Tenali Rama Stories in Kannada

Tenali Rama Stories in Kannada | ಕನ್ನಡದಲ್ಲಿ ತೆನಾಲಿ ರಾಮನ ಕಥೆಗಳು

tenali rama stories in kannada

Here you will find some of the best funny Tenali Rama stories in Kannada. Tenali Rama is a poet and one of the best advisor at King Krishnadevaraya’s kingdom. His full name is Garlapati Ramakrishnayya and is famous by name Tenali Rama. Tenali Rama is famous for his humor, his intelligence and problem solving skills. Tenali Rama has helped his King and the people many times through his intelligence.

Best Tenali Rama stories in Kannada

ತೆನಾಲಿ ರಾಮ ಮತ್ತು ರಾಜ ಕೃಷ್ಣದೇವರಾಯ ಮೊದಲ ಭೇಟಿ | First meet Tenali Rama stories in Kannada

ತೆನಾಲಿ ರಾಮ ಮೊದಲ ಬಾರಿಗೆ ಹಂಪಿಗೆ ಬಂದಾಗ, ರಾಜ ಕೃಷ್ಣದೇವರಾಯರನ್ನು ಭೇಟಿಯಾಗಲು ಬಯಸಿದ್ದನು. ತೆನಾಲಿ ರಾಮ ರಾಜ ಕೃಷ್ಣದೇವರಾಯನ ಅರಮನೆಗೆ ಆಗಮಿಸಿದನು. ಅರಮನೆಯ ಹೊರಗಿದ್ದ ಕಾವಲುಗಾರ ಅವನಿಗೆ ಅರಮನೆ ಒಳಗೆ ಪ್ರವೇಶಿಸಲು ನಿರಾಕರಿಸಿದನು.

ತೆನಾಲಿ ರಾಮ ಕಾವಲುಗಾರನಿಗೆ ತಾನು ಬಹಳ ದೂರದ ಊರಿನಿಂದ ರಾಜರನ್ನು ಭೇಟಿಯಾಗಲು ಬಂದಿದ್ದೆನೇನೆಂದು ತಿಳಿಸಿದನು. ಅಷ್ಟೇ ಅಲ್ಲದೆ ತಾನೊಬ್ಬ ಪಂಡಿತನಾಗಿರುವುದರಿಂದ ರಾಜನು ತನಗೆ ಖಂಡಿತವಾಗಿಯೂ ಏನಾದರೂ ಉಡುಗೊರೆ ಕೊಟ್ಟೆ ಕೊಡುತ್ತಾರೆಂದು ತಿಳಿಸಿದನು. ತೆನಾಲಿ ರಾಮ ಉಡುಗೊರೆ ಎನ್ನುತ್ತಿದ್ದ ಹಾಗೆ ಕಾವಲುಗಾರ, ರಾಜ ನೀಡುವ ಉಡುಗೊರೆಯಲ್ಲಿ ತನಗೂ ಪಾಲು ನೀಡುವುದಾದರೆ ಮಾತ್ರ ಅವನನ್ನು ಒಳಗೆ ಬಿಡುವುದಾಗಿ ಹೇಳಿದನು. ಇದಕ್ಕೆ ತೆನಾಲಿ ರಾಮ ಒಪ್ಪಿಗೆ ನೀಡಿ ಅರಮನೆಯ ಒಳಗೆ ಪ್ರವೇಶಿಸಿದನು.

ತೆನಾಲಿ ರಾಮ ರಾಜನ ಆಸ್ಥಾನವನ್ನು ಪ್ರವೇಶಿಸಲು ಮುಂದಾದಾಗ, ಆಸ್ಥಾನದ ದ್ವಾರದಲ್ಲಿದ್ದ ಇನ್ನೊಬ್ಬ ಕಾವಲುಗಾರ ಅವನನ್ನು ತಡೆದನು. ಇವನಿಗೂ ತೆನಾಲಿ ರಾಮನು ರಾಜ ನೀಡುವ ಉಡುಗೊರೆಯ ಅರ್ಧದಷ್ಟು ನೀಡುವುದಾಗಿ ಭರವಸೆ ನೀಡಿದನು. ಇದನ್ನು ಕೇಳಿದ ನಂತರ ಕಾವಲುಗಾರ ತೆನಾಲಿಯನ್ನು ಒಳಗೆ ಬಿಟ್ಟನು.

ತೆನಾಲಿ ರಾಮನು ಆಸ್ಥಾನದ ಒಳಗೆ ಓಡಿಕೊಂಡು ಬಂದನು. ತೆನಾಲಿ ರಾಮನ ಈ ಕೆಲಸ ರಾಜನಿಗೆ ಕೋಪ ತರಿಸಿತು. ರಾಜನು ತೆನಾಲಿಗೆ ಶಿಕ್ಷೆ ನೀಡಲು ನಿರ್ಧರಿಸಿ ಕಾವಲುಗಾರರನ್ನು ಕರೆಸಿ ಅವನಿಗೆ ಛಡಿ ಏಟುಗಳನ್ನು ಕೊಡುವಂತೆ ಆದೇಶ ನೀಡಿದನು. ರಾಜನ ಆಸ್ಥಾನವನ್ನು ಪ್ರವೇಶಿಸಲು ಸಹಾಯ ಮಾಡಿದ ಕಾವಲುಗಾರರೊಂದಿಗೆ ಈ ಉಡುಗೊರೆಯನ್ನು ಹಂಚಿಕೊಳ್ಳಬೇಕೆಂದು ತೆನಾಲಿ ರಾಜನಿಗೆ ನಡೆದದ್ದನ್ನೆಲ್ಲ ವಿವರಿಸಿ, ತಾನು ಏಕೆ ಹೀಗೆ ಮಾಡಿದೆನೆಂದು ಕೂಡ ವಿವರಿಸಿದನು. ಇದನ್ನು ಕೇಳಿದ ರಾಜನು ಇಬ್ಬರು ಕಾವಲುಗಾರರಿಗೆ ತಲಾ ಐವತ್ತು ಹೊಡೆತಗಳನ್ನು ನೀಡುವಂತೆ ಆದೇಶಿಸಿದನು.

ರಾಜನು ತೆನಾಲಿ ರಾಮನ ಬುದ್ಧಿವಂತಿಕೆಯಿಂದ ಪ್ರಭಾವಿತನಾಗಿ ಅವನಿಗೆ ಉಡುಗೊರೆಗಳನ್ನು ನೀಡಿ ಅವನನ್ನು ರಾಜಮನೆತನದ ಹಾಸ್ಯಗಾರನಾಗಿ ತನ್ನ ಆಸ್ಥಾನದಲ್ಲೇ ಇರಿಸಿಕೊಂಡನು.


ಮೂರು ಹೂವಿನ ಕುಂಡಗಳು | The three flower pots Tenali Rama stories in Kannada

ಒಮ್ಮೆ ರಾಜ ಕೃಷ್ಣದೇವರಾಯ ಅವರಿಗೆ 3 ಅಮೂಲ್ಯವಾದ ಹೂವಿನ ಕುಂಡಗಳು ಉಡುಗೊರೆ ರೂಪದಲ್ಲಿ ದೊರೆತವು. ಹೂಕುಂಡಗಳು ಸುಂದರವಾಗಿದ್ದರಿಂದ ರಾಜನಿಗೆ ಅವು ಪ್ರಿಯವಾದವು ಮತ್ತು ಅವುಗಳನ್ನು ಜೋಪಾನವಾಗಿ ನೋಡಿಕೊಳ್ಳಬೇಕೆನಿಸಿತು. ರಾಜನು ಹೂವಿನ ಕುಂಡಗಳನ್ನು ಸುರಕ್ಷಿತವಾಗಿ ನೋಡಿಕೊಳ್ಳಲು ಸೇವಕರನ್ನು ನೇಮಿಸಿದನು.

ಒಮ್ಮೆ ಇಲಿಯು ಒಂದು ಮಡಕೆಯ ಮೇಲೆ ಎಗರಿ, ಮಡಕೆ ನೆಲದ ಮೇಲೆ ಬಿದ್ದು ಒಡೆಯಿತು. ಇದನ್ನು ತಿಳಿದ ಕೃಷ್ಣದೇವರಾಯ  ಕೋಪಗೊಂಡು ಅದರ ರಕ್ಷಣೆಗಾಗಿ ನೇಮಿಸಿದ್ದ ಸೇವಕನಿಗೆ ಮರಣದಂಡನೆ ಶಿಕ್ಷೆ ವಿಧಿಸಿದನು. ವಿಷಯ ತಿಳಿದ ತೆನಾಲಿ ರಾಮನಿಗೆ  ಬೇಸರವಾಯಿತು. ತೆನಾಲಿ ಸೆರೆಮನೆಯಲ್ಲಿ ಸೇವಕನನ್ನು ಭೇಟಿ ಮಾಡಿದನು ಮತ್ತು ಅವನನ್ನು ಶಿಕ್ಷೆಯಿಂದ ಕಾಪಾಡುವ ಯೋಜನೆಯ ಕುರಿತು ಚರ್ಚಿಸಿದನು.

ಮರುದಿನ ಸೇವಕನನ್ನು ಮರಣದಂಡನೆಗೆ ಕರೆತಂದಾಗ, ಗಲ್ಲಿಗೇರಿಸುವ ಮುಂಚೆ ಅವನ ಕೊನೆಯ ಆಸೆಯನ್ನು ಕೇಳಲಾಯಿತು. ಸೇವಕನು ತಾನು ಉಳಿದ ಎರಡು ಹೂಕುಂಡಗಳನ್ನು ನೋಡಬೇಕೆಂದು ಹೇಳಿದನು. ರಾಜನ ಆಜ್ಞೆ ಪಡೆದು ಉಳಿದ ಎರಡು ಹೂಕುಂಡಗಳನ್ನು ಸೇವಕನ ಮುಂದೆ ಇರಿಸಲಾಯಿತು. ಸೇವಕನು ಕೂಡಲೇ ಆ ಉಳಿದ ಎರಡು ಹೂಕುಂಡಗಳನ್ನು ತೆಗೆದುಕೊಂಡು ಒಡೆದು ಹಾಕಿದನು. ಇದನ್ನು ಕಂಡು ರಾಜನ ಕೋಪ ಇನ್ನೂ ಹೆಚ್ಚಾಯಿತು.

ಅವನು ಆ ಸೇವಕನಿಗೆ ಕೋಪದಿಂದ, “ಆ ಉಳಿದ ಎರಡು ಕುಂಡಗಳನ್ನು ಏಕೆ ಒಡೆದು ಹಾಕಿದೆ?” ಎಂದು ಕೇಳಿದನು. ಅದಕ್ಕೆ ಸೇವಕನು “ರಾಜರೇ, ಈ ಹೂಕುಂಡಗಳು ಯಾವುದಾದರೂ ಕಾರಣದಿಂದ ಒಂದಲ್ಲ ಒಂದು ದಿನ ನಾಶವಾಗುತ್ತವೆ, ಆಗ ನನ್ನಂತೆ ಇಬ್ಬರು ಅಮಾಯಕರು ಪ್ರಾಣ ಕಳೆದುಕೊಳ್ಳಬೇಕಾಗುತ್ತದೆ. ಅವುಗಳನ್ನು ಈಗಲೇ ನಾಶ ಮಾಡಿದರೆ ಆ ಇಬ್ಬರ ಜೀವ ಉಳಿಸಿದಂತಾಗುತ್ತದೆ” ಎಂದು ಉತ್ತರಿಸಿದನು.

ಇದನ್ನು ಕೇಳಿದ ನಂತರ ರಾಜನಿಗೆ ತನ್ನ ತಪ್ಪಿನ ಅರಿವಾಗಿ, ಆ ಸೇವಕನನ್ನು ಬಿಡುಗಡೆಗೊಳಿಸುವಂತೆ ಆದೇಶಿಸಿದನು. ಹೀಗೆ ತೆನಾಲಿ ರಾಮ ತನ್ನ ಬುದ್ಧಿವಂತಿಕೆಯಿಂದ ಆ ಸೇವಕನ ಪ್ರಾಣ ಉಳಿಸಿದನು.


ತೆನಾಲಿ ರಾಮ ಮತ್ತು ಶಾಪಗ್ರಸ್ತ ಮನುಷ್ಯ | The cursed man Tenali Rama stories in Kannada

ವಿಜಯನಗರ ಸಾಮ್ರಾಜ್ಯದಲ್ಲಿ ಒಬ್ಬ ವ್ಯಕ್ತಿ ವಾಸಿಸುತ್ತಿದ್ದನು. ಮುಂಜಾನೆ ಎದ್ದು ಆ ವ್ಯಕ್ತಿಯನ್ನು ಕಂಡರೆ, ಇಡೀ ದಿನ ಊಟ ಮಾಡಲು ಆಗುವುದಿಲ್ಲ ಎಂದು ಜನ ಮಾತನಾಡಿಕೊಳ್ಳುತ್ತಿದ್ದರು. ಇದನ್ನು ಕೇಳಿದ ರಾಜನು ಅದನ್ನು ಪರೀಕ್ಷೆ ಮಾಡಲು ನಿರ್ಧರಿಸಿದನು.

ಸೇವಕರು ಆ ವ್ಯಕ್ತಿಗೆ ಅರಮನೆಯಲ್ಲೇ ಉಳಿಯುವ ವ್ಯವಸ್ಥೆ ಮಾಡಿದರು ಮತ್ತು ರಾಜನ ಕೋಣೆಯ ಪಕ್ಕದಲ್ಲಿಯೇ ಆ ವ್ಯಕ್ತಿಗೆ ವಸತಿ ವ್ಯವಸ್ಥೆ ಮಾಡಲಾಯಿತು. ಮರುದಿನ ಬೆಳಿಗ್ಗೆ ಪರೀಕ್ಷೆ ಮಾಡುವ ಉದ್ದೇಶದಿಂದ ರಾಜನು ಆ ವ್ಯಕ್ತಿಯ ಕೋಣೆಗೆ ನಡೆದನು ಮತ್ತು ಮೊದಲು ಆ ವ್ಯಕ್ತಿಯನ್ನು ನೋಡಿದನು.

ನಂತರ ತನ್ನ ಉಪಾಹಾರ ಸೇವಿಸಲು ರಾಜನು ತೆರಳಿದನು. ಉಪಹಾರಕ್ಕೆಂದು ಕುಳಿತಾಗ ರಾಜ ತನ್ನ ಉಪಹಾರದಲ್ಲಿ ನೊಣ ಬಿದ್ದಿರುವುದನ್ನು ಗುರುತಿಸಿ ತನ್ನ ಸೇವಕರನ್ನು ಕರೆದು ಹೊಸದಾಗಿ ಅಡುಗೆ ತಯಾರಿಸಲು ಸೂಚಿಸಿದನು. ಹೊಸ ಅಡುಗೆ ತಯಾರಾದ ನಂತರ ಮತ್ತೆ ಉಪಹಾರ ಸೇವಿಸಲು ಕುಳಿತಾಗ ರಾಜನಿಗೆ ಆಹಾರ ಸೇವಿಸುವ ಮನಸ್ಸಾಗಲಿಲ್ಲ ಹಾಗೂ ಆಹಾರ ಸೇವಿಸದೇ ಹಾಗೆ ಎದ್ದು ಹೋದನು.

ತಾನು ಉಪಹಾರ ಸೇವಿಸಲು ಸಾಧ್ಯವಾಗದೆ ಇದ್ದುದ್ದರಿಂದ ಜನ ನಂಬಿರುವ ಈ ವದಂತಿಯು ನಿಜವೆಂದು ಭಾವಿಸಿದನು. ಈ ವ್ಯಕ್ತಿಯ ಮುಖ ನೋಡಿದರೆ ನಿಜವೂ ಊಟ ಸೇರುವುದಿಲ್ಲವೆಂದೇ ನಿರ್ಧರಿಸಿ ಆತನಿಗೆ ಗಲ್ಲು ಶಿಕ್ಷೆ ವಿಧಿಸಿದನು.

ಈ ವಿಷಯ ತಿಳಿದ ನಂತರ ಆ ವ್ಯಕ್ತಿಯ ಕುಟುಂಬ ಆಘಾತಕ್ಕೊಳಗಾಯಿತು. ಹೇಗಾದರೂ ಮಾಡಿ ಆ ವ್ಯಕ್ತಿಯನ್ನು ರಾಜ ವಿಧಿಸಿರುವ ಶಿಕ್ಷೆಯಿಂದ ಪಾರು ಮಾಡಬೇಕೆಂದು ಆ ಕುಟುಂಬ ತೆನಾಲಿ ರಾಮನನ್ನು ಭೇಟಿ ಮಾಡಿ ನಡೆದ ವಿಷಯವನ್ನೆಲ್ಲ ತೆನಾಲಿಗೆ ತಿಳಿಸಿದರು.

ತೆನಾಲಿ ಆ ವ್ಯಕ್ತಿಯ ಬಳಿ ತೆರಳಿ ಆತನ ಕಿವಿಯಲ್ಲಿ ತನ್ನ ಯೋಜನೆಯ ಬಗ್ಗೆ ತಿಳಿಸಿದನು.

ಮಾರನೇ ದಿನ ಕಾವಲುಗಾರರು ಆ ವ್ಯಕ್ತಿಯನ್ನು ಗಲ್ಲಿಗೇರಿಸುವ ಮುಂಚೆ  ಏನಾದರೂ ಕೊನೆಯ ಆಸೆ ಇದೆಯೇ ಎಂದು ಕೇಳಿದರು. ಆ ವ್ಯಕ್ತಿ ತನ್ನ ಬಳಿ ಇರುವ ಈ ಪತ್ರವನ್ನು ರಾಜನಿಗೆ ನೀಡಬೇಕೆಂದು ತಿಳಿಸಿದನು. ಸೇವಕರು ಆ ಪತ್ರವನ್ನು ತೆಗೆದುಕೊಂಡು ರಾಜನಿಗೆ ನೀಡಿದರು.

ಆ ಪತ್ರದಲ್ಲಿ “ಬೆಳಿಗ್ಗೆ ಎದ್ದು ನನ್ನ ಮುಖ ನೋಡಿದರೆ ಹಸಿವು ಕಡಿಮೆಯಾಗುತ್ತದೆ ಆದರೆ ರಾಜನ ಮುಖವನ್ನು ನೋಡಿದರೆ ವ್ಯಕ್ತಿಯು ತನ್ನ ಪ್ರಾಣವನ್ನೇ ಕಳೆದುಕೊಳ್ಳುತ್ತಾನೆ. ಹಾಗಾದರೆ ಯಾರು ಹೆಚ್ಚು ಶಾಪಗ್ರಸ್ತರು, ನಾನೇ ಅಥವಾ ಮಹಾರಾಜರೇ?” ಹೀಗೆಂದು ಬರೆಯಲಾಗಿತ್ತು.

ಇದನ್ನು ಓದಿದ ರಾಜನಿಗೆ ತನ್ನ ತಪ್ಪಿನ ಅರಿವಾಗಿ ಆ ವ್ಯಕ್ತಿಯನ್ನು ಬಿಡುಗಡೆಗೊಳಿಸಿದನು. ತನ್ನ ಬುದ್ಧಿವಂತಿಕೆಯಿಂದ ಆ ವ್ಯಕ್ತಿಯ ಪ್ರಾಣ ಕಾಪಾಡಿದ್ದಕ್ಕಾಗಿ ಆತನ ಕುಟುಂಬ ತೆನಾಲಿ ರಾಮನಿಗೆ ಧನ್ಯವಾದ ಹೇಳಿದರು.


ಕಳ್ಳರು ಮತ್ತು ಬಾವಿ | The thieves and the well Tenali Rama stories in Kannada

ಒಂದು ದಿನ ರಾತ್ರಿ ಕಳ್ಳರು ಕಳ್ಳತನ ಮಾಡುವ ಉದ್ದೇಶದಿಂದ ತೆನಾಲಿ ರಾಮನ ಮನೆಗೆ ಹೋಗಿ ಗಿಡಗಳ ಹಿಂದೆ ಅವಿತುಕೊಂಡರು. ತೆನಾಲಿ ರಾಮ ಭೋಜನದ ನಂತರ ಕೈ ತೊಳೆದುಕೊಳ್ಳಲು ಬಾವಿಯ ಬಳಿ ಬಂದಾಗ ಗಿಡಗಳ ಹಿಂದೆ ಕಳ್ಳರಿರುವುದು ಅವನಿಗೆ ತಿಳಿಯಿತು. ಕಳ್ಳರಿಗೆ ಬುದ್ಧಿ ಕಲಿಸಬೇಕೆಂದು ಯೋಜನೆ ರೂಪಿಸಿದನು.

ಅವನು ಒಳಗೆ ಬಂದು ತನ್ನ ಹೆಂಡತಿಗೆ ನಮ್ಮ ಊರಿನಲ್ಲಿ ಕಳ್ಳತನ ಹೆಚ್ಚಾಗಿದೆ. ಪ್ರತಿದಿನ ಒಂದಿಲ್ಲೊಂದು ಮನೆಯಲ್ಲಿ ಕಳ್ಳತನವಾಗುತ್ತಿದೆ ಆದ್ದರಿಂದ ನಾವು ಮನೆಯಲ್ಲಿರುವ  ಬೆಲೆಬಾಳುವ ವಸ್ತುಗಳ ಬಗ್ಗೆ ಜಾಗರೂಕರಾಗಿರಬೇಕೆಂದು ಜೋರಾಗಿ ಕಳ್ಳರಿಗೆ ಕೇಳುವಂತೆ ಹೇಳಿದನು. ನಾವು ಮನೆಯಲ್ಲಿ ಎಲ್ಲ ಬೆಲೆಬಾಳುವ ವಸ್ತುಗಳನ್ನು ಇಟ್ಟುಕೊಂಡರೆ ಕಳ್ಳರಿಗೆ ಸುಲಭವಾಗಿ ದೊರೆಯಬಹುದು, ಆದ್ದರಿಂದ ಎಲ್ಲ ಬೆಲೆಬಾಳುವ ವಸ್ತುಗಳನ್ನು ಪೆಟ್ಟಿಗೆಯಲ್ಲಿ ಇಟ್ಟು ಪೆಟ್ಟಿಗೆಯನ್ನು ಬಾವಿಯಲ್ಲಿ ಇಡೋಣ, ಬೇಕಾದಾಗ ಬಾವಿಯಿಂದ ಪೆಟ್ಟಿಗೆಯನ್ನು ತೆಗೆದುಕೊಂಡರಾಯಿತೆಂದು ಮಾತನಾಡಿಕೊಂಡರು ಮತ್ತು ಎಲ್ಲ ಬೆಲೆಬಾಳುವ ವಸ್ತುಗಳನ್ನು ಪೆಟ್ಟಿಗೆಯಲ್ಲಿ ಇಟ್ಟು ಬಾವಿಯಲ್ಲಿ ಬಿಟ್ಟರು.

ಇದನ್ನು ಕೇಳಿದ ನಂತರ, ತೆನಾಲಿ ರಾಮ ಬುದ್ದಿವಂತನೆಂದು ತಿಳಿದಿದ್ದೆವು ಆದರೆ ತಮ್ಮ ಕೆಲಸ ಸುಲಭ ಮಾಡಿಕೊಟ್ಟ ಮತ್ತು ಈಗ ಸುಲಭವಾಗಿ ಕಳ್ಳತನ ಮಾಡಬಹುದೆಂದು ಕಳ್ಳರು ಖುಷಿ ಪಟ್ಟರು.

ರಾತ್ರಿ ತೆನಾಲಿ ರಾಮ ಮತ್ತು ಅವನ ಹೆಂಡತಿ ನಿದ್ರೆ ಹೋದ ನಂತರ ಕಳ್ಳರು ಬಾವಿಗೆ ಹೋಗಿ ಪೆಟ್ಟಿಗೆಯನ್ನು ಕಳ್ಳತನ ಮಾಡುವ ಉದ್ದೇಶದಿಂದ ನೀರು ಸೇದಲಾರಂಭಿಸಿದರು. ಅವರು ಇಡೀ ರಾತ್ರಿ ಬಾವಿಯಿಂದ ನೀರನ್ನು ಸೇದಿ ಹೊರ ಚೆಲ್ಲಿದರು. ಇನ್ನೇನು ಬೆಳಗಾಗಬೇಕು ಅನ್ನುವಷ್ಟರಲ್ಲಿ ಅವರಿಗೆ ಪೆಟ್ಟಿಗೆ ದೊರೆಯಿತು. ಪೆಟ್ಟಿಗೆ ದೊರೆತ ನಂತರ ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ. ಸಣ್ಣ ಪುಟ್ಟ ಕಳ್ಳತನ ಮಾಡಿಕೊಂಡಿದ್ದ ನಾವು ಒಂದೇ ರಾತ್ರಿಯಲ್ಲಿ ಶ್ರೀಮಂತರಾದೆವೆಂದು ಸಂತೋಷಪಟ್ಟರು.

ಮೆಲ್ಲನೇ ಪೆಟ್ಟಿಗೆಯನ್ನು ಕೆಳಗಿಳಿಸಿ ಅದನ್ನು ತೆರೆದು ನೋಡಿ್ದರೆ ಅದರಲ್ಲಿ ಕಲ್ಲುಗಳನ್ನು ಬಿಟ್ಟು ಯಾವುದೇ ಬೆಲೆಬಾಳುವ ವಸ್ತುಗಳು ಇರಲಿಲ್ಲ. ಅವರಿಗೆ ತೆನಾಲಿ ರಾಮ ತಮ್ಮನು ಮೂರ್ಖನನ್ನಾಗಿಸಿದ್ದು ತಿಳಿದು ಅಲ್ಲಿಂದ ಬೇಸರದಿಂದ ಹೊರಟು ಹೋದರು.

ಬೆಳಿಗ್ಗೆ ಎದ್ದು ತೆನಾಲಿ ರಾಮ ಬಹುದಿನಗಳಿಂದ ತೋಟದ ಗಿಡಗಳಿಗೆ ನೀರುಣಿಸುವ ತನ್ನ ಯೋಜನೆ ಇಷ್ಟು ಸುಲಭವಾಗಿ ನೆರವೇರಿದ್ದಕ್ಕೆ ಖುಷಿ ಪಟ್ಟನು.


ಚಿನ್ನದ ಮಾವಿನ ಹಣ್ಣುಗಳು | The Golden Mangoes Tenali Rama stories in Kannada

ರಾಜ ಕೃಷ್ಣದೇವರಾಯ ಒಂದು ದಿನ ತುಂಬಾ ದುಃಖಿತನಾಗಿ ಕುಳಿತಿದ್ದರು. ಇದನ್ನು ಗಮನಿಸಿದ ಪಂಡಿತರೊಬ್ಬರು ಕಾರಣವನ್ನು ಕೇಳಿದರು. ಅದಕ್ಕೆ ರಾಜ, ಅವರ ತಾಯಿ ವರ್ಷಗಳ ಹಿಂದೆ ಇದೇ ದಿನ ನಿಧನರಾದರು ಮತ್ತು ಅವರ ಕೊನೆಯ ಆಸೆಯನ್ನು ಪೂರೈಸಲು ಸಾಧ್ಯವಾಗಲಿಲ್ಲ ಎಂದು ಪಂಡಿತರಿಗೆ ರಾಜ ತಿಳಿಸಿದ.

ಇದನ್ನು ಕೇಳಿದ ಪಂಡಿತನು “ಅವಳ ಕೊನೆಯ ಆಸೆ ಏನಾಗಿತ್ತು?” ಎಂದು  ಕೃಷ್ಣದೇವರಾಯರನ್ನು ಕೇಳಿದನು. ನನ್ನ ತಾಯಿ ಮಾವಿನ ಹಣ್ಣುಗಳನ್ನು ತಿನ್ನಲು ಬಯಸಿದ್ದಳು ಆದರೆ ಆ ಕಾಲದಲ್ಲಿ ಮಾವಿನ ಹಣ್ಣುಗಳನ್ನು ದೊರೆಯದೆ ಇದ್ದ ಕಾರಣ ನಾನು ಅವಳಿಗೆ ಹಣ್ಣು ಕೊಡಲು ಸಾಧ್ಯವಾಗಲಿಲ್ಲ” ಎಂದು ಅವರು ಉತ್ತರಿಸಿದರು.

ದುರಾಸೆಯ ಪಂಡಿತ ಹೇಗಾದರೂ ರಾಜನಿಗೆ ಮೋಸ ಮಾಡಿ ಇದರಿಂದ ಲಾಭ ಮಾಡಿಕೊಳ್ಳಬೇಕೆಂದು ಆಲೋಚಿಸಿ ಉಪಾಯವೊಂದನ್ನು ಮಾಡಿದನು. ಅವನು ಕೃಷ್ಣದೇವರಾಯನಿಗೆ, “ರಾಜರೇ, ನಿಮ್ಮ ತಾಯಿಯ ಕೊನೆಯ ಆಸೆಯು ಈಡೇರದ ಕಾರಣ, ಅವಳ ಆತ್ಮಕ್ಕೆ ಇನ್ನೂ ಮುಕ್ತಿ ದೊರೆತಿಲ್ಲ. ಅವರ ಆತ್ಮಕ್ಕೆ ಮುಕ್ತಿ ದೊರೆಯಬೇಕೆಂದರೆ ನೀವು ಪಂಡಿತರಿಗೆ ಚಿನ್ನದ ಮಾವಿನ ಹಣ್ಣುಗಳನ್ನು ಕೊಡಬೇಕಾಗುತ್ತದೆ” ಎಂದು ಹೇಳಿದರು.

ರಾಜನು ಅದಕ್ಕೆ ಒಪ್ಪಿದನು ಮತ್ತು ಮರುದಿನ ಅವನು ಎಲ್ಲಾ ಪಂಡಿತರನ್ನೂ ತನ್ನ ಆಸ್ಥಾನಕ್ಕೆ ಕರೆದು ಅವರಿಗೆ ಚಿನ್ನದ ಮಾವಿನಹಣ್ಣುಗಳನ್ನು ನೀಡಿ ಗೌರವಿಸಿದನು. ಪಂಡಿತರು ಅವನನ್ನು ಮತ್ತು ಅವಳ ತಾಯಿಯನ್ನು ಆಶೀರ್ವದಿಸಿ, ಈಗ ನಿಮ್ಮ ತಾಯಿಯ ಆತ್ಮ ಮುಕ್ತವಾಗಿದೆ ಎಂದು ಹೇಳಿದರು. ಅಲ್ಲೇ ದೂರದಲ್ಲಿ ಇದ್ದ ತೆನಾಲಿ ರಾಮ ಈ ಎಲ್ಲಾ ಸಂಚನ್ನು ವೀಕ್ಷಿಸುತ್ತಿದ್ದನು ಮತ್ತು ರಾಜನನ್ನು ವಂಚಿಸಿದ ಆ ಪಂಡಿತರಿಗೆ ಪಾಠ ಕಲಿಸುವ ಉದ್ದೇಶದಿಂದ ಒಂದು ಉಪಾಯವನ್ನು ಮಾಡಿದನು.

ತೆನಾಲಿ, ರಾಜನ ಬಳಿ ತೆರಳಿ ತನ್ನ ತಾಯಿಯ ಕೊನೆಯ ಆಸೆಯೂ ಈಡೇರದ ಕಾರಣ ರಾಜನು ಈ ಪಂಡಿತರಿಗೆ ತನ್ನ ಮನೆಗೆ ಕಳಿಸುವಂತೆ ಮನವಿ ಮಾಡಿದನು. ರಾಜನು ಅದಕ್ಕೆ ಒಪ್ಪಿಗೆ ನೀಡಿದನು. ತೆನಾಲಿಯು  ಕೂಡ ಅಮೂಲ್ಯವಾದ ವಸ್ತುಗಳನ್ನು ಕೊಡುತ್ತಾನೆ ಎಂದು ಭಾವಿಸಿ ಪಂಡಿತರು ಕೂಡ ಅದಕ್ಕೆ ಒಪ್ಪಿದರು. ತಾಯಿಯ ಕೊನೆಯ ಆಸೆ ಏನು ಎಂದು ಅವರು ತೆನಾಲಿಯನ್ನು ಕೇಳಿದರು. ತೆನಾಲಿ ರಾಮ ಅವರು ಮೀನುಗಳನ್ನು ತಿನ್ನುವ ಆಸೆ  ಬಯಸಿದ್ದರು ಎಂದು ಹೇಳಿದನು.

ಪಂಡಿತರು ಗಾಬರಿಗೊಂಡು ತೆನಾಲಿಗೆ ತಾವು ಮೀನು ತಿನ್ನಲು ಸಾಧ್ಯವಿಲ್ಲ ಎಂದು ಹೇಳಿದರು. ಆಗ ತೆನಾಲಿ, “ರಾಜನ ತಾಯಿ  ಮಾವಿನಹಣ್ಣುಗಳನ್ನು ತಿನ್ನುವ ಆಸೆಯಂತೆ ಹೊಂದಬಹುದಾದರೆ, ನನ್ನ ತಾಯಿ ಮೀನನ್ನು ತಿನ್ನುವ ಆಸೆ ಹೊಂದಲು ಏಕೆ ಸಾಧ್ಯವಿಲ್ಲ?” ಎಂದು ಪ್ರಶ್ನಿಸಿದನು.

ಪಂಡಿತರಿಗೆ ತಮ್ಮ ತಪ್ಪಿನ ಅರಿವಾಗಿ ತಮ್ಮನ್ನು ಕ್ಷಮಿಸುವಂತೆ ಕೋರಿದರು ಮತ್ತು ರಾಜನು ನೀಡಿದ ಚಿನ್ನದ ಮಾವಿನ ಹಣ್ಣುಗಳನ್ನು ಹಿಂದಿರುಗಿಸಿದರು.

ಮತ್ತೊಮ್ಮೆ ತೆನಾಲಿ ತನ್ನ ಬುದ್ಧಿವಂತಿಕೆಯಿಂದ ರಾಜನ ಖಜಾನೆ ಲೂಟಿಯಾಗುವುದನ್ನು ತಪ್ಪಿಸಿದನು.

These Tenali Rama stories in Kannada not only entertain the kids but will also give the introduction about the problem solving skills of Tenali Rama.

हिंदी कहानी

panchatantra stories in Hindi