Essay on how to conduct Elections during pandemic in Kannada

Essay on how to conduct Elections during covid pandemic in Kannada

elections during covid

Essay on conducting elections during covid in country like India in kannada language

Here you will find an Essay on how to conduct elections during covid 19 pandemic in kannada. As the elections in the country have been postponed due to the covid pandemic, this essay in kannada explains you the necessity of the  elections during covid pandemic, the main challenges which are there in conducting the elections during pandemic and the important guidelines that needs to be followed in conducting the elections during the covid 19.

ಜಗತ್ತಿನಾದ್ಯಂತ ಕೋವಿಡ್ -19 ಸಾಂಕ್ರಾಮಿಕ ರೋಗದ ಹರಡುವಿಕೆಯು ಸಾರ್ವಜನಿಕ ಜೀವನ ಅಸ್ತವ್ಯಸ್ತ ಗೊಳಿಸುವುದರ ಜೊತೆಗೆ ಎಲ್ಲ ವಲಯಗಳಲ್ಲೂ ತನ್ನ ಪ್ರಭಾವ ಬೀರಿದೆ. ಈ ಸಾಂಕ್ರಾಮಿಕ ರೋಗವು ಶೀಘ್ರದಲ್ಲೇ ಕೊನೆಗೊಳ್ಳುವ ಸಾಧ್ಯತೆ ಇಲ್ಲದಿರುವುದರಿಂದ ಈ ರೋಗದ ಜೊತೆಗೆ ಜೀವನ ಸಾಗಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ವೈರಸ್ ಅಪಾಯವು ಇನ್ನೂ ಇರುವುದರಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವ ಮೂಲಕ ಆರ್ಥಿಕ ಚಟುವಟಿಕೆ ಮತ್ತು ಇತರ ಅಗತ್ಯ ಸೇವೆಗಳ ಪುನರಾರಂಭದೊಂದಿಗೆ ವ್ಯವಸ್ಥೆಯನ್ನು ಮರುಸ್ಥಾಪಿಸುವ ಪ್ರಕ್ರಿಯೆಯನ್ನು ಹಂತ ಹಂತವಾಗಿ ಮಾಡಲಾಗುತ್ತಿದೆ.

ಕರೋನ ವೈರಸ್ ನಂತರ ಸಾರ್ವಜನಿಕ ಕಾರ್ಯಕ್ರಮಗಳು ಕಣ್ಮರೆಯಾಗಿವೆ. ಕರೋನ ಸಾಂಕ್ರಾಮಿಕ ರೋಗವು ವಿಶ್ವಾದ್ಯಂತ ಚುನಾವಣೆಗಳನ್ನು ನಡೆಸುವುದಕ್ಕೆ ಬಹುದೊಡ್ಡ ತೊಡಕಾಗಿ ಪರಿಣಮಿಸಿದೆ. ದೇಶದಲ್ಲಿ ಬಹುತೇಕ ಚುನಾವಣೆಗಳನ್ನು ಮುಂದೂಡಲ್ಪಿಟ್ಟಿದೆ.

ಈ ಸಮಯದಲ್ಲಿ ಚುನಾವಣೆ ಅಗತ್ಯವೇ? | Are elections necessary during covid pandemic in India?

ಕೊರೊನ ಇನ್ನೂ ಸಂಪೂರ್ಣ ನಿಯಂತ್ರಣಕ್ಕೆ ಬಾರದಿದ್ದರೂ ಇಂತಹ ಕಷ್ಟಕರ ಸಮಯದಲ್ಲಿ ಚುನಾವಣೆ ಬೇಕೇ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡುವುದು ಸಹಜ. ಈ ವರ್ಷ ಕೋವಿಡ್ ಬಿಕ್ಕಟ್ಟಿನಿಂದಾಗಿ ಹಲವು ಪ್ರಾಥಮಿಕ, ಉಪಚುನಾವಣೆ, ಪುರಸಭೆ, ನಗರಸಭೆ ಮತ್ತು ರಾಜ್ಯ ಚುನಾವಣೆಗಳು ವಿಳಂಬವಾಗಿದೆ. ಚುನಾವಣೆ ಮುಂದೂಡಿಕೆ ತಾತ್ಕಾಲಿಕ ಪರಿಹಾರವೇ ಹೊರತು ಶಾಶ್ವತ ಪರಿಹಾರವಲ್ಲ.

ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಚುನಾವಣೆ ಮುಂದೂಡುವಿಕೆ ಕಾನೂನುಬದ್ಧವಾಗಿ ಸಮರ್ಥಿಸಲ್ಪಟ್ಟರೂ ಇದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ. ಚುನಾವಣೆ ವಿಳಂಬ ಸಂಕೀರ್ಣವಾದ ಕಾನೂನು ಪ್ರಶ್ನೆಗಳನ್ನು ಹುಟ್ಟುಹಾಕುವುದಲ್ಲದೆ, ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ವಿವಾದಗಳನ್ನು ಸೃಷ್ಠಿಸುತ್ತದೆ. ಅಷ್ಟೇ ಅಲ್ಲದೆ ಸಾಂವಿಧಾನಿಕ ಬಿಕ್ಕಟ್ಟಿಗೂ ಕಾರಣವಾಗಬಹುದು.

ಸಾಂಕ್ರಾಮಿಕ ರೋಗದ ನಡುವೆಯೂ ಚುನಾವಣೆಗಳನ್ನು ಅಡೆತಡೆಯಿಲ್ಲದೆ ನಡೆಸುವುದು ಪ್ರಜಾಪ್ರಭುತ್ವಗಳು ಉಳಿಸಿಕೊಳ್ಳಲು ಮತ್ತು ಅಭಿವೃದ್ಧಿ ಹೊಂದಲು ಅತ್ಯಗತ್ಯ.

ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತದಲ್ಲಿ ಚುನಾವಣೆ ನಡೆಸಲು ಸಾಧ್ಯವೇ ? | Is it possible to conduct elections during covid pandemic in India?

ಜಗತ್ತಿನಲ್ಲೇ ಅತಿ ಹೆಚ್ಚು ಮತದಾರರನ್ನು ಹೊಂದಿರುವ ಭಾರತದಂತಹ ದೇಶದಲ್ಲಿ ಚುನಾವಣೆ ನಡೆಸುವ ಸವಾಲಿನ   ಸಂಗತಿಯಾಗಿದೆ. ಚುನಾವಣೆಗಳಿಗೆ ತೀವ್ರವಾದ ಸಾರ್ವಜನಿಕ ಸಂವಹನ ಮತ್ತು ಸಮೂಹ ಸಂವಹನದ ಅಗತ್ಯವಿರುವುದರಿಂದ, ಸಾಮಾಜಿಕ ಅಂತರ ಮತ್ತು ಕಿಕ್ಕಿರಿದ ಕೂಟಗಳನ್ನು ತಪ್ಪಿಸುವಂತಹ ಮುನ್ನೆಚ್ಚರಿಕೆಯ ಮಾನದಂಡಗಳು ಮೂಲಭೂತವಾಗಿ ಚುನಾವಣೆಯ ನಡೆಸುವುದಕ್ಕೆ ಸವಾಲಾಗಿ ಪರಿಣಮಿಸಬಹುದು.

ಕೆಲವು ದೇಶಗಳು ತಮ್ಮ ಚುನಾವಣೆಯ ನಂತರ ಹೆಚ್ಚಿನ ಸಂಖ್ಯೆಯ ಕೋವಿಡ್ ಪ್ರಕರಣಗಳನ್ನು ಕಂಡಿರುವ ಉದಾಹರಣೆಗಳೂ ಇವೆ. ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಿ ಚುನಾವಣೆ ನಡೆಸಿ ಸುರಕ್ಷಿತ ಮತದಾನ ಸಾಧ್ಯವೆಂದು ಹಲವಾರು ದೇಶಗಳು ತೋರಿಸಿಕೊಟ್ಟಿವೆ.

ತೊಡಕುಗಳು | Challenges in conducting the elections during covid pandemic in kannada

  • ಸಾಂಕ್ರಾಮಿಕ ರೋಗದ ಸಮಯದಲ್ಲಿ ಚುನಾವಣೆಗ ನಡೆಸುವುದು ಕಡಿಮೆ ಮತದಾನಕ್ಕೆ ಕಾರಣವಾಗಬಹುದು ಎಂಬುದು ಒಂದು ದೊಡ್ಡ ಕಾಳಜಿಯಾಗಿದೆ. ಇದಕ್ಕೆ ಪೂರಕವೆಂಬಂತೆ ಕೆಲವು ದೇಶಗಳು ತಮ್ಮ ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ ಸಾಂಕ್ರಾಮಿಕ ರೋಗದ ಸಮಯದಲ್ಲಿ ಕಡಿಮೆ ಮತದಾನವನ್ನು ಕಂಡಿವೆ.
  • ಅಧಿಕಾರಿಗಳು ಮತ್ತು ಚುನಾವಣಾ ಆಯೋಗ ಮತದಾನದ ವಿಧಾನ ಮತ್ತು ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ಸರಿಯಾದ ರೀತಿಯಲ್ಲಿ ಮನವರಿಕೆ ಮಾಡದಿದ್ದರೆ, ಅನೇಕರು ಭಯದಿಂದ ಅಥವಾ ಎಲ್ಲಿ ಮತ್ತು ಹೇಗೆ ಮತ ಚಲಾಯಿಸಬೇಕು ಎಂಬ ಗೊಂದಲದಿಂದ ಮತದಾನದಿಂದ ಹಿಂದೆ ಸರಿಯಬಹುದು.
  • ಸಾಂಕ್ರಾಮಿಕ ರೋಗದ ಬಗೆಗಿನ ತಪ್ಪು ಮಾಹಿತಿ ಮತ್ತು ತಪ್ಪು ಮಾಹಿತಿಯ ಹರಡುವಿಕೆ ಇನ್ನೊಂದು ಪ್ರಮುಖ ಸಮಸ್ಯೆಯಾಗಿದೆ. ಇದು ಚುನಾವಣಾ ಕಾರ್ಯಗಳಿಗೆ ಮತ್ತು ಮತದಾನಕ್ಕೆ ಅಡ್ಡಿಯಾಗಬಹುದು.
  • ಹಲವು ವೇದಿಕೆಗಳಲ್ಲಿ ಏಕಕಾಲದಲ್ಲಿ ನಡೆಯಬಹುದಾದ ಎಲ್ಲಾ ರಾಜಕೀಯ ಸಂವಹನ ಮತ್ತು ಚುನಾವಣಾ ಪ್ರಚಾರವನ್ನು ಪತ್ತೆಹಚ್ಚಲು ಮತ್ತು ಮೇಲ್ವಿಚಾರಣೆ ಮಾಡಲು ಚುನಾವಣಾ ಆಯೋಗಕ್ಕೆ ಸವಾಲಿನ ಕೆಲಸವಾಗಬಹುದು. ಇದು ಪ್ರಚಾರದ ಸಮಯದಲ್ಲಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸುವ ಸಾಧ್ಯತೆಗಳಿಗೆ ದಾರಿ ಮಾಡಿಕೊಡಬಹುದು.

ಭಾರತದಲ್ಲಿ ಚುನಾವಣೆ ನಡೆಸಲು ಅನುಸರಿಸಬೇಕಾದ ಮಾರ್ಗಸೂಚಿಗಳು | Guidelines for  conducting the elections during covid pandemic in India

conducting elections during covid

  • ಮಾಸ್ಕ್ ಅಥವಾ ಮುಖಗವಸ ಧರಿಸುವಿಕೆಯನ್ನು ಎಲ್ಲ ಸಂದರ್ಭಗಳಲ್ಲೂ ಕಡ್ಡಾಯ ಗೊಳಿಸುವುದು.
  • ಸಾಮೂಹಿಕ ರಾಲಿಗಳು ಮತ್ತು ರೋಡ್ಶೋಗಳಿಗೆ  ನಿರ್ಬಂಧ ಹೇರುವುದು. ಒಂದು ವೇಳೆ ಸಾರ್ವಜನಿಕ ಸಭೆ ನಡೆಸಲೇಬೇಕೆಂದರೆ  ಜನರ ಸಂಖ್ಯೆಯನ್ನು ಸೀಮಿತಗೊಳಿಸುವುದು ಮತ್ತು  ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಅಗತ್ಯವಾಗಿದೆ. ಸೀಮಿತ ಕಾರ್ಯಕರ್ತರೊಂದಿಗೆ ಮನೆ ಮನೆ ಪ್ರಚಾರ ನಡೆಸುವುದು ಇತ್ಯಾದಿ.
  • ಚುನಾವಣಾ ಪ್ರಚಾರಕ್ಕಾಗಿ, ಸಾಮಾಜಿಕ ಮಾಧ್ಯಮದ ಬಳಕೆ,  ವರ್ಚುವಲ್ ರಾಲಿಗಳು ಮತ್ತು ಮತದಾರರೊಂದಿಗೆ ಅಂತರ್ಜಾಲದ ಮೂಲಕ ಸಂವಹನವನ್ನು ಪ್ರೋತ್ಸಾಹಿಸುವುದು. ಪ್ರಚಾರಕ್ಕೆ ಇತರ ಪರ್ಯಾಯ ತಂತ್ರಗಳ ಬಳಕೆಯತ್ತ ಗಮನ ನೀಡುವುದು.
  • ಮತ ಚಲಾಯಿಸಲು ಮತಗಟ್ಟೆ ಪ್ರವೇಶಿಸುವ ಮೊದಲು ಎಲ್ಲಾ ಮತದಾರರ ಥರ್ಮಲ್ ಸ್ಕ್ಯಾನಿಂಗ್ ನಡೆಸುವುದು. ಅನಾರೋಗ್ಯ ಇರುವವರಿಗೆ ಪ್ರತ್ಯೇಕ ಪ್ರದೇಶಗಳಲ್ಲಿ ಮತದಾನ ಮಾಡಲು ಅವಕಾಶ ಕಲ್ಪಿಸುವುದು.
  • ಮತಗಟ್ಟೆಗಳ ಸಂಖ್ಯೆಯನ್ನು ಹೆಚ್ಚಿಸುವುದು, ಮತದಾನದ ಸ್ಥಳದಲ್ಲಿ ಜನಸಂದಣಿಯನ್ನು ತಪ್ಪಿಸಲು ಪ್ರತಿ ಮತಗಟ್ಟೆಯಲ್ಲಿ ಗರಿಷ್ಠ ಸಂಖ್ಯೆಯ ಮಿತಿಯನ್ನು ಹೇರುವುದು.  ವ್ಯಕ್ತಿಗತ ಕನಿಷ್ಠ ಒಂದು ಮೀಟರ್ ಅಂತರ ಕಾಪಾಡಿಕೊಳ್ಳುವುದು.
  • ಚುನಾವಣಾ ದಿನ ಮತದಾನದ ಅವಧಿಯನ್ನು ವಿಸ್ತರಿಸಿವುದು. ಚುನಾವಣೆಯನ್ನು ಎಲ್ಲ ಕಡೆ ಒಂದೇ ದಿನ ನಡೆಸುವುದರ ಬದಲು ಹಲವು ಸ್ಲಾಟ್ಗಳಲ್ಲಿ ನಡೆಸುವುದರ ಮೂಲಕ ಜನದಟ್ಟಣೆ, ಸಿಬ್ಬಂದಿಯ ಕೊರತೆ ಸೇರಿದಂತೆ ಇನ್ನೂ ಹೆಚ್ಚಿನ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ.
  • ಚುನಾವಣಾ ಸಿಬ್ಬಂದಿ ಮತ್ತು ಮತದಾರರ ಆರೋಗ್ಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸ್ಯಾನಿಟೈಸರ್, ನೀರು ಮತ್ತು ಇತರ ಅಗತ್ಯ ವಸ್ತುಗಳ ಸಮರ್ಪಕ ಪೂರೈಕೆಯನ್ನು ಮಾರ್ಗಸೂಚಿಗಳ ಪ್ರಕಾರ ಮಾಡುವುದು.
  • ಮತಗಟ್ಟೆಗಳನ್ನು ಸೋಂಕುರಹಿತಗೊಳಿಸುವುದು. ಆಗಾಗ್ಗೆ ಮುಟ್ಟಿದ ಮೇಲ್ಮೈಗಳ ಆಗಿಂದಾಗ್ಗೆ ಶುಚಿಗೊಳಿಸುವುದು. ಕ್ರೀಡಾಂಗಣಗಳಂತಹ ವಿಶಾಲವಾದ ಸ್ಥಳಗಳನ್ನು ಮತದಾನಕ್ಕೆ ಆಯ್ಕೆ ಮಾಡುವ ಮೂಲಕ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ.
  • ಕ್ವಾರಂಟೈನ್ ಮತ್ತು ಕೋವಿಡ್ ದೃಢ ಪಟ್ಟಿರುವ ರೋಗಿಗಳಿಗೆ ದಿನದ ಕಡೆಯಲ್ಲಿ ಸಾಕಷ್ಟು ನಿರ್ಬಂಧನೆ ಮತ್ತು ಎಚ್ಚರಿಕೆಗಳೊಂದಿಗೆ ಪ್ರತ್ಯೇಕ ಮತದಾನದ ಅವಕಾಶ ಕಲ್ಪಿಸುವುದು. ವಯೋವೃದ್ಧರು ಮತ್ತು ವಿಕಲಚೇತನ ಮತದಾರರಿಗೆ ದಿನದ ಆರಂಭದಲ್ಲಿ ಮತದಾನದ ಮಾಡಲು ಪ್ರೋತ್ಸಾಹಿಸಲಾಯಿತು.
  • ಸಿಬ್ಬಂದಿಗೆ ಮತದಾನದ ಮುಂಚೆ ಎಚ್ಚರಿಕೆಯ ಕ್ರಮಗಳನ್ನು ಪಾಲಿಸಲು ಅನುಕೂಲವಾಗುವಂತೆ ಮತ್ತು  ಮತದಾನದ ಕಾರ್ಯಕ್ರಮ ಯಶಸ್ವಿಗೊಳಿಸಲು ವಿಶೇಷ ತರಬೇತಿ ನೀಡುವುದು. ಮತದಾರರ ಬೆರಳುಗಳ ಮೇಲೆ ಗುರುತು ಮಾಡಲು ಶಾಯಿಯ  ಹತ್ತಿ ಸ್ವೇಬ್ಗಳನ್ನು ಬಳಸುವುದು.
  • ಚುನಾವಣೆಗೆ ಮುಂಚಿತವಾಗಿ ಮತ ಚಲಾವಣೆ ಕುರಿತು ಮಾಹಿತಿ ಮತ್ತು ಸೂಚನೆಗಳನ್ನು ಪತ್ರಿಕೆ, ಸಾಮಾಜಿಕ ಜಾಲತಾಣ, ಪೋಸ್ಟರ್ಸ್, ಬ್ಯಾನರ್, ದೂರದರ್ಶನ, ರೇಡಿಯೋ  ಮುಖೇನ ಹಂಚಿಕೊಳ್ಳುವುದರ ಮೂಲಕ  ಮತ ಚಲಾವಣೆ ಮತ್ತು ಚುನಾವಣಾ ಆಯೋಗ ಕೈಗೊಂಡಿರುವ ಆರೋಗ್ಯಕರ ಕ್ರಮಗಳ ಕುರಿತು ಜಾಗ್ರತಿ ಮೂಡಿಸುವುದು.

 

ಸಾಂಕ್ರಾಮಿಕ ಸಮಯದಲ್ಲಿ ಯಶಸ್ವಿಯಾಗಿ ಚುನಾವಣೆಗಳನ್ನು ನಡೆಸಿರುವ ದೇಶಗಳ ಮಾದರಿಯನ್ನು ಅಧ್ಯಯನ ನಡೆಸಿ ಚುನಾವಣಾ ಸಮಯದಲ್ಲಿ ಸೋಂಕು ಹರಡುವುದನ್ನು ತಡೆಯಲು ಕಟ್ಟುನಿಟ್ಟಾದ ಮುನ್ನೆಚ್ಚರಿಕೆಯ ಮಾರ್ಗಸೂಚಿಗಳನ್ನು ಹೊರತರುವುದು ಮತ್ತು ಚುನಾವಣೆಯಲ್ಲಿ ಉತ್ಸಾಹದಿಂದ ಭಾಗವಹಿಸುವಂತೆ ಮತದಾರರ ಮನವೊಲಿಸುವುದರಿಂದ ಕೋವಿಡ್ ಬಿಕ್ಕಟ್ಟಿನ ನಡುವೆಯೂ ಭಾರತದಂತಹ ದೇಶಗಳಲ್ಲಿ ಯಶಸ್ವಿಯಾಗಿ ನಡೆಸಲು ಸಾಧ್ಯ.


Hope this essay on how to conduct elections during covid pandemic in a country like India in kannada language gives you an idea about the challenges in conducting the elections, necessity of the elections and the steps that need to be taken in successfully carrying out the elections.