Kannada Poets

Kannada Poets | ಕನ್ನಡ ಕವಿಗಳು

Kannada Poets | ಕನ್ನಡ ಕವಿಗಳು | ಕವಿ ಕನ್ನಡ ಕವಿಗಳ ಹೆಸರು

Here you will find the information about few kannada poets, information about kannada poets birth and education, their career, some of the top awards received by these kannada poets and name of some of their poetry.

kannada poets

ಕನ್ನಡದಲ್ಲಿ ಹಲವಾರು ಶ್ರೇಷ್ಠ ಕವಿಗಳು (Kannada Poets), ಸಾಹಿತಿಗಳಿದ್ದಾರೆ. ಅದರಲ್ಲಿ ಕೆಲ ಕವಿಗಳ ಬಗ್ಗೆ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಕವಿಗಳ ಜನನ, ವಿದ್ಯಾಭ್ಯಾಸ, ವೃತ್ತಿ, ಅವರಿಗೆ ಲಭಿಸಿರುವ ಕೆಲ ಪ್ರಶಸ್ತಿಗಳು, ಅವರ ಕೃತಿಗಳ ಬಗ್ಗೆ ಮಾಹಿತಿಯನ್ನು ನೀವಿಲ್ಲಿ ಕಾಣಬಹುದು.

ಕನ್ನಡ ಕವಿ ಕುವೆಂಪು | Kannada Poet Kuvempu

ಜನನ ಮತ್ತು ವಿದ್ಯಾಭ್ಯಾಸ : ಕನ್ನಡದ ಮಹಾಕವಿ ಕುವೆಂಪು (ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ) ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿಯಲ್ಲಿ 29-12-1904 ರಲ್ಲಿ ಜನಿಸಿದರು. ಪ್ರಾಥಮಿಕ ಶಾಲಾಭ್ಯಾಸವನ್ನು ತೀರ್ಥಹಳ್ಳಿಯಲ್ಲಿ ಮುಗಿಸಿ ಮೈಸೂರಿನಲ್ಲಿ ಹೈಸ್ಕೂಲ್ ಮತ್ತು ಮಹಾರಾಜ ಕಾಲೇಜಿನಲ್ಲಿ ಎಂ.ಎ. ಪದವಿ ಗಳಿಸಿದರು.

ವೃತ್ತಿ: ಕುವೆಂಪು ಅವರುಮೈಸೂರು ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕರಾಗಿ ನಂತರ ಉಪಪ್ರಾಧ್ಯಾಪಕ, ಪ್ರಿನ್ಸಿಪಾಲರಾಗಿ ಮೈಸೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.

ಪ್ರಶಸ್ತಿಗಳು: ಶ್ರೀರಾಮಾಯಣ ದರ್ಶನಂ ಕೃತಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿತು. ಇದು ಕನ್ನಡಕ್ಕೆ ದೊರೆತ ಮೊದಲ ಜ್ಞಾನಪೀಠ ಪ್ರಶಸ್ತಿ ಆಗಿದೆ. ರಾಷ್ಟ್ರಪತಿಗಳಿಂದ ಪದ್ಮಭೂಷಣ ಪ್ರಶಸ್ತಿ, ರಾಜ್ಯಸರ್ಕಾರದಿಂದ ರಾಷ್ಟ್ರಕವಿ ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್, ಬೆಂಗಳೂರು ವಿಶ್ವವಿದ್ಯಾನಿಲದಿಂದ ಗೌರವ ಡಿ.ಲಿಟ್, ಪಂಪ ಪ್ರಶಸ್ತಿ, ಕರ್ನಾಟಕ ರತ್ನ ಪ್ರಶಸ್ತಿ ಕುವೆಂಪು ಅವರ ಪ್ರತಿಭೆಗೆ ದೊರೆತ ಪುರಸ್ಕಾರಗಳಾಗಿವೆ.

1985 ರಲ್ಲಿ ಮೈಸೂರಿನಲ್ಲಿ ನಡೆದ ಮೊದಲನೇ ವಿಶ್ವ ಕನ್ನಡ ಸಮ್ಮೇಳನವನ್ನು ಕುವೆಂಪು ಅವರು  ಉದ್ಘಾಟಿಸಿದರು.

ಪ್ರಸಿದ್ಧ ಕೃತಿಗಳುಶ್ರೀರಾಮಯಣ ದರ್ಶನಂ, ಮಲೆಗಳಲ್ಲಿ ಮದುಮಗಳು, ಕಾನೂರು ಹೆಗ್ಗಡತಿ, ಬೆರಳ್ಗೆ ಕೊರಳ್, ಸ್ವಾಮಿ ವಿವೇಕಾನಂದ, ಶೂದ್ರತಪಸ್ವಿ, ಕಬ್ಬಿಗನ ಕೈಬುಟ್ಟಿ, ಚಿತ್ರಾಂಗದಾ, ಕೊಳಲು, ಪಾಂಚಜನ್ಯ, ಬೊಮ್ಮನಹಳ್ಳಿ ಕಿಂದರಿಜೋಗಿ ಇತ್ಯಾದಿ ಕುವೆಂಪುರವರ ಪ್ರಸಿದ್ಧ ಕೃತಿಗಳು.

ನಿಧನ: ಕುವೆಂಪು ಅವರು 1994 ರಲ್ಲಿ ಮೈಸೂರಿನಲ್ಲಿ ನಿಧನರಾದರು.


ಕನ್ನಡ ಕವಿ ದಾರಾ ಬೇಂದ್ರೆ Kannada Poet Dara Bendre

ಜನನ ಮತ್ತು ವಿದ್ಯಾಭ್ಯಾಸ : ಕನ್ನಡದ ವರಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರು 1896 ರಲ್ಲಿ ಧಾರವಾಡದಲ್ಲಿ ಜನಿಸಿದರು. ಧಾರವಾಡದಲ್ಲಿ ಶಾಲಾಭ್ಯಾಸ ಪೂರ್ಣಗೊಳಿಸಿ ಪುಣೆಯ ಫರ್ಗ್ಯುಸನ್ ಕಾಲೇಜಿನಲ್ಲಿ  ಬಿ.ಎ. ಪದವಿ ಪಡೆದರು. ಕೆಲವು ಕಾಲ ಅಧ್ಯಾಪಕ ವೃತ್ತಿ ಮಾಡಿ ನಂತರ ಮುಂಬಯಿ ವಿಶ್ವವಿದ್ಯಾನಿಲಯದಿಂದ ಬೇಂದ್ರೆ ಅವರು ಎಂ.ಎ. ಪದವಿ ಪಡೆದರು.

ವೃತ್ತಿ: ಗದುಗಿನ ವಿದ್ಯಾದಾನ ಸಮಿತಿಯ ಪ್ರೌಢಶಾಲೆಯಲ್ಲಿ, ಹುಬ್ಬಳ್ಳಿಯ ನ್ಯೂ ಇಂಗ್ಲಿಷ್ ಸ್ಕೂಲಿನಲ್ಲಿ, ಸೊಲ್ಲಾಪುರದ ಡಿಎವಿ ಕಾಲೇಜಿನಲ್ಲಿ ಬೋಧನಾ ವಿಭಾಗದಲ್ಲಿ ಕಾರ್ಯ ನಿರ್ವಹಿಸಿ ನಿವೃತ್ತರಾದ ಮೇಲೆ ಧಾರವಾಡದ ಆಕಾಶವಾಣಿ ಕೇಂದ್ರದಲ್ಲಿ ಸಲಹೆಗಾರರಾಗಿ ಕೆಲಸ ಮಾಡಿದ್ದಾರೆ ಹಾಗೂ ಜೀವನ ಮಾಸ ಪತ್ರಿಕೆ ಮತ್ತು ಜಯಕರ್ನಾಟಕ ಪತ್ರಿಕೆ ಸಂಪಾದಕರಾಗಿ ಬೇಂದ್ರೆ ಅವರು ಸೇವೆ ಸಲ್ಲಿಸಿದ್ದಾರೆ.

ಪ್ರಶಸ್ತಿಗಳು: ನಾಕುತಂತಿಗೆ ಜ್ಞಾನಪೀಠ ಪ್ರಶಸ್ತಿ, ಅರಳು ಮರಳು ಕವನಸಂಗ್ರಹಕ್ಕೆ ಕೇಂದ್ರಸಾಹಿತ್ಯ ಅಕಾಡೆಮಿ , ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ, ಕಾಶಿಯ ವಿದ್ಯಾಪೀಠದಿಂದ ಗೌರವ ಡಾಕ್ಟರೇಟ್, ಪದ್ಮಶ್ರೀ ಪ್ರಶಸ್ತಿ, ಕೇಂದ್ರದ ಸಾಹಿತ್ಯ ಅಕಾಡೆಮಿಯಿಂದ ಫೆಲೋ ಗೌರವ , ಅದಮಾರು ಮಠದಿಂದ ಕರ್ನಾಟಕ ಕವಿಕುಲತಿಲಕ ಬಿರುದು ಇನ್ನೂ ಅನೇಕ ಪ್ರಶಸ್ತಿಗಳು ಬೇಂದ್ರೆಯವರಿಗೆ ಸಂದಿವೆ. ಶಿವಮೊಗ್ಗದಲ್ಲಿ ನಡೆದ 27 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಇಷ್ಟೇ ಅಲ್ಲದೆ ಮುಂಬಯಿಯಲ್ಲಿ ನಡೆದ 21 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಬೇಂದ್ರೆಯವರು ಅಧ್ಯಕ್ಷರಾಗಿದ್ದರು.

ಪ್ರಸಿದ್ಧ ಕೃತಿಗಳು: ಕೃಷ್ಣಕುಮಾರಿ, ಉಯ್ಯಾಲೆ, ಸಖೀಗೀತ, ನಾದಲೀಲೆ, ಗರಿ, ಅರುಳುಮರುಳು ಸೇರಿದಂತೆ ಅನೇಕ  ಕವನ ಸಂಕಲನಗಳನ್ನು ಬೇಂದ್ರೆಯವರು ರಚಿಸಿದ್ದಾರೆ. ಕಾವ್ಯೋದ್ಯೋಗ, ಸಾಹಿತ್ಯ ಮತ್ತು ವಿಮರ್ಶೆ, ಸಾಹಿತ್ಯ ವಿರಾಟ ಸ್ವರೂಪ, ಶಾಂತಲಾ, ನಿರಾಭರಣ ಸುಂದರಿ ಸೇರಿದಂತೆ ಇತ್ಯಾದಿ ಬೇಂದ್ರೆ ಅವರ ಪ್ರಸಿದ್ಧ ಕೃತಿಗಳು.

ನಿಧನ: ಬೇಂದ್ರೆ ಅವರು 1982 ರಲ್ಲಿ ಮುಂಬಯಿಯಲ್ಲಿ ನಿಧನರಾದರು.

ದರ ಬೇಂದ್ರೆಯವರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆಳಗೆ ಕ್ಲಿಕ್ ಮಾಡಿ.

Dara Bendre information in Kannada


ಕನ್ನಡ ಕವಿ ಡಾ.ಜಿ.ಎಸ್. ಶಿವರುದ್ರಪ್ಪನವರು Kannada Poet Dr. G.S. Shivarudrappa

ಜನನ ಮತ್ತು ವಿದ್ಯಾಭ್ಯಾಸ : ಡಾ.ಜಿ.ಎಸ್. ಶಿವರುದ್ರಪ್ಪನವರು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ 1926 ರಲ್ಲಿ ಜನಿಸಿದರು. ಜಿ.ಎಸ್. ಶಿವರುದ್ರಪ್ಪನವರು  ಎಸ್.ಎಸ್.ಎಲ್.ಸಿ ಮುಗಿಯುತ್ತಿದ್ದಂತೆಯೇ ಬಡತನದಿಂದಾಗಿ ಗುಬ್ಬಿ ತಾಲ್ಲೂಕು ಕಚೇರಿಯಲ್ಲಿ ಗುಮಾಸ್ತರಾಗಿ ಕೆಲಸಕ್ಕೆ ಸೇರಿ ದುಡಿಯಲಾರಂಭಿಸಿದರು.  ನಂತರ ಓದಬೇಕೆಂಬ ಆಸೆಯಿಂದ ಕೆಲಸಕ್ಕೆ ವಿದಾಯ ಹೇಳಿ ಮೈಸೂರು ಮಹಾರಾಜ ಕಾಲೇಜಿನಲ್ಲಿ ಓದನ್ನು ಬಿ.ಎ. ಪದವಿಯನ್ನು, ಸ್ವರ್ಣಪದಕದೊಂದಿಗೆ ಎಂ.ಎ. ಪದವಿಯನ್ನು ಶಿವರುದ್ರಪ್ಪನವರು ಪಡೆದರು.

ವೃತ್ತಿ: ಮೈಸೂರಿನ ಯುವರಾಜ ಕಾಲೇಜು, ಮಹಾರಾಜ ಕಾಲೇಜು, ಮಾನಸ ಗಂಗೋತ್ರಿಯಲ್ಲಿ ಅಧ್ಯಾಪಕರಾಗಿ ಸಲ್ಲಿಸಿದ್ದಾರೆ. ಇವರು ಹೈದರಾಬಾದ್ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಹಾಗೂ ಬೆಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿ, ನಿರ್ದೇಶಕರಾಗಿ ಜಿ.ಎಸ್. ಶಿವರುದ್ರಪ್ಪನವರು ಸೇವೆ ಸಲ್ಲಿಸಿದ್ದಾರೆ.

ಪ್ರಶಸ್ತಿಗಳು: ಕರ್ನಾಟಕ ರಾಜ್ಯ ಸರಕಾರದ ಪುರಸ್ಕಾರ, ಕರ್ನಾಟಕ ಸರಕಾರದ ರಾಜ್ಯೋತ್ಸವ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪಂಪ ಪ್ರಶಸ್ತಿ, ಸೋವಿಯತ್ ಲ್ಯಾಂಡ್ ನೆಹರೂ ಪ್ರಶಸ್ತಿ, ಮದರಾಸ್ ಕನ್ನಡಿಗರ ಸಮ್ಮೇಳನದ ಅಧ್ಯಕ್ಷತೆ, ದಾವಣಗೆರೆಯಲ್ಲಿ ನಡೆದ 61 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷತೆ, ರಾಷ್ಟ್ರಕವಿ ಗೌರವ ಕುವೆಂಪು ವಿಶ್ವವಿದ್ಯಾಲಯ ಮತ್ತು ಮೈಸೂರು ವಿಶ್ವವಿದ್ಯಾನಿಲಯಗಳ ಗೌರವ ಡಾಕ್ಟರೇಟ್ ಸೇರಿದಂತೆ ಇನ್ನೂ ಅನೇಕ ಪ್ರಶಸ್ತಿಗಳು ಜಿ.ಎಸ್. ಶಿವರುದ್ರಪ್ಪರವರಿಗೆ ದೊರೆತಿವೆ.

ಪ್ರಸಿದ್ಧ ಕೃತಿಗಳು : ಮಾಸ್ಕೊದಲ್ಲಿ 22 ದಿನ, ಗಂಗೆಯ ಶಿಖರಗಳಲ್ಲಿ, ಅಮೇರಿಕದಲ್ಲಿ ಕನ್ನಡಿಗ, ಇಂಗ್ಲೆಂಡಿನಲ್ಲಿ ಚತುರ್ಮಾಸ, ಚೆಲುವು-ಒಲವು. ಸಾಮಗಾನ, ದೇವಶಿಲ್ಪ, ನನ್ನ ನಿನ್ನ ನಡುವೆ, ದೀಪದ ಹೆಜ್ಜೆ, ಅನಾವರಣ, ಕಾರ್ತೀಕ, ತೀರ್ಥವಾಣಿ, ವ್ಯಕ್ತ-ಮಧ್ಯ ಇತ್ಯಾದಿ ಜಿ.ಎಸ್. ಶಿವರುದ್ರಪ್ಪರವರ ಪ್ರಸಿದ್ಧ ಕೃತಿಗಳು.

ವಿಮರ್ಶಾ ಕೃತಿಗಳು : ಕನ್ನಡ ಕವಿಗಳ ಕಾವ್ಯ ಕಲ್ಪನೆ, ವಿಮರ್ಶೆಯ ಪೂರ್ವಪಶ್ಚಿಮ, ಸೌಂದರ್ಯ ತಿಬಿಂಬ ಇತ್ಯಾದಿ ಜಿ.ಎಸ್. ಶಿವರುದ್ರಪ್ಪರವರ ವಿಮರ್ಶಾ ಕೃತಿಗಳು.

ನಿಧನ: ಜಿ.ಎಸ್. ಶಿವರುದ್ರಪ್ಪನವರು ಬೆಂಗಳೂರಿನಲ್ಲಿ 2012 ರಲ್ಲಿ ನಿಧನರಾದರು.


ಕನ್ನಡ ಕವಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ | Kannada Poet Maasti Venkatesh Ayyangar

ಜನನ ಮತ್ತು ವಿದ್ಯಾಭ್ಯಾಸ : ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಕೋಲಾರದ ಮಾಲೂರಿನ ಮಾಸ್ತಿ ಗ್ರಾಮದಲ್ಲಿ 1891 ರಲ್ಲಿ ಜನಿಸಿದರು. ಪ್ರೌಢವಿದ್ಯಾಭ್ಯಾಸ ಮತ್ತು ಎಫ್.ಎ. ಪದವಿಯನ್ನು ಮೈಸೂರಿನಲ್ಲಿ ಮಹಾರಾಜ ಕಾಲೇಜಿನಲ್ಲಿ ಪಡೆದರು. ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ ಪದವಿ ಹಾಗೂ ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಎಂ.ಎ ಪದವಿಯನ್ನು ಮಾಸ್ತಿ  ಅವರು ಪಡೆದಿದ್ದಾರೆ.

ವೃತ್ತಿ: ಮೈಸೂರು ಸರ್ಕಾರದ ಅಸಿಸ್ಟೆಂಟ್ ಕಮೀಷನರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಸರ್ ಎಂ. ವಿಶ್ವೇಶ್ವರಯ್ಯನವರ ಕೈಕೆಳಗೆ ಕೆಲಸ ಮಾಡಿದ ಮಾಸ್ತಿ ಅವರು ಸಬ್ ಡಿವಿಜನ್ ಆಫೀಸರ್ ಮ್ಯಾಜಿಸ್ಟ್ರೇಟ್ , ಕಂಟ್ರೋಲರ್ , ಡೆಪ್ಯುಟಿ ಕಮೀಷನರ್,  ಎಕ್ಸೈಜ್ ಕಮೀಷನರ್ ಮೊದಲಾದ ಉನ್ನತ ಹುದ್ದೆಗಳಲ್ಲಿ ಸೇವೆ ಮಾಸ್ತಿ ವೆಂಕಟೇಶ ಅಯ್ಯಂಗಾರ್ ರವರು ಸೇವೆ ಸಲ್ಲಿಸಿದ್ದಾರೆ.

ಪ್ರಶಸ್ತಿಗಳು: ಜ್ಞಾನಪೀಠ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಬಹುಮಾನ, ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಮೈಸೂರು ವಿಶ್ವವಿದ್ಯಾನಿಲಯದ ಡಾಕ್ಟರೇಟ್, ಕರ್ನಾಟಕ ಸರ್ಕಾರದ ಸನ್ಮಾನ, ಮೈಸೂರು ಮಹಾರಾಜರಿಂದ ರಾಜಸೇವಾ ಬಿರುದು, ವರ್ಧಮಾನ ಪ್ರಶಸ್ತಿ ಇನ್ನೂ ಹಲವು ಸನ್ಮಾನ ಪ್ರಶಸ್ತಿ ಗೌರವಗಳು ಮಾಸ್ತಿ ಅವರಿಗೆ ಲಭಿಸಿವೆ.

ಪ್ರಸಿದ್ಧ ಕೃತಿಗಳು : ಸರ್ ಎಂ. ವಿಶ್ವೇಶ್ವರಯ್ಯ, ನವರಾತ್ರಿ, ಜನಪದ ಸಾಹಿತ್ಯ, ಸಣ್ಣಕಥೆಗಳು, ಷೇಕ್ಸ್ಪಿಯರನ ನಾಟಕಗಳು, ಚಿಕವೀರರಾಜೇಂದ್ರ, ಕೃಷ್ಣಕರ್ಣಾಮೃತ, ನಮ್ಮ ನುಡಿ, ಪುರಂದರದಾಸ, ಕನಕಣ್ಣ, ಪ್ರಸಂಗ, ಶ್ರೀರಾಮಪಟ್ಟಾಭಿಷೇಕ ಇತ್ಯಾದಿ.

ನಿಧನ: ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು 1986 ರಲ್ಲಿ ನಿಧನರಾದರು.


ಕನ್ನಡ ಕವಿ ಕೋಟ ಶಿವರಾಮಕಾರಂತ | Kannada Poet Kota Shivaram Karanth

ಜನನ ಮತ್ತು ವಿದ್ಯಾಭ್ಯಾಸ : ಕೋಟ ಶಿವರಾಮ ಕಾರಂತರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1902 ರಲ್ಲಿ ಜನಿಸಿದರು. ಅವರು ಪ್ರೌಢಶಾಲಾ ವ್ಯಾಸಂಗವನ್ನು ಕುಂದಾಪುರದಲ್ಲಿ ಪೂರ್ಣಗೊಳಿಸಿದರು. ಕಾಲೇಜಿಗೆ  ಸೇರಿದಾಗ ಗಾಂಧೀಜಿಯವರ ಅಸಹಕಾರ ಚಳುವಳಿ ಆರಂಭವಾದಾಗ ಓದನ್ನು ಅರ್ಧಕ್ಕೆ ಬಿಟ್ಟು ಚಳವಳಿ ಸೇರಿಕೊಂಡರು.

ವೃತ್ತಿ: ವ್ಯಾಪಾರ ಸೇರಿದಂತೆ, ವಸಂತ, ವಿಚಾರವಾಣಿ ಪತ್ರಿಕೆ, ಚಲನಚಿತ್ರ, ಯಕ್ಷಗಾನ ಹೀಗೆ ನಾನಾ ಕ್ಷೇತ್ರಗಳಲ್ಲಿ ದುಡಿದಿದ್ದಾರೆ. ಅಷ್ಟೇ ಅಲ್ಲದೆ ನೃತ್ಯ, ಸಂಗೀತ ರಂಗಗಳಲ್ಲೂ ಕಾರಂತರು ಕಾರ್ಯ ನಿರ್ವಹಿಸಿದ್ದಾರೆ.

ಪ್ರಶಸ್ತಿಗಳು: ಮೂಕಜ್ಜಿಯ ಕನಸುಗಳು ಕಾದಂಬರಿಗೆ ಜ್ಞಾನಪೀಠ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್, ಭಾರತ ಸರ್ಕಾರದ ಪದ್ಮಭೂಷಣ, ಸ್ವೀಡನ್ ಪ್ರಶಸ್ತಿ,  ಮೈಸೂರು ವಿಶ್ವವಿದ್ಯಾನಿಲಯವು ಗೌರವ ಡಾಕ್ಟರೇಟ್ ಇನ್ನೂ ಹಲವಾರು ಪ್ರಶಸ್ತಿಗಳು ಕಾರಂತರಿಗೆ ದೊರೆತಿವೆ.

ಅದಲ್ಲದೆ ಮೈಸೂರಿನಲ್ಲಿ ನಡೆದ 37 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಕಾರಂತರು  ವಹಿಸಿದ್ದರು.

ಪ್ರಸಿದ್ಧ ಕೃತಿಗಳು :  ಅನೇಕ  ಕಾದಂಬರಿಗಳು, ನಾಟಕಗಳು, ಪ್ರಬಂಧಗಳು, ಕಲಾ ಗ್ರಂಥಗಳು, ಕಥಾಸಂಕಲನ,  ಆತ್ಮಕಥೆ, ಜೀವನ ಚರಿತ್ರೆಗಳು, ಮಕ್ಕಳ ಸಾಹಿತ್ಯ, ಬಾಲ ಪ್ರಪಂಚ, ವಿಜ್ಞಾನ ಪ್ರಪಂಚ, ಮೂಕಜ್ಜಿ ಕನಸುಗಳು, ಹುಚ್ಚುಮನಸ್ಸಿನ ಹತ್ತು ಮುಖಗಳು, ಸಿರಿಗನ್ನಡ ಅರ್ಥಕೋಶ, ಚಿತ್ರಮಯಿ ದಕ್ಷಿಣ ಕನ್ನಡ  ಇನ್ನೂ ಹಲವಾರು ಕೃತಿಗಳನ್ನು ಕಾರಂತರು ರಚಿಸಿದ್ದಾರೆ.

ನಿಧನ: ಶಿವರಾಮ ಕಾರಂತರು ಮಂಗಳೂರಿನಲ್ಲಿ 1997 ರಲ್ಲಿ ನಿಧನರಾದರು.


ಕನ್ನಡ ಕವಿ ಚಂದ್ರಶೇಖರ ಕಂಬಾರKannada Poet Chandrashekara Kambaara

ಜನನ ಮತ್ತು ವಿದ್ಯಾಭ್ಯಾಸ : ಚಂದ್ರಶೇಖರ ಕಂಬಾರರು 1937 ರಲ್ಲಿ ಬೆಳಗಾವಿ ಜಿಲ್ಲೆಯ ಘೋಡಗೇರಿಯಲ್ಲಿ ಜನಿಸಿದರು.  ಅವರ ವಿದ್ಯಾಬ್ಯಾಸ ಗೋಕಾಕ್, ಬೆಳಗಾವಿ ಮತ್ತು ಧಾರವಾಡದಲ್ಲಿ ನಡೆಯಿತು. ಇವರ ಬಾಲ್ಯದ ಅನುಭವಗಳನ್ನು ‘ನನ್ನ ಬದುಕು ಬರಹ’ ಎಂಬ ಲೇಖನದಲ್ಲಿ ಕಾಣಬಹುದು. ಕಂಬಾರರು ಧಾರವಾಡದಲ್ಲಿ ಎಂ.ಎ ಮತ್ತು  ಪಿ.ಎಚ್.ಡಿ ಪದವಿಗಳನ್ನು ಕಂಬಾರರು ಪಡೆದಿದ್ದಾರೆ.

ವೃತ್ತಿ: ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ, ಪ್ರವಾಚಕರಾಗಿ ಸೇವೆ ಸಲ್ಲಿಸಿದ್ದಾರೆ. ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಮೊಟ್ಟಮೊದಲ ಕುಲಪತಿಗಳಾಗಿಯೂ ಸೇವೆ ಸಲ್ಲಿಸಿದ್ದಾರೆ. ಅಮೆರಿಕಾದ ಚಿಕಾಗೋ ವಿಶ್ವವಿದ್ಯಾಲಯದಲ್ಲಿಯೂ ಕಂಬಾರರು ಕಾರ್ಯ ನಿರ್ವಹಿಸಿದ್ದಾರೆ

ಪ್ರಶಸ್ತಿಗಳು: ಜ್ಞಾನಪೀಠ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ವರ್ಧಮಾನ್ ಪ್ರಶಸ್ತಿ, ಶ್ರೇಷ್ಠ ನಾಟಕಕಾರ ಪ್ರಶಸ್ತಿ, ಕಮಲಾದೇವಿ ಚಟ್ಟೋಪಾಧ್ಯಾಯ ಪ್ರಶಸ್ತಿ, ಕೆ.ವಿ. ಶಂಕರೇಗೌಡ ಪ್ರಶಸ್ತಿ, ಆಂಧ್ರ ಸರ್ಕಾರದ ‘ಅತ್ಯುತ್ತಮ ಕವಿ’ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಇನ್ನೂ ಅನೇಕ ಪ್ರಶಸ್ತಿಗಳು ಕಂಬಾರರಿಗೆ ಲಭಿಸಿವೆ.

ಪ್ರಸಿದ್ಧ ಕೃತಿಗಳು :   ಕಂಬಾರರು ಅನೇಕ ನಾಟಕಗಳು, ಕವನ ಸಂಕಲನಗಳು, ಕಾದಂಬರಿಗಳು, ಜಾನಪದ ಕೃತಿಗಳನ್ನು ರಚಿಸಿದ್ದಾರೆ, ಇದಲ್ಲದೆ ಮೂರು ಸಾವಿರ ಪುಟಗಳಿಗೂ ಅಧಿಕವಾದ ‘ಕನ್ನಡ ಜಾನಪದ ವಿಶ್ವಕೋಶ’ವನ್ನು ಸಂಪಾದಿಸಿದ್ದಾರೆ.

ಜೋಕುಮಾರಸ್ವಾಮಿ, ನಾಯೀಕತೆ, ಜೈ ಸಿದ್ಧನಾಯಕ, ಹೇಳತೇನ ಕೇಳ, ಋಷ್ಯಶೃಂಗ, ಹುಲಿಯ ನೆರಳು, ಕರಿಮಾಯಿ, ನಾಯಿಕತೆ, ಋಷ್ಯಶೃಂಗ ಅವರ ಪ್ರಸಿದ್ಧ ಕೃತಿಗಳು.

ಇವಲ್ಲದೆ 5 ಚಲನಚಿತ್ರಗಳು, 8 ಸಾಕ್ಷ ಚಿತ್ರಗಳನ್ನು ತಯಾರಿಸಿದ್ದಾರೆ.  ಅನೇಕ ಚಲನಚಿತ್ರಗಳಿಗೆ ಹಾಗೂ ಸಾಕ್ಷಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ.  ಸಂಭಾಷಣೆ, ನಿರ್ದೇಶನ, ಸಂಗೀತ ನಿರ್ದೇಶನ, ಉತ್ತಮ ಚಿತ್ರಕತೆ , ರಾಷ್ಟ್ರಪ್ರಶಸ್ತಿ, ರಾಜ್ಯಪ್ರಶಸ್ತಿಗಳನ್ನು ಕಂಬಾರರು ಪಡೆದಿದ್ದಾರೆ.


ಕನ್ನಡ ಕವಿ ಎಂ. ಗೋವಿಂದ ಪೈ. | Kannada Poet M. Govinda Pai

ಜನನ ಮತ್ತು ವಿದ್ಯಾಭ್ಯಾಸ : ಕನ್ನಡದ ಪ್ರಥಮ ರಾಷ್ಟ್ರಕವಿ ಎಂಬ ಪ್ರಶಸ್ತಿಗೆ ಪಾತ್ರರಾದವರು ಎಂ. ಗೋವಿಂದ ಪೈ. ಹಳಗನ್ನಡ ವಿದ್ವಾಂಸರೂ ಕವಿಗಳೂ ಆದ ಇವರು 1883 ರಲ್ಲಿ ಮಂಜೇಶ್ವರದಲ್ಲಿ ಜನಿಸಿದರು.

ಮಂಗಳೂರಿನಲ್ಲಿ ಶಾಲಾ ವಿದ್ಯಾಭ್ಯಾಸ ಮಾಡಿ ಮದರಾಸ್ ವಿಶ್ವವಿದ್ಯಾಲಯದಲ್ಲಿ ಮಾಡುತ್ತಿದ್ದ ಬಿ.ಎ. ವ್ಯಾಸಂಗವನ್ನು ತಂದೆಯ ನಿಧನರಾದ್ದರಿಂದ ಕಾಲೇಜ್ ವಿಧ್ಯಾಭ್ಯಾಸವನ್ನು ಅರ್ಧದಲ್ಲೇ ನಿಲ್ಲಿಸಿದರು. ಆದರೆ ಕನ್ನಡ, ಇಂಗ್ಲಿಷ್, ಸಂಸ್ಕೃತ, ಫ್ರೆಂಚ್,  ಜರ್ಮನ್ ಸೇರಿದಂತೆ ಅನೇಕ ದೇಶಗಳ ಭಾಷೆಗಳನ್ನು ಗೋವಿಂದ ಪೈ  ಕಲಿತರು.

ಪ್ರಶಸ್ತಿಗಳು: ಗೋವಿಂದ ಪೈಗಳ ಪಾಂಡಿತ್ಯಕ್ಕೆ ಮದರಾಸ್ ಸರ್ಕಾರ ಅವರಿಗೆ ರಾಷ್ಟ್ರಕವಿ ಪ್ರಶಸ್ತಿ ನೀಡಿತು. ಧರ್ಮಸ್ಥಳದ ಜಿನರಾಜ ಹೆಗ್ಗಡೆಯವರು ಧರ್ಮಸ್ಥಳದಲ್ಲಿ ಸನ್ಮಾಸಿದರು.

ಗೋವಿಂದ ಪೈ ಅವರು ಮುಂಬೈಯಲ್ಲಿ ನಡೆದ 34 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ಪ್ರಸಿದ್ಧ ಕೃತಿಗಳು :  ಶ್ರೀಕೃಷ್ಣ ಚರಿತ್ರೆ, ನಂದಾದೀಪ, ಗಿಳಿವಿಂಡು, ಹೆಬ್ಬೆರಳು, ಬರಹಗಾರನ ಹಣೆಬರಹ, ಗೊಮ್ಮಟ ಜಿನಸ್ತುತಿ, ಪಾಶ್ರ್ವನಾಥ ತೀರ್ಥಂಕರ ಚರಿತೆ ಇತ್ಯಾದಿ ಗೋವಿಂದ ಪೈರ ಕೃತಿಗಳು.

ನಿಧನ: ಗೋವಿಂದ ಪೈ ಅವರು ಮಂಜೇಶ್ವರದಲ್ಲಿ 1963 ರಲ್ಲಿ ನಿಧನರಾದರು.


ಇಲ್ಲಿ ನೀವು ಕನ್ನಡದ ಕೆಲ ಕವಿಗಳ ಕುರಿತು ಸಂಕ್ಷಿಪ್ತ ಮಾಹಿತಿಯನ್ನು ಪಡೆದಿರುತ್ತೀರಿ. ಈ ಕವಿಗಳಿಗೆ ಇವಲ್ಲದೆ ಅನೇಕ ಪ್ರಶಸ್ತಿಗಳು ದೊರೆತಿವೆ, ಅಲ್ಲದೆ ಇನ್ನೂ ಹಲವಾರು ಕಾವ್ಯಗಳನ್ನು ರಚಿಸಿದ್ದಾರೆ. ಕವಿಗಳು ಬಗ್ಗೆ ಮಾಹಿತಿ ನೀಡುವ ಒಂದು ಸಣ್ಣ ಪ್ರಯತ್ನ ಇದಾಗಿದೆ (Here you will find information regarding kannada poets. Here an small attempt to give you information about kannada poets).

Click on the below link for Hindi letter writing हिंदी में पत्र लेखन

Letter Writing in Hindi