Kannada Inspirational Quotes

Kannada Inspirational Quotes

kannada inspirational

If you are looking for Kannada Inspirational Quotes then here you will find some of  best inspirational quotes in kannada language along with the meaning of each quote in kannada. If you are having a rough day or need to cheer up then these quotes can help you. Here you can find short inspirational quotes, one line quotes and quotes by some of the famous people.

ನೀವು kannada inspirational quotes ಹುಡುಕುತ್ತಿದ್ದರೆ, ಕನ್ನಡದಲ್ಲಿ ಪ್ರತಿ quote ಅರ್ಥದೊಂದಿಗೆ ಕೆಲ ಅತ್ಯುತ್ತಮ ಸ್ಪೂರ್ತಿದಾಯಕ ಉಲ್ಲೇಖಗಳನ್ನು ನೀವು ಇಲ್ಲಿ ಕಾಣಬಹುದು. ನಿಮ್ಮ ದಿನ ಕೆಟ್ಟದಾಗಿದ್ದರೆ ಈ ಉಲ್ಲೇಖಗಳು ನಿಮಗೆ ಸ್ಪೂರ್ತಿ ನೀಡಲು ಸಹಾಯ ಮಾಡಬಹುದು. ಇಲ್ಲಿ ನೀವು ಕೆಲವು ಪ್ರಸಿದ್ಧ ವ್ಯಕ್ತಿಗಳ ಸಣ್ಣ ಸ್ಪೂರ್ತಿದಾಯಕ ಉಲ್ಲೇಖಗಳು, ಒಂದು ಸಾಲಿನ ಉಲ್ಲೇಖಗಳು ಮತ್ತು ಉಲ್ಲೇಖಗಳನ್ನು ಕಾಣಬಹುದು.

Best Kannada Inspirational Quotes

ನಮ್ಮ ಕರಾಳ ದಿನಗಳಲ್ಲಿ ನಾವು ಬೆಳಕನ್ನು ಕಾಣಲು ಗಮನಹರಿಸಬೇಕು.

best inspirational quotes kannada

Kannada inspirational quotes ಅರ್ಥ : ಮನುಷ್ಯ ಎಂದ ಮೇಲೆ ಕಷ್ಟಗಳು ಬರುವುದು ಸಹಜ. ಇಂತಹ ಕಷ್ಟದ ಸಮಯದಲ್ಲಿ ಎದೆಗುಂದದೆ ಆತ್ಮಸ್ಥೈರ್ಯ ಕಳೆದುಕೊಳ್ಳದೆ ಪರಿಹಾರದ ದಾರಿಯನ್ನು ಹುಡುಕಲು ಪ್ರಯತ್ನಿಸಬೇಕು.


ತಮ್ಮಲ್ಲಿರುವದನ್ನು ಆನಂದಿಸುವವರೇ ನಿಜವಾದ ಶ್ರೀಮಂತರು.

inspirational quotes kannada

ಅರ್ಥ : ನಾವು ಇತರರನ್ನು ಕಂಡಾಗ ಅಥವಾ ಅವರ ಬಳಿ ಇರುವುದನ್ನು ಕಂಡಾಗ ಅವರ ಬಳಿ ಇರುವುದೆಲ್ಲ ನಮ್ಮ ಬಳಿಯೂ ಇರಬೇಕೆಂದೆಕೊಳ್ಳುತ್ತೇವೆ. ಅಸೂಯೆ ಪಡುವುದನ್ನು ಬಿಟ್ಟು ನಮ್ಮ ಬಳಿ ಇರುವುದರಲ್ಲಿಯೇ ಸಂತೋಷ ಪಟ್ಟಾಗ ಮಾತ್ರ ನಾವು ನೆಮ್ಮದಿ ಇಂದ ಇರಲು ಸಾಧ್ಯ. ನಮ್ಮಲ್ಲಿ ಇರುವುದರಲ್ಲಿಯೇ ತ್ರಪ್ತಿ ಪಡುವವರು ನಿಜವಾದ ಶ್ರೀಮಂತರು.


ಸೌಮ್ಯವಾದ ಮಾರ್ಗದಲ್ಲಿ, ನೀವು ಜಗತ್ತನ್ನು ಬದಲಾಯಿಸಬಹುದು.

best inspirational quotes kannada

Kannada inspirational quotes ಅರ್ಥ : ನಿಮ್ಮ ಪಯಣ ಹಾಗೂ ಹಾದಿ ಯಾವಾಗಲೂ ಸೌಮ್ಯವಾಗಿರಲಿ. ಅಂದರೆ ನೀವು ಸೌಮ್ಯ ಮಾರ್ಗದಲ್ಲಿ ನಡೆದರೆ ಇಡೀ ಜಗತ್ತನ್ನೇ ಬದಲಾಯಿಸಬಹುದು. ಉದಾಹರಣೆಗೆ ಗಾಂಧೀಜಿ ಸೌಮ್ಯ ಮಾರ್ಗದಲ್ಲಿಯೇ ಸಾಗಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿ ಕೊಡುವಲ್ಲಿ ಯಶಸ್ವಿಯಾದರು. ಗಾಂಧೀಜಿ ಬಳಿ ಅನೇಕ ಮಾರ್ಗಗಳಿದ್ದರೂ ಅವರು ಆಯ್ಕೆ ಮಾಡಿಕೊಂಡಿದ್ದು ಕೇವಲ ಸೌಮ್ಯ ಮಾರ್ಗ. ಆದ್ದರಿಂದ ಎಲ್ಲರೂ ಎಂದಿಗೂ ಸೌಮ್ಯ ಮಾರ್ಗದಲ್ಲೇ ಸಾಗೋಣ.


ನಿಮಗೆ ತಿಳಿದಿರುವುದಕ್ಕಿಂತ ಕಡಿಮೆ ಮಾತನಾಡಿ, ನೀವು ತೋರಿಸುವುದಕ್ಕಿಂತ ಹೆಚ್ಚಿನದನ್ನು ಹೊಂದಿರಿ.

best inspirational quotes kannada

ಅರ್ಥ : ಯಾವಾಗಲೂ ಮಾತನಾಡುವಾಗ ನಿಮಗೆ ಹೆಚ್ಚಿನದು ತಿಳಿದಿದ್ದರೂ ಸಹ ಎಷ್ಟು ಅವಶ್ಯಕತೆ ಇದೆಯೋ ಅಷ್ಟು ಮಾತ್ರ ಮಾತನಾಡಿ. ಹೆಚ್ಚಿಗೆ ಮಾತನಾಡುವುದರಿಂದ ಜನ ಸಹಿಸುವುದಿಲ್ಲ ಮತ್ತು ಇದರಿಂದ ನಮಗೆ ಅಪಾಯ ಜಾಸ್ತಿ. ಹಾಗೆಯೇ ನಿಮ್ಮ ಬಳಿ ಇರುವುದನ್ನು ತೋರಿಸಿದರೆ ನಿಮಗೆ ಅಪಾಯ, ನಿಮ್ಮ ಬಳಿ ಇರುವುದನ್ನು ಎಂದಿಗೂ ಇತರರ ಬಳಿ ಕೊಚ್ಚಿಕೊಳ್ಳಲು ಹೋಗಬೇಡಿ.


ನೀವು ಯಾವುದೇ ಕೆಲಸವನ್ನು ಮಾಡಿದರೂ ಅದನ್ನು ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಮಾಡಿ.

best inspirational quotes kannada

Kannada inspirational quotes ಅರ್ಥ : ಯಾವುದೇ ಕೆಲಸ ಮಾಡುವಾಗಲೂ ನಿಮ್ಮ ಸಂಪೂರ್ಣ ಸಾಮರ್ಥ್ಯವನ್ನು ಹಾಕಿರಿ. ಒಂದು ವೇಳೆ ನಾವು ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಕೆಲಸ ಮಾಡದೆ ಇದ್ದರೆ ಅದರಲ್ಲಿ ವಿಫಲರಾಗುವ ಅವಕಾಶ ಹೆಚ್ಚಿರುತ್ತದೆ. ಸಂಪೂರ್ಣ ಸಾಮರ್ಥ್ಯದಿಂದ ಮಾಡುವ ಕೆಲಸ ಖಂಡಿತವಾಗಿಯೂ ಸಫಲವಾಗುತ್ತದೆ. ಮತ್ತು ಇದರಲ್ಲಿ ಯಾವುದೇ ಅನುಮಾನ ಬೇಡ.


ಪ್ರೋತ್ಸಾಹದ ಒಂದು ಮಾತು ಜಗತ್ತನ್ನು ಬದಲಾಯಿಸಬಹುದು.

best inspirational quotes kannada

ಅರ್ಥ : ಯಾರಾದರೂ ಖಿನ್ನತೆಗೆ ಒಳಗಾಗಿದ್ದರೆ ನಾವು ಪ್ರೋತ್ಸಾಹದಿಂದ ಆಡುವ ಒಂದು ಮಾತಿಗೆ ಅವರ ಜೀವನವನ್ನೇ ಬದಲಾಯಿಸುವ ಶಕ್ತಿ ಇದೆ. ಆದ್ದರಿಂದ ಯಾರಾದರೂ ದುಃಖದಲ್ಲಿದ್ದರೆ ಅಥವಾ ಖಿನ್ನತೆಗೆ ಒಳಗಾಗಿದ್ದಾರೆ ಅವರಿಗೆ ನಾವು ಧೈರ್ಯ ತುಂಬುವ ಮತ್ತು ಪ್ರೋತ್ಸಾಹಿಸುವ ಕೆಲಸ ಮಾಡೋಣ. ನಾವು ನೀಡುವ ಧೈರ್ಯ ಅವರ ನೋವನ್ನೆಲ್ಲ ದೂರ ಮಾಡಿ ಅವರನ್ನು ಹೊಸ ವ್ಯಕ್ತಿಯಾಗಿ ಮಾಡಲು ಪೂರಕವಾಗಿರಲಿ.


Top Kannada Inspirational Quotes

ನೀವು ಜಗತ್ತನ್ನು ಒಳ ಕಣ್ಣುಗಳಿಂದ ನೋಡಲು ಪ್ರಾರಂಭಿಸಿದಾಗ, ನೀವು ಎಲ್ಲಿಗೆ ಹೋದರೂ ಶಾಂತಿಯನ್ನು ಸೃಷ್ಠಿಸುತ್ತೀರಿ.

Top Kannada Inspirational Quotes

Kannada inspirational quotes ಅರ್ಥ : ನೀವು ಜಗತ್ತನ್ನು ನಿಮ್ಮ ಹೊರಗಣ್ಣಿನಿಂದ ನೋಡುವ ಬದಲು ನಿಮ್ಮ ಒಳಗಣ್ಣಿನಿಂದ ನೋಡಿದರೆ ನಿಮಗೆ ಪ್ರತಿಯೊಂದು ವಿಷಯ, ಪ್ರತಿಯೊಂದು ವಸ್ತು ಮತ್ತು ಪ್ರತಿಯೊಂದು ಸಂಗತಿಯ ಒಳಾರ್ಥ ಅರಿವಾಗುತ್ತದೆ. ಇದು ನಮ್ಮನ್ನು ಹೊಸ ವ್ಯಕ್ತಿಯನ್ನಾಗಿ ಮಾಡುವುದಲ್ಲದೆ ನಮಗೆ ಶಾಂತಿಯನ್ನು ನೀಡುತ್ತದೆ.


ಉದ್ದೇಶವಿಲ್ಲದ ಜೀವನ ಅರ್ಥಹೀನ.

Top Kannada Inspirational Quotes

Kannada inspirational quotes ಅರ್ಥ : ಪ್ರತಿಯೊಬ್ಬ ಮನುಷ್ಯನಿಗೆ ಜೀನದಲ್ಲಿ ಒಂದು ಗುರಿ ಅಥವಾ ಉದ್ದೇಶ ಅವಶ್ಯ. ಈ ಉದ್ದೇಶ ನಮ್ಮನ್ನು ಹೊಸತು ಕಲಿಯಲು, ಕೆಲಸ ಮಾಡಲು ಮತ್ತು ಬೆಳೆಯಲು ಪ್ರೇರೇಪಿಸುತ್ತದೆ. ಇದು ಸಾಧನೆಗೂ ಅವಕಾಶ ಕಲ್ಪಿಸುತ್ತದೆ. ಉದ್ದೇಶ ಇರುವವರು ಎತ್ತರಕ್ಕೆ ಬೆಳೆಯಲು ಮತ್ತು ಜೀವನದಲ್ಲಿ ಏನಾದರೂ ಸಾಧಿಸಲು ಸಾಧ್ಯ.


ವೈಫಲ್ಯವು ಪ್ರಗತಿಯಲ್ಲಿನ ಯಶಸ್ಸಿನ ಒಂದು ಭಾಗ.

Top Kannada Inspirational Quotes

Kannada inspirational quotes ಅರ್ಥ : ನಾವು ಏನಾದಾರೂ ಕೆಲಸ ಮಾಡುವಾಗ ಕೆಲವೊಮ್ಮೆ ವಿಫಲಗೊಳ್ಳುವುದು ಸಾಮಾನ್ಯ. ಈ ವೈಫಲ್ಯವು ಕೂಡ ಯಶಸ್ಸಿನ ಒಂದು ಭಾಗ ಎನ್ನುವುದನ್ನು ಅರಿಯಬೇಕು. ಯಾವಾಗ ನಾವು ವೈಫಲ್ಯದಿಂದ ವಿರಚಿತಗೊಳ್ಳದೆ ಸರಿಯಾದ ಮಾರ್ಗದ ಮೂಲಕ ಮುಂದುವರಿದರೆ ಆಗ ಯಶಸ್ಸು ಖಚಿತವಾಗಿ ದೊರೆಯುತ್ತದೆ.


ಯಾವುದೇ ಆಗಲಿ ಮುಗಿಯುವವರೆಗೆ ಯಾವಾಗಲೂ ಅಸಾಧ್ಯವೆಂದೇ ತೋರುತ್ತದೆ.

Top Kannada Inspirational Quotes

Kannada inspirational quotes ಅರ್ಥ : ನಾವು ಏನೇ ಮಾಡುವ ಮುಂಚೆ ನಮ್ಮ ಕಣ್ಣಿಗೆ ಎಲ್ಲವೂ ಅಸಾಧ್ಯವಾಗಿಯೇ ಗೋಚರಿಸುತ್ತದೆ. ಪ್ರಯತ್ನ ಪಡದೆ ಜೀವನದಲ್ಲಿ ಏನೂ ಗಳಿಸಲು ಸಾಧ್ಯವಿಲ್ಲ. ನಾವು ನಮಗೆ ಅಸಾಧ್ಯವಾಗಿ ಕಾಣುವುದನ್ನು ಹೇಗೆ ಸಾಧ್ಯವಾಗಿಸುವುದು ಎಂಬುದರ ಕುರಿತು ಯೋಚಿಸಬೇಕು ಮತ್ತು ಅಸಾಧ್ಯವಾದುದನ್ನು ಸಾಧ್ಯವಾಗಿಸಿದವರನ್ನು ಅನುಸರಿಸುವ ಮೂಲಕ ನಾವು ಗೆಲುವು ಸಾಧಿಸಬಹುದು.


ನಾವು ಮನಸ್ಸಿನಲ್ಲಿ ಏನು ಆಲೋಚಿಸುತ್ತೇವೆಯೋ ಅದೇ ಆಗುತ್ತೇವೆ.

Top Kannada Inspirational Quotes

Kannada inspirational quotes ಅರ್ಥ : ನಾವು ನಮ್ಮ ಮನಸ್ಸಿನಲ್ಲಿ ಯಾವಾಗಲೂ ಒಳ್ಳೆಯ ಧನಾತ್ಮಕ ವಿಚಾರಗಳನ್ನು ಬೆಳೆಸಿಕೊಳ್ಳಬೇಕೇ ಹೊರತು ನಕಾರಾತ್ಮಕ ವಿಚಾರಗಳನ್ನಲ್ಲ. ಏಕೆಂದರೆ ನಾವು ನಮ್ಮ ಮನಸ್ಸಿನಲ್ಲಿ ಒಳ್ಳೆಯ ಆಲೋಚನೆಗಳನ್ನು ಮಾಡುವುದರಿಂದ ನಮ್ಮಲ್ಲಿ ಒಳ್ಳೆಯ ಭಾವನೆಗಳು ಮೂಡುತ್ತವೆ ಮತ್ತು ಇದು ನಮ್ಮ ವ್ಯಕ್ತಿತ್ವದ ಮೇಲೆ ಪರಿಣಾಮ ಬೀರುತ್ತದೆ.


ಪ್ರತಿಯೊಬ್ಬ ವ್ಯಕ್ತಿಯೂ ಪುಸ್ತಕವಿದ್ದಂತೆ ಹಾಗೂ ಪ್ರತಿ ವರ್ಷವೂ ಒಂದು ಅಧ್ಯಾಯವಿದ್ದಂತೆ.

Top Kannada Inspirational Quotes

Kannada inspirational quotes ಅರ್ಥ : ಪ್ರತಿಯೊಬ್ಬ ಮನುಷ್ಯ ಕೂಡ ಒಂದು ವಿಧದಲ್ಲಿ ಪುಸ್ತಕವಿದ್ದ ಹಾಗೆ ಮತ್ತು ಅದರಲ್ಲಿ ಪ್ರತಿಯೊಂದು ವರ್ಷವು ಒಂದು ಅಧ್ಯಾಯ ಇದ್ದಂತೆ. ಈ ಪುಸ್ತಕದ ನಿಜವಾದ ಬರಹಗಾರ ನೀವೇ ಆಗಿರುತ್ತೀರಿ. ಪ್ರತಿ ವರ್ಷವೆಂಬ ಈ ಅಧ್ಯಾಯದಲ್ಲಿ ನೀವು ಏನು ಬರೆಯುತ್ತೀರೆಂಬುದು ನಿಮಗೆ ಬಿಟ್ಟಿರುತ್ತದೆ. ಕಳೆದ ವರ್ಷ ನೀವು ತಪ್ಪುಗಳನ್ನು ಮಾಡಿದ್ದರೆ ಅಥವಾ ನೀವು ಸಾಧಿಸಬೇಕೆಂಬುದನ್ನು ಸಾಧಿಸಲು ಸಾಧ್ಯವಾಗದೆ ಇದ್ದರೆ ಬರುವ ಹೊಸ ವರ್ಷದಲ್ಲಿ ನೀವು ಬದಲಾವಣೆಗಳನ್ನು ಮಾಡಿಕೊಂಡು, ತಪ್ಪುಗಳನ್ನು ತಿದ್ದಿಕೊಂಡು ನಿಮ್ಮ ಸಾಧನೆಗೆ ಸಜ್ಜಾಗಬೇಕು. ಹೊಸ ವರ್ಷವೆಂಬ ಈ ಅಧ್ಯಾಯವನ್ನು ಬರೆಯುವ ಜವಾಬ್ದಾರಿ ನಿಮ್ಮ ಕೈಲಿರುತ್ತದೆ.


ಅಡಚಣೆಯನ್ನು ಮೆಟ್ಟಿಲೆಂದು ಭಾವಿಸಿ.

Top Kannada Inspirational Quotes

Kannada inspirational quotes ಅರ್ಥ : ಜೀವನದಲ್ಲಿ ನಾವು ಮುಂದೆ ಸಾಗುತ್ತಿರುವಾಗ ನಮಗೆ ಅಡಚಣೆಗಳು ಉಂಟಾಗುವುದು ಸಹಜ. ಎಷ್ಟೇ ಅಡಚಣೆ ಇದ್ದರೂ ಇಂತಹ ಅಡಚಣೆಗಳಿಂದ ವಿಮುಖರಾಗದೆ ನಾವು ಸಾಗುವ ದಾರಿಯಲ್ಲಿ ಮುನ್ನಡೆಯುವುದು ಅವಶ್ಯಕ. ಈ ಅಡಚಣೆಗಳನ್ನು ನಮ್ಮ ಮೆಟ್ಟಿಲಾಗಿ ಮಾಡಿಕೊಂಡು ಸಾಗಿದರೆ ನಮಗೆ ಗೆಲುವು ಸಿಗುವುದರಲ್ಲಿ ಯಾವುದೇ ಸಂದೇಹವಿಲ್ಲ.


Few More Nice Kannada Inspirational Quotes

ಪ್ರತಿ ದಿನವೂ ಒಳ್ಳೆಯ ದಿನವಲ್ಲದಿರಬಹುದು ಆದರೆ ಪ್ರತಿ ದಿನದಲ್ಲಿ ಒಳ್ಳೆಯದು ಇದ್ದೆ ಇರುತ್ತದೆ.

Nice Kannada Inspirational Quotes

Kannada inspirational quotes ಅರ್ಥ : ಕೆಲವು ದಿನಗಳು ನಾವು ಅಂದುಕೊಂಡಂತೆ ಇರದೇ ಇರಬಹುದು. ಆದರೆ ಪ್ರತಿದಿನವೂ ನಮಗೆ ಸಿಗುವ ಒಂದು ಅವಕಾಶವಾಗಿರುತ್ತದೆ. ಯಾವುದೇ ದಿನ ನಮಗೆ ಎಷ್ಟೇ ಕಷ್ಟವಾಗಿದ್ದರೂ ಆ ದಿನದಲ್ಲಿ ನಮಗೆ ಏನಾದರೂ ಒಂದು ಒಳಿತು ಇದ್ದೆ ಇರುತ್ತದೆ. ಎಲ್ಲ ದಿನಗಳು ಒಳ್ಳೆಯ ದಿನಗಳಾಗಿರುವುದು ಅಸಾಧ್ಯ. ಆದ್ದರಿಂದ ನಡೆದದ್ದನ್ನು ಸ್ವೀಕರಿಸಿ ಮುನ್ನಡೆಯಬೇಕು.


ಜೀವನವು 10% ನಮಗೆ ಏನಾಗುತ್ತದೆ ಮತ್ತು 90% ನಾವು ಅದಕ್ಕೆ ಹೇಗೆ ಪ್ರತಿಕ್ರಿಯಿಸುತ್ತೇವೆ ಎನ್ನುವುದಾಗಿದೆ.

Nice Kannada Inspirational Quotes

Kannada inspirational quotes ಅರ್ಥ : ನಮ್ಮ ಜೀವನದಲ್ಲಿ 10% ನಮಗೆ ಏನಾಗುತ್ತದೆ ಎಂಬುದರ ಮೇಲೆ ಅವಲಂಬಿತವಾದರೆ ಉಳಿದ 90% ನಾವು ಅದಕ್ಕೆ ಹೇಗೆ ಪ್ರತಿಕ್ರಿಯೆ ನೀಡುತ್ತೇವೆ ಎಂಬುದರ ಕುರಿತಾಗಿದೆ. ಏನೇ ಆದರೂ ಯಾವುದರ ಕುರಿತು ಹೆಚ್ಚು ತಲೆ ಕೆಡಿಸಿಕೊಳ್ಳದೆ ಎಷ್ಟು ಸಮಾಧಾನವಾಗಿರುತ್ತೇವೆಯೋ ಮತ್ತು ಹೇಗೆ ಪ್ರತಿಕ್ರಿಯಿಸುತ್ತೇವೆಯೋ ಅದರಂತೆ ನಮ್ಮ ಜೀವನ ರೂಪುಗೊಳ್ಳುತ್ತದೆ.


ಜೀವನದ ಮೊದಲನೇ ನಿಯಮ, ನಿಮಗೆ ಖುಷಿ ಕೊಡುವ ಕೆಲಸ ಮಾಡಿ.

Nice Kannada Inspirational Quotes

Kannada inspirational quotes ಅರ್ಥ :  ನಾವು ಜೀವನದಲ್ಲಿ ಖುಷಿಯಾಗಿ ಇರಬೇಕೆಂದರೆ ನಮಗಿಷ್ಟವಾದ ಕೆಲಸಗಳನ್ನು ಮಾಡಬೇಕು. ನಮಗಿಷ್ಟವಾದ ಕೆಲಸಗಳನ್ನು ಮಾಡುವುದರಿಂದ ನಮಗೆ ಅದರಲ್ಲಿ ತೃಪ್ತಿ ದೊರೆಯುತ್ತದೆ ಮತ್ತು ನಾವು ಯಾವಾಗಲೂ ಉಲ್ಲಾಸದಿಂದ ಇರಲು ಸಹಾಯ ಆಗುತ್ತದೆ.


ಪ್ರತಿದಿನ ನಿಮ್ಮ ಜೀವನವು ಈಗಷ್ಟೇ ಪ್ರಾರಂಭವಾಗಿದೆ ಎಂಬಂತೆ ಜೀವಿಸಿ.

Nice Kannada Inspirational Quotes

Kannada inspirational quotes ಅರ್ಥ : ಪ್ರತಿದಿನವೂ ನಮಗೆ ದೊರೆತಿರುವ ಹೊಸ ಅವಕಾಶ. ಈ ಅವಕಾಶವನ್ನು ನಾವು ಯಾವ ರೀತಿ ಬಳಸಿಕೊಳ್ಳುತ್ತೇವೆ ಎಂಬುದು ನಮ್ಮ ಕೈಯಲ್ಲಿದೆ. ನಿನ್ನೆ ಏನೇ ನಡೆದಿದ್ದರೂ ಅಂದರೆ ಹಿಂದಿನ ಕಹಿ ಘಟನೆಗಳನ್ನು ಮರೆತು ಪ್ರತಿದಿನವನ್ನು ಹೊಸತಾಗಿ ಸ್ವಾಗತಿಸಬೇಕು. ಪ್ರತಿದಿನವೂ ಹೊಸತನ್ನು ಕಲಿಯಲು ಹೊಸತನ್ನು ಸೃಷ್ಠಿಸಲು ಉಪಯೋಗಿಸಿಕೊಳ್ಳಬೇಕು. ಹೇಗೆ ನಾವು ಹೊಸ ವರ್ಷದಂದು ಹಿಂದಿನ ವರ್ಷದ ಘಟನೆಗಳನ್ನು ಮರೆತು ಹೊಸ ವರ್ಷದಲ್ಲಿ ಹೊಸ ಯೋಜನೆಗಳನ್ನು ಮಾಡಿಕೊಳ್ಳುತ್ತೇವೆಯೋ ಹಾಗೆಯೇ ಪ್ರತಿದಿನ ಹೊಸ ಜೀವನ ಎಂಬಂತೆ ಭಾವಿಸಬೇಕು.


ಯಶಸ್ವಿ ವ್ಯಕ್ತಿ ಮತ್ತು ಇತರರ ನಡುವಿನ ವ್ಯತ್ಯಾಸವೆಂದರೆ ಶಕ್ತಿಯ ಕೊರತೆಯಲ್ಲ, ಜ್ಞಾನದ ಕೊರತೆಯಲ್ಲ ಆದರೆ ಇಚ್ಛೆಯ ಕೊರತೆ.

Nice Kannada Inspirational Quotes

Kannada inspirational quotes ಅರ್ಥ : ಯಾವುದಾದರೂ ಕ್ಷೇತ್ರದಲ್ಲಿ ಯಶಸ್ಸು ಗಳಿಸಿರುವವರು ಮತ್ತು ಇತರರ ನಡುವಿನ ವ್ಯತ್ಯಾಸ ಎಂದರೆ ಶಕ್ತಿ ಅಥವಾ ಜ್ಞಾನದ ಕೊರತೆ ಅಲ್ಲ ಅದು ಕೇವಲ ನಮ್ಮ ಮನೋಬಲದ ಕೊರತೆಯಾಗಿರುತ್ತದೆ. ಅವರಲ್ಲಿರುವ ಅತೀವ ಇಚ್ಚಾ ಶಕ್ತಿ ಮತ್ತು ಸಾಧಿಸುವ ಹಂಬಲ ಅವರನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ. ಆದ್ದರಿಂದ ನಾವು ಕೂಡ ದೃಢವಾದ ಸಂಕಲ್ಪ ಮಾಡುವ ಮೂಲಕ ಯಶಸ್ವಿ ವ್ಯಕ್ತಿ ಆಗಬಹುದು.


ನಿಮ್ಮಲ್ಲಿ ಏನಿದೆ, ನೀವು ಎಲ್ಲಿದ್ದೀರಿ, ಎನ್ನುವುದಕ್ಕಿಂತ ನಿಮ್ಮಿಂದ ಏನು ಸಾಧ್ಯ ಎನ್ನುವುದು ಮುಖ್ಯ.

Nice Kannada Inspirational Quotes

Kannada inspirational quotes ಅರ್ಥ : ಅನೇಕ ಬಾರಿ ನಾವು ನನಗೆ ಆ ಸವಲತ್ತುಗಳು ದೊರೆತಿಲ್ಲ ಮತ್ತು ನಾನು ಆ ಸ್ಥಳದಲ್ಲಿ ಅಥವಾ ಊರಿನಲ್ಲಿ ಇಲ್ಲ ಎಂದು ಕೊರಗುತ್ತೇವೆ. ಅದರ ಬದಲು ನಾವು ಎಲ್ಲಿ ಇರುತ್ತೇವೆ ಮತ್ತು ನಮ್ಮಲ್ಲಿ ಏನು ಸಾಮರ್ಥ್ಯ ಇದೆ ಅವುಗಳ ಮೂಲಕ ನಾವು ಏನು ಸಾಧಿಸಲು ಸಾಧ್ಯ ಎನ್ನುವ ಪ್ರಯತ್ನ ಮಾಡಬೇಕು. ಈಗ ಯಶಸ್ವಿ ಆಗಿರುವ ವ್ಯಕ್ತಿಗಳ ಬಳಿ ಒಂದಾನೊಂದು ಕಾಲದಲ್ಲಿ ಏನು ಇರಲಿಲ್ಲ ಎಂಬುದನ್ನು ನಾವು ಅರಿಯಬೇಕು.


ವೈಫಲ್ಯಗಳ ಬಗ್ಗೆ ಚಿಂತಿಸಬೇಡಿ, ಪ್ರಯತ್ನ ಪಡದೆ ಇದ್ದರೆ ನೀವು ಕಳೆದುಕೊಳ್ಳುವ ಅವಕಾಶಗಳ ಬಗ್ಗೆ ಚಿಂತಿಸಿ.

Nice Kannada Inspirational Quotes

ಅರ್ಥ : ನಾವು ಒಮ್ಮೊಮ್ಮೆ ಸೋಲಬಹುದು ಎಂಬ ಭಯದಿಂದ ಅಥವಾ ಆತಂಕದಿಂದ ನಾವು ಕೆಲಸದಿಂದ ಅಥವಾ ಜವಾಬ್ದಾರಿ ಇಂದ ಹಿಂದೆ ಸರಿಯುತ್ತೇವೆ. ಹೀಗೆ ಪ್ರಯತ್ನ ಪಡದೆ ಹಿಂದೆ ಸರಿದರೆ ಅದರಿಂದ ನಾವು ಕಳೆದುಕೊಳ್ಳುವ ಅವಕಾಶದ ಬಗ್ಗೆ ಯೋಚಿಸುವುದಿಲ್ಲ. ಆದ್ದರಿಂದ ಪ್ರತಿಯೊಂದು ಕೆಲಸವು ನಮ್ಮ ಸಾಮರ್ಥ್ಯ ಪ್ರದರ್ಶಿಸಲು ದೊರೆತಿರುವ ಅವಕಾಶ ಎಂದೇ ಭಾವಿಸಬೇಕು.


These quotes inspire us towards and focus towards our life, our goal our aim. I believe these Kannada inspirational quotes can help you to change your mood and inspire you to do your best work.

You can find best motivational quotes in Kannada along with their meaning.