population explosion essay kannada janasankhya spota

Population explosion essay in Kannada

population explosion

 Essay on population explosion in Kannada | Janasankhya spota prabandha

Here you will find essay on population explosion in kannada. The essay is also called prabandha on janasankhya spota. The essay covers topics like what is population, problems caused by increased population in India, measures  that needs to be taken to control population explosion along with measures taken in India to control population explosion.

ಜನಸಂಖ್ಯೆ ಎಂದರೇನು ? | What is Population?

ಜನಸಂಖ್ಯೆಯು ಎಂದರೆ ಒಂದು ನಗರ, ಪಟ್ಟಣ, ಪ್ರದೇಶ ಅಥವಾ ದೇಶದಲ್ಲಿನ ಒಟ್ಟು ಜನರ ಸಂಖ್ಯೆಯನ್ನು ಸೂಚಿಸುತ್ತದೆ. ಯಾವುದೇ ದೇಶವಾಗಲಿ ತನ್ನ ಜನಸಂಖ್ಯೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಬಹಳ ಅವಶ್ಯಕ. ಹೆಚ್ಚಿನ ಜನಸಂಖ್ಯೆಯಿಂದಾಗಿ ಅನೇಕ ದೇಶಗಳು ಇಂದು ಹಲವು ಸಮಸ್ಯೆಗಳನ್ನು ಎದುರಿಸುವಂತಾಗಿದೆ.

ಭಾರತವು ಹೆಚ್ಚುತ್ತಿರುವ ಜನಸಂಖ್ಯೆಯ ಸಮಸ್ಯೆಯನ್ನು ಎದುರಿಸುತ್ತಿದೆ. ವಿಶ್ವದ ಜನಸಂಖ್ಯೆಯ ಸುಮಾರು 17% ಭಾರತದಲ್ಲಿ ವಾಸಿಸುತ್ತಿದ್ದಾರೆ, ಇದು ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶಗಳಲ್ಲಿ ಒಂದಾಗಿದೆ.

ಜನಸಂಖ್ಯೆಯ ಬೆಳವಣಿಗೆಗೆ ಪ್ರಮುಖ ಕಾರಣವೆಂದರೆ ಭಾರತದಲ್ಲಿ ಅನಕ್ಷರತೆ. ಅವಿದ್ಯಾವಂತ, ಬಡ ವರ್ಗ ಅಥವಾ ಗ್ರಾಮೀಣ ಪ್ರದೇಶದ ಜನರು ಹೆಚ್ಚಿನ ಸಂಖ್ಯೆಯ ಮಕ್ಕಳನ್ನು ಹೆರುತ್ತಿದ್ದಾರೆ. ಅವರಲ್ಲಿ ಹೆಚ್ಚಿನ ಜನರಿಗೆ ಜನನ ನಿಯಂತ್ರಣ ವಿಧಾನಗಳ ಬಗ್ಗೆ ತಿಳಿದಿರುವುದಿಲ್ಲ. ಬಾಲ್ಯ ವಿವಾಹವು ಜನಸಂಖ್ಯೆ ಹೆಚ್ಚಳಕ್ಕೆ ಮತ್ತೊಂದು ಪ್ರಮುಖ ಕಾರಣವಾಗಿದೆ.

ಜನಸಂಖ್ಯಾ ಸ್ಪೋಟದಿಂದ ಉಂಟಾಗುವ ತೊಂದರೆಗಳು | Problems caused by Population explosion in Kannada

population

ಹೆಚ್ಚು ಜನಸಂಖ್ಯೆ ಹೊಂದಿರುವ ದೇಶಗಳ ಪೈಕಿ ಚೀನಾ ಮೊದಲಿನ ಸ್ಥಾನದಲ್ಲಿದೆ.  ಭಾರತ ಮತ್ತು ಅಮೇರಿಕ ಕ್ರಮವಾಗಿ ಚೀನಾದ ನಂತರ ಸ್ಥಾನಗಳಲ್ಲಿವೆ.  ಜನಸಂಖ್ಯೆಯ ಹೆಚ್ಚಳವು ವಸತಿ, ಆಹಾರ, ಶಿಕ್ಷಣ, ಆರೋಗ್ಯ ಸೌಕರ್ಯಗಳು ಮುಂತಾದ ಅಗತ್ಯ ಸಂಪನ್ಮೂಲಗಳ ಕೊರತೆ ಸೃಷ್ಟಿಸುತ್ತದೆ. ಜನಸಂಖ್ಯೆ ಹೆಚ್ಚಿದಂತೆ ಸಂಪನ್ಮೂಲಗಳ ಸಮಸ್ಯೆ ಉದ್ಭವಿಸುತ್ತದೆ. ಸಂಪನ್ಮೂಲಗಳ ಕೊರತೆಯಿಂದಾಗಿ, ಆ ಪ್ರದೇಶದಲ್ಲಿನ ಜನರು ತೊಂದರೆಗಳನ್ನು ಎದುರಿಸುತ್ತಾರೆ.

ಹೆಚ್ಚಿನ ಜನಸಂಖ್ಯೆಯು ಇಂಧನದ ಬಳಕೆಯನ್ನು ಹೆಚ್ಚಿಸುತ್ತದೆ. ಇಂಧನದ ಅತಿಯಾದ ಬಳಕೆಯಿಂದಾಗಿ ಪರಿಸರದ ಮೇಲೆ ಗಂಭೀರ ಪರಿಣಾಮ ಬೀರುವುದಲ್ಲದೆ ಪರಿಸರದ ಅಸಮತೋಲನಕ್ಕೆ ಕಾರಣವಾಗುತ್ತದೆ. ಇದು ಪ್ರವಾಹಗಳು, ಕರಾವಳಿ ಸವೆತ, ಜ್ವಾಲಾಮುಖಿ ಸ್ಫೋಟಗಳು ಮುಂತಾದ ಪರಿಸರ ಸಂಬಂಧಿ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹೆಚ್ಚುತ್ತಿರುವ ಜನಸಂಖ್ಯೆಯು ನಿರುದ್ಯೋಗ ಮತ್ತು ಬಡತನದ ಸಮಸ್ಯೆಯನ್ನು ಸೃಷ್ಟಿಸುವುದಲ್ಲದೆ, ನೀರು, ಆಹಾರ, ವಸತಿ ಸಂಬಂಧಿ ಕೊರತೆಗಳು    ಎದುರಾಗುತ್ತದೆ ಮತ್ತು ಜೀವನ ನಿರ್ವಹಣೆಗಾಗಿ ಅವಶ್ಯಕವಾಗಿರುವ ಮೂಲಭೂತ ಅಗತ್ಯಗಳಿಗಾಗಿ ಹೋರಾಟ ನಡೆಸುವ ಅನಿವಾರ್ಯತೆ ಸೃಷ್ಠಿಯಾಗುತ್ತದೆ. ಜನಸಂಖ್ಯೆಯ ಒತ್ತಡವು ದೇಶದ ಆರ್ಥಿಕ ಸ್ಥಿತಿಗತಿಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ದೇಶದ ಜನರಿಗೆ ಸಾಮಾಜಿಕ ಮತ್ತು ಆರ್ಥಿಕ ಭದ್ರತೆ ಒದಗಿಸುವುದು ಆ ದೇಶಕ್ಕೆ ದೊಡ್ಡ ಸವಾಲಾಗಿ ಬಿಡುತ್ತದೆ.

ಜನಸಂಖ್ಯೆ ನಿಯಂತ್ರಿಸಲು ಕೈಗೊಂಡಿರುವ ಕ್ರಮಗಳು | Measures  that needs to be taken to control population explosion in kannada

ಹೆಚ್ಚುತ್ತಿರುವ ಜನಸಂಖ್ಯೆಯನ್ನು ಹತೋಟಿಗೆ ತರುವ ಏಕೈಕ ಮಾರ್ಗವೆಂದರೆ ಜನನ ಪ್ರಮಾಣವನ್ನು ಕಡಿಮೆ ಮಾಡುವುದು. ಸರ್ಕಾರವು ಜನನ ನಿಯಂತ್ರಣ ವಿಧಾನಗಳನ್ನು ಅಳವಡಿಸಿಕೊಳ್ಳಲು ಜನರಿಗೆ ಶಿಕ್ಷಣ ನೀಡುವ ಕೆಲಸ ಮಾಡಬೇಕು. ಬಾಲ್ಯ ವಿವಾಹಗಳನ್ನು ನಿಷೇಧಿಸುವುದು ಮತ್ತು ಗಂಡು, ಹೆಣ್ಣು ಇಬ್ಬರಿಗೂ ಮದುವೆಯ ವಯಸ್ಸನ್ನು ಹೆಚ್ಚಿಸುವುದು ಅತ್ಯಗತ್ಯ. ಕುಟುಂಬ ಯೋಜನೆಯ ಮಹತ್ವವನ್ನು ಅರ್ಥಮಾಡಿಸುವಲ್ಲಿ ಸ್ವಯಂಸೇವಾ ಸಂಸ್ಥೆಗಳು ಜನರಿಗೆ ಸಹಾಯ ಮಾಡಬೇಕು.

ಭಾರತೀಯ ಜನಸಂಖ್ಯೆಯನ್ನು ನಿಯಂತ್ರಿಸಲು ಭಾರತ ಸರ್ಕಾರವು ಹಲವು ಕ್ರಮಗಳನ್ನು ಕೈಗೊಂಡಿದೆ. ಉದಾಹರಣೆಗೆ ಕನಿಷ್ಠ ಮದುವೆಯ ವಯಸ್ಸು, ಸರ್ಕಾರವು ಮದುವೆಗೆ ಕನಿಷ್ಠ ವಯಸ್ಸನ್ನು ನಿಗದಿಪಡಿಸಿದೆ, ಇದು ಪುರುಷರಿಗೆ 21 ವರ್ಷಗಳು ಮತ್ತು ಮಹಿಳೆಯರಿಗೆ 18 ವರ್ಷಗಳು. ಇದರ ನಡುವೆಯೂ ಜನರು ದೇಶದ ಗ್ರಾಮೀಣ ಅಥವಾ ಹಿಂದುಳಿದ ಪ್ರದೇಶಗಳ ಜನರು ಇದನ್ನು ಹೆಚ್ಚಾಗಿ ಅನುಸರಿಸುವುದಿಲ್ಲ. ಮುಂದಿನ ದಿನಗಳಲ್ಲಿ ಈ ನಿಯಮ ಉಲ್ಲಂಘಿಸದಂತೆ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು.ಅನೇಕ ಕಡೆ ಇಂದಿಗೂ ತಮ್ಮ ಹೆಣ್ಣು ಮಕ್ಕಳಿಗೆ 18 ವರ್ಷದ ಮುಂಚೆಯೇ ವಿವಾಹ ನಡೆಸುತ್ತಾರೆ.

ಸರ್ಕಾರ ಕೈಗೊಂಡಿರುವ ಮತ್ತೊಂದು ಕ್ರಮವೆಂದರೆ ಉಚಿತ ಶಿಕ್ಷಣ, ಭಾರತ ಸರ್ಕಾರವು ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆಯಡಿಯಲ್ಲಿ ಮಕ್ಕಳಿಗೆ ಭಾರತದಲ್ಲಿ ಶಿಕ್ಷಣವನ್ನು ಉಚಿತವಾಗಿ ಮಾಡಿದೆ.

ತೀರ್ಮಾನ | Conclusion

ಭಾರತದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಯು ತೀವ್ರ ಸಮಸ್ಯೆಯಾಗಿದೆ. ಇದನ್ನು ನಿಯಂತ್ರಿಸಲು ಸರ್ಕಾರ ನಿರ್ದಿಷ್ಟ ಕ್ರಮಗಳನ್ನು ಕೈಗೊಂಡಿದ್ದರೂ, ಅವು ಸಾಕಷ್ಟು ಪರಿಣಾಮಕಾರಿಯಾಗಿಲ್ಲ. ಈ ಸಮಸ್ಯೆಯನ್ನು ನಿಗ್ರಹಿಸಲು ಅಥವಾ ನಿಯಂತ್ರಿಸಲು ಇನ್ನೂ ಅನೇಕ ಕ್ರಮಗಳನ್ನು ತೆಗೆದುಕೊಳ್ಳಬೇಕಾದ ಅವಶ್ಯಕತೆ ಇದೆ.

FAQ on Population explosion in Kannada or Janasankhya spota

ಪ್ರ. ಜನಸಂಖ್ಯೆ ಎಂದರೇನು ?
ಉ. ಜನಸಂಖ್ಯೆಯು ಎಂದರೆ ಒಂದು ನಗರ, ಪಟ್ಟಣ, ಪ್ರದೇಶ ಅಥವಾ ದೇಶದಲ್ಲಿನ ಒಟ್ಟು ಜನರ ಸಂಖ್ಯೆಯನ್ನು ಸೂಚಿಸುತ್ತದೆ.

ಪ್ರ. ದೇಶದ ಜನಸಂಖ್ಯೆಯನ್ನು ನಿಯಂತ್ರಿಸುವ ವಿಧಾನಗಳು ಯಾವುವು ?
ಉ. ಜನನ ನಿಯಂತ್ರಣ ಕಾರ್ಯಕ್ರಮಗಳು ಮತ್ತು ಜನಸಾಮಾನ್ಯರಲ್ಲಿ ಜನಸಂಖ್ಯೆ ನಿಯಂತ್ರಣದ ಅರಿವು ಮೂಡಿಸುವ ಮೂಲಕ ಜನಸಂಖ್ಯೆಯನ್ನು ನಿಯಂತ್ರಿಸಬಹುದು.

ಪ್ರ. ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ಯಾವುದು ?
ಉ. ಚೀನಾ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶಗಳ ಪೈಕಿ ಮೊದಲನೆಯದಾಗಿದೆ.

ಪ್ರ. ಭಾರತದಲ್ಲಿ ಜನಸಂಖ್ಯೆಯ ಬೆಳವಣಿಗೆಗೆ ಪ್ರಮುಖ ಕಾರಣವೇನು ?
ಉ. ಅನಕ್ಷರತೆ ಭಾರತದಲ್ಲಿ ಜನಸಂಖ್ಯೆಯ ಬೆಳವಣಿಗೆಗೆ ಪ್ರಮುಖ ಕಾರಣ.

ಪ್ರ. ಜನಸಂಖ್ಯೆಯ ಹೆಚ್ಚಳದಿಂದ ಉಧ್ಭವಿಸುವ ಸಮಸ್ಯೆಗಳಾವುವು ?
ಉ. ಜನಸಂಖ್ಯೆ ಹೆಚ್ಚಾದಂತೆ ನಿರುದ್ಯೋಗ ಮತ್ತು ಬಡತನದ ಸಮಸ್ಯೆಯನ್ನು ಉದ್ಭವಿಸುವಲ್ಲದೆ, ನೀರು, ಆಹಾರ, ವಸತಿ ಸಂಬಂಧಿ ಕೊರತೆಗಳು ಎದುರಾಗುತ್ತವೆ.

Hope this essay on population explosion essay in Kannada helped you to understand what is population, causes of population explosion, problems that are caused by excess of population and the necessary measures to be taken to reduce population explosion in this Kannada essay.