Motivational Quotes in Kannada
Here you will find some motivational quotes in kannada. Below each quote you will also find the meaning of each quote in kannada. Motivational quotes help in motivating us, to come out of our comfort zone and to wake up. These motivational quotes in kannada inspire us to start focusing towards our work .
If you are having a bad day or if you are in pain these motivational quotes can help you to inspire. Below you can see the best motivational quotes by some of the most successful people.
Motivational quotes in Kannada ಅಂದರೆ ಪ್ರೇರೇಪಿಸುವ ನುಡಿಗಟ್ಟುಗಳು ನಮ್ಮನ್ನು ಜಾಗ್ರತಗೊಳಿಸಲು, ಕ್ರಮ ತೆಗೆದುಕೊಳ್ಳಲು, ನಮ್ಮ ಆರಾಮ ವಲಯದಿಂದ ತಪ್ಪಿಸಿಕೊಳ್ಳಲು ಅಂದರೆ ಏನಾದರೂ ಕಾರಣ ಅಥವಾ ನೆಪವೊಡ್ಡಿ ತಪ್ಪಿಸಿಕೊಳ್ಳುತ್ತಿದ್ದರೆ ಅದನ್ನು ಹೋಗಲಾಡಿಸಲು ಮತ್ತು ಮಾಡಬೇಕಾದ ಕೆಲಸವನ್ನು ಪ್ರೋತ್ಸಾಹಿಸಲು ಸಹಾಯ ಮಾಡುತ್ತವೆ.
ನಿಮ್ಮ ದಿನ ಕೆಟ್ಟದಾಗಿದ್ದರೆ ಅಥವಾ ನಿಮ್ಮ ಮನಸ್ಸಿಗೆ ನೋವಾಗಿದ್ದರೆ ನಿಮಗೆ ಉತ್ಸಾಹ ತುಂಬಲು ಈ ಸ್ಪೂರ್ತಿದಾಯಕ motivational quotes in Kannada ಸಹಾಯ ಮಾಡುತ್ತದೆ.
ಕೆಳಗೆ, ನೀವು ಕೆಲ ಪ್ರಸಿದ್ಧ ಜನರಿಂದ ಬುದ್ಧಿವಂತಿಕೆಯ ಸ್ಪೂರ್ತಿದಾಯಕ motivational quotes ಗಳನ್ನು ಕಾಣಬಹುದು. ಅನೇಕ ಶ್ರೇಷ್ಠ ವ್ಯಕ್ತಿಗಳು ಹೇಳಿರುವಂಥಹ ಈ ಸ್ಪೂರ್ತಿದಾಯಕ motivational quotes in Kannada ನಿಮಗೆ ಧೈರ್ಯ ನೀಡುವುದರ ಜೊತೆಗೆ, ನಿಮ್ಮ ಭಯ ಹೋಗಲಾಡಿಸಿ, ನಿಮ್ಮ ಜೀವನದ ಮುಂದಿನ ಅಧ್ಯಾಯಕ್ಕೆ ನಿಮ್ಮನ್ನು ಸಿದ್ಧಗೊಳಿಸುತ್ತವೆ.
ಧನಾತ್ಮಕ ಚಿಂತನೆಯ ಬಗ್ಗೆ ಹೇಳಲು ಬಹಳಷ್ಟು ಇದೆ. ದೈನಂದಿನ ಜಂಜಾಟದ ಸಮಯದಲ್ಲಿ ಸಾಮಾನ್ಯವಾಗಿ ಕೆಲಸ, ಸಂಬಂಧಗಳು ಮತ್ತು ಜೀವನದ ಒತ್ತಡಗಳು ನಮ್ಮನ್ನು ದುರ್ಬಲಗೊಳಿಸುತ್ತವೆ. ಅದಕ್ಕಾಗಿಯೇ ನಿಮ್ಮೊಳಗೆ ಧನಾತ್ಮಕತೆಯ ಜ್ವಾಲೆಯನ್ನು ಇರಿಸಿಕೊಳ್ಳಲು ಮತ್ತು ನಿಮ್ಮ ಪ್ರೇರಣೆಗಾಗಿ motivational quotes ಗಳ ಅವಶ್ಯಕತೆ ಇದೆ.
ಕನ್ನಡದಲ್ಲಿ ಕೆಲ ಅತ್ತ್ಯುತ್ತಮ motivational quotes in Kannada ನೀವಿಲ್ಲಿ ಕಾಣಬಹುದು.
Top Motivational Quotes in Kannada
ಇತರ ಜನರು ಬಯಸಿದ್ದನ್ನು ಪಡೆಯಲು ನೀವು ಸಹಾಯ ಮಾಡಿದರೆ ಜೀವನದಲ್ಲಿ ನೀವು ಬಯಸಿದ್ದೆಲ್ಲ ನಿಮಗೆ ಸಿಗುತ್ತದೆ.
ಅರ್ಥ : ಅನೇಕ ಬಾರಿ ನಮ್ಮ ಜೀವನದಲ್ಲಿ ಕಷ್ಟಗಳು, ಸಮಸ್ಯೆಗಳು ಎದುರಾಗುತ್ತವೆ ಮತ್ತು ನಮ್ಮನ್ನು ಕುಗ್ಗುವಂತೆ ಮಾಡುತ್ತವೆ. ಇದರ ನಡುವೆಯೂ ನಮ್ಮ ಕೈಲಾದಷ್ಟು ಇತರರಿಗೆ ಸಹಾಯ ಮಾಡಿದರೆ ಆ ದೇವರು ನಮ್ಮ ಕಷ್ಟದ ಸಮಯದಲ್ಲಿ ಯಾವುದಾದರೂ ರೂಪದಲ್ಲಿ ನಮ್ಮ ಕೈ ಹಿಡಿಯುತ್ತಾನೆ.
ನೀವು ನಿಜವಾಗಿಯೂ ಏನನ್ನಾದರೂ ಮಾಡಲು ಬಯಸಿದರೆ, ನೀವು ಒಂದು ಮಾರ್ಗವನ್ನು ಕಂಡುಕೊಳ್ಳುತ್ತೀರಿ ಇಲ್ಲವೇ ನೆಪವನ್ನು ಕಂಡುಕೊಳ್ಳುತ್ತೀರಿ.
ಅರ್ಥ : ನೀವು ಏನಾದರೂ ಕೆಲಸವನ್ನು ಮಾಡಲೇಬೇಕೆಂದಿದ್ದರೆ ನೀವು ನಿಜವಾಗಿಯೂ ಅದನ್ನೇ ಮಾಡದೆ ಬಿಡುವುದಿಲ್ಲ. ಕಷ್ಟ ಪಟ್ಟು ಆ ಕೆಲಸವನ್ನು ಪೂರ್ಣಗೊಳಿಸಲು ಯಾವುದಾದರೂ ಒಂದು ಮಾರ್ಗವನ್ನು ಕಂಡುಕೊಳ್ಳುತ್ತೀರಿ.ನಿಮಗೆ ಇಷ್ಟ ಇಲ್ಲದೆ ಇದ್ದರೆ ಅಥವಾ ಮಾಡಬೇಕೆಂದ ಆಸೆ ಹಾಗೂ ಛಲ ಇಲ್ಲದಿದ್ದರೆ ನೀವು ಏನಾದರೂ ಒಂದು ನೆಪ ಒಡ್ಡಿ ಅದರಿಂದ ತಪ್ಪಿಸಿಕೊಳ್ಳುತ್ತೀರಿ.
ಜೀವನದಲ್ಲಿ ಹೋರಾಟವಿಲ್ಲದಿದ್ದರೆ ಪ್ರಗತಿ ಇಲ್ಲ.
Motivational quotes in Kannada ಅರ್ಥ : ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಯಾವುದಕ್ಕಾದರೂ ಹೋರಾಟ ನಡೆಸುತ್ತಲೇ ಇರುತ್ತಾರೆ. ನಮ್ಮ ಜೀವನದಲ್ಲಿ ಹೋರಾಟ ಇಲ್ಲದಿದ್ದರೆ ಯಶಸ್ಸು ಸಾಧಿಸುವುದು ಕಷ್ಟ. ಹೋರಾಟವಿಲ್ಲದ ಜೀವನದಲ್ಲಿ ಪ್ರಗತಿ ಸಾಧಿಸುವುದು ಅಸಾಧ್ಯ. ನಮ್ಮ ಹೋರಾಟವೇ ನಮ್ಮ ಪ್ರಗತಿಗೆ ಪ್ರೇರಣೆ ಆಗುತ್ತದೆ.
ಸಾಧನೆಯ ದಾರಿ ಕಠಿಣವಾಗಿರುತ್ತದೆ.
ಅರ್ಥ : ಸಾಧನೆಯ ಹಾದಿ ಕಷ್ಟಗಳಿಂದ ಕೂಡಿರುತ್ತದೆ ಮತ್ತು ಯಶಸ್ಸು ಗಳಿಸಲು ಶ್ರಮ ಪಡಬೇಕಾಗುತ್ತದೆ. ಈ ಸಮಯದಲ್ಲಿ ನಾವು ಅನೇಕ ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ ಆದರೆ ಯಾವುದಕ್ಕೂ ಚಿಂತೆ ಮಾಡದೆ ಮುನ್ನಡೆದರೆ ಮಾತ್ರ ನಮ್ಮ ಗುರಿ ತಲುಪಲು ಸಾಧ್ಯ.
ವೈಫಲ್ಯಗಳಿಂದ ಯಶಸ್ಸನ್ನು ಗಳಿಸಿ. ವೈಫಲ್ಯವು ಯಶಸ್ಸಿನ ಖಚಿತವಾದ ಮೆಟ್ಟಿಲುಗಳಲ್ಲಿ ಒಂದು.
ಅರ್ಥ : ಜೀವನದಲ್ಲಿ ಹಲವು ಬಾರಿ ನಾವು ಮಾಡುವ ಕೆಲಸಗಳಲ್ಲಿ ವಿಫಲಗೊಳ್ಳುತ್ತೇವೆ. ವಿಫಲಗೊಂಡಾಗ ನಾವು ಸೋಲನ್ನು ಒಪ್ಪಿಕೊಳ್ಳದೆ ಮತ್ತೆ ಪ್ರಯತ್ನ ಮಾಡುವ ಮೂಲಕ ಯಶಸ್ಸನ್ನು ಗಳಿಸಲು ಸಾಧ್ಯ. ವೈಫಲ್ಯತೆಯನ್ನೇ ಮೆಟ್ಟಿಲು ಮಾಡಿಕೊಳ್ಳುವ ಮೂಲಕ ಸರಿಯಾದ ಮಾರ್ಗದಲ್ಲಿ, ಸರಿಯಾದ ಪ್ರಯತ್ನ ಮಾಡಿದರೆ ನಾವು ನಮ್ಮ ಕೆಲಸ ಅಥವಾ ಕಾರ್ಯಗಳಲ್ಲಿ ಸುಲಭವಾಗಿ ಗೆಲುವು ಸಾಧಿಸಬಹುದು. ಅದಕ್ಕೆ ಸೋಲೇ ಗೆಲುವಿನ ಮೆಟ್ಟಿಲೆಂದು ಹೇಳಲಾಗುತ್ತದೆ.
ಅನುಭವವು ಕಠಿಣ ಶಿಕ್ಷಕ ಏಕೆಂದರೆ ಅದು ಮೊದಲು ಪರೀಕ್ಷೆಯನ್ನು ನೀಡುತ್ತದೆ, ನಂತರ ಪಾಠವನ್ನು ಕಲಿಸುತ್ತದೆ.
Motivational quotes in Kannada ಅರ್ಥ : ಎಲ್ಲರ ಜೀವನದಲ್ಲಿ ಇರುವ ಒಳ್ಳೆಯ ಶಿಕ್ಷಕ ಎಂದರೆ ಅನುಭವ. ಇದು ನಮಗೆ ಮೊದಲು ಪರೀಕ್ಷೆಯನ್ನು ನೀಡುತ್ತದೆ, ಆ ಪರೀಕ್ಷೆಯಲ್ಲಿ ಜಯ ಗಳಿಸಿದರೆ ನಮಗೆ ಯಶಸ್ಸು ಸಿಗುತ್ತದೆ ಇಲ್ಲವಾದರೆ ಅದರಿಂದ ನಮ್ಮ ಜೀವನಕ್ಕೆ ಒಳ್ಳೆಯ ಪಾಠ ಸಿಗುತ್ತದೆ.
Best Motivational Quotes in Kannada
ಹಡಗನ್ನು ಸಂರಕ್ಷಿಸುವುದು ನಾವಿಕನ ಮೂಲ ಗುರಿಯಾಗಿದ್ದರೆ, ಅವನು ಅದನ್ನು ಶಾಶ್ವತವಾಗಿ ಬಂದರಿನಲ್ಲಿ ಇಡುವುದು ಒಳ್ಳೆಯದು.
ಅರ್ಥ : ಒಂದು ವೇಳೆ ನಾವು ಜೀವನದಲ್ಲಿ ಅಪಾಯ ಅಥವಾ ರಿಸ್ಕ್ ತೆಗೆದುಕೊಳ್ಳಲು ಸಿದ್ಧರಿಲ್ಲದೆ ಇದ್ದರೆ ನಾವು ನಿಂತ ನೀರಿನಂತೆ ಹಾಗೆಯೇ ಇರುತ್ತೇವೆ ಹೊರತು ನಮ್ಮಿಂದ ಏನೂ ಸಾಧಿಸಲು ಸಾಧ್ಯವಾಗುವುದಿಲ್ಲ. ನಾವು ಹಡಗಿಗೆ ಎಂದೂ ಯಾವತ್ತಿಗೂ ಏನೂ ತೊಂದರೆ ಆಗಬಾರದು ಎಂದುಕೊಂಡರೆ ಹಡಗನ್ನು ಬಂದರಿನಲ್ಲೇ ನಿಲ್ಲಿಸಬೇಕಾಗುತ್ತದೆ ಹೊರತು ಹಡಗನ್ನು ಎಂದಿಗೂ ಹೊರ ತೆಗೆಯಲಾಗುವುದಿಲ್ಲ. ಹಡಗಿಗೆ ಏನಾದರು ಪರವಾಗಿಲ್ಲ ಎಂದು ಸರಿಯಾದ ಮಾರ್ಗದಲ್ಲಿ ಮುಂದೆ ಸಾಗಿದರೆ ಮಾತ್ರ ನಮ್ಮ ಗುರಿ ತಲುಪಲು ಸಾಧ್ಯ.
ಪ್ರಯತ್ನಿಸುವವರಿಗೆ ಅಸಾಧ್ಯವಾದುದು ಯಾವುದೂ ಇಲ್ಲ.
ಅರ್ಥ : ಯಾರು ಸರಿಯಾದ ಮಾರ್ಗದಲ್ಲಿ ಪ್ರಾಮಾಣಿಕವಾಗಿ ಪ್ರಯತ್ನ ನಡೆಸುತ್ತಾರೋ ಅವರಿಗೆ ಅಸಾಧ್ಯವಾದುದು ಈ ಜಗತ್ತಿನಲ್ಲಿ ಯಾವುದು ಇಲ್ಲ. ಪ್ರಾಮಾಣಿಕವಾಗಿ ಸರಿಯಾದ ಮಾರ್ಗದಲ್ಲಿ ಪ್ರಯತ್ನ ಪಟ್ಟರೆ ಏನು ಬೇಕಾದರೂ ಸಾಧಿಸಬಹುದು.
ಯಶಸ್ಸು ನಿಮ್ಮ ತಲೆಗೆ ಏರಲು ಬಿಡಬೇಡಿ ಮತ್ತು ಸೋಲು ನಿಮ್ಮ ಹೃದಯಕ್ಕೆ ತಗುಲಲು ಬಿಡಬೇಡಿ.
Motivational quotes in Kannada ಅರ್ಥ : ನಮ್ಮ ಕೆಲಸಗಳಲ್ಲಿ ಹಲವು ಬಾರಿ ಗೆಲುವು ಕಾಣುತ್ತೇವೆ ಇನ್ನು ಕೆಲ ಬಾರಿ ಸೋಲು ಕಾಣುತ್ತೇವೆ. ನಾವು ಗೆದ್ದಾಗ ಬೀಗದೆ ಹಾಗೂ ಅಹಂಕಾರದಿಂದ ವರ್ತಿಸದೆ ಮತ್ತು ಸೋತಾಗ ಕುಗ್ಗದೆ ಹಾಗೂ ಧೃತಿ ಗೆಡದೆ ನಮ್ಮ ಕಾರ್ಯಗಳನ್ನು ಮಾಡುತ್ತಾ ಸಾಗಬೇಕು. ಸೋಲು ಮತ್ತು ಗೆಲುವನ್ನು ಗಂಭೀರವಾಗಿ ಪರಿಗಣಿಸದೆ ಹಾಗೂ ಅತಿಯಾಗಿ ಅವುಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ ನಾವು ನಾವಾಗಿರಬೇಕು.
ನಿಮ್ಮ ಜೀವನವೆಂಬ ಪುಸ್ತಕಕ್ಕೆ ನೀವೇ ಬರಹಗಾರರು.
ಅರ್ಥ : ಜೀವ ಎಂಬುದು ಒಂದು ಪುಸ್ತಕದಂತೆ. ಆ ಪುಸ್ತಕವನ್ನು ನಾವೇ ಬರೆಯಬೇಕೆ ಹೊರತು ಇತರರಲ್ಲ. ಆ ಪುಸ್ತಕದ ಬರಹಗಾರರು ನಾವಾಗಬೇಕಾಗಿರುವುದರಿಂದ ಆ ಪುಸ್ತಕದಲ್ಲಿ ಏನು ಬರೆಯಬೇಕೆಂದು ನಾವೇ ನಿರ್ಧರಿಸಬೇಕೇ ಹೊರತು ಇತರರಲ್ಲ.
ಸೋಲಿನಲ್ಲಿಯೂ ಅಮೂಲ್ಯವಾದ ಪಾಠವಿದೆ.
ಅರ್ಥ : ಕೆಲ ಬಾರಿ ನಾವು ಸೋತಾಗ ಕುಗ್ಗದೆ ಆತ್ಮವಿಶ್ವಾಸದಿಂದ ಮುನ್ನಡೆಯಬೇಕು. ಸೋತಾಗ ನಾವು ಮಾಡಿರುವ ತಪ್ಪು ಏನೆಂದು ನಮಗೆ ಅರಿವಾಗುತ್ತದೆ ಮತ್ತು ಈ ಪಾಠ ನಮಗೆ ಯಾವ ರೀತಿಯಲ್ಲಿ ಬದಲಾವಣೆ ಮಾಡಿಕೊಂಡು ಮುನ್ನಡೆಯಬೇಕೆಂದು ತಿಳಿಸುವ ಮುನ್ನಡೆಯುವ ಮಾರ್ಗ ತೋರಿಸುತ್ತದೆ.
ನೀವು ಮಾಡಬಹುದು ಎಂದು ನಂಬಿದರೆ, ನೀವು ಅರ್ಧದಾರಿ ಸಾಗಿದಂತೆ.
Motivational quotes in Kannada ಅರ್ಥ : ನೀವು ಏನಾದರೂ ಮಾಡಬೇಕೆಂದು ಅಥವಾ ಸಾಧಿಸಬೇಕೆಂದು ಮನಸ್ಸಿನಲ್ಲಿ ನಿರ್ಧರಿಸಿದರೆ ಆ ಕೆಲಸ ಅರ್ಧ ಮುಗಿಸಿದಂತೆಯೇ. ಆದ್ದರಿಂದ ಇದು ನನ್ನಿಂದ ಸಾಧ್ಯವೇ ಅಥವಾ ನಾನು ಮಾಡಬಹುದೇ ಎಂಬ ಆಲೋಚನೆಗಳನ್ನು ಮನಸ್ಸಿನಿಂದ ತೆಗೆದು ಈ ಕೆಲಸವನ್ನು ನಾನು ಮಾಡಬಹುದು ಎಂಬ ದೃಢವಾದ ನಂಬಿಕೆಯ ಅವಶ್ಯಕತೆ ಇದೆ.
Nice Motivational Quotes in Kannada
ಕೆಲವರು ಕೆಲಸ ಆಗಬೇಕೆಂದು ಬಯಸುತ್ತಾರೆ, ಇನ್ನೂ ಕೆಲವರು ಕೆಲಸ ಆಗಲೆಂದು ಪ್ರಾರ್ಥಿಸುತ್ತಾರೆ, ಇತರರು ಕೆಲಸ ಮಾಡಿ ಪೂರ್ಣಗೊಳಿಸುತ್ತಾರೆ.
ಅರ್ಥ : ಈ ಜಗತ್ತಿನಲ್ಲಿ ಮೂರು ತರಹದ ವ್ಯಕ್ತಿಗಳಿರುತ್ತಾರೆ. ಮೊದಲನೆಯವರು ಕಷ್ಟ ಪಡದೆ ಕೆಲಸ ತಾನಾಗಿಯೇ ಆಗಲೆಂದು ಬಯಸುತ್ತಾರೆ, ಇನ್ನು ಎರಡನೆಯವರು ಕಷ್ಟ ಪಡದೆ ಕೆಲಸ ಆಗಲೆಂದು ಪ್ರಾರ್ಥಿಸುತ್ತಾರೆ ಆದರೆ ಮೂರನೇ ತರಹದ ವ್ಯಕ್ತಿಗಳು ಕಷ್ಟ ಪಟ್ಟು ಕೆಲಸ ಮಾಡಿ ಅದನ್ನು ಪೂರ್ಣಗೊಳಿಸಿ ಯಶಸ್ಸು ಸಾಧಿಸುತ್ತಾರೆ. ನೀವು ಈ ಮೂವರಲ್ಲಿ ಯಾವ ತರಹದ ವ್ಯಕ್ತಿ ಆಗಬೇಕೆಂದು ಬಯಸುತ್ತೀರಿ ನೀವೇ ನಿರ್ಧರಿಸಿ.
ಗುರಿ ತಲುಪಲು ಬೇಕಾಗಿರುವುದು ಸರಿಯಾದ ಯೋಜನೆ, ಮಾರ್ಗ ಮತ್ತು ಧೈರ್ಯ.
ಅರ್ಥ : ಯಾವುದೇ ಕೆಲಸ ಮಾಡುವಾಗ ಯೋಜನೆ ಮುಖ್ಯ. ಸರಿಯಾದ ಯೋಜನೆ ಇಲ್ಲದಿದ್ದರೆ ಕೆಲವೊಮ್ಮೆ ನಾವು ಮಾಡುವ ಕೆಲಸದಲ್ಲಿ ವಿಫಲವಾಗುವ ಸಾಧ್ಯತೆ ಇರುತ್ತದೆ. ಯೋಜನೆಯ ಜೊತೆ ನಾವು ಸಾಗುವ ಮಾರ್ಗದ ಬಗ್ಗೆ ಅರಿವಿರಬೇಕು. ಇವೆರಡರ ಜೊತೆ ಧೈರ್ಯ ಬಹಳ ಮುಖ್ಯ. ಇದು ನನ್ನಿಂದ ಸಾಧ್ಯ ಮತ್ತು ನಾನು ಇದನ್ನು ಸಾಧಿಸುತ್ತೇನೆ ಎಂಬ ಧೈರ್ಯವಿಲ್ಲದೆ ಇದ್ದರೆ ನಮ್ಮಿಂದ ಏನೂ ಮಾಡಲು ಸಾಧ್ಯವಾಗುವುದಿಲ್ಲ.
ಭರವಸೆ ಮತ್ತು ಆತ್ಮವಿಶ್ವಾಸವಿಲ್ಲದೆ ಏನನ್ನೂ ಮಾಡಲು ಸಾಧ್ಯವಿಲ್ಲ.
Motivational quotes in Kannada ಅರ್ಥ : ನಾವು ಜೀವನದಲ್ಲಿ ಗೆಲುವು ಸಾಧಿಸಲು ಭರವಸೆ ಮತ್ತು ಆತ್ಮವಿಶ್ವಾಸ ಬಹಳ ಮುಖ್ಯ. ಈ ಕಾರ್ಯವನ್ನು ನಾವು ಸಾಧಿಸುತ್ತೇವೆ ಎಂಬ ಭರವಸೆ ನಮಗೆ ನಮ್ಮ ಮೇಲಿರಬೇಕು ಹಾಗು ಎಷ್ಟೇ ತೊಂದರೆ ಅಥವಾ ಅಡೆತಡೆ ಬಂದರೂ ನಾವು ಈ ಕಾರ್ಯವನ್ನು ಮುಗಿಸುತ್ತೇವೆ ಎಂಬ ಆತ್ಮವಿಶ್ವಾಸ ನಮ್ಮ ಒಳಗೆ ಇರಬೇಕು.
ಏಳಿ, ಎದ್ದೇಳಿ ಮತ್ತು ನಿಮ್ಮ ಗುರಿ ತಲುಪುವವರೆಗೆ ನಿಲ್ಲಬೇಡಿ.
ಅರ್ಥ : ಒಂದು ವೇಳೆ ನೀವು ಜಾಗ್ರತರಾಗಿಲ್ಲದಿದ್ದರೆ, ಎದ್ದೇಳಿ ಮತ್ತು ಎಚ್ಚರಗೊಳ್ಳಿ. ಕೆಲವೊಮ್ಮೆ ನಾವು ದೈಹಿಕವಾಗಿ ಎಚ್ಚರಗೊಂಡಿರುತ್ತೇವೆ ಆದರೆ ಮಾನಸಿಕವಾಗಿ ನಾವು ಸಿದ್ಧರಿರುವುದಿಲ್ಲ. ನಾವು ಅಂದುಕೊಂಡಿದ್ದನ್ನು ಸಾಧಿಸಲು ಮತ್ತು ನಮ್ಮ ಗುರಿಯನ್ನು ತಲುಪಲು ನಾವು ಮಾನಸಿಕವಾಗಿ ಮತ್ತು ದೈಹಿಕವಾಗಿ ಎಚ್ಚರ ಎಂದರೆ ಜಾಗ್ರತಗೊಳ್ಳುವುದು ಅಗತ್ಯ.
ಜೀವನ ಎಂಬುದು ಸೈಕಲ್ ಸವಾರಿ ಇದ್ದಂತೆ. ಸಮತೋಲನವನ್ನು ಕಾಯ್ದುಕೊಳ್ಳಲು ನಾವು ಚಲಿಸುತ್ತಲೇ ಇರಬೇಕು.
ಅರ್ಥ : ನಮ್ಮ ಜೀವನ ಒಂದು ಸೈಕಲ್ ಸವಾರಿ ಇದ್ದಂತೆ. ಹೇಗೆ ಸೈಕಲ್ ಅನ್ನು ತುಳಿಯುವಾಗ ಮುನ್ನಡೆಯಲು ಹಾಗೂ ಬೀಳದಂತೆ ಇರಲು ನಾವು ತುಳಿಯುತ್ತ ಇರುತ್ತೇವೋ ಹಾಗೆಯೇ ಜೀವನ ಎಂಬ ಸವಾರಿ ಸರಾಗವಾಗಿ ಸಾಗಲು ಸಮತೋಲನ ಕಾಯ್ದುಕೊಂಡು ಚಲಿಸುತ್ತಲೇ ಇರಬೇಕು.
ನಿಮ್ಮ ಕನಸನ್ನು ನನಸಾಗಿಸಲು ಯತ್ನಿಸಿ ಮತ್ತು ಎಂದಿಗೂ ಅದರ ಕೈ ಬಿಡಬೇಡಿ.
Motivational quotes in Kannada ಅರ್ಥ : ನಿಮಗೆ ಏನಾದಾರೂ ಸಾಧಿಸಬೇಕೆಂಬ ಕನಸಿದ್ದರೆ ಅಥವಾ ಗುರಿ ಇದ್ದರೆ ಅದನ್ನು ನನಸು ಮಾಡುವತ್ತ ನಿಮ್ಮ ಗಮನವಿರಲಿ. ಇದು ಆಗುವುದಿಲ್ಲ ಎಂದು ಕೈ ಬಿಟ್ಟರೆ ಅದು ಎಂದಿಗೂ ಸಾಧ್ಯವಾಗುವುದಿಲ್ಲ.
ನಿಮಗೆ ದೊಡ್ಡ ಕೆಲಸಗಳನ್ನು ಮಾಡಲು ಸಾಧ್ಯವಾಗದಿದ್ದರೆ, ಸಣ್ಣ ಕೆಲಸಗಳನ್ನು ಉತ್ತಮ ರೀತಿಯಲ್ಲಿ ಮಾಡಿ.
ಅರ್ಥ : ಪ್ರತಿಯೊಬ್ಬರೂ ಜೀವನದಲ್ಲಿ ಏನಾದರೂ ದೊಡ್ಡದಾಗಿ ಸಾಧಿಸಬೇಕೆಂಬ ಛಲ ಹೊಂದಿರುತ್ತಾರೆ. ಆದರೆ ಕೆಲವರ ಬಳಿ ಅದಕ್ಕೆ ಬೇಕಾದ ಅಥವಾ ಅಗತ್ಯವಾದ ಸೌಲಭ್ಯಗಳ ಕೊರತೆ ಇರುತ್ತದೆ. ನಮ್ಮ ಬಳಿ ಇರುವ ಸೌಲಭ್ಯಗಳನ್ನೇ ಬಳಸಿ ವಿಭಿನ್ನ ಅಥವಾ ವೀನೂತನ ರೀತಿಯಲ್ಲಿ ಏನಾದರು ಸಾಧಿಸಲು ಪ್ರಯತ್ನಿಸಬೇಕು. ನಾವು ಮಾಡುವ ಚಿಕ್ಕ ಚಿಕ್ಕ ಕೆಲಸಗಳನ್ನೇ ಉತ್ತಮ ರೀತಿಯಲ್ಲಿ ಮಾಡಿದರೆ ನಮಗೆ ಯಶಸ್ಸು ಖಚಿತವಾಗಿ ದೊರೆಯುತ್ತದೆ.
These motivational quotes in Kannada along with inspiring help you to come out of your fear. Hope you like these nice motivational quotes in Kannada and their meaning.
You can find some of the best Kannada Inspirational Quotes here.