Panchatantra stories in kannada

Panchatantra stories in Kannada | ಕನ್ನಡದಲ್ಲಿ ಪಂಚತಂತ್ರ ಕಥೆಗಳು

Panchatantra stories in kannada, ಕನ್ನಡದಲ್ಲಿ ಪಂಚತಂತ್ರ ಕಥೆಗಳು, Panchatantra Kathegalu, Kannadadalli Panchatantra Kathegalu, ಪಂಚತಂತ್ರ ಕಥೆಗಳು, ಪಂಚತಂತ್ರ ಕಥೆಗಳು ಪ್ಲೀಸ್ ಕನ್ನಡ

Here you will find Panchatantra stories in Kannada along with the moral of the story. These Panchatantra stories are simple and can be understood by easily by children as these stories are written in kannada language.

panchatantra kathegalu

ನೀವಿಲ್ಲಿ ನೀತಿಯೊಂದಿಗೆ ಕನ್ನಡದಲ್ಲಿ ಪಂಚತಂತ್ರ ಕಥೆಗಳನ್ನು ಕಾಣಬಹುದು.

Panchatantra stories in Kannada | ಪಂಚತಂತ್ರ ಕಥೆಗಳು ಕನ್ನಡದಲ್ಲಿ

ಮೂರು ಮೀನುಗಳ ಕಥೆ | 3 fishes Panchatantra story in Kannada

mooru meenugala kathe

ಒಂದು ಸರೋವರದಲ್ಲಿ ಮೂರು ಮೀನುಗಳು ಉತ್ತಮ ಸ್ನೇಹಿತರಾಗಿದ್ದವು. ಮೊದಲ ಮೀನು ತುಂಬಾ ಚುರುಕಾಗಿತ್ತು, ಎರಡನೇಯದಕ್ಕೆ ತೊಂದರೆಯಿಂದ ಹೊರಬರುವ ಮಾರ್ಗವನ್ನು ಹೇಗೆ ಕಂಡುಹಿಡಿಯುವುದು ಎಂದು ತಿಳಿದಿತ್ತು ಮತ್ತು ಮೂರನೆಯದು ಕೆಟ್ಟ ಮತ್ತು ದ್ವೇಷದ ಗುಣಗಳನ್ನು ಹೊಂದಿತ್ತು.

ಮಾರನೇ ದಿನ ಬಂದು ಸರೋವರದಲ್ಲಿ ಮೀನು ಹಿಡಿಯುವ ಬಗ್ಗೆ ಮೀನುಗಾರನ ಸಂಭಾಷಣೆಯನ್ನು ಮೊದಲ ಮೀನು ಕೇಳಿತು. ಅಪಾಯವನ್ನು ಗ್ರಹಿಸಿದ ಮೊದಲ ಮೀನು ತನ್ನ ಸ್ನೇಹಿತರಿಗೆ ಸರೋವರದಿಂದ ಹೊರಹೋಗುವಂತೆ ಎಚ್ಚರಿಸಿತು. ಎರಡನೆ ಮೀನು, “ನಾನು ಇಲ್ಲಿಂದ ಹೋಗಲು ಇಷ್ಟ ಪಡುವುದಿಲ್ಲ. ನಾನು ಇಲ್ಲಿಯೇ ಇರುತ್ತೇನೆ ಮತ್ತು ನಾನು ಸಿಕ್ಕಿಬಿದ್ದರೆ ಅದರಿಂದ ಹೇಗಾದರೂ ಮಾಡಿ ಹೊರ ಬರುವ ದಾರಿ ಕಂಡುಕೊಳ್ಳುತ್ತೇನೆಂದು” ಹೇಳಿತು.

ಮೂರನೆಯ ಮೀನು, “ನಾನು ಹೊರಗೆ ಹೋಗಲು ಬಯಸುವುದಿಲ್ಲ. ನಾನು ಇಲ್ಲಿಯೇ ಇರುತ್ತೇನೆ ಮತ್ತು ನಾನು ಸಿಕ್ಕಿ ಬಿದ್ದರೆ ನನ್ನ ಹಣೆ ಬರಹ ಎಂದು ಬಾವಿಸುತ್ತೇನೆಂದು” ಹೇಳಿತು.

ಮೊದಲ ಮೀನು ತನ್ನನು ರಕ್ಷಿಸಿಕೊಳ್ಳಲು ಹೊರಬಂದಿತು.

ಮಾರನೇ ದಿನ ಮೀನುಗಾರ ಮೀನುಗಳನ್ನು ಹಿಡಿಯಲು ಬಲೇ ಬೀಸಿದಾಗ, ಉಳಿದ ಎರಡು ಮೀನುಗಳು ಬಲೆಗೆ ಬಿದ್ದವು. ಎರಡನೆ ಮೀನು ಸತ್ತಂತೆ ನಟಿಸಿ ಜಾಣತನದಿಂದ ತಪ್ಪಿಸಿಕೊಂಡಿತು. ಮೂರನೆಯ ಮೀನು ಏನೂ ಮಾಡದೆ ಸಿಕ್ಕಿಬಿದ್ದು ಸತ್ತಿತು.

ಕಥೆಯ ನೀತಿ / Moral of the Panchatantra story in Kannadaನಾವು ಯಾವಾಗಲೂ ಬದಲಾವಣೆಗೆ ತೆರೆದುಕೊಳ್ಳಬೇಕು ಮತ್ತು ಅದಕ್ಕೆ ತಕ್ಕಂತೆ ಹೊಂದಿಕೊಳ್ಳಬೇಕು. ಅಪಾಯ ಬಂದಾಗ ಪಾರಾಗಲು ತಕ್ಷಣ ಕ್ರಮ ತೆಗೆದುಕೊಳ್ಳಿ (We should be always open for the changes and should have the ability to adapt to the changes. This helps us to escape easily if we get into any sort of trouble).


ಬುದ್ಧಿವಂತ ಮೊಲ ಮತ್ತು ದುಷ್ಟ ಸಿಂಹದ ಕಥೆ | The wise Rabbit and the evil Lion Panchatantra story in Kannada

buddhivantha mola matthu dushta simhada kathe

ಒಂದಾನೊಂದು ಕಾಲದಲ್ಲಿ ಕಾಡಿನಲ್ಲಿ ದುಷ್ಟ ಸಿಂಹ ವಾಸಿಸುತ್ತಿತ್ತು, ಅದು ಪ್ರಾಣಿಗಳ ಮೇಲೆ ಕರುಣೆ ತೋರದೆ ದಾಳಿ ಮಾಡಿ ಕ್ರೂರವಾಗಿ ಕೊಲ್ಲುತ್ತಿತ್ತು, ಇದರಿಂದಾಗಿ ಕಾಡಿನಲ್ಲಿರುವ ಪ್ರತಿಯೊಂದು ಪ್ರಾಣಿಯು ಸಿಂಹಕ್ಕೆ ತುಂಬಾ ಹೆದರುತ್ತಿದ್ದವು.

ಒಂದು ದಿನ, ಸಿಂಹವು ದಿನಕ್ಕೆ ಒಂದರಂತೆ ಪ್ರತಿ ಪ್ರಾಣಿಯು ಸಿಂಹದ ಬಳಿಗೆ ಆಹಾರವಾಗಿ ಹೋಗಬೇಕೆಂದು ಷರತ್ತು ವಿಧಿಸಿತು. ವಿಧಿ ಇಲ್ಲದೆ ಎಲ್ಲ ಪ್ರಾಣಿಗಳು ಇದಕ್ಕೆ ಒಪ್ಪಬೇಕಾಯಿತು.

ಎಲ್ಲ ಪ್ರಾಣಿಗಳು ಚರ್ಚೆ ಮಾಡಿ ತಮ್ಮೆಲ್ಲರಲ್ಲಿ ಬುದ್ಧಿವಂತನಾಗಿದ್ದ ಮೊಲವನ್ನು ಕಳುಹಿಸಲು ನಿರ್ಧರಿಸಿದವು. ಮೊಲ ಈ ಸಮಸ್ಯೆಗೆ ಪರಿಹಾರ ಕಂಡು ಹಿಡಿಯುವ ಯೋಜನೆ ರೂಪಿಸಿ ಸಿಂಹದ ಗುಹೆಯತ್ತ ತನ್ನ ಹೆಜ್ಜೆ ಹಾಕಿತು ಮತ್ತು ಸೂರ್ಯಾಸ್ತದ ಮೊದಲು ಗುಹೆಯನ್ನು ತಲುಪಿತು.

ತಡವಾಗಿ ಆಗಮಿಸಿದ್ದಕ್ಕೆ ಸಿಂಹವು ಕೋಪದಿಂದ, “ನೀನು ಯಾಕೆ ಇಷ್ಟು ತಡ ಮಾಡಿದಿ?” ಎಂದು  ಮೊಲವನ್ನು ಕೇಳಿತು. ಅದಕ್ಕೆ ಮೊಲವು, “ನಾನು ನಿಮ್ಮ ಬಳಿ ಬರುತ್ತಿದ್ದಾಗ, ದಾರಿಯಲ್ಲಿ, ಮತ್ತೊಂದು ಸಿಂಹ ತನ್ನ ಮೇಲೆ ದಾಳಿ ಮಾಡಲು ಮುಂದಾಯಿತು ಮತ್ತು ನಾನು ತಪ್ಪಿಸಿಕೊಂಡು ಇಲ್ಲಿಗೆ ಬರಲು, ತಡವಾಯಿತೆಂದು” ಉತ್ತರಿಸಿತು.

ಸಿಂಹವು ತುಂಬಾ ಕೋಪಗೊಂಡಿತು ಮತ್ತು ಇನ್ನೊಂದು ಹೊಸ ಸಿಂಹ ನನಗೆ ಸವಾಲು ಹಾಕುತ್ತಿದೆ ಎಂದು ಭಾವಿಸಿ ಅದರ ಮೇಲೆ ದಾಳಿ ನಡೆಸಬೇಕು ಎಂದು ನಿರ್ಧಾರ ಮಾಡಿತು. ಸಿಂಹ  ಮೊಲಕ್ಕೆ ನನ್ನನು ಹೊಸ ಸಿಂಹದ ಬಳಿ ಕರೆದುಕೊಂಡು ಹೋಗಲು ಹೇಳಿತು.

ಬುದ್ಧಿವಂತ ಮೊಲವು ಸಿಂಹವನ್ನು ಆಳವಾದ ಬಾವಿಗೆ ಕರೆದೊಯ್ದು ಸಿಂಹಕ್ಕೆ ತನ್ನದೇ ಆದ ಪ್ರತಿಬಿಂಬವನ್ನು ತೋರಿಸಿ ಇದೆ ಆ ಹೊಸ ಸಿಂಹವೆಂದು ಹೇಳಿತು. ಸಿಂಹವು ಘರ್ಜಿಸುತ್ತಿದ್ದಂತೆ, ಅದರ ಪ್ರತಿಬಿಂಬವೂ ಹಾಗೆಯೇ ಮಾಡಿತು. ಈ ಪ್ರತಿಬಿಂಬವನ್ನು ಸಿಂಹ ತನ್ನ ಶತ್ರು ಎಂದು ಭಾವಿಸಿ, ಕೋಪಗೊಂಡು ಮತ್ತೊಂದು ಸಿಂಹದ ಮೇಲೆ ದಾಳಿ ಮಾಡಲು ಬಾವಿಗೆ ಹಾರಿತು ಮತ್ತು ತನ್ನ ಜೀವ ಕಳೆದುಕೊಂಡಿತು. ಹೀಗಾಗಿ, ಬುದ್ಧಿವಂತ ಮೊಲ ತನ್ನನ್ನು ಮತ್ತು ಕಾಡಿನಲ್ಲಿರುವ ಎಲ್ಲಾ ಪ್ರಾಣಿಗಳನ್ನು ರಕ್ಷಿಸಿತು.

ಕಥೆಯ ನೀತಿ / Moral of the Panchatantra story in Kannada : ಒಬ್ಬರು ಯಾವಾಗಲೂ ಸಮಸ್ಯೆಗಳಿಗಿಂತ ಹೆಚ್ಚಾಗಿ ಪರಿಹಾರಗಳ ಮೇಲೆ ಕೇಂದ್ರೀಕರಿಸಬೇಕು (We should always focus on the solutions/answers rather than on problems. If we focus more on the problem then we cannot find the way to escape from it).


akbar birbal stories kannada

ಒಂಟೆ ಮತ್ತು ಸಿಂಹದ ಕಥೆ | The Camel and the Lion Panchatantra story in Kannada

onte matthu simhada kathe

ದಟ್ಟವಾದ ಕಾಡಿನಲ್ಲಿ, ಸಿಂಹವು ತನ್ನ ಮೂರು ಸಹಾಯಕರಾದ ನರಿ, ಕಾಗೆ ಮತ್ತು ಚಿರತೆಯೊಂದಿಗೆ  ವಾಸಿಸುತ್ತಿತ್ತು. ಕಾಡಿನ ರಾಜನ ಸಾಮೀಪ್ಯದಿಂದಾಗಿ, ಸಹಾಯಕರು ಎಂದಿಗೂ ಆಹಾರವನ್ನು ಹುಡುಕುವ ಅವಶ್ಯಕತೆ ಇರಲಿಲ್ಲ. ಒಂದು ದಿನ, ಸಾಮಾನ್ಯವಾಗಿ ಮರುಭೂಮಿಯಲ್ಲಿ ವಾಸಿಸುವ ಒಂಟೆ ಕಾಡಿನಲ್ಲಿ ಅಲೆದಾಡುವುದನ್ನು ನೋಡಿ ಆಶ್ಚರ್ಯವಾಯಿತು. ವಿಚಾರಣೆ ನಡೆಸಿದಾಗ, ಒಂಟೆ ದಾರಿ ತಪ್ಪಿದ ವಿಷಯ ತಿಳಿಯಿತು. ಸಿಂಹ ಅದಕ್ಕೆ ಆಶ್ರಯ ನೀಡಿ ರಕ್ಷಿಸಿತು.

ಒಂದು ದಿನ, ಆನೆಗಳೊಂದಿಗಿನ ಯುದ್ಧದಲ್ಲಿ ಸಿಂಹವು ಗಾಯಗೊಂಡಿತು. ಬೇಟೆಯಾಡಲು ಸಾಧ್ಯವಾಗದೆ, ಸಿಂಹ ಮತ್ತು ಸಹಾಯಕರು ಹಸಿವಿನಿಂದ ಉಳಿದರು. ಮೂವರು ಸಹಾಯಕರು ಒಂಟೆಯನ್ನು ತಿನ್ನುವಂತೆ ಸೂಚಿಸಿದರು, ಆದರೆ ಸಿಂಹ ಅದನ್ನು ಕೊಲ್ಲಲು ನಿರಾಕರಿಸಿತು. ಸಹಾಯಕರು ಒಂಟೆಯನ್ನು ತನ್ನ ರಕ್ಷಕನಿಗೆ ಆಹಾರವಾಗಿ ನೀಡಲು ಯೋಜನೆಯನ್ನು ರೂಪಿಸಿದರು. ಕಾಗೆ, ಚಿರತೆ ಮತ್ತು ನರಿ ಪ್ರತಿಯೊಂದೂ ಸಿಂಹಕ್ಕೆ ಆಹಾರವಾಗಿ ತಮ್ಮನ್ನು ಭಕ್ಷೀಸು ಎಂದು ಕೇಳಿಕೊಂಡವು., ಸಿಂಹ ಅದನ್ನು ನಿರಾಕರಿಸಿತು. ಇದನ್ನು ನೋಡಿದ ಒಂಟೆ ಕೂಡ ಅವುಗಳಂತೆ ತನ್ನನ್ನು ಭಕ್ಷೀಸು ಎಂದು ಕೇಳಿಕೊಂಡಿತು ಮತ್ತು ತಕ್ಷಣವೇ ಸಿಂಹವು ಒಂಟೆಯ ಮೇಲೆ ದಾಳಿ ಮಾಡಿ ಒಂಟೆಯನ್ನು ಕೊಂದಿತು.

ಕಥೆಯ ನೀತಿ / Moral of the Panchatantra story in Kannada : ತಮ್ಮ ಸ್ವಂತ ಲಾಭಕ್ಕಾಗಿ ಶಕ್ತಿಶಾಲಿ ಅಥವಾ ಶ್ರೀಮಂತರನ್ನು ಸುತ್ತುವರೆದಿರುವ ಕುತಂತ್ರ ಜನರನ್ನು ನಂಬುವುದು ಅವಿವೇಕದ ಸಂಗತಿಯಾಗಿದೆ (Be careful about the people those are surrounded rich or strong people for their own benefits. It’s always a foolish act to have any kind of relationship with them or associating with them).


ಮಾಯಾ ಗುಹೆಯ ಕಥೆ | The magic cave Panchatantra story in Kannada

maaya guheya kathe

ಒಮ್ಮೆ ಕಾಡಿನಲ್ಲಿ ಹಸಿದ ಸಿಂಹವು ಆಹಾರವನ್ನು ಹುಡುಕುತ್ತಾ ಅಲೆದಾಡಿತು. ಸಂಜೆಯಾಗುತ್ತಿತ್ತು ಆದರೆ ಸಿಂಹಕ್ಕೆ ಬೇಟೆಯಾಡಲು ಒಂದು ಪ್ರಾಣಿಯೂ ಸಿಗಲಿಲ್ಲ. ನಿರಾಶೆಗೊಂಡ ಸಿಂಹಕ್ಕೆ ಒಂದು ಗುಹೆ ಕಂಡಿತು.  ಸೂರ್ಯಾಸ್ತದ ನಂತರ ಈ ಗುಹೆ ಯಾರದೋ ಆ ಪ್ರಾಣಿ ಗುಹೆಗೆ ಮರಳಿ ಬಂದೆ ಬರುತ್ತದೆ ಆಗ ಸುಲಭವಾಗಿ ನನಗೆ ಆಹಾರ ದೊರೆಯುತ್ತದೆ ಎಂದು ಯೋಚಿಸಿ ಸಿಂಹ ಗುಹೆಯೊಳಗೆ ಹೋಗಿ ಅಡಗಿಕೊಂಡಿತು .

ಆ ಗುಹೆಯು ಒಂದು ಬುದ್ಧಿವಂತ ನರಿಯದಾಗಿತ್ತು, ನರಿ ಗುಹೆಗೆ ಮರಳಿ ಬಂದಾಗ ಸಿಂಹದ ಹೆಜ್ಜೆ  ಗುರುತುಗಳನ್ನು ಗಮನಿಸಿತು. ಅದು ಒಳಗೆ ಹೋಗದೆ ತಕ್ಷಣ ಹಿಂದೆ ಸರಿದು ಸಿಂಹವು ನಿಜವಾಗಿಯೂ ಅದರ ಗುಹೆಯೊಳಗೆ ಇದೆಯೇ ಎಂದು ತಿಳಿಯಲು ಬಯಸಿತು. ನರಿಯು ಸಿಂಹವನ್ನು ಮೋಸಗೊಳಿಸಲು ಉಪಾಯವನ್ನು ಮಾಡಿತು. ಅದು ಗುಹೆಯನ್ನು ಪ್ರವೇಶಿಸಲು ಸುರಕ್ಷಿತವಾಗಿದೆಯೇ ಎಂದು ಹೊರಗಿನಿಂದ ಜೋರಾಗಿ ಕೂಗಿತು. ನರಿ  ಮತೊಮ್ಮೆ ಅದೇ ಪ್ರಶ್ನೆಯನ್ನು ಕೇಳಿತು ಮತ್ತು ಗುಹೆಯು ಉತ್ತರ ನೀಡುವವರೆಗೂ ಒಳಗೆ ಪ್ರವೇಶಿಸುವುದಿಲ್ಲವೆಂದು ಹೇಳಿತು.

ಎಲ್ಲಿ ತನ್ನ ಬೇಟೆಯು ಹೊರಟು ಹೋಗುತ್ತದೆ ಎಂದು ಹೆದರಿದ ಸಿಂಹವು ಗುಹೆಯಂತೆ, ಒಳಗೆ ಬರಬಹುದು ಏನೂ ತೊಂದರೆ ಇಲ್ಲ ಎಂದು ಉತ್ತರಿಸಿತು. ಸಿಂಹವು ಉತ್ತರಿಸಿದ ತಕ್ಷಣ, ನರಿಗೆ  ಸಿಂಹ ಒಳಗೆ ಇರುವುದು ದೃಢವಾಗಿ ಗುಹೆಯಿಂದ ಓಡಿಹೋಯಿತು.

ಕಥೆಯ ನೀತಿ  / Moral of the Panchatantra story in Kannada : ಮನಸ್ಸಿನ ಉಪಸ್ಥಿತಿಯು ಮೂರ್ಖ ಶತ್ರುಗಳಿಂದ ನಾಶವಾಗದಂತೆ ನಿಮ್ಮನ್ನು ರಕ್ಷಿಸುತ್ತದೆ (Our presence of mind always helps us to to come out of the problems).


ಮೂರ್ಖ ನೇಕಾರನ ಕಥೆ  | The Foolish Weaver Panchatantra story in Kannada

moorkha nekaarana kathe

ಒಂದಾನೊಂದು ಕಾಲದಲ್ಲಿ ಒಬ್ಬ ನೇಕಾರನು ತನ್ನ ಹೆಂಡತಿಯೊಂದಿಗೆ ಹಳ್ಳಿಯಲ್ಲಿ ವಾಸಿಸುತ್ತಿದ್ದನು. ಒಂದು ದಿನ, ಅವನು ತನ್ನ ಮಗ್ಗವನ್ನು ಸರಿಪಡಿಸಲು ಮರವನ್ನು ತರಲು ಕಾಡಿಗೆ ಹೋದನು. ಮರ ಕಡಿಯುತ್ತಿದ್ದಾಗ ಎದುರಿಗೆ ಜೀನಿಯೊಂದು ಕಾಣಿಸಿಕೊಂಡದ್ದನ್ನು ಕಂಡ ಆತನಿಗೆ ತನ್ನ ಕಣ್ಣನ್ನೇ ನಂಬಲಾಗಲಿಲ್ಲ. ಜೀನಿ ನೇಕಾರನಿಗೆ ತನ್ನ ವಾಸಸ್ಥಳವನ್ನು ಕಡಿತಗೊಳಿಸದಂತೆ ವಿನಂತಿಸಿದನು ಮತ್ತು ಪ್ರತಿಯಾಗಿ ನೇಕಾರನು ಬಯಸಿದ್ದನ್ನು ನೀಡಲು ಮುಂದಾದನು. ನೇಕಾರನು ತನ್ನ ಹೆಂಡತಿಯೊಂದಿಗೆ ಚರ್ಚಿಸಲು ಕಾಡು ತೊರೆದು ಮನೆಗೆ ಹಿಂತಿರುಗಿದನು. ಮಂಕಾದ ಮತ್ತು ದುರಾಸೆಯ ಹೆಂಡತಿ ಅದನ್ನು ಸುವರ್ಣ ಅವಕಾಶವಾಗಿ ನೋಡಿದಳು. ಅವಳು ನೇಕಾರನಿಗೆ ಹೆಚ್ಚುವರಿ ತಲೆ ಮತ್ತು ಎರಡು ಹೆಚ್ಚುವರಿ ಕೈಗಳನ್ನು ನೀಡುವಂತೆ ಜೀನಿಯನ್ನು ಕೇಳಲು ಹೇಳಿದಳು, ಅದರಿಂದ ಹೆಚ್ಚು ಯೋಚಿಸಲು ಮತ್ತು ಕೆಲಸ ಮಾಡಲು ಸಹಾಯವಾಗುತ್ತದೆಂದು.

ಕಾಡಿಗೆ ಹಿಂತಿರುಗಿದ ನಂತರ, ನೇಕಾರನು ಅವನ ಆಸೆಯನ್ನು ಹೇಳಿದನು. ಜೀನಿ ತಕ್ಷಣವೇ ನೇಕಾರನ ಆಸೆಯನ್ನು ಪೂರೈಸಿದನು. ನೇಕಾರನು ಸಂತೋಷದಿಂದ ಹಳ್ಳಿಗೆ ಹಿಂತಿರುಗಿದನು, ಅಲ್ಲಿ ಜನರು ಅವನನ್ನು ರಾಕ್ಷಸನೆಂದು ಭಾವಿಸಿ  ಅವನನ್ನು ಹೊಡೆದು ಕೊಂದರು.

ಕಥೆಯ ನೀತಿ / Moral of the Story : ಸರಿಯಾದ ನಿರ್ಣಯದ ಕೊರತೆಯು ಸುವರ್ಣ ಅವಕಾಶವನ್ನು ಹಾಳುಮಾಡುತ್ತದೆ (a wrong decision will not only spoils the opportunity but can also create problem for us. We should always think and take the right decision before doing any act).


tenali rama stories kannada


ನಾಲ್ವರು ಸ್ನೇಹಿತರು ಮತ್ತು ಒಬ್ಬ ಬೇಟೆಗಾರನ ಕಥೆ | 4 Friends and a hunter Panchatantra story in Kannada

naalvaru snehitharu matthu betegaara

ಒಂದಾನೊಂದು ಕಾಲದಲ್ಲಿ ನಾಲ್ಕು ಜನ ಒಳ್ಳೆಯ ಗೆಳೆಯರಿದ್ದರು- ಜಿಂಕೆ, ಆಮೆ, ಕಾಗೆ ಮತ್ತು ಇಲಿ. ಒಂದು ದಿನ ಬೇಟೆಗಾರನ ಬಲೆಯಲ್ಲಿ ಜಿಂಕೆ ಸೆರೆಯಾಗುವವರೆಗೂ ಅವರೆಲ್ಲರೂ ಕಾಡಿನಲ್ಲಿ ಸಂತೋಷದಿಂದ ವಾಸಿಸುತ್ತಿದ್ದರು. ಜಿಂಕೆಯ ಸ್ನೇಹಿತರು ನೆಲದ ಮೇಲೆ ಬಿದ್ದಿರುವ ಜಿಂಕೆ ಕಂಡು ಅದನ್ನು ರಕ್ಷಿಸಲು ಯೋಜಿಸಿದರು.

ಆಮೆ ಬೇಟೆಗಾರನನ್ನು ವಿಚಲಿತಗೊಳಿಸಿತು. ಇದರಿಂದ ಬೇಟೆಗಾರನು ಜಿಂಕೆಯನ್ನು ಅಲ್ಲಿಯೇ ಬಿಟ್ಟು ಆಮೆಯನ್ನು ಹಿಡಿಯಲು ಹೋದನು. ಏತನ್ಮಧ್ಯೆ, ಕಾಗೆಯು ಜಿಂಕೆಯ ದೇಹದ ಮೇಲೆ ಕುಳಿತು ಅದನ್ನು ಕುಕ್ಕಲು ಪ್ರಾರಂಭಿಸಿತು. ಜಿಂಕೆಯನ್ನು ಬಿಡಿಸಲು ಇಲಿ ಬಲೆ ಕಡಿಯಲು ಮುಂದಾಯಿತು. ಕಾಗೆ ಆಮೆಯನ್ನು ಎತ್ತಿಕೊಂಡು ಹಾರಿ, ಬೇಟೆಗಾರನಿಂದ ಆಮೆಯನ್ನು ಉಳಿಸಿತು.

ಕಥೆಯ ನೀತಿ / Moral of the Panchatantra story in Kannada : ನಾವು ಒಗ್ಗಟ್ಟಾಗಿದ್ದರೆ ಯಾರಿಂದಲೂ ನಮಗೆ ತೊಂದರೆ ಬರಲು ಸಾಧ್ಯವಾಗುವುದಿಲ್ಲ (There is strength in the unity, if we are together then nobody can harm us and it will help us to come out of any problem).


ಇಲಿ ಮತ್ತು ಆನೆಗಳ ಕಥೆ | Panchatantra story of Mice and Elephants in Kannada

ಒಂದು ಗ್ರಾಮದ ಹೊರವಲಯದಲ್ಲಿ ಇಲಿಗಳ ಗುಂಪೊಂದು ವಾಸಿಸುತ್ತಿತ್ತು. ಇದೆ ಗ್ರಾಮದ ಹೊರವಲಯದಲ್ಲಿ ಇದ್ದ ಕೆರೆಗೆ, ಆನೆಗಳ ಹಿಂಡು ನಿತ್ಯ ನೀರು ಕುಡಿಯಲು ಬರುತ್ತಿದ್ದವು. ಇಲಿಗಳು ವಾಸಿಸುತ್ತಿದ್ದ ಸ್ಥಳ ಈ ಕೆರೆಗೆ ಹೋಗುವ ದಾರಿಯಲ್ಲಿ ಇದ್ದಿದ್ದರಿಂದ ಆನೆಗಳು ಕೆರೆಗೆ ಹೋಗುತ್ತಿದ್ದಾಗ ತಮಗರಿವಿಲ್ಲದೆ ನಿತ್ಯವೂ ಒಂದಿಲ್ಲೊಂದು ಇಲಿಗಳನ್ನು ತುಳಿಯುತ್ತಿದ್ದವು.

ನಿತ್ಯವೂ ಇದೆ ಘಟನೆ ನಡೆಯುತ್ತಿದ್ದರಿಂದ, ಇಲಿಗಳ ರಾಜ ಆನೆಗಳನ್ನು ಭೇಟಿ ಮಾಡಿ ಅವನು ಆನೆಗಳಲ್ಲಿ ಹೀಗೆಂದು ವಿನಂತಿಸಿದನು, “ಆನೆಗಳೇ, ನೀವು ನಿತ್ಯವೂ ಕೆರೆಗೆ ಸಂಚರಿಸುವಾಗ ಅನೇಕ ಇಲಿಗಳು ನಿಮ್ಮ ಕಾಲಿನಡಿಯಲ್ಲಿ ಬಂದು ತಮ್ಮ ಪ್ರಾಣ ಕಳೆದುಕೊಳ್ಳುತ್ತಿವೆ. ಆದ್ದರಿಂದ ನೀವು ದಯವಿಟ್ಟು ನಿಮ್ಮ ಮಾರ್ಗ ಬದಲಾಯಿಸಿದರೆ ನಾವು ನಿಮಗೆ ಕೃತಜ್ಞರಾಗಿರುತ್ತೇವೆ ಮತ್ತು ನಿಮಗೆ ಅಗತ್ಯವಿದ್ದಾಗ ನಾವು ನೆನಪಿಸಿಕೊಳ್ಳುತ್ತೇವೆ ಮತ್ತು ಉಪಕಾರವನ್ನು ಹಿಂದಿರುಗಿಸುತ್ತೇವೆ”.

ಆನೆಗಳ ರಾಜ, “ನಾವು ಆನೆಗಳು. ನೀವು ನಮಗೆ ಯಾವ ಸಹಾಯ ಮಾಡಬಲ್ಲಿರೆಂದು ನಗುತ್ತಾ ಹೇಳಿತು” ಮತ್ತು ಇಲಿಗಳ ರಾಜನಿಗೆ ನಾವು ಬೇರೆ ಮಾರ್ಗವನ್ನು ಬಳಸುತ್ತೇವೆ ಎಂದು ಮಾತು ನೀಡಿತು.

ಒಂದು ದಿನ, ಆನೆಗಳು ಬೇಟೆಗಾರರು ಹಾಕಿದ ಬಲೆಗಳಲ್ಲಿ ಸಿಕ್ಕಿಕೊಂಡವು. ತಪ್ಪಿಸಿಕೊಳ್ಳಲು ಪ್ರಯತ್ನ ನಡೆಸಿ ವಿಫಲಗೊಂಡವು. ಆನೆಗಳು ಬಲೆಯಲ್ಲಿ ಸಿಕ್ಕಿರುವುದನ್ನು ಕಂಡ ಇಲಿಗಳು ಕೂಡಲೇ ತಮ್ಮ ಹಲ್ಲುಗಳಿಂದ ಬಲೆಯನ್ನು ಕತ್ತರಿಸಿ ಎಲ್ಲ ಆನೆಗಳು ತಪ್ಪಿಸಿಕೊಳ್ಳಲು ಸಹಾಯ ಮಾಡಿದವು.


ಇನ್ನೂ ಹೆಚ್ಚಿನ ಕಥೆಗಳಿಗಾಗಿ

ಕನ್ನಡದಲ್ಲಿ ಸಣ್ಣ ಕಥೆಗಳು / Short Stories in Kannada

ಕನ್ನಡ ನೀತಿ ಕಥೆಗಳು / Kannada Moral Stories

Click on the below link for Hindi stories

Hindi moral stories

हिंदी कहानी

panchatantra stories in Hindi