Sad Quotes in Kannada
Here you can find some of the best sad quotes in Kannada. Sadness is feeling that we encounter when things go wrong, when we could not meet our expectations, when we face some challenge of difficulty in life. Sadness is a part of life. We have to face it, accept it and move on. These sad quotes will help you to overcome your sadness and help you to cheer up and continuing your work. Below each sad quote you can also the meaning of each quote in Kannada.
ಕೆಲವೊಮ್ಮೆ ಜೀವನವು ತುಂಬಾ ಕಷ್ಟಕರವಾಗಿರುತ್ತದೆ. ಚಿಂತೆ ಮಾಡಲು ಮತ್ತು ನಮ್ಮನ್ನು ದುಃಖಕ್ಕೆ ಈಡು ಮಾಡುವ ಹಲವು ಘಟನೆಗಳು ನಡೆಯುತ್ತವೆ ಮತ್ತು ನಮ್ಮನ್ನು ಸಂತೋಷ ಹಾಳು ಮಾಡುತ್ತವೆ. ಕಷ್ಟದ ಸಮಯದಲ್ಲಿ ಈ sad quotes ಒಳ್ಳೆಯ ಅರ್ಥ ನೀಡುತ್ತವೆ.
ನೀವು ಖಿನ್ನತೆ ಅಥವಾ ಆತಂಕದಿಂದ ಇರುವಾಗ ಈ sad quotes in Kannada ನಿಮಗೆ ಶಕ್ತಿ ತುಂಬಲು ಮತ್ತು ನಿಮ್ಮ ಯೋಚನೆಗಳು ಮತ್ತು ಭಾವನೆಗಳನ್ನು ಬದಲಾಯಿಸಲು ಸಹಾಯ ಮಾಡುತ್ತವೆ. ಕಷ್ಟದ ದಿನಗಳು ನಮಗೆ ಒಳ್ಳೆಯ ಪಾಠ ಕಲಿಸುವ ಜೊತೆಗೆ ನಮ್ಮನ್ನು ಸದೃಢರನ್ನಾಗಿಸಲು ಸಹಾಯ ಮಾಡುತ್ತವೆ ಎಂಬ ಸಂದೇಶವನ್ನು ಈ sad quote ನಮಗೆ ಕಲಿಸುತ್ತವೆ.
Best Sad Quotes in Kannada
ಹೆಚ್ಚು ನಗುವ ಜನರು ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ನೋವನ್ನು ಉತ್ತಮವಾಗಿ ಸಹಿಸಿಕೊಳ್ಳಬಲ್ಲರು.
ಅರ್ಥ : ಯಾವ ಜನರು ಯಾವಾಗಲೂ ಸಂತೋಷದಿಂದ ಇರುತ್ತಾರೋ ಅವರಿಗೆ ಯಾವುದೇ ತರಹದ ನೋವು ಸಹಿಸಿಕೊಳ್ಳುವ ಶಕ್ತಿ ಇರುತ್ತದೆ.
ಎಲ್ಲಾ ಕಾಯಿಲೆಗಳಿಗೆ ಎರಡು ಔಷಧಿಗಳಿವೆ : ಸಮಯ ಮತ್ತು ಮೌನ.
ಅರ್ಥ : ಸಮಯ ಮತ್ತು ಮೌನ ಯಾವುದೇ ಸಮಸ್ಯೆಗೆ ಪರಿಹಾರ ನೀಡಬಲ್ಲ ಶಕ್ತಿ ಹೊಂದಿವೆ. ಕೆಲವೊಂದು ಸಂದರ್ಭದಲ್ಲಿ ನಾವು ವಹಿಸುವ ಮೌನ ನಮ್ಮನ್ನು ದೊಡ್ಡ ಅಪಾಯಗಳಿಂದ ಪಾರು ಮಾಡಬಲ್ಲದು. ಹಾಗೂ ಸಮಯಕ್ಕೆ ಎಲ್ಲ ಕಾಯಿಲೆ ಅಥವಾ ನೋವನ್ನು ಗುಣಪಡಿಸುವ ಶಕ್ತಿ ಇದೆ.
ನನ್ನ ಮೌನ ನನ್ನ ನೋವಿಗೆ ಇನ್ನೊಂದು ಮಾತು.
Meaning sad quotes in Kannada: ಕೆಲವೊಮ್ಮೆ ನಾವು ನೋವಿನಲ್ಲಿ ಇದ್ದಾಗ ನಮ್ಮಿಂದ ಮಾತನಾಡಲು ಸಾಧ್ಯವಾಗುವುದಿಲ್ಲ. ಹಾಗೆಯೇ ಯಾರಾದರೂ ಮೌನವಾಗಿದ್ದಾರೆ ಎಂದರೆ ಅವರು ನೋವಿನಲ್ಲಿ ಇದ್ದಾರೆ ಎಂದೇ ಅರ್ಥ.
ಇತರರನ್ನು ನಿರ್ಣಯಿಸುವ ಜನರು ಎಂದಿಗೂ ಸಂತೋಷವಾಗಿರಲು ಸಾಧ್ಯವಿಲ್ಲ.
Sad quotes in Kannada ಅರ್ಥ : ಯಾರು ಯಾವಾಗಲೂ ಇತರರ ತಪ್ಪುಗಳನ್ನು ಕಂಡು ಹಿಡಿಯುತ್ತಿರುತ್ತಾರೋ ಹಾಗೂ ಇತರರ ಕಾರ್ಯಗಳ ಬಗ್ಗೆ ನಿರ್ಣಯಿಸುತ್ತಿರುತ್ತಾರೋ ಇಂತಹ ಜನರು ಇಂದಿಗೂ ಸಂತೋಷದಿಂದಿರಲು ಸಾಧ್ಯವಿಲ್ಲ.
ನೀವು ಎಷ್ಟು ಹೆಚ್ಚು ಪ್ರೀತಿಸುತ್ತೀರೋ, ಅಷ್ಟು ಹೆಚ್ಚು ಅಳುತ್ತೀರಿ.
ಅರ್ಥ : ನೀವು ಯಾರನ್ನಾದರೂ ಅತಿಯಾಗಿ ಇಷ್ಟ ಪಟ್ಟರೆ ಅಥವಾ ಪ್ರೀತಿಸಿದರೆ ಒಂದು ವೇಳೆ ಅವರು ನಿಮ್ಮಿಂದ ದೂರವಾದರೆ ಅಥವಾ ನಿಮಗೆ ನೋವುಂಟು ಮಾಡಿದರೆ, ಆಗ ನಿಮಗೆ ಅದರಿಂದಾಗುವ ನೋವು ಅಷ್ಟಿಷ್ಟಲ್ಲ.
ಎಲ್ಲವೂ ಸರಿಯಿಲ್ಲದಿರುವಾಗ ಯಾವುದು ತಪ್ಪು ಎಂಬ ಪ್ರಶ್ನೆಗೆ ಉತ್ತರಿಸುವುದು ಕಷ್ಟ.
ಅರ್ಥ : ಒಂದು ವೇಳೆ ಜೀವನದಲ್ಲಿ ಎಲ್ಲವೂ ಸರಿಯಿಲ್ಲ ಎಂದಾದರೆ ಆಗ ಯಾವುದು ತಪ್ಪು ಅಥವಾ ಯಾವುದು ಸರಿ ಎಂದು ನಿರ್ಧರಿಸುವುದು ಕಷ್ಟ. ಇಂತಹ ಕಷ್ಟದ ಸಮಯದಲ್ಲಿ ಪ್ರಶಾಂತವಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳದೆ ಸಮಾಧಾನವಾಗಿ ಒಳ್ಳೆಯ ಸಮಯಕ್ಕಾಗಿ ಕಾಯುವುದು ಒಳ್ಳೆಯದು.
ನೀವು ಎಂದಾದರೂ ಯಾರಿಂದಾದರೂ ತಿರಸ್ಕರಿಸಲ್ಪಟ್ಟರೆ, ಚಿಂತಿಸಬೇಡಿ ಸಮಸ್ಯೆ ನಿಮ್ಮದಲ್ಲ ಆ ವ್ಯಕ್ತಿಯಲ್ಲಿದೆ ಎಂದು ಭಾವಿಸಿ.
Sad quotes in Kannada ಅರ್ಥ : ನೀವು ಒಂದು ವೇಳೆ ಜೀವನದಲ್ಲಿ ಯಾರಿಂದಾದರೂ ಅಥವಾ ಯಾವುದಾದರೂ ಸಂದರ್ಭದಲ್ಲಿ ತಿರಸ್ಕಿರಿಸಲ್ಪಟ್ಟರೆ ನಿಮ್ಮನ್ನು ನೀವು ಕೀಳಾಗಿ ಕಾಣದೆ, ಸಮಸ್ಯೆ ಆ ವ್ಯಕ್ತಿ ಅಥವಾ ಆ ಸಂದರ್ಭದಲ್ಲಿದೆ ಎಂದು ಭಾವಿಸಿ. ಆ ವ್ಯಕ್ತಿಗೆ ನಿಮ್ಮ ಯೋಗ್ಯತೆ ತಿಳಿಯದೆ ಇದ್ದಿದ್ದರಿಂದ ನಿಮ್ಮನ್ನು ತಿರಸ್ಕರಿಸಿರುತ್ತಾರೆ.
Top Sad Quotes in Kannada
ಯಾರಾದರೂ ನಿಮ್ಮನ್ನು ಬಯಸುತ್ತಾರೆ ಎಂದರೆ, ಅವರು ನಿಮ್ಮನ್ನು ಗೌರವಿಸುತ್ತಾರೆ ಎಂದು ಅರ್ಥವಲ್ಲ.
ಅರ್ಥ : ಯಾರಾದರೂ ನಿಮ್ಮನ್ನು ಬಯಸುತ್ತಾರೆ ಎಂದರೆ ಅವರಿಗೆ ನಿಮ್ಮ ಮೇಲೆ ಪ್ರೀತಿ ಆಗಲಿ, ಗೌರವ ಆಗಲಿ ಅಥವಾ ಕಾಳಜಿ ಆಗಲಿ ಇದೆ ಎಂದು ಅರ್ಥವಲ್ಲ ಅವರು ತಮ್ಮ ಕೆಲಸ ಮಾಡಿಸಿಕೊಳ್ಳಲು ಸಲುವಾಗಿ ಕೂಡ ನಿಮ್ಮ ಜೊತೆ ಒಳ್ಳೆಯ ರೀತಿಯಲ್ಲಿ ವರ್ತಿಸುತ್ತಿರಬಹುದು.
ಸಮಯಕ್ಕೆ ಹಳೆಯ ಗಾಯಗಳನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದೆ.
Meaning sad quotes in Kannada: ಸಮಯಕ್ಕೆ ಇರುವ ಒಂದು ಒಳ್ಳೆಯ ಶಕ್ತಿ ಎಂದರೆ, ಸಮಯಕ್ಕೆ ಯಾವುದೇ ರೀತಿಯ ನೋವನ್ನು ಅಥವಾ ಗಾಯವನ್ನು ಗುಣಪಡಿಸುವ ಶಕ್ತಿ ಇದೆ. ಆದ್ದರಿಂದ ಎಲ್ಲರೂ ಏನಾದರೋ ಸಮಸ್ಯೆಗೆ ಒಳಗಾಗಿದ್ದಾರೆ ಒಳ್ಳೆಯ ಸಮಕ್ಕಾಗಿ ಕಾಯುವು ಗುಣ ಬೆಳೆಸಿಕೊಳ್ಳಿ. ಆತುರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ.
ನಂಬಿಕೆಯು ಎರೇಸರ್ ಇದ್ದಂತೆ, ಪ್ರತಿ ತಪ್ಪಿನ ನಂತರ ಅದು ಚಿಕ್ಕದಾಗುತ್ತಾ ಹೋಗುತ್ತದೆ.
ಅರ್ಥ : ಪ್ರತಿ ಬಾರಿ ಬರೆಯುವಾಗ ತಪ್ಪಾದಾಗ ಅದನ್ನು ಅಳಿಸಲು ನಾವು ಎರೇಸರ್ ಬಳಸುತ್ತೇವೆ. ಪ್ರತಿ ಬಾರಿ ತಪ್ಪು ಮಾಡಿ ಅದನ್ನು ಸರಿಪಡಿಸಲು ಎರೇಸರ್ ಬಳಸಿದಾಗ ಹೇಗೆ ಎರೇಸರ್ ಗಾತ್ರ ಚಿಕ್ಕದಾಗುತ್ತಾ ಹೋಗುತ್ತದೆಯೋ, ಅದೇ ರೀತಿ ಪ್ರತಿ ಬಾರಿ ತಪ್ಪು ಮಾಡಿದಾಗಲೂ ನಮ್ಮ ಮೇಲಿನ ನಂಬಿಕೆ ಕಡಿಮೆ ಆಗುತ್ತಾ ಹೋಗುತ್ತದೆ.
ನಾವು ಏನು ಅಂದುಕೊಳ್ಳುತ್ತೇವೆಯೋ ಹಾಗೇ ಆಗುತ್ತೇವೆ.
ಅರ್ಥ : ನಾವು ಮನಸ್ಸಿನಲ್ಲಿ ಏನು ಅಂದುಕೊಳ್ಳುತ್ತೇವೆಯೋ ಹಾಗೆಯೇ ಆಗುತ್ತೇವೆ ಇದರ ಅರ್ಥ ನಾವು ಮನಸ್ಸಿನಲ್ಲಿ ಒಳ್ಳೆಯ ಭಾವನೆ ಮತ್ತು ಯೋಚನೆಗಳನ್ನು ಬೆಳೆಸಿಕೊಂಡರೆ ನಾವು ಸಮಾಜಕ್ಕೆ ಒಳ್ಳೆಯ ವ್ಯಕ್ತಿ ಆಗುತ್ತೇವೆ. ಅದೇ ನಾವು ನಮ್ಮ ಮನಸ್ಸಿನಲ್ಲಿ ಕೆಟ್ಟ ಭಾವನೆ ಮತ್ತು ಯೋಚನೆಗಳನ್ನು ಬೆಳೆಸಿಕೊಂಡರೆ ನಾವು ಕೆಟ್ಟ ವ್ಯಕ್ತಿ ಆಗುತ್ತೇವೆ. ಆದ್ದರಿಂದ ನಾವು ಮುಂದೆ ಏನಾಗುತ್ತೇವೆ ಎಂಬುದು ನಮ್ಮ ಆಲೋಚನೆಗಳ ಮೇಲೆ ಅವಲಂಬಿತವಾಗಿದೆ.
ನಾನು ಹಿಂದೆ ಇದ್ದ ವ್ಯಕ್ತಿ ಅಲ್ಲ ಎಂದು ನಾನು ಈಗ ಅರಿತುಕೊಂಡೆ.
Meaning sad quotes in Kannada: ಕೆಲವು ಕಹಿ ಘಟನೆಗಳು ನಮ್ಮನ್ನು ಬದಲಾಯಿಸುತ್ತವೆ. ಕೆಲ ಘಟನೆಗಳು ನಮ್ಮ ಯೋಚನೆ, ನಮ್ಮ ದಾರಿ ಮತ್ತು ನಮ್ಮ ಕೆಲಸಗಳ ಮೇಲೆ ಪರಿಣಾಮ ಬೀರುತ್ತವೆ. ಈ ಬದಲಾವಣೆ ನಮ್ಮನ್ನು ಬೇರೆ ಮಾರ್ಗದಲ್ಲಿ ಕೊಂಡೊಯ್ಯುತ್ತದೆ. ಮುಂದೆ ಒಂದು ದಿನ ನಾವು ಹಿಂದಿರುಗಿ ನಮ್ಮನ್ನು ನಾವು ನೋಡಿಕೊಂಡಾಗ, ಈ ಹಿಂದೆ ಇದ್ದ ವ್ಯಕ್ತಿ ನಾನು ಅಲ್ಲ ಎಂಬ ಸತ್ಯದ ಅರಿವಾಗುತ್ತದೆ.
ನನ್ನ ಜೀವನದಲ್ಲಿ ಬಂದ ಎಲ್ಲ ಕೆಟ್ಟ ಜನರಿಗೆ ನಾನು ಕೃತಜ್ಞನಾಗಿದ್ದೇನೆ, ನಾನು ಯಾರಾಗಬೇಕೆಂದು ಬಯಸುವುದಿಲ್ಲ ಎಂದು ಅವರು ನನಗೆ ತೋರಿಸಿದ್ದಾರೆ.
ಅರ್ಥ : ಕೆಲವೊಮ್ಮೆ ಕೆಲ ಸಂದರ್ಭದಲ್ಲಿ ನಮ್ಮ ಜೀವನದಲ್ಲಿ ಕೆಲ ಕೆಟ್ಟ ವ್ಯಕ್ತಿಗಳ ಆಗಮನವಾಗುತ್ತದೆ. ಈ ಕೆಟ್ಟ ವ್ಯಕ್ತಿಗಳು ನಮಗೆ ಒಂದಿಲ್ಲೊಂದು ಪಾಠ ಕಲಿಸುತ್ತಾರೆ. ಅಷ್ಟೇ ಅಲ್ಲದೆ ಈ ಕೆಟ್ಟ ವ್ಯಕ್ತಿಗಳು ನಾವು ಯಾವ ಜನರ ರೀತಿ ಇರಬಾರದೆಂಬುದಕ್ಕೆ ಒಳ್ಳೆಯ ಉದಾಹರಣೆ ಕೂಡ ಆಗಿರುತ್ತಾರೆ.
ನಿಮ್ಮ ಒಪ್ಪಿಗೆಯಿಲ್ಲದೆ ನಿಮ್ಮನ್ನು ನೋವಿಸುವ ಅಧಿಕಾರ ಯಾರಿಗೂ ಇಲ್ಲ.
Meaning sad quotes in Kannada: ನಮ್ಮ ಒಪ್ಪಿಗೆ ಇಲ್ಲದೆ ಯಾರಿಗೂ ನಮ್ಮ ಜೀವನದಲ್ಲಿ ಅಥವಾ ನಮ್ಮ ಭಾವನೆಗಳ ಜೊತೆ ಆಟ ಆಡುವ ಅಧಿಕಾರ ಇರುವುದಿಲ್ಲ. ಇದನ್ನರಿಯದೆ ಕೆಲವರು ಬೇರೆಯವರ ಜೀವನದಲ್ಲಿ ಅವರ ಭಾವನೆಗಳ ಜೊತೆ ಚೆಲ್ಲಾಟ ಆಡುತ್ತಲಿರುತ್ತಾರೆ.
Nice Sad Quotes in Kannada
ಪ್ರೀತಿಸುವ ವ್ಯಕ್ತಿಯನ್ನು ಕಳೆದುಕೊಳ್ಳುವ ನೋವನ್ನು ಗುಣಪಡಿಸಲು ಸಾಧ್ಯವಿಲ್ಲ.
ಅರ್ಥ : ಎಲ್ಲರ ಜೀವನದಲ್ಲಿಯೂ ಅವರಿಗೆ ತುಂಬ ಹತ್ತಿರವಾದ ಮತ್ತು ಪ್ರೀತಿ ಪಾತ್ರರಾದ ವ್ಯಕ್ತಿ ಇರುತ್ತಾರೆ. ಒಂದು ವೇಳೆ ಆ ವ್ಯಕ್ತಿ ದೂರವಾದರೆ ಅಥವಾ ಇಲ್ಲವಾದರೆ ಅದರಿಂದಾಗುವ ನೋವು ಅಷ್ಟಿಷ್ಟಲ್ಲ. ಆ ನೋವನ್ನು ಯಾವುದರಿಂದಲೂ ಅಥವಾ ಯಾರಿಂದಲೂ ಸರಿ ಪಡಿಸಲು ಸಾಧ್ಯವಿಲ್ಲ.
ನಾನು ನಿನ್ನನ್ನು ಕಳೆದುಕೊಳ್ಳುವವರೆಗೂ ದುಃಖ ಏನೆಂದು ನನಗೆ ತಿಳಿದಿರಲಿಲ್ಲ.
ಅರ್ಥ : ಕೆಲವೊಮ್ಮೆ ಕೆಲ ಜನರು ನಮ್ಮಿಂದ ದೂರ ಆಗುವವರೆಗೂ ನಮಗೆ ದುಃಖ ಎಂದರೆ ಏನು ಎಂಬುದರ ಅರಿವೇ ಇರುವುದಿಲ್ಲ. ಯಾವಾಗ ನಮಗೆ ಪ್ರೀತಿ ಪಾತ್ರರಾದವರು ನಮ್ಮಿಂದ ದೂರ ಆಗುತ್ತಾರೆಯೋ ಆಗ ನಮಗೆ ದುಃಖ ಏನು ಎಂಬುದರ ಅರಿವಾಗುತ್ತದೆ.
ನೀವು ನಿಯಂತ್ರಿಸಲಾಗದ ವಿಷಯಗಳ ಬಗ್ಗೆ ಚಿಂತಿಸಬೇಡಿ. ನೀವು ನಿಯಂತ್ರಿಸಬಹುದಾದ ವಿಷಯಗಳ ಬಗ್ಗೆ ಗಮನ ನೀಡಿ.
Meaning sad quotes in Kannada: ನಮ್ಮ ಜೀವನದಲ್ಲಿ ನಡೆಯುವ ಎಲ್ಲ ಘಟನೆಗಳು ಮತ್ತು ವಿಷಯಗಳ ಮೇಲೆ ನಮ್ಮ ನಿಯಂತ್ರಣ ಇರುವುದಿಲ್ಲ. ನಮ್ಮ ನಿಯಂತ್ರಣ ಇಲ್ಲದೆ ಈ ಘಟನೆಗಳು ನಡೆಯುತ್ತಲಿರುತ್ತವೆ ಮತ್ತು ಅವುಗಳನ್ನು ಬದಲಾಯಿಸಲಾಗಲಿ ಅಥವಾ ಸರಿಪಡಿಸಲು ಸಾಧ್ಯವಿಲ್ಲ. ಈ ಘಟನೆ ಅಥವಾ ವಿಷಯಗಳ ಬಗ್ಗೆ ತಲೆ ಕೆಡಿಸಿಕೊಂಡು ನಮ್ಮ ಸಮಯ ಹಾಳು ಮಾಡಿಕೊಳ್ಳುವುದರ ಬದಲು ನಾವು ಮಾಡಬಹುದಾದ ಕೆಲಸಗಳ ಮೇಲೆ ನಮ್ಮ ಗಮನ ಹರಿಸುವುದು ಮುಖ್ಯ.
ಎಲ್ಲವೂ ಒಂದು ಕಾರಣಕ್ಕಾಗಿ ನಡೆಯುತ್ತದೆ, ನಮಗೆ ಪಾಠ ಕಲಿಸಲು.
ಅರ್ಥ : ನಮ್ಮ ಜೀವನದಲ್ಲಿ ನಡೆಯುವ ಘಟನೆಗಳ ಹಿಂದೆ ಒಂದಿಲ್ಲೊಂದು ಕಾರಣ ಮತ್ತು ಉದ್ದೇಶ ಇರುತ್ತದೆ. ಈ ಘಟನೆಗಳು ನಮಗೆ ಒಳ್ಳೆಯ ಪಾಠ ಕಲಿಸಲು ಮತ್ತು ನಮ್ಮನ್ನು ಒಳ್ಳೆಯ ವ್ಯಕ್ತಿಯನ್ನಾಗಿಸಲು ಸಹಾಯ ಮಾಡುತ್ತವೆ.
ನಿಮ್ಮ ಹಿಂದಿನದನ್ನು ನೀವು ಬದಲಾಯಿಸಲು ಸಾಧ್ಯವಿಲ್ಲ, ಆದರೆ ನಿಮ್ಮ ಭವಿಷ್ಯವನ್ನು ನೀವು ಬದಲಾಯಿಸಬಹುದು.
ಅರ್ಥ : ನಾವು ನಮ್ಮ ಹಿಂದಿನದನ್ನು ಬದಲಾಯಿಸಲು ಸಾಧ್ಯವಿಲ್ಲ. ಆದ್ದರಿಂದ ಹಿಂದಿನ ಘಟನೆಗಳ ಬಗ್ಗೆ ಯೋಚನೆ ಮಾಡುತ್ತ ನಮ್ಮ ಸಮಯ ಹಾಳು ಮಾಡುವ ಬದಲು ನಾವು ಈಗಿನ ಕಾರ್ಯದ ಮೇಲೆ ನಮ್ಮ ಗಮನವನ್ನು ಹರಿಸಬೇಕು. ಈಗಿನ ಕಾರ್ಯಗಳ ಮೇಲೆ ನಮ್ಮ ಗಮನ ಹರಿಸುವುದರಿಂದ ನಾವು ನಮ್ಮ ಭವಿಷ್ಯವನ್ನು ಬದಲಾಯಿಸಲು ಸಾಧ್ಯ.
ಕೆಲವೊಮ್ಮೆ ನಮ್ಮ ದುಃಖಕ್ಕೆ ಕಾರಣ, ಗುಣವಾಗಲು ಕೂಡ ಕಾರಣವಾಗಿರುತ್ತದೆ.
Meaning sad quotes in Kannada: ಕೆಲ ಬಾರಿ ನಮ್ಮ ನೋವಿಗೆ ಕಾರಣ ಆಗುವ ಘಟನೆಗಳು ನಮ್ಮನ್ನು ಬದಲಾಯಿಸಲು ಕೂಡ ಕಾರಣವಾಗಿರುತ್ತದೆ. ಆದ್ದರಿಂದ ನಮ್ಮ ಕಾರಣವಾಗುವ ಈ ಘಟನೆಗಳ ಬಗ್ಗೆ ಹೆಚ್ಚು ಯೋಚಿಸದೆ, ನಮ್ಮ ಸಾಧನೆಯತ್ತ ಗಮನ ಹರಿಸೋಣ. ನಮ್ಮ ನೋವಿಗೆ ಕಾರಣವಾಗುವ ಈ ಘಟನೆಗಳು ನಮ್ಮ ಗೆಲುವಿಗೆ ಮೆಟ್ಟಿಲುಗಳಾಗಬಹುದು.
ಬಲವಾಗಿರಿ ಮತ್ತು ನಿಮ್ಮ ಭಾವನೆಗಳು ನಿಮ್ಮ ನೆಮ್ಮದಿ ಹಾಳು ಮಾಡಲು ಬಿಡಬೇಡಿ.
ನಮ್ಮ ಭಾವನೆಗಳು ಮತ್ತು ಯೋಚನೆಗಳು ನಮ್ಮನ್ನು ಬಲಶಾಲಿಯನ್ನಾಗಿ ಮಾಡಿ ಶಕ್ತಿ ತುಂಬ ಬೇಕೇ ಹೊರತು ನಮ್ಮನ್ನು ಬಲಹೀನರನ್ನಾಗಿ ಮಾಡಬಾರದು. ನಮ್ಮ ಭಾವನೆಗಳು ನಮ್ಮ ಶಕ್ತಿ ಕುಂದದಂತೆ ನೋಡಿಕೊಳ್ಳೋಣ.
ನಂಬಿಕೆಯು ಕನ್ನಡಿಯಂತೆ, ಒಮ್ಮೆ ಅದು ಒಡೆದು ಹೋದರೆ, ನೀವು ಅದನ್ನು ಸರಿಪಡಿಸಲು ಸಾಧ್ಯವಿಲ್ಲ.
ಹೇಗೆ ಕನ್ನಡಿ ಒಮ್ಮೆ ಒಡೆದು ಹೋದರೆ ಸರಿಪಡಿಸಲು ಸಾಧ್ಯವಾಗುವುದಿಲ್ಲವೋ ಹಾಗೆಯೇ ನಂಬಿಕೆಯು ಕೂಡ, ಒಮ್ಮೆ ನಂಬಿಕೆ ಕಳೆದುಕೊಂಡರೆ ಮತ್ತೆ ಅದನ್ನು ಗಳಿಸುವುದು ಕಷ್ಟ. ಆದ್ದರಿಂದ ನಮ್ಮನ್ನು ನಂಬಿದವರಿಗೆ ಎಂದು ಮೋಸ ಮಾಡಬಾರದು. ಏಕೆಂದರೆ ಒಮ್ಮೆ ಅವರ ದೃಷ್ಟಿಯಲ್ಲಿ ನಾವು ನಂಬಿಕೆ ಕಳೆದುಕೊಂಡರೆ ಮತ್ತೆ ಅವರು ನಮ್ಮನ್ನು ಮೊದಲಿನಂತೆ ಕಾಣಲಾರರು.
ಒಂದು ಸುಳ್ಳು ನಿಮ್ಮ ನಮ್ಮ ಎಲ್ಲಾ ಸತ್ಯಗಳ ಬಗ್ಗೆ ಸಂದೇಹ ಮೂಡುವಂತೆ ಮಾಡುತ್ತದೆ.
Meaning sad quotes in Kannada: ಕೆಲವೊಮ್ಮೆ ನಾವು ಎಷ್ಟೇ ಸತ್ಯಗಳನ್ನು ಹೇಳಿದ್ದರೂ, ಒಂದು ಬಾರಿ ಯಾವುದೋ ಪರಿಸ್ಥಿತಿಗೆ ಕಟ್ಟು ಬಿದ್ದು ಹೇಳುವ ಸುಳ್ಳು ಇಲ್ಲಿಯವರೆಗೂ ನಾವು ಹೇಳಿರುವ ಎಲ್ಲ ಸತ್ಯಗಳ ಬಗ್ಗೆ ಅನುಮಾನ ಮೂಡುವಂತೆ ಮಾಡುತ್ತದೆ. ಅಷ್ಟೇ ಅಲ್ಲದೆ ನಾವು ಹೆಚ್ಚು ಪ್ರೀತಿಸುವ ಜನರು ನಮ್ಮಿಂದ ದೂರಾಗುವ ಸಾಧ್ಯತೆ ಇರುತ್ತದೆ.
Hope you liked these sad quotes in Kannada. More quotes in Kannada you can find below.
Nambike quotes in kannada these are the quotes based on trust in Kannada language.
Life quotes in kannada these quotes are related to life.