letter writing kannada

Letter Writing in Kannada | ಕನ್ನಡದಲ್ಲಿ ಪತ್ರ

Here you will find few examples of letter writing in kannada.

Kannada letter writing | Letter Writing Kannada | ಕನ್ನಡದಲ್ಲಿ ಪತ್ರ

letter writing examples

Write a letter to the education minister of Karnataka reopening of schools

ಕೊರೋನಾದ ಕಾರಣದಿಂದ ಶಾಲೆಗಳನ್ನು ಮುಚ್ಚಿರುವುದರಿಂದ, ವಿದ್ಯಾರ್ಥಿಗಳಿಗೆ ಆಗುತ್ತಿರುವ ಸಮಸ್ಯೆಯನ್ನು ವಿವರಿಸಿ ಶಾಲೆಗಳನ್ನು ಬೇಗನೆ ಪ್ರಾರಂಭಿಸುವಂತೆ ಶಿಕ್ಷಣ ಸಚಿವರಿಗೆ ಮನವಿ ಪತ್ರ ಬರೆಯಿರಿ (write a letter to education minister requesting to reopen the schools as soon as possible along with the problems that students are facing).

ಇಂದ,
ಸಂಪಿಗೆ ಶಾಲೆ
ಕೃಷ್ಣ ಕಾಲೋನಿ
ಜಯನಗರ
ಬೆಂಗಳೂರು

ದಿನಾಂಕ: 20 ಮೇ 2021

ರಿಗೆ,
ಶಿಕ್ಷಣ ಸಚಿವರು
ಶಿಕ್ಷಣ ಇಲಾಖೆ
ಬೆಂಗಳೂರು

ವಿಷಯ: ಶಾಲೆಗಳನ್ನು ಪುನಃ ಪ್ರಾರಂಭಿಸುವುದರ ಬಗ್ಗೆ.

ಮಾನ್ಯ ಸಚಿವರೇ,

ಕೊರೋನಾದ ಕಾರಣದಿಂದ ಶಾಲೆಗಳನ್ನು ಮುಚ್ಚಿ ಸುಮಾರು ಒಂದೂವರೆ ವರ್ಷಕ್ಕೂ ಹೆಚ್ಚು ಸಮಯವಾಗಿದೆ.
ಶಾಲೆಗಳು ಕೇವಲ ಕಲಿಕೆಗಲ್ಲದೆ ಪತ್ಯೇತರ ಇನ್ನೂ ಅನೇಕ ಚಟುವಟಿಕೆಗಳ ಭಾಗವೂ ಆಗಿದೆ. ಶಾಲೆಗಳನ್ನು ಮುಚ್ಚಿರುವುದರಿಂದ ಈ ಎಲ್ಲ ಚಟುವಟಿಗಳೂ ಈಗ ಇಲ್ಲದಂತಾಗಿದೆ. ಅಷ್ಟೇ ಅಲ್ಲದೆ ನಮ್ಮಲ್ಲಿ ಅನೇಕ ವಿದ್ಯಾರ್ಥಿಗಳು ಆನ್ಲೈನ್ ತರಗತಿಗಳಲ್ಲಿ ವಿಷಯವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗದೆ ಕಷ್ಟ ಅನುಭವಿಸುತ್ತಿದ್ದಾರೆ.

ಇದರ ನಡುವೆ ಸಾಂಕ್ರಾಮಿಕ ಸಮಯದಲ್ಲಿ ಸ್ಮಾರ್ಟ್ಫೋನ್ ಇಲ್ಲದೆ ಇರುವವರು, ನೆಟ್ವರ್ಕ್ ಸಮಸ್ಯೆ ಹೀಗೆ ಇತರೆ ಕಾರಣಗಳಿಂದ ಆನ್ಲೈನ್ ತರಗತಿಗೆ ಹಾಜರಾಗದೆ ಲಕ್ಷಾಂತರ ಮಕ್ಕಳು ಶಾಲೆಯಿಂದ ದೂರ ಉಳಿಯುವಂತಾಗಿದೆ. ಹಲವು ತಿಂಗಳುಗಳಿಂದ ಶಾಲೆ ಇಲ್ಲವಾಗಿರುವುದರಿಂದ, ಮಕ್ಕಳು ಹಿಂದಿನ ತರಗತಿಗಳಲ್ಲಿ ತಾವು ಕಲಿತದ್ದನ್ನು ಮರೆತುಬಿಡುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ.

ನಮ್ಮ ಆರೋಗ್ಯದ ದೃಷ್ಟಿಯಿಂದ ನೀವು ಶಾಲೆಗಳನ್ನು ಮುಚ್ಚಿದ್ದೀರೆಂದು ನಮಗೆ ತಿಳಿದಿದೆ, ಆದರೆ ತಜ್ಞರು ಶಾಲೆಗಳಲ್ಲಿ ಸೋಂಕಿಗೆ ಒಳಗಾಗುವ ಅಪಾಯವನ್ನು ಹೇಗೆ ಕಡಿಮೆ ಮಾಡುವುದು ಎಂಬುದರ ಕುರಿತು ವಿವರವಾದ ಮಾರ್ಗಸೂಚಿಗಳನ್ನು ಒದಗಿಸಿದ್ದಾರೆ. ಈ ಮಾರ್ಗಸೂಚಿಗಳನ್ನು ಆಧರಿಸಿ ತಜ್ಞರು, ಶಾಲಾ ಸಿಬ್ಬಂದಿ, ಪೋಷಕರು, ಸಮುದಾಯದ ಸದಸ್ಯರು ಮತ್ತು ಎಲ್ಲರೂ ಸೇರಿ ನಮ್ಮ ಶಾಲೆಗಳನ್ನು ಮತ್ತೆ ತೆರೆಯಬೇಕೆಂದು ಈ ಪತ್ರದ ಮೂಲಕ ತಮ್ಮಲ್ಲಿ ವಿನಂತಿ ಮಾಡುತ್ತೇನೆ.

ಇಂತಿ
ಕುಮಾರ್ ವಿದ್ಯಾರ್ಥಿ


Letter writing to tahsildar in Kannada

ನೀವು ಗ್ರಾಮದ ನಿವಾಸಿ ಎಂದು ಭಾವಿಸಿ, ಕಳೆದ ಕೆಲ ದಿನಗಳಿಂದ ಸರಿಯಾಗಿ ಪಡಿತರ ಸಿಗದೇ ಗ್ರಾಮದ ಜನರಿಗೆ ಆಗುತ್ತಿರುವ ಸಮಸ್ಯೆ ಕುರಿತು ತಹಸೀಲ್ದಾರ್ ಗೆ ದೂರಿನ ಪತ್ರ ಬರೆಯಿರಿ(Assume that you are th  resident of a village and write a complaint letter to the Tahasildar mentioning the problems that you are facing because of no availability of Ration).

ಇಂದ,
ರಮೇಶ್
ದೊಡ್ಡಕಟ್ಟೆ ಗ್ರಾಮ
ಮಂಡ್ಯ ತಾಲ್ಲೂಕು
ಮಂಡ್ಯ ಜಿಲ್ಲೆ

ದಿನಾಂಕ: 20 ಮೇ 2021

ರಿಗೆ,
ತಹಸೀಲ್ದಾರ್
ಮಂಡ್ಯ ತಾಲ್ಲೂಕು
ಮಂಡ್ಯ ಜಿಲ್ಲೆ

ವಿಷಯ: ದೊಡ್ಡಕಟ್ಟೆ ಗ್ರಾಮದಲ್ಲಿ ಪಡಿತರ ಸಮಸ್ಯೆ.

ಮಾನ್ಯರೇ,

ನಾನು ದೊಡ್ಡಕಟ್ಟೆ ಗ್ರಾಮದ ನಿವಾಸಿ. ನಮ್ಮ ಗ್ರಾಮದಲ್ಲಿ ಪಡಿತರ ಅಂಗಡಿಗಳು ಸರಿಯಾಗಿ ತೆರೆಯುತ್ತಿಲ್ಲ. ಕಳೆದ ಕೆಲ ತಿಂಗಳಿನಿಂದ ನಿರ್ಗತಿಕರಿಗೆ ಮತ್ತು ಬಡ ಫಲಾನುಭವಿಗಳಿಗೆ ಅವರ ಪಾಲಿನ ಪಡಿತರವನ್ನು ಸಕಾಲಕ್ಕೆ ನೀಡಿಲ್ಲ. ಇಷ್ಟೇ ಅಲ್ಲದೆ  ಕೆಲವೊಮ್ಮೆ ಪಡಿತರ ಲಭ್ಯವಿರುವುದಿಲ್ಲ ಮತ್ತು ಲಭ್ಯವಿದ್ದರೆ ಅವುಗಳ ಗುಣಮಟ್ಟ ಉತ್ತಮವಾಗಿರುವುದಿಲ್ಲ.

ಸರಿಯಾಗಿ ಕೆಲಸಗಳಿಲ್ಲದೆ ಗ್ರಾಮದ ಜನರು ಸಮಸ್ಯೆ ಎದುರಿಸುತ್ತಿದ್ದಾರೆ. ಈಗ ಪಡಿತರವೂ ಇಲ್ಲವಾಗಿದೆ. ಆದ್ದರಿಂದ ತಾವು ದಯವಿಟ್ಟು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಬೇಗನೆ ಪರಿಹಾರ ಕೊಡಿಸುವತ್ತ ಗಮನ ಹರಿಸಬೇಕೆಂದು ಗ್ರಾಮದ ಜನರ ಪರವಾಗಿ ತಮ್ಮಲ್ಲಿ ಈ ಪತ್ರದ ಮೂಲಕ ವಿನಂತಿ ಮಾಡುತ್ತೇನೆ.

ಇಂತಿ
ರಮೇಶ್
ದೊಡ್ಡಕಟ್ಟೆ ಗ್ರಾಮದ ನಿವಾಸಿ


How do I write a formal letter to the newspaper editor in Kannada

ಹೆಚ್ಚುತ್ತಿರುವ ಕೋರೋಣ ಪ್ರಕರಣಗಳ ಕುರಿತು ಪತ್ರಿಕೆಯೊಂದರ ಸಂಪಾದಕರಿಕೆ ಜನರಲ್ಲಿ ಜಾಗ್ರತಿ ಮೂಡಿಸುವ ಲೇಖನ ಪ್ರಕಟಿಸುವಂತೆ ಮನವಿ ಪತ್ರ ಬರೆಯಿರಿ(Write a letter to the news paper editor requesting to publish an article to generate awareness among the people as corona cases have started to increase).

ಇಂದ,
ರಮೇಶ್
ಕೃಷ್ಣ ಕಾಲೋನಿ
ಜಯನಗರ
ಬೆಂಗಳೂರು

ದಿನಾಂಕ : 24 ಜೂನ್ 2021

ರಿಗೆ,
ಸಂಪಾದಕರು
ವಿಜಯ ಕರ್ನಾಟಕ
ಬೆಂಗಳೂರು

ವಿಷಯ : ಕೊರೋನಾ ಕುರಿತು ಜಾಗ್ರತಿ ಮೂಡಿಸುವ ಲೇಖನ ಕುರಿತು.

ಮಾನ್ಯರೆ,

ಕಳೆದ ಕೆಲವು ತಿಂಗಳುಗಳಲ್ಲಿ, ಕರೋನ ವೈರಸ್ ಪ್ರಕರಣಗಳು ಧಿಡೀರನೆ ಹೆಚ್ಚುತ್ತಿವೆ. ಇದು ಸಾಂಕ್ರಾಮಿಕ ರೋಗದ ಬಗ್ಗೆ ಕಟ್ಟುನಿಟ್ಟಾದ ನಿಯಮಗಳ ಕೊರತೆಯ ಪರಿಣಾಮವಾಗಿದೆ. ನಮ್ಮ ಜಿಲ್ಲೆ ಮತ್ತು ರಾಜ್ಯದಲ್ಲಿ ಜನರು ನಿಯಮಗಳು ಮತ್ತು ಸೂಚನೆಗಳನ್ನು ಅನುಸರಿಸಲು ವಿಫಲರಾಗಿರುವುದರಿಂದ ಪ್ರಕರಣಗಳು ಧಿಡೀರನೆ ಏರಿಕೆ ಕಂಡಿವೆ. ಜನನಿಬಿಡ ಪ್ರದೇಶಗಳಲ್ಲಿ ಕೊರೋನಾದ ನಿಯಮಗಳು ಮತ್ತು ನಿರ್ಬಂಧಗಳ ಬಗ್ಗೆ ನಿಮ್ಮ ಪತ್ರಿಕೆಯ ಮೂಲಕ ಜಾಗೃತಿ ಮೂಡಿಸಲು ನೀವು ಸಹಾಯ ಮಾಡಬಹುದು ಎಂಬ ಭರವಸೆಯಿಂದ ನಾನು ನಿಮಗೆ ಈ ಪತ್ರವನ್ನು ಬರೆಯುತ್ತಿದ್ದೇನೆ.

ಮುಖ್ಯವಾಗಿ ಮಾಸ್ಕ್ ಧರಿಸುವಿಕೆ, ಸಾಮಾಜಿಕ ಅಂತರ ಪಾಲನೆ ಮತ್ತು ಇತರೆ ಕಟ್ಟುನಿಟ್ಟಾದ ಕ್ರಮಗಳ ಮಹತ್ವ ವಿವರಿಸುವ ಲೇಖನದ ಮೂಲಕ ನೀವು ಜನರಲ್ಲಿ ಜಾಗ್ರತಿ ಮೂಡಿಸುವ ಈ ಮಹತ್ತರ ಕಾರ್ಯವನ್ನು ಮಾಡುತ್ತೀರೆಂದು ಭಾವಿಸುತ್ತೇನೆ.

ಧನ್ಯವಾದ
ನಿಮ್ಮ ವಿಶ್ವಾಸಿ
ಕುಮಾರ್


Kannada Letter Writing for education loan in Bank

ಉನ್ನತ ವ್ಯಾಸಂಗಕ್ಕಾಗಿ ಕಾಲೇಜಿನಲ್ಲಿ ಸೀಟು ದೊರೆತಿರುವುದರಿಂದ ಶೆಕ್ಷಣಿಕ ಸಾಲಕ್ಕಾಗಿ ಪತ್ರ ಬರೆಯಿರಿ(write a letter to bank manager requesting for the education loan for your higher studies).

ಇಂದ,
ಕುಮಾರ್
ಕೃಷ್ಣ ಕಾಲೋನಿ
ಜಯನಗರ
ಬೆಂಗಳೂರು

ದಿನಾಂಕ : 24 ಜೂನ್ 2021

ರಿಗೆ,
ಬ್ಯಾಂಕ್ ಮ್ಯಾನೇಜರ್
ಬ್ಯಾಂಕಿನ ಹೆಸರು
ಬ್ಯಾಂಕಿನ ವಿಳಾಸ
ಬೆಂಗಳೂರು

ವಿಷಯ : ಶೈಕ್ಷಣಿಕ ಸಾಲದ ಬಗ್ಗೆ.

ಮಾನ್ಯರೆ,

ನಾನು ಬೆಂಗಳೂರು ನಗರದ ಪಿ.ಇ.ಸ್. ಕಾಲೇಜಿನಲ್ಲಿ ಇಂಜಿನಿಯರಿಂಗ್ ವಿಭಾಗದಲ್ಲಿ ಕಂಪ್ಯೂಟರ್ ಸೈನ್ಸ್ ಕೋರ್ಸ್ ಅಧ್ಯಯನ ಮಾಡಲು ಪ್ರವೇಶ ಪಡೆದಿದ್ದೇನೆ.

ನನ್ನ ಉನ್ನತ ವ್ಯಾಸಂಗವನ್ನು ಮುಂದುವರಿಸಲು ನನಗೆ ಶಿಕ್ಷಣ ಸಾಲದ ಅಗತ್ಯವಿರುತ್ತದೆ. ಆದ್ದರಿಂದ  2 ಲಕ್ಷ ಮೊತ್ತದ ಶಿಕ್ಷಣ ಸಾಲವನ್ನು ಮಂಜೂರು ಮಾಡುವಂತೆ ನಾನು ಈ ಪತ್ರದ ಮೂಲಕ ತಮ್ಮಲ್ಲಿ ವಿನಂತಿ ಮಾಡುತ್ತೇನೆ.

ಈ ಪತ್ರದೊಂದಿಗೆ ನನ್ನ ಅಂಕಗಳನ್ನು (ಮಾರ್ಕ್ಸ್ ಕಾರ್ಡ್) ಮತ್ತು ಕಾಲೇಜಿನಲ್ಲಿ ಸೀಟು ದೊರೆತ ಪ್ರವೇಶ ಪತ್ರವನ್ನು ಲಗತ್ತಿಸಲಾಗಿದೆ.

ಧನ್ಯವಾದಗಳು
ಇಂತಿ
ಕುಮಾರ್