Parisara Malinya Prabandha in Kannada
Here you will find essay on environment pollution or parisara malinya prabandha in kannada. In this prabandha or essay you will learn about what is environment, types of pollution, effects of pollution on various things along with the measures that needs to be taken to reduce the pollution.
Parisara Malinya Prabandha in Kannada | ಪರಿಸರ ಮಾಲಿನ್ಯ ಪ್ರಬಂಧ
ಪರಿಸರವು ಎಂದರೆ ನಾವು ಜೀವಿಸುವ ಸುತ್ತಮುತ್ತಲಿನ ಪ್ರದೇಶವಾಗಿದೆ. ನಾವು ವಾಸಿಸುವ ಈ ಪರಿಸರವು ಗಾಳಿ, ನೀರು, ಭೂಮಿ ಮುಂತಾದವುಗಳಿಂದ ನಿರ್ಮಿಸಲ್ಪಿಟ್ಟಿದೆ. ಇವುಗಳನ್ನು ಘಟಕಗಳೆಂದೂ ಕರೆಯಲಾಗುತ್ತದೆ. ನಾವು ವಾಸಿಸಲು ಅನುಕೂಲವಾಗುವಂತೆ ಸಮತೋಲನವನ್ನು ಕಾಪಾಡುವ ಉದ್ದೇಶದಿಂದ ಈ ಘಟಕಗಳು ಪರಿಸರದಲ್ಲಿ ಸ್ಥಿರ ಪ್ರಮಾಣದಲ್ಲಿ ಕಂಡುಬರುತ್ತವೆ. ಈ ಘಟಕಗಳ ಅನುಪಾತದಲ್ಲಿನ ಯಾವುದೇ ರೀತಿಯ ಬದಲಾವಣೆಯನ್ನು ಮಾಲಿನ್ಯ ಎಂದು ಕರೆಯಬಹುದು. ನಾವು ಅನೇಕ ವರ್ಷಗಳಿಂದ ಮಾಲಿನ್ಯದ ಪ್ರಮಾಣ ಹೆಚ್ಚುತ್ತಿರುವುದನ್ನು ಕಾಣಬಹುದು. ಹೆಚ್ಚುತ್ತಿರುವ ಮಾಲಿನ್ಯದ ಪ್ರಮಾಣ ದೇಶದ ಆರ್ಥಿಕತೆಯ ಮೇಲೆ ಗಮಭೀರ ಪರಿಣಾಮ ಬೀರುವುದರ ಜೊತೆ ಪರಿಸರದಲ್ಲಿ ಜೀವಿಸುವ ಜೀವಿಗಳ ಮೇಲೂ ಪರಿಣಾಮ ಬೀರುತ್ತದೆ. ಆದ್ದರಿಂದ ಪರಿಸರ ಮಾಲಿನ್ಯವನ್ನು ಮತ್ತು ಅದರ ಹಾನಿಕಾರಕ ಪರಿಣಾಮಗಳನ್ನು ನಿಗ್ರಹಿಸಬೇಕಾದ ಅವಶ್ಯಕತೆ ಇದೆ.
ಪರಿಸರ ಮಾಲಿನ್ಯದ ವಿಧಗಳು | Types of Environment Pollution (Parisara Malinya)
ಕೈಗಾರಿಕೆಗಳ ಬೆಳವಣಿಗೆ, ಜೀವನ ನಿರ್ವಹಣೆಗಾಗಿ ಜನರು ಹಳ್ಳಿಗಳಿಂದ ನಗರಗಳತ್ತ ವಲಸೆ ಹೋಗುವುದರೊಂದಿಗೆ, ವಸತಿ ಕೊರತೆ, ಅನೈರ್ಮಲ್ಯ, ವಾಹನಗಳ ಅತಿಯಾದ ಬಳಕೆ ಹೀಗೆ ಮುಂತಾದ ಕಾರಣಗಳಿಂದ ಪರಿಸರ ಮಾಲಿನ್ಯ ಹೆಚ್ಚಾಗುತ್ತಿದೆ.
ಪರಿಸರ ಮಾಲಿನ್ಯ ನಾಲ್ಕು ವಿಧಗಳಾಗಿ ವಿಂಗಡಿಸಬಹುದು ಅವುಗಳೆಂದರೆ, ವಾಯು ಮಾಲಿನ್ಯ, ಜಲ ಮಾಲಿನ್ಯ, ಮಣ್ಣು ಮತ್ತು ಶಬ್ದ ಮಾಲಿನ್ಯ.
ವಾಯು ಮಾಲಿನ್ಯ | Air Pollution
ಇಂದಿನ ಜಗತ್ತಿನಲ್ಲಿ ವಾಯು ಮಾಲಿನ್ಯವು ಒಂದು ಪ್ರಮುಖ ಸಮಸ್ಯೆಯಾಗಿದೆ. ಕಾರ್ಖಾನೆಯ ಚಿಮಣಿಗಳಿಂದ ಬರುವ ಹೊಗೆ ಮತ್ತು ವಾಹನಗಳಿಂದ ಬರುವ ಹೊಗೆ ನಾವು ಉಸಿರಾಡಲು ಬೇಕಾಗಿರುವ ಗಾಳಿಯನ್ನು ಕಲುಷಿತಗೊಳಿಸುತ್ತದೆ. ಈ ಹೊಗೆಯಲ್ಲಿ ಕಾರ್ಬನ್ ಡೈ ಆಕ್ಸೈಡ್, ಕಾರ್ಬನ್ ಮಾನಾಕ್ಸೈಡ್ ಮತ್ತು ಸಲ್ಫರ್ ಡೈ ಆಕ್ಸೈಡ್ ಗಳಂತಹ ವಿಷಕಾರಿ ಅಂಶಗಳು ಗಾಳಿಯೊಂದಿಗೆ ಬೆರೆತು ಮಾನವನ ದೇಹ, ಸಸ್ಯ ಮತ್ತು ಇತರ ಎಲ್ಲ ಪ್ರಾಣಿಗಳ ದೇಹ ಸೇರಿ ಹಾನಿಯನ್ನುಂಟುಮಾಡುತ್ತದೆ. ಗಾಳಿಯಲ್ಲಿ ಸಲ್ಫರ್ ಡೈಆಕ್ಸೈಡ್ ಅಧಿಕವಾದರೆ ಆಮ್ಲ ಮಳೆ ಸಂಭವಿಸುತ್ತದೆ. ಹಳ್ಳಿಗಳಲ್ಲಿ ದೇಶೀಯ ಇಂಧನವಾಗಿ ಬಳಸಲಾಗುವ ಒಣ ಬೇಸಾಯದ ತ್ಯಾಜ್ಯ, ಒಣ ಹುಲ್ಲು, ಎಲೆಗಳು ಮತ್ತು ಕಲ್ಲಿದ್ದಲು ವಿಷಪೂರಿತ ಅನಿಲಗಳನ್ನು ಉತ್ಪಾದಿಸುತ್ತದೆ.
ವಾಹನಗಳಿಂದ ಬರುವ ಹೊಗೆ, ಕೈಗಾರಿಕೆಗಳಿಂದ ಬರುವ ಹೊಗೆ, ಕಸವನ್ನು ಸುಡುವುದುದರಿಂದ ಬರುವ ಹೊಗೆ, ಒಳಾಂಗಣ ವಾಯು ಮಾಲಿನ್ಯ, ಕೊಳೆತ ಪ್ರಾಣಿಯ ಮತ್ತು ಸಸ್ಯಗಳಿಂದ ಬರುವ ವಾಸನೆ ಇವು ವಾಯು ಮಾಲಿನ್ಯದ ಪ್ರಮುಖ ಮೂಲಗಳಾಗಿವೆ.
ಜಲ ಮಾಲಿನ್ಯ | Water Pollution
ಇನ್ನೊಂದು ಪ್ರಮುಖ ಪರಿಸರ ಸಮಸ್ಯೆ ಎಂದರೆ ನೀರಿನ ಮಾಲಿನ್ಯವು. ಕೈಗಾರಿಕೆಗಳ ತ್ಯಾಜ್ಯ ಉತ್ಪನ್ನಗಳು ಮತ್ತು ಒಳಚರಂಡಿ ನೀರು ನದಿಯನ್ನು ಸೇರಿ ಜಲ ಮೂಲಗಳನ್ನು ಹಾನಿ ಮಾಡುವುದನ್ನು ಜಲ ಮಾಲಿನ್ಯ ಎಂದು ಕರೆಯಲಾಗುತ್ತದೆ. ಕೃಷಿ ಚಟುವಟಿಕೆ ನಡೆಸುವಾಗ ಅತಿಯಾದ ರಸಗೊಬ್ಬರಗಳ ಬಳಕೆ ಮತ್ತು ಕೀಟನಾಶಕಗಳ ಬಳಕೆ ಸಹ ಜಲಮೂಲಗಳನ್ನು ಕಲುಷಿತಗೊಳಿಸುತ್ತವೆ.
ಜಲ ಮಾಲಿನ್ಯದ ಪ್ರಮುಖ ಮೂಲಗಳು:
- ಕೈಗಾರಿಕಾ ತ್ಯಾಜ್ಯಗಳು ನದಿಗಳ ಮೂಲಕ ಸಮುದ್ರಗಳು ಮತ್ತು ಸಾಗರಗಳನ್ನು ಸೇರುವುದು.
- ಅಪಾಯಕಾರಿ ವಿಕಿರಣಶೀಲ ವಸ್ತುಗಳನ್ನು ಸಮುದ್ರದ ನೀರಿನಲ್ಲಿ ವಿಲೇವಾರಿ ಮಾಡುವುದು.
- ನದಿಗಳ ಮೂಲಕ ಕೊಳಚೆ ನೀರನ್ನು ಸಮುದ್ರಕ್ಕೆ ವಿಲೇವಾರಿ ಮಾಡುವುದು.
- ನೀರಿನ ಮೂಲಗಳ ಬಳಿ ಸ್ನಾನ, ದನ ಕರುಗಳ ಮೈ ತೊಳೆಯುವಿಕೆ ಇತ್ಯಾದಿ.
- ನೀರಿನಲ್ಲಿ ಈಜಾಡುವುದು, ಬೋಟಿಂಗ್, ಕಸವನ್ನು ಎಸೆಯುವುದು ಮತ್ತು ಇತರೆ ಮನರಂಜನಾ ಚಟುವಟಿಕೆಗಳು.
- ಕೃಷಿ ಚಟುವಟಿಕೆಯಲ್ಲಿ ಬಳಸುವ ರಾಸಾಯನಿಕಗಳು ನೀರಿನ ಮೂಲಗಳನ್ನು ಪ್ರವೇಶಿಸುವುದರ ಮೂಲಕ.
ಮಣ್ಣಿನ ಮಾಲಿನ್ಯ | Soil Pollution
ಮಣ್ಣಿನ ಮಾಲಿನ್ಯವು ಘನ ತ್ಯಾಜ್ಯ, ಜೈವಿಕ ವಿಘಟನೀಯ ವಸ್ತುಗಳು, ವಿಷಕಾರಿ ರಾಸಾಯನಿಕಗಳು ಮಣ್ಣಿನೊಳಗೆ ಸೇರುವುದರಿಂದ ಉಂಟಾಗುವ ಮಾಲಿನ್ಯ. ಪ್ಲಾಸ್ಟಿಕ್, ಪಾಲಿಥಿನ್ ಮತ್ತು ಬಾಟಲಿಗಳಂತಹ ತ್ಯಾಜ್ಯ ವಸ್ತುಗಳು ಕೂಡ ಮಣ್ಣಿನ ಮಾಲಿನ್ಯವನ್ನು ಉಂಟು ಮಾಡುತ್ತವೆ ಮತ್ತು ಮಣ್ಣಿನ ಫಲವತ್ತತೆ ನಾಶ ಪಡಿಸುತ್ತವೆ. ಮಣ್ಣಿನ ಮಾಲಿನ್ಯವು ಮನುಷ್ಯ ಮತ್ತು ಪ್ರಾಣಿಗಳಲ್ಲಿ ಕಾಲರಾ, ಭೇದಿ, ಟೈಫಾಯಿಡ್ ಮುಂತಾದ ಹಲವಾರು ರೋಗಗಳನ್ನು ಉಂಟುಮಾಡುತ್ತದೆ.
ಮಣ್ಣಿನ ಮಾಲಿನ್ಯದ ಪ್ರಮುಖ ಕಾರಣಗಳು ಈ ಕೆಳಗಿನಂತಿವೆ:
- ಕೈಗಾರಿಕಾ ತ್ಯಾಜ್ಯ
- ರಾಸಾಯನಿಕ ಗೊಬ್ಬರಗಳು
- ನಗರ ವಾಣಿಜ್ಯ ಮತ್ತು ಮನೆಯ ತ್ಯಾಜ್ಯ
- ಮೆಡಿಕಲ್ ಸಂಬಂಧಪಟ್ಟ ತ್ಯಾಜ್ಯ
- ಇಲೆಕ್ಟ್ರಾನಿಕ್ ವಸ್ತುಗಳ ತ್ಯಾಜ್ಯ
- ಕೀಟನಾಶಕಗಳು
ಶಬ್ದ ಮಾಲಿನ್ಯ | Noise Pollution
ಶಬ್ದವು ನಿಗದಿತ ಮಟ್ಟಕ್ಕಿಂತ ಹೆಚ್ಚಾದರೆ ಉಂಟಾಗುವ ಮಾಲಿನ್ಯವನ್ನು ಶಬ್ದ ಮಾಲಿನ್ಯ ಎನ್ನುತ್ತಾರೆ. ಧ್ವನಿವರ್ಧಕಗಳು, ವಾಹನಗಳ ಹಾರ್ನ್ ಶಬ್ದ, ಸಂಗೀತ ಉಪಕರಣಗಳಿಂದ ಬರುವ ಶಬ್ದ ಮತ್ತು ಕೈಗಾರಿಕಾ ಚಟುವಟಿಕೆಗಳು ಶಬ್ದ ಮಾಲಿನ್ಯಕ್ಕೆ ಉಂಟು ಮಾಡುತ್ತವೆ.
ಶಬ್ದ ಮಾಲಿನ್ಯದ ಪ್ರಮುಖ ಮೂಲಗಳು:
- ಕಾರ್ಖಾನೆಗಳು ಮತ್ತು ಕೈಗಾರಿಕೆಗಳಲ್ಲಿನ ಯಂತ್ರಗಳ ಶಬ್ದಗಳು
- ಕಟ್ಟಡಗಳನ್ನು ನಿರ್ಮಿಸುವಾಗ ಯಂತ್ರಗಳು ಉಂಟು ಮಾಡುವ ಶಬ್ದ
- ಧ್ವನಿವರ್ಧಕಗಳು ಮತ್ತು ವಾಹನಗಳ ಹಾರ್ನ್‌ಗಳು
- ಬಂಡೆಗಳು ಮತ್ತು ಭೂಮಿಯನ್ನು ಸ್ಫೋಟಿಸುವುದು, ಕೊರೆಯುವ ಕೊಳವೆ ಬಾವಿಗಳು ಉಂಟು ಮಾಡುವ ಶಬ್ಧ
ಯಾವುದೇ ತರಹದ ಮಾಲಿನ್ಯವಾಗಲಿ ಅದು ಪರಿಸರದಲ್ಲಿನ ಜೀವಿಗಳ ಮೇಲೆ ನೇರವಾದ ಪರಿಣಾಮ ಬೀರುತ್ತದೆ. ಕೆಳಗೆ ವಿವಿಧ ತರಹದ ಮಾಲಿನ್ಯಗಳು ಪರಿಸರದ ಮೇಲೆ ಉಂಟು ಮಾಡುವ ಪರಿಣಾಮಗಳ ಬಗ್ಗೆ ತಿಳಿಯೋಣ.
ಮಾಲಿನ್ಯದ ಪರಿಣಾಮಗಳು | Effects of Environment Pollution (Parisara Malinya)
ಮಾಲಿನ್ಯದಿಂದ ಪರಿಸರದ ಮೇಲೆ ಪರಿಣಾಮ | Effect of pollution on Environment
ಕಾರ್ಬನ್ ಮತ್ತು ಧೂಳಿನ ಕಣಗಳು ಗಾಳಿಯಲ್ಲಿ ಸೇರಿಕೊಳ್ಳುವುದರಿಂದ ಹೊಗೆ ರೀತಿಯ ವಾತಾವರಣ ಸೃಷ್ಟಿ ಆಗುತ್ತದೆ. ಇದು ಉಸಿರಾಟದಂತಹ ಗಂಭೀರ ಸಮಸ್ಯೆಗಳನ್ನು ಉಂಟು ಮಾಡುವುದರ ಜೊತೆ ಶ್ವಾಸಕೋಶದ ಗಂಭೀರ ಕಾಯಿಲೆಯನ್ನು ಸಹ ಉಂಟು ಮಾಡುತ್ತದೆ. ಇದು ಪ್ರಾಣಿಗಳ ದೇಹದ ವ್ಯವಸ್ಥೆ ಮತ್ತು ಅಂಗಗಳ ಮೇಲೂ ಪರಿಣಾಮ ಬೀರುತ್ತದೆ. ಕಾರ್ಬನ್ ಮತ್ತು ಧೂಳಿನ ಕಣಗಳು ಹೆಚ್ಚಾದಂತೆ ಮಬ್ಬಿನ ಮತ್ತು ಹೊಗೆಯಂಥ ವಾತಾವರದಲ್ಲಿ ಸೃಷ್ಟಿಯಾಗಿ ಮನೆಯಿಂದ ಹೊರಬರಲಾರದ ಸನ್ನಿವೇಶ ಸೃಷ್ಟಿಯಾಗುತ್ತದೆ.
ಮಾಲಿನ್ಯದಿಂದ ನೀರಿನ ಮೇಲಾಗುವ ಪರಿಣಾಮ | Effect of pollution on Water
ಮಾನವ ತ್ಯಾಜ್ಯ ಅಥವಾ ಕಾರ್ಖಾನೆಯ ರಾಸಾಯನಿಕ ತ್ಯಾಜ್ಯ ನೀರನ್ನು ಸೇರುವುದರಿಂದ ನೀರು ಸುಲಭವಾಗಿ ಕಲುಷಿತಗೊಳ್ಳುತ್ತದೆ. ಇಂತಹ ನೀರನ್ನು ಕುಡಿಯಲು ಮತ್ತು ಕೃಷಿ ಚಟುವಟಿಕೆಗಳಿಗೆ ಬಳಸುವುದರಿಂದ ಈ ರಾಸಾಯನಿಕಗಳು ಮಾನವನ ದೇಹ ಸೇರುವ ಅವಕಾಶವಿರುತ್ತದೆ. ಈ ಕಲುಷಿತ ನೀರು ನೀರಿನ ಸಂಬಂಧಿ ಕಾಯಿಲೆಗಳನ್ನು ಉಂಟು ಮಾಡುತ್ತದೆ. ಕಲುಷಿತ ಅಥವಾ ವಿಷಪೂರಿತ ಅಪಾಯಕಾರಿ ರಾಸಾಯನಿಕ ಇರುವ ನೀರು ಸೇವಿಸುವುದರಿಂದ ಸಾವು ಕೂಡ ಸಂಭವಿಸಬಹುದು.
ಇದಲ್ಲದೆ, ಈ ನೀರಿನ ಜಮೂಲಗಳು ಅಂತಿಮವಾಗಿ ಸಮುದ್ರಕ್ಕೆ ಸೇರಿ ಸಮುದ್ರದಲ್ಲಿನ ಜೀವಿಗಳ ನಾಶಕ್ಕೂ ಕಾರಣವಾಗುತ್ತವೆ.
ಆಹಾರದ ಮೇಲೆ ಮಾಲಿನ್ಯದ ಪರಿಣಾಮ | Effect of pollution on Food
ಕಲುಷಿತ ಮಣ್ಣು ಮತ್ತು ಕಲುಷಿತ ನೀರಿನಿಂದ ಬೆಳೆಗಳು ಮತ್ತು ಕೃಷಿ ಉತ್ಪನ್ನಗಳು ವಿಷಕಾರಿಯಾಗುತ್ತವೆ. ನಂತರ ಬಳಸುವ ಕೀಟ ನಾಶಕಗಳು ಮತ್ತು ರಾಸಾಯನಿಕ ಗೊಬ್ಬರದಿಂದ ಬೆಳೆಗಳು ಮತ್ತು ಕೃಷಿ ಉತ್ಪನ್ನಗಳು ಇನ್ನೂ ವಿಷಕಾರಿಯಾಗಿ ಕಲುಷಿತ ಆಹಾರವು ನಮ್ಮ ಆರೋಗ್ಯ ಮತ್ತು ಅಂಗಗಳ ಮೇಲೆ ಪರಿಣಾಮ ಬೀರುತ್ತದೆ.
ಹವಾಮಾನದ ಮೇಲೆ ಮಾಲಿನ್ಯದ ಪರಿಣಾಮ | Effect of pollution on Climate
ಹವಾಮಾನ ಬದಲಾವಣೆಯು ಪರಿಸರ ಮಾಲಿನ್ಯದ ಮತ್ತೊಂದು ಗಂಭೀರ ಪರಿಣಾಮ. ಓಝೋನ್ ಪದರ ಸವೆಯುವುದು ಮತ್ತು ಓಝೋನ್ ಪದರದಲ್ಲಿ ರಂಧ್ರಗಳಾಗುವಿಕೆ, ಹಸಿರುಮನೆ ಅನಿಲ ಹೊರಸೂಸುವಿಕೆ, ಮತ್ತು ಜಾಗತಿಕ ತಾಪಮಾನ ಏರಿಕೆ ಇವೆಲ್ಲವೂ ಪರಿಸರ ಮಾಲಿನ್ಯದ ಪರಿಣಾಮಗಳಾಗಿವೆ. ಅನಿರೀಕ್ಷಿತವಾದ ಶೀತ ಮತ್ತು ಬಿಸಿ ವಾತಾವರಣವು ಭೂಮಿಯ ನೈಸರ್ಗಿಕ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಈ ಬದಲಾವಣೆಗಳು ಪರಿಸರ ವ್ಯವಸ್ಥೆಯ ಭೌತಿಕ ಮತ್ತು ಜೈವಿಕ ಅಂಶಗಳ ಮೇಲೂ ಪ್ರಭಾವ ಬೀರುತ್ತದೆ.
ಇಷ್ಟೇ ಅಲ್ಲದೆ ಪರಿಸರ ಮಾಲಿನ್ಯವು ಭೂಕಂಪ, ಮಳೆ, ಹಿಮ, ಜ್ವಾಲಾಮುಖಿ ಸ್ಫೋಟಗಳು ಮತ್ತು ಹಿಮಪಾತಗಳು ಸೇರಿದಂತೆ ಇನ್ನೂ ಅನೇಕ ರೀತಿಯ ಹವಾಮಾನ ಸಂಬಂಧಿ ತೊಂದರೆಗಳನ್ನು ಉಂಟು ಮಾಡುತ್ತದೆ.
ಪರಿಸರ ಮಾಲಿನ್ಯವನ್ನು ಕಡಿಮೆ ಮಾಡಲು ಬೇಕಾಗಿರುವ ಕ್ರಮಗಳು? | Measures needed to reduce Environment Pollution (Parisara Malinya)
ಹೆಚ್ಚುತ್ತಿರುವ ಪರಿಸರ ಮಾಲಿನ್ಯದ ಸಮಸ್ಯೆಯನ್ನು ಕಡಿಮೆ ಮಾಡಲು, ಕೆಲವು ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಅನಿವಾರ್ಯತೆ ಎದುರಾಗಿದೆ.
- ಉತ್ಪನ್ನಗಳನ್ನು ಬಳಸಿದ ನಂತರ ಬಿಸಾಡುವ ಬದಲು ಮರುಬಳಕೆ ಮಾಡುವುದರಿಂದ ತ್ಯಾಜ್ಯ ಉತ್ಪನ್ನಗಳ ಉತ್ಪಾದನೆಯನ್ನು ಕಡಿಮೆ ಮಾಡಬಹುದು.
- ಬಳಕೆಯ ನಂತರ ವಸ್ತುಗಳನ್ನು ಎಸೆಯುವ ಬದಲು, ಅವುಗಳನ್ನು ಮತ್ತೆ ಬಳಸಲು ವಿಧಾನಗಳನ್ನು ಅನುಸರಿಸಿ.
- ಮುಖ್ಯವಾಗಿ ಕಾಗದ, ಪ್ಲಾಸ್ಟಿಕ್, ಗಾಜು ಮತ್ತು ಎಲೆಕ್ಟ್ರಾನಿಕ್ ತ್ಯಾಜ್ಯಗಳನ್ನು ಬಿಸಾಡದೆ ಮರುಬಳಕೆ ಮಾಡಿ ಬಳಸಬೇಕು.
- ಪರಿಸರ ಸ್ನೇಹಿ ವಾಹನ ಬಳಸಲು ಉತ್ತೇಜಿಸುವ ಮೂಲಕ ಮತ್ತು ಜನರು ಸಾರ್ವಜನಿಕ ಸಾರಿಗೆ ಬಳಸುವಂತೆ ಉತ್ತೇಜಿಸುವ ಮೂಲಕವೂ ವಾಹನಗಳಿಂದ ಉಂಟಾಗುವ ವಾಯು ಮಾಲಿನ್ಯವನ್ನು ಕಡಿಮೆ ಮಾಡಬಹುದು.
- ವಾಯು ಮಾಲಿನ್ಯವನ್ನು ತಡೆಗಟ್ಟಲು ಮತ್ತು ನಿಯಂತ್ರಿಸಲು, ಹೊಸ ಉತ್ತಮ ವಿನ್ಯಾಸದ ಉಪಕರಣಗಳು ಮತ್ತು ಹೊಗೆರಹಿತ ಉಪಕರಣಗಳನ್ನು ಕೈಗಾರಿಕೆಗಳಲ್ಲಿ ಬಳಸಬೇಕು.
- ಪರಿಸರ ವ್ಯವಸ್ಥೆಯನ್ನು ಸಮತೋಲನಗೊಳಿಸಲು ಮತ್ತು ಹಸಿರುಮನೆ ಪರಿಣಾಮಗಳನ್ನು ನಿಯಂತ್ರಿಸಲು ಹೆಚ್ಚು ಹೆಚ್ಚು ಸಸಿಗಳನ್ನು ನೆಟ್ಟು ಪೋಷಿಸಬೇಕು.
- ವಾಹನಗಳ ಉತ್ತಮ ವಿನ್ಯಾಸ, ಸರಿಯಾದ ನಿರ್ವಹಣೆಯಿಂದ ಮತ್ತು ಅನಾವಶ್ಯಕವಾಗಿ ಹಾರ್ನ್ ಮಾಡದೆ ಇರುವುದರಿಂದ ಶಬ್ದ ಮಾಲಿನ್ಯವನ್ನು ಕಡಿಮೆ ಮಾಡಬಹುದು.
- ಕೈಗಾರಿಕೆಗಳಲ್ಲಿ ಧ್ವನಿ ನಿರೋಧಕ ಸಾಧನ ಬಳಸುವುದರಿಂದ ಕೈಗಾರಿಕಾ ಶಬ್ದವನ್ನು ಕಡಿಮೆ ಮಾಡಬಹುದು.
- ಮಣ್ಣಿನ ಮಾಲಿನ್ಯವನ್ನು ನಿಯಂತ್ರಿಸಲು ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸಬೇಕು.
- ಯಾವುದೇ ರಾಸಾಯನಿಕಗಳನ್ನು ಬಳಸದೆ ಮಾಡುವ ಸಾವಯವ ಕೃಷಿಯನ್ನು ಪ್ರೋತ್ಸಾಹಿಸಬೇಕು.
- ಕಾರ್ಖಾನೆಯ ತ್ಯಾಜ್ಯಗಳನ್ನು ನೀರಿನ ಮೂಲಗಳಿಗೆ ಸೇರಿಸುವುದನ್ನು ತಪ್ಪಿಸಬೇಕು. ನೀರಿನ ಮೂಲಗಳ ಬಳಿ ಸ್ನಾನ, ದನ ಕರುಗಳ ಮೈ ತೊಳೆಯುವಿಕೆ ಇತ್ಯಾದಿ ಚಟುವಟಿಕೆಗಳನ್ನು ಮಾಡದಂತೆ ಜನರಲ್ಲಿ ಜಾಗ್ರತಿ ಮೂಡಿಸುವುದು.
ವಿವಿಧ ದೇಶಗಳು ಪರಿಸರ ಮಾಲಿನ್ಯವನ್ನು ಕಡಿಮೆ ಮಾಡುವ ಎದ್ದೇಶದಿಂದ ಅನೇಕ ಕ್ರಮಗಳನ್ನು ಕೈಗೊಂಡಿವೆ. ನಾವು ಕೂಡ ಪರಿಸರ ಮಾಲಿನ್ಯವನ್ನು ಕಡಿಮೆ ಮಾಡುವ ದಿಕ್ಕಿನತ್ತ ಸಾಗಬೇಕಾದ ಅನಿವಾರ್ಯತೆ ಎದುರಾಗಿದೆ.
ಪರಿಸರ ಮಾಲಿನ್ಯದಿಂದ ಉಂಟಾಗುವ ಅಪಾಯಗಳು ಮತ್ತು ನಮ್ಮ ಪರಿಸರವನ್ನು ರಕ್ಷಿಸುವ ಮಹತ್ವದ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಹೆಚ್ಚಿನ ಸಾರ್ವಜನಿಕ ಜಾಗೃತಿ ಅಭಿಯಾನಗಳನ್ನು ನಡೆಸಲಾಗುತ್ತಿದೆ. ಹಸಿರು ಜೀವನಶೈಲಿಯು ಹೆಚ್ಚು ಜನಪ್ರಿಯವಾಗುತ್ತಿದೆ. ಉದಾಹರಣೆಗೆ, ಪರಿಸರಕ್ಕೆ ಯಾವುದೇ ರೀತಿಯಲ್ಲೂ ಹಾನಿ ಉಂಟು ಮಾಡದ ಎಲೆಕ್ಟ್ರಿಕ್ ವಾಹನಗಳ ಬಳಕೆ, ಪರಿಸರ ಸ್ನೇಹಿ ಆಟೋಗಳ ಬಳಕೆ, ಗಾಳಿ ಮತ್ತು ಸೌರ ಶಕ್ತಿಯ ಬಳಕೆ ಕೆಲವು ಉದಾಹರಣೆಗಳಾಗಿವೆ.
ಸರ್ಕಾರವು ಹೆಚ್ಚು ಮರಗಳನ್ನು ನೆಡುವಿಕೆ, ಪ್ಲಾಸ್ಟಿಕ್‌ಗಳ ಬಳಕೆಯನ್ನು ಕಡಿಮೆ ಮಾಡುವುದು, ಮತ್ತು ಕೀಟನಾಶಕಗಳ ಬಳಕೆಯನ್ನು ಕಡಿಮೆ ಮಾಡುವಿಕೆ, ಪರಿಸರ ಸ್ನೇಹಿ ವಾಹನಗಳನ್ನು ಖರೀದಿಸುವಾಗ ಸಬ್ಸಿಡಿ, ಸೌರ ಶಕ್ತಿ ಸಾಧನಗಳನ್ನು ಖರೀದಿಸುವವರಿಗೆ ಸಬ್ಸಿಡಿ ಮುಂತಾದವುಗಳ ಮೂಲಕ ಪರಿಸರ ಮಾಲಿನ್ಯ ಕಡಿಮೆ ಮಾಡುವ ಕ್ರಮಗಳನ್ನು ಕೈಗೊಂಡಿದೆ.
ತೀರ್ಮಾನ | Conclusion
ಪರಿಸರ ಮಾಲಿನ್ಯದಿಂದ ನಮ್ಮ ವಾತಾವರಣವನ್ನು ಕಾಪಾಡುವುದು ಪ್ರತಿಯೊಬ್ಬ ವ್ಯಕ್ತಿಯ ಜವಾಬ್ದಾರಿಯಾಗಿದೆ. ನಾವು ಈಗ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ನಮ್ಮ ಮುಂದಿನ ಪೀಳಿಗೆ ದೊಡ್ಡ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.
Hope this parisara malinya prabandha in kannada helped you to understand what is pollution, it’s types and effects of pollution and the measures that needs to be taken to reduce the pollution.