ಲಿಸುವ ಔಪಚಾರಿಕ ಪತ್ರವಾಗಿದೆ.

ರಜೆಗಾಗಿ ಜನರು ಅರ್ಜಿ ಸಲ್ಲಿಸಲು ಕಾರಣಗಳು | Reasons for writing Leave Letter in Kannada
ನೀವು ರಜೆಗಾಗಿ ಅರ್ಜಿ ಸಲ್ಲಿಸಿದಾಗ, ಕಾರಣವನ್ನು ನಮೂದಿಸುವುದು ಕಡ್ಡಾಯವಾಗಿದೆ. ಜನರು ರಜೆಗಾಗಿ ಅರ್ಜಿ ಸಲ್ಲಿಸಲು ಹಲವಾರು ಕಾರಣಗಳಿವೆ. ಉದಾಹರಣೆಗೆ

  1. ಅನಾರೋಗ್ಯ ಅಥವಾ ವೈದ್ಯರ ಭೇಟಿ / incase of not feeling well or doctor appointment
  2. ವಿಶ್ರಾಂತಿ ಮತ್ತು ಮನರಂಜನೆ / Rest or Entertainment
  3. ಮದುವೆ, ಹುಟ್ಟುಹಬ್ಬ ಅಥವಾ ಇತರ ಪ್ರಮುಖ ವಾರ್ಷಿಕೋತ್ಸವಗಳು ಅಥವಾ ಬೇರೆ ಊರಿಗೆ ಪ್ರಯಾಣ / Marriage, Birthday, event, Anniversary or Travelling to some other place.

ರಜೆ ಪತ್ರದ ಸ್ವರೂಪ  | Format of Leave Letter in Kannada

ಗೆ,
ಕಳುಹಿಸುವವರ ಹೆಸರು (Sender’s name)
ಕಳುಹಿಸುವವರ ಹುದ್ದೆ (sender’s designation)
ಶಾಲೆಯ ಹೆಸರು (Name of the school)
ಶಾಲೆಯ ವಿಳಾಸ (Address of the school)

ವಿಷಯ (Subject) : ರಜೆಯ ಪತ್ರ (Leave Letter)

ಆತ್ಮೀಯ ಗುರುಗಳೇ (Salutation),

ಪತ್ರದ ಸಾರಾಂಶ (Body of the Letter or main matter): ಇಲ್ಲಿ ನೀವು ಯಾವ ಕಾರಣಕ್ಕಾಗಿ ರಜೆಯನ್ನು ಪಡೆಯುತ್ತಿದ್ದಿರಿ ಮತ್ತು ಎಷ್ಟು ದಿನಗಳವರೆಗೆ ರಜೆಯ ಅವಶ್ಯಕತೆ ಇದೆ ಎಂದು ಬರೆಯಬೇಕು. ಒಂದು ವೇಳೆ ನೀವು ಅನಾರೋಗ್ಯದ ಕಾರಣಕ್ಕಾಗಿ ರಜೆಯನ್ನು ತೆಗೆದುಕೊಳ್ಳುತ್ತಿದ್ದರೆ ಸಾಧ್ಯವಾದಲ್ಲಿ ವೈದ್ಯರ ಚೀಟಿಯನ್ನು ಸೇರಿಸಬೇಕಾಗಬಹುದು (Here you have to mention the reason for which you are taking the leave. Also you have to mention for how many days you need leave. If you are not well and you are taking sick leave sometimes you may have to produce Doctor’s certificate as proof ).

ಧನ್ಯವಾದಗಳು (thanks),
ನಿಮ್ಮ ವಿಶ್ವಾಸಿ (Yours Faithfull),
ನಿಮ್ಮ ಹೆಸರು (Your Name)
ನಿಮ್ಮ ಕ್ರಮ ಸಂಖ್ಯೆ (ರೋಲ್ ನಂಬರ್ ಅಥವಾ ರಿಜಿಸ್ಟ್ರೇಷನ್ ನಂಬರ್ – Your Roll number or Registration Number)
ನಿಮ್ಮ ತರಗತಿ (The class to which you belong)
ನಿಮ್ಮ ವಿಭಾಗ (The section to which you belong)
ಶಾಲೆಯ ಹೆಸರು (Name of the School)


ರಜೆ ಪತ್ರದ ಕೆಲ ಉದಾಹರಣೆಗಳು | Examples for writing Leave Letter in Kannada

letter writing

ಅನಾರೋಗ್ಯದ ಕಾರಣ ರಜೆ ಪತ್ರ | Sick Leave Letter in Kannada

ನೀವು 5 ನೇ ತರಗತಿಯ ‘ಸಿ’ ವಿಭಾಗದ ವಿದ್ಯಾರ್ಥಿಯಾಗಿದ್ದು ಜ್ವರದ ಕಾರಣದಿಂದ 3 ದಿನಗಳ ರಜೆ ಕೋರಿ ನಿಮ್ಮ ತರಗತಿಯ ಶಿಕ್ಷಕರಿಗೆ ಪತ್ರ ಬರೆಯಿರಿ / Assume that you are a student of 5th class ‘c’ section. Write a letter to your class teacher requesting leave for 3 days as you are suffering from fever.

ಗೆ,
ವರ್ಗ ಶಿಕ್ಷಕ 5 ನೇ ತರಗತಿ
ವೈದೇಹಿ ಹಿರಿಯ ಪ್ರಾಥಮಿಕ ಶಾಲೆ
ಜಯನಗರ
ಬೆಂಗಳೂರು – 560041

ದಿನಾಂಕ : 2 ಆಗಸ್ಟ್ 2021

ವಿಷಯ: ರಜೆಯ ಪತ್ರ

ಆತ್ಮೀಯ ಗುರುಗಳೇ,

ನಾನು ರಮೇಶ್, 5 ನೇ ತರಗತಿಯ ‘ಸಿ’ ವಿಭಾಗದ ವಿದ್ಯಾರ್ಥಿ. ನಾನು ನಿನ್ನೆಯಿಂದ  ಜ್ವರದಿಂದ ಬಳಲುತ್ತಿದ್ದೇನೆ.. ವೈದ್ಯರು ಕನಿಷ್ಠ 3 ದಿನಗಳ ಕಾಲ ಮನೆಯಲ್ಲಿ ವಿಶ್ರಾಂತಿ ತೆಗೆದುಕೊಳ್ಳುವಂತೆ ಹೇಳಿದ್ದಾರೆ. ಹಾಗಾಗಿ 3 ದಿನಗಳ ಕಾಲ ಶಾಲೆಗೆ ಬರಲು ಸಾಧ್ಯವಾಗುವುದಿಲ್ಲ. ನಾಳೆಯಿಂದ ಅಂದರೆ 2021ರ ಆಗಸ್ಟ್ 3 ರಿಂದ 2021ರ ಆಗಸ್ಟ್  6 ರವರೆಗೆ 3 ದಿನಗಳ ಕಾಲ ರಜೆಯನ್ನು ನೀಡಬೇಕೆಂದು ತಮ್ಮಲ್ಲಿ ವಿನಂತಿಸುತ್ತೇನೆ ಹಾಗೂ ವೈದ್ಯರು ನೀಡಿರುವ ಪ್ರಮಾಣ ಪತ್ರವನ್ನು ಇದರೊಂದಿಗೆ ಲಗತ್ತಿಸಿದ್ದೇನೆ.

ಧನ್ಯವಾದಗಳು,
ನಿಮ್ಮ ವಿಶ್ವಾಸಿ,
ರಮೇಶ್
ರೋಲ್ ನಂಬರ್ – 10
5 ನೇ ತರಗತಿ
ವಿಭಾಗ ಸಿ
ವೈದೇಹಿ ಹಿರಿಯ ಪ್ರಾಥಮಿಕ ಶಾಲೆ


ಪೋಷಕರಿಂದ ರಜೆಗಾಗಿ ಪತ್ರ  | Leave Letter by Parents in Kannada

ರಮೇಶನ ಅಜ್ಜ ನಿಧನರಾಗಿರುವುದರಿಂದ 2 ದಿನ ರಜೆ ಕೋರಿ ರಮೇಶನ ತಂದೆಯಿಂದ ಶಾಲಾ ತರಗತಿಯ ಶಿಕ್ಷಕರಿಗೆ ಪತ್ರ / Letter from a parent to the class teacher asking for 2 days leave for his son Ramesh as Ramesh’s grandfather passed away.

ಗೆ,
ವರ್ಗ ಶಿಕ್ಷಕ 5 ನೇ ತರಗತಿ
ವೈದೇಹಿ ಹಿರಿಯ ಪ್ರಾಥಮಿಕ ಶಾಲೆ
ಜಯನಗರ
ಬೆಂಗಳೂರು – 560041

ದಿನಾಂಕ : 9 ಸೆಪ್ಟೆಂಬರ್ 2021

ವಿಷಯ: ರಜೆಯ ಪತ್ರ

ಆತ್ಮೀಯ ಗುರುಗಳೇ,

ನಾನು ನಿಮ್ಮ ವಿದ್ಯಾರ್ಥಿಗಳಲ್ಲಿ ಒಬ್ಬರಾದ ರಮೇಶನ ತಂದೆ.  ರಮೇಶ್ ನಿಮ್ಮ ತರಗತಿಯ ‘C’ ವಿಭಾಗದಲ್ಲಿ ಓದುತ್ತಿದ್ದಾನೆ.. ರಮೇಶನ ಅಜ್ಜ ಇಂದು ಬೆಳಿಗ್ಗೆ ನಿಧನರಾದ ಕಾರಣ ಕುಟುಂಬದ ಸದಸ್ಯರೆಲ್ಲರೂ ಶೋಕದಲ್ಲಿರುವುದರಿಂದ ಮತ್ತು ಅಂತ್ಯಕ್ರಿಯೆಯ ಸೇವೆ ಇಂದು ಮತ್ತು ನಾಳೆ ನಡೆಯುತ್ತಿರಿವುದರಿಂದ ಇಂದು ಮತ್ತು ನಾಳೆ ಅಂದರೆ ಸೆಪ್ಟೆಂಬರ್ 10 ಮತ್ತು 11, 2021 ರಂದು ಅವನು  ಶಾಲೆಗೆ ಹಾಜರಾಗಲು ಸಾಧ್ಯವಾಗುವುದಿಲ್ಲ. ಹಾಗಾಗಿ ದಯವಿಟ್ಟು 2 ದಿನಗಳ ಕಾಲ ರಜೆ ನೀಡುವಂತೆ ವಿನಂತಿಸುತ್ತೇನೆ.

ಧನ್ಯವಾದಗಳು,
ನಿಮ್ಮ ವಿಶ್ವಾಸಿ,
ರಾಜು
(ಸಹಿ)


ತಾಯಿಯ ಅನಾರೋಗ್ಯದ ಕಾರಣ ರಜೆ ಪತ್ರ | Mother is not well Leave Letter in Kannada

ನಿಮ್ಮ ತಾಯಿಯ ಆರೋಗ್ಯ ಸರಿಇಲ್ಲದಿರುವುದರಿಂದ ತಾಯಿಯನ್ನು ವೈದ್ಯರ ಬಳಿ ಕರೆದುಕೊಂಡು ಹೋಗಬೇಕಾಗಿರುವುದರಿಂದ  ಒಂದು ದಿನ ರಜೆ ಕೋರಿ ಶಾಲಾ ತರಗತಿಯ ಶಿಕ್ಷಕರಿಗೆ ಪತ್ರ ಬರೆಯಿರಿ / Write a letter to your class teacher requesting for one day leave as your mother not feeling well from yesterday and you have to take her to doctor for checkup.

ಗೆ,
ವರ್ಗ ಶಿಕ್ಷಕ 7 ನೇ ತರಗತಿ
ವೈದೇಹಿ ಹಿರಿಯ ಪ್ರಾಥಮಿಕ ಶಾಲೆ
ಜಯನಗರ
ಬೆಂಗಳೂರು – 560041

ದಿನಾಂಕ :  9 ಸೆಪ್ಟೆಂಬರ್ 2021

ವಿಷಯ: ರಜೆಯ ಪತ್ರ

ಆತ್ಮೀಯ ಗುರುಗಳೇ,

ನಾನು ರಮೇಶ್, 7 ನೇ ತರಗತಿಯ ‘ಸಿ’ ವಿಭಾಗದ ವಿದ್ಯಾರ್ಥಿ. ನಿನ್ನೆಯಿಂದ ನನ್ನ ತಾಯಿಯ ಆರೋಗ್ಯ ಸರಿ ಇರುವುದಿಲ್ಲ. ಆದ್ದರಿಂದ ಇಂದು ವೈದ್ಯರ ಬಳಿ ತಪಾಸಣೆಗಾಗಿ ಕರೆದುಕೊಂಡು ಹೋಗಬೇಕಾಗಿರುವುದರಿಂದ ಇಂದು ಶಾಲೆಗೇ ಹಾಜರಾಗಲು ಸಾಧ್ಯವಾಗುವುದಿಲ್ಲ. ಆದರಿಂದ ಈ ದಿನ ರಜೆ ನೀಡಬೇಕೆಂದು ತಮ್ಮಲ್ಲಿ ವಿನಂತಿಸುತ್ತೇನೆ.

ಧನ್ಯವಾದಗಳು,
ನಿಮ್ಮ ವಿಶ್ವಾಸಿ,
ರಮೇಶ್
ರೋಲ್ ನಂಬರ್ – 10
7 ನೇ ತರಗತಿ
ವಿಭಾಗ ಸಿ
ವೈದೇಹಿ ಹಿರಿಯ ಪ್ರಾಥಮಿಕ ಶಾಲೆ


ಸಂಬಂಧಿಕರ ಮದುವೆಗೆ ರಜೆ ಪತ್ರ  | Relatives Marriage Leave Letter in Kannada

ನೀವು 7 ನೇ ತರಗತಿಯ ವಿದ್ಯಾರ್ಥಿ. ನಿಮ್ಮ ಸಂಬಂಧಿಕರ ಮಗಳ ಮದುವೆ ಇರುವುದರಿಂದ ಮನೆಯವರೆಲ್ಲ ಭಾಗವಹಿಸಬೇಕಾಗಿರುವುದರಿಂದ  2 ದಿನ ಶಾಲೆಗೇ ರಜೆ ಕೋರಿ ಪತ್ರ ಬರೆಯಿರಿ / Assume that you are studying in 7th standard. Since there is your relative marriage this month on 20th and 21st, write a letter to your class teacher requesting for 2 days leave as everyone in your family are going to attend the marriage.

ಗೆ,
ವರ್ಗ ಶಿಕ್ಷಕ 7 ನೇ ತರಗತಿ
ವೈದೇಹಿ ಹಿರಿಯ ಪ್ರಾಥಮಿಕ ಶಾಲೆ
ಜಯನಗರ
ಬೆಂಗಳೂರು – 560041

ದಿನಾಂಕ : 15 ಸೆಪ್ಟೆಂಬರ್ 2021

ವಿಷಯ: ರಜೆಯ ಪತ್ರ

ಆತ್ಮೀಯ ಗುರುಗಳೇ,

ನಾನು ರಮೇಶ್, 7 ನೇ ತರಗತಿಯ ‘ಸಿ’ ವಿಭಾಗದ ವಿದ್ಯಾರ್ಥಿ. ಈ ತಿಂಗಳ ದಿನಾಂಕ 20 ಮತ್ತು 21 ರಂದು ನನ್ನ ದೊಡ್ಡಪ್ಪನ ಮಗಳ ಮದುವೆ ಇರುವುದರಿಂದ ಕುಟುಂಬದವರೆಲ್ಲ ಮದುವೆಗೆ ತೆರಳುತ್ತಿರುವುದರಿಂದ  ಎರಡು ದಿನ ಶಾಲೆಗೇ ಹಾಜರಾಗಲು ಸಾಧ್ಯವಾಗುವುದಿಲ್ಲ. ಆದ್ದರಿಂದ ದಯಮಾಡಿ  ಎರಡು ದಿನ ರಜೆ ನೀಡಬೇಕೆಂದು ತಮ್ಮಲ್ಲಿ ವಿನಂತಿಸುತ್ತೇನೆ.

ಧನ್ಯವಾದಗಳು,
ನಿಮ್ಮ ವಿಶ್ವಾಸಿ,
ರಮೇಶ್
ರೋಲ್ ನಂಬರ್ – 10
9 ನೇ ತರಗತಿ
ವಿಭಾಗ ಸಿ
ವೈದೇಹಿ ಹಿರಿಯ ಪ್ರಾಥಮಿಕ ಶಾಲೆ


ಅರ್ಧ ದಿನ ರಜೆ ಪತ್ರ | Half day Leave Letter in Kannada

ಸೋಮವಾರ ಬೆಳಿಗ್ಗೆ ನಿಮ್ಮ ಮನೆಯಲ್ಲಿ ಪೂಜೆ ಇರುವುದರಿಂದ ಅರ್ಧ ದಿನ ರಜೆ ಕೋರಿ ನಿಮ್ಮ ಶಾಲಾ ತರಗತಿಯ ಶಿಕ್ಷಕರಿಗೆ ಪತ್ರ ಬರೆಯಿರಿ / Write a letter to your class teacher requesting for half day leave as there is pooja event at your home on Monday morning.

ಗೆ,
ವರ್ಗ ಶಿಕ್ಷಕ 7 ನೇ ತರಗತಿ
ವೈದೇಹಿ ಹಿರಿಯ ಪ್ರಾಥಮಿಕ ಶಾಲೆ
ಜಯನಗರ
ಬೆಂಗಳೂರು – 560041

ದಿನಾಂಕ : 15 ಸೆಪ್ಟೆಂಬರ್ 2021

ವಿಷಯ: ಅರ್ಧ ದಿನ ರಜೆಯ ಪತ್ರ

ಆತ್ಮೀಯ ಗುರುಗಳೇ,

ನಾನು ರಮೇಶ್, 7 ನೇ ತರಗತಿಯ ‘ಸಿ’ ವಿಭಾಗದ ವಿದ್ಯಾರ್ಥಿ. ಸೋಮವಾರ ಬೆಳಿಗ್ಗೆಯಂದು ನಮ್ಮ ಮನೆಯಲ್ಲಿ ಪೂಜಾ ಕಾರ್ಯಕ್ರಮವಿರುತ್ತದೆ. ಕಾರಣ ಸೋಮವಾರ ಬೆಳಿಗ್ಗೆಯಂದು ತರಗತಿಗೆ ಹಾಜರಾಗಲು ಸಾಧ್ಯವಾಗುವುದಿಲ್ಲ, ಮಧ್ಯಾಹ್ನ ಊಟದ ನಂತರ ತಪ್ಪದೆ ತರಗತಿಗೆ ಹಾಜರಾಗುತ್ತೇನೆಂದು ತಿಳಿಸಲು ಬಯಸುತ್ತೇನೆ. ಆದ್ದರಿಂದ ದಯಮಾಡಿ ಸೋಮವಾರ ಅರ್ಧ ದಿನ ರಜೆ ನೀಡಬೇಕೆಂದು ತಮ್ಮಲ್ಲಿ ವಿನಂತಿಸುತ್ತೇನೆ.

ಧನ್ಯವಾದಗಳು,
ನಿಮ್ಮ ವಿಶ್ವಾಸಿ,
ರಮೇಶ್
ರೋಲ್ ನಂಬರ್ – 10
9 ನೇ ತರಗತಿ
ವಿಭಾಗ ಸಿ
ವೈದೇಹಿ ಹಿರಿಯ ಪ್ರಾಥಮಿಕ ಶಾಲೆ


ರಜೆ ಪತ್ರದ ಬಗ್ಗೆ ಕೆಲ ಪ್ರಶ್ನೋತ್ತರಗಳು  | FAQ related to Leave Letter in Kannada

ಪ್ರಶ್ನೆ. ರಜೆ ಪತ್ರ ಎಂದರೇನು ? / What is the meaning of Leave Letter ?
ಉ. ರಜೆ ಪತ್ರವು ಉದ್ಯೋಗಿ ಅಥವಾ ವಿದ್ಯಾರ್ಥಿಯು ತಮ್ಮ ಕೆಲಸದ ಸ್ಥಳ ಅಥವಾ ಶಾಲೆಯಿಂದ ರಜೆಯನ್ನು ತೆಗೆದುಕೊಳ್ಳುವ  ಕಾರಣಗದಿಂದ ಬರೆಯುವ ಪತ್ರವಾಗಿದೆ.

ಪ್ರಶ್ನೆ. ರಜೆ ಪತ್ರವನ್ನು ಯಾವ ಸಂದರ್ಭದಲ್ಲಿ ಸಲ್ಲಿಸಬಹುದು ? / When we have to write Leave Letter ?
ಉ. ಈ ಕೆಳಕಂಡ ಕಾರಣಕ್ಕಾಗಿ ರಜೆ ಪತ್ರವನ್ನು ಬರೆಯಬಹುದು (You can write leave letter for below mentioned reasons).

  1. ಅನಾರೋಗ್ಯ ಅಥವಾ ವೈದ್ಯರ ಭೇಟಿ / in case of not feeling well or doctor appointment
  2. ವಿಶ್ರಾಂತಿ ಮತ್ತು ಮನರಂಜನೆ / Rest or Entertainment
  3. ಮದುವೆ, ಹುಟ್ಟುಹಬ್ಬ ಅಥವಾ ಇತರ ಪ್ರಮುಖ ವಾರ್ಷಿಕೋತ್ಸವಗಳು ಅಥವಾ ಪ್ರಯಾಣ / Marriage, Birthday, Anniversary or Travelling

ಮೇಲೆ ತಿಳಿಸಿದ ಯಾವುದೇ ಕಾರಣಗಳಿಗಾಗಿ ನೀವು ರಜೆ ತೆಗೆದುಕೊಳ್ಳಬಹುದು.


 

ಚಂದ್ರಯಾನ ಭಾರತದ ಪ್ರಗತಿಯ ದ್ಯೋತಕ ಪ್ರಬಂಧ

ತೆಂಗಿನ ಮರ ಪ್ರಬಂಧ