Gaalipata 2 full Kannada movie watch online 2022
Table of Contents
Here you will find details about upcoming Gaalipata 2 Kannada full movie along with story of the movie, it’s cast, trailer of the movie, movie first look, it’s songs, movie release date, how to watch Gaalipata 2 Kannada full movie online and download the movie.
Story of Gaalipata 2 Kannada Full Movie
Gaalipata 2 Kannada movie ಎಂಬುದು 2008 ರಲ್ಲಿ ಬಿಡುಗಡೆಯಾದ ಗಾಳಿಪಟ ಚಿತ್ರದ ಮುಂದುವರಿದ ಭಾಗವಾಗಿದೆ. ಗಾಳಿಪಟ ಚಲನಚಿತ್ರದಂತೆಯೇ, ಗಾಳಿಪಟ 2 ಕೂಡ ಒಂದು ರೊಮ್ಯಾಂಟಿಕ್ ಮತ್ತು ಹಾಸ್ಯಭರಿತ ಚಲನಚಿತ್ರವಾಗಿದೆ. ಚಿತ್ರದಲ್ಲಿ ನಟರಾದ ಗೋಲ್ಡನ್ ಸ್ಟಾರ್ ಗಣೇಶ್, ದಿಗಂತ್ ಮತ್ತು ಪವನ್ ಕುಮಾರ್ ಮುಖ್ಯ ಭೂಮಿಕೆಯಲ್ಲಿದ್ದಾರೆ. 2ನೇ ಡಿಸೆಂಬರ್ 2019 ರಲ್ಲಿ ಚಿತ್ರದ ಚಿತ್ರೀಕರಣ ಪ್ರಾರಂಭವಾಯಿತು ಮತ್ತು ಕೋವಿಡ್ನಿಂದಾಗಿ ಸ್ವಲ್ಪ ಸಮಯದವರೆಗೆ Gaalipata 2 ಚಿತ್ರದ ಚಿತ್ರೀಕರಣ ನಿಲ್ಲಿಸಲಾಯಿತು. ಚಿತ್ರತಂಡವು ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿದ ನಂತರ ಅದನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ.
2008 ರ ಗಾಳಿಪಟ ಚಿತ್ರಕ್ಕೆ ಹೋಲಿಸಿದರೆ Gaalipata 2 movieಯ ಕಥೆ ಸಂಪೂರ್ಣವಾಗಿ ವಿಭಿನ್ನವಾಗಿದೆ. ಈ ಸಿನಿಮಾ ಯುವ ಪೀಳಿಗೆಯ ಇಂದಿನ ಸಾಮಾಜಿಕ ಜೀವನ ಶೈಲಿ ಆಧರಿಸಿದೆ. ಕುದುರೆಮುಖ ಮತ್ತು ಹತ್ತಿರದ ಸ್ಥಳಗಳಲ್ಲಿ ಚಿತ್ರದ ಶೂಟಿಂಗ್ ಮಾಡಲಾಗಿದೆ ಎಂದು ತಂಡ ಸಂದರ್ಶನವೊಂದರಲ್ಲಿ ತಿಳಿಸಿದೆ.
Gaalipata 2 Kannada Full Movie Star Cast
Gaalipata 2 Kannada movie cast ಕೆಳಕಂಡಂತಿದೆ.
- ನಾಯಕ ನಟ ಗೋಲ್ಡನ್ ಸ್ಟಾರ್ ಗಣೇಶ್
- ನಾಯಕ ನಟ ದಿಗಂತ್
- ನಾಯಕ ನಟ ಪವನ್ ಕುಮಾರ್
- ಹಿರಿಯ ನಟ ಅನಂತ್ ನಾಗ್
- ನಾಯಕಿ ನಟಿ ವೈಭವಿ ಶಾಂಡಿಲ್ಯ
- ನಾಯಕಿ ನಟಿ ಸಂಯುಕ್ತಾ ಮೆನನ್
- ನಾಯಕಿ ನಟಿ ಶರ್ಮಿಳಾ ಮಾಂಡ್ರೆ
- ನಿಶ್ವಿಕಾ ನಾಯ್ಡು
ಈ ಮೇಲ್ಕಂಡ ನಟ, ನಟಿಯರೊಂದಿಗೆ ಇನ್ನೂ ಅನೇಕ ತಾರೆಯರನ್ನು Gaalipata 2 Kannada movieಯಲ್ಲಿ ಕಾಣಬಹುದಾಗಿದೆ.
About Director and Producer of Gaalipata 2 Kannada Full Movie
2008 ರ ಗಾಳಿಪಟ ಚಿತ್ರದ ನಿರ್ದೇಶಕ ಯೋಗರಾಜ್ ಭಟ್ Gaalipata 2 Kannada movie director. ಯೋಗರಾಜ್ ಭಟ್ ಅವರು 2001 ರಲ್ಲಿ ಕನ್ನಡ ಚಿತ್ರರಂಗದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಗೋಲ್ಡನ್ ಸ್ಟಾರ್ ಗಣೇಶ್ ಅವರೊಂದಿಗೆ ಇದು ಯೋಗರಾಜ್ ಭಟ್ ಅವರ ನಾಲ್ಕನೇ ಚಿತ್ರವಾಗಿದೆ. ಗಣೇಶ್ ಜೊತೆಗಿನ ಅವರ ಮೊದಲ ಚಿತ್ರ “ಮುಂಗಾರು ಮಳೆ” ಇದು ಕನ್ನಡ ಚಲನಚಿತ್ರೋದ್ಯಮದಲ್ಲಿ ಸೂಪರ್ಹಿಟ್ ಚಲನಚಿತ್ರವಾಗಿತ್ತು. “ಮುಂಗಾರು ಮಳೆ” ಯಶಸ್ಸಿನ ನಂತರ ಯೋಗರಾಜ್ ಭಟ್ ಅವರ ಮುಂದಿನ ಚಿತ್ರ 2008 ರಲ್ಲಿ ಗಾಳಿಪಟ, ಇದು ಕೂಡ ಕನ್ನಡದಲ್ಲಿ ಸೂಪರ್ ಹಿಟ್ ಚಿತ್ರ ಆಗಿತ್ತು. ಈಗ ಈ Gaalipata 2 Kannada movie ಗಾಳಿಪಟದ ಮುಂದುವರಿದ ಭಾಗವಾಗಿದೆ. ಯೋಗರಾಜ್ ಭಟ್ ಅವರು 2017 ರಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ “ಮುಗುಳು ನಗೆ” ಮತ್ತೊಂದು ಸಿನಿಮಾ ಮಾಡಿದ್ದಾರೆ. ಈಗ ಇದು ನಟ ಗಣೇಶ್ ಜೊತೆ ನಿರ್ದೇಶಕ ಯೋಗರಾಜ್ ಭಟ್ ಅವರ ನಾಲ್ಕನೇ ಸಿನಿಮಾ.
ನಿರ್ದೇಶಕ ಯೋಗರಾಜ್ ಭಟ್ ಮತ್ತು ನಾಯಕ ನಟ ಗೋಲ್ಡನ್ ಸ್ಟಾರ್ ಗಣೇಶ್ ಇಬ್ಬರೂ ಜೊತೆಗೂಡಿ ಈವರೆಗೆ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿರುವುದರಿಂದ Gaalipata 2 Kannada movie ಬಗ್ಗೆ ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚಿದೆ. ಚಿತ್ರದ ಕಥೆಯ ಬಗ್ಗೆ ಪ್ರೇಕ್ಷಕರು ಕುತೂಹಲದಿಂದ ಕಾಯುತ್ತಿದ್ದಾರೆ ಮತ್ತು ಚಿತ್ರದ ಬಿಡುಗಡೆಗಾಗಿ ಕಾತುರದಿಂದ ಕಾಯುತ್ತಿದ್ದಾರೆ. ಗಾಳಿಪಟ ಮೊದಲ ಸಿನಿಮಾದಂತೆ ಈ ಸಿನಿಮಾ ಕೂಡ ಅದ್ಭುತ ಮನರಂಜನಾ ಸಿನಿಮಾ ಆಗಿರಲಿದೆ ಎಂಬುದು ಕನ್ನಡ ಸಿನಿ ಪ್ರೇಕ್ಷಕರ ನಿರೀಕ್ಷೆ. Gaalipata 2 Kannada movie producer ಸೂರಜ್ ಪ್ರೊಡಕ್ಷನ್ನ ರಮೇಶ್ ರೆಡ್ಡಿ.
Music and Songs of Gaalipata 2 Kannada Movie
Gaalipata 2 ಚಿತ್ರಕ್ಕೆ ಕನ್ನಡದ ಜನಪ್ರಿಯ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಇನ್ನೂ ಚಿತ್ರದ ಹಾಡುಗಳು ಬಿಡುಗಡೆಯಾಗಿಲ್ಲ. Gaalipata 2 movieಯ ಹಾಡುಗಳನ್ನು ಸದ್ಯದಲ್ಲೇ ಬಿಡುಗಡೆ ಮಾಡುವ ನಿರೀಕ್ಷೆಯಿದೆ.
Heroes of Gaalipata 2 Kannada Full Movie
ಮೇಲೆ ಹೇಳಿದಂತೆ 2008 ರಲ್ಲಿ ಬಿಡುಗಡೆಯಾದ ಚಿತ್ರ ಗಾಳಿಪಟ ಮೊದಲ ಭಾಗದಲ್ಲಿರುವಂತೆ Gaalipata 2 Kannada movieಯಲ್ಲಿ ಸಹ ಮೂವರು ನಾಯಕ ನಟರಿದ್ದಾರೆ. ನಾಯಕ ನಟರಾದ ಗೋಲ್ಡನ್ ಸ್ಟಾರ್ ಗಣೇಶ್, ದಿಗಂತ್ ಮತ್ತು ಪವನ್ ಈ ಚಿತ್ರದಲ್ಲಿದ್ದಾರೆ.
Ganesh
ಕನ್ನಡದ ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಜೊತೆ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ನಾಲ್ಕನೇ ಸಿನಿಮಾ ಇದಾಗಿದೆ. ನಟ ಗಣೇಶ್ ಇದುವರೆಗೆ ಕನ್ನಡದಲ್ಲಿ ಒಟ್ಟು 50 ಸಿನಿಮಾಗಳಲ್ಲಿ ನಟಿಸಿದ್ದಾರೆ. ಪ್ರಮುಖ ಪಾತ್ರದಲ್ಲಿ ಅವರು 38 ಸಿನಿಮಾಗಳಲ್ಲಿ ನಟಿಸಿದ್ದಾರೆ ಮತ್ತು ಅವರ ಇನ್ನೂ 3 ಸಿನಿಮಾಗಳು ಬಿಡುಗಡೆಯಾಗಬೇಕಿದೆ. ಅದರಲ್ಲಿ Gaalipata 2 movie ಕೂಡ ಒಂದು.
ಗೋಲ್ಡನ್ ಸ್ಟಾರ್ ಗಣೇಶ್ ನಾಯಕ ನಟರಾಗುವ ಮೊದಲಿಗೆ ದೂರದರ್ಶನ ಚಾನೆಲ್ಗಳಲ್ಲಿ ನಿರೂಪಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರ ಮೊದಲ ಚಿತ್ರ “ಚೆಲ್ಲಾಟ” ಮಧ್ಯಮ ಯಶಸ್ಸಿನ ಚಲನಚಿತ್ರವಾಗಿತ್ತು. 2006 ರಲ್ಲಿ ಬಿಡುಗಡೆಯಾದ ಅವರ ಎರಡನೇ ಚಿತ್ರ “ಮುಂಗಾರು ಮಳೆ” ನಲ್ಲಿ ಭಾರಿ ಯಶಸ್ಸು ಕಂಡಿತು. ಯೋಗರಾಜ್ ಭಟ್ ಈ ಚಿತ್ರದ ನಿರ್ದೇಶಕರು.
“ಮುಂಗಾರು ಮಳೆ” ಕನ್ನಡ ಚಿತ್ರರಂಗದಲ್ಲಿ ಭಾರೀ ಹಿಟ್ ಆಗಿತ್ತು. ಈ ಸಿನಿಮಾ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ನಿರ್ದೇಶಕ ಯೋಗರಾಜ್ ಭಟ್ ಇಬ್ಬರ ಬದುಕನ್ನೂ ಬದಲಿಸಿದೆ. ಚಿತ್ರವು ಅವರಿಗೆ “ಗೋಲ್ಡನ್ ಸ್ಟಾರ್” ಎಂಬ ಉಪನಾಮವನ್ನು ನೀಡಿತು. ಚಿತ್ರವು ಸುಮಾರು 865 ದಿನಗಳ ಕಾಲ ಚಿತ್ರಮಂದಿರದಲ್ಲಿ ಓಡಿತು. ಈ ಚಿತ್ರವು ನಟ ಗಣೇಶ್ ಕನ್ನಡದ ಖ್ಯಾತ ನಾಯಕ ನಟನಾಗಲು ಮತ್ತು ಯೋಗರಾಜ್ ಭಟ್ ಶ್ರೇಷ್ಠ ನಿರ್ದೇಶಕರಾಗಲು ಹಲವು ಅವಕಾಶಗಳನ್ನು ತೆರೆಯಿತು.
Diganth
Gaalipata 2 Kannada movieಯಲ್ಲಿ ಇರುವ ಮತ್ತೊಬ್ಬ ನಾಯಕ ನಟರೆಂದರೆ ಅವರು ದಿಗಂತ್. ಅವರು 2006 ರಲ್ಲಿ ಕನ್ನಡ ಚಲನಚಿತ್ರೋದ್ಯಮಕ್ಕೆ ಪ್ರವೇಶಿಸಿದ ಮಾಡೆಲ್ ಕಮ್ ಭಾರತೀಯ ನಟ. ದಿಗಂತ್ ಅವರು ಗಾಳಿಪಟ ಮೊದಲ ಭಾಗ (2008) ನಲ್ಲಿನ ಅವರ ನಟನೆಗೆ ಹೆಚ್ಚು ಹೆಸರುವಾಸಿಯಾಗಿದ್ದಾರೆ. ಅಲ್ಲಿ ದಿಗಂತರವರಿಗೆ ದೊರೆತ “ದೂಧಪೇಡ” ಎಂಬ ಹೆಸರಿನಿಂದ ಅವರು ಹೆಚ್ಚು ಜನಪ್ರಿಯರಾದರು. ಇದುವರೆಗೆ ದಿಗಂತ್ ಒಟ್ಟು 36 ಸಿನಿಮಾಗಳಲ್ಲಿ ನಟಿಸಿದ್ದು, ಅವರ ಇನ್ನೂ 6 ಸಿನಿಮಾಗಳು ಬಿಡುಗಡೆಯಾಗಬೇಕಿದೆ. ದಿಗಂತ್ ಕನ್ನಡ ಮಾತ್ರವಲ್ಲದೆ ತುಳು, ಹಿಂದಿ ಮತ್ತು ತೆಲುಗು ಭಾಷೆಯ ಸಿನಿಮಾಗಳಲ್ಲೂ ನಟಿಸಿದ್ದಾರೆ.
Pawan Kumar
Gaalipata 2 movie ಚಿತ್ರದ ಮತ್ತೊಬ್ಬ ನಾಯಕ ನಟರೆಂದರೆ ಪವನ್ ಕುಮಾರ್. ಇದುವರೆಗೆ ಪವನ್ ಒಟ್ಟು 12 ಸಿನಿಮಾಗಳಲ್ಲಿ ನಟಿಸಿದ್ದಾರೆ. ನಟನೆಯ ಜೊತೆಗೆ ಪವನ್ ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕ, ನಿರ್ಮಾಪಕ ಮತ್ತು ಚಿತ್ರಕಥೆಗಾರರಾಗಿಯೂ ಕೂಡ ಕೆಲಸ ಮಾಡಿದ್ದಾರೆ. ಕನ್ನಡದಲ್ಲಿ ಹಿಟ್ ಆದ ಮನಸಾರೆ ಮತ್ತು ಪಂಚರಂಗಿಯಂತಹ ಚಿತ್ರದ ಕಥೆ ಪವನ್ ಬರೆದಿದ್ದಾರೆ. ಅಷ್ಟೇ ಅಲ್ಲದೆ ಪವನ್ ಅವರು ನಿರ್ದೇಶಕರಾಗಿ ಕೆಲಸ ಮಾಡಿದ ಲೈಫ್ಯು ಇಷ್ಟೇನೆ ಮತ್ತು ಲೂಸಿಯಾ ಚಲನಚಿತ್ರಗಳು ಅವರಿಗೆ ಹೆಚ್ಚು ಖ್ಯಾತಿಯನ್ನು ತಂದುಕೊಟ್ಟವು. ಪವನ್ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ ಮತ್ತು ಡೈರೆಕ್ಟರಿ ಮತ್ತು ಕಥೆ ಬರಹಗಾರರಾಗಿ ಅವರ ಕೃತಿಗಳಿಗಾಗಿ ಹಲವು ಬಾರಿ ಪ್ರಶಸ್ತಿಗಳಿಗೆ ನಾಮಿನೇಟ್ ಕೂಡ ಆಗಿದ್ದಾರೆ.
Heroines of Gaalipata 2 Kannada Full Movie
Vaibhavi Shandilya
ವೈಭವಿ ಶಾಂಡಿಲ್ಯ ಒಬ್ಬ ಭಾರತೀಯ ನಟಿ, ಕನ್ನಡ, ತಮಿಳು ಮತ್ತು ಮರಾಠಿ ಭಾಷೆಯ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಅವರು 2015 ಭಾಷೆಯಲ್ಲಿ ಮರಾಠಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದರು. Gaalipata 2 Kannada movie ಚಿತ್ರ ಬದುಕಿನಲ್ಲಿ ಅವರ ಎರಡನೇ ಚಿತ್ರ. ವೈಭವಿ ಕನ್ನಡದಲ್ಲಿ ಒಟ್ಟು ಮೂರು ಸಿನಿಮಾ ಮಾಡಿದ್ದಾರೆ. ಮೊದಲ ಚಿತ್ರ 2017 ರಲ್ಲಿ ಬಿಡುಗಡೆಯಾಯಿತು ಮತ್ತು ಎರಡು ಇನ್ನೂ ಬಿಡುಗಡೆಯಾಗಬೇಕಿದೆ. ಅವರ ಬಿಡುಗಡೆಯಾಗಬೇಕಿರುವ ಚಿತ್ರಗಳಲ್ಲಿ Gaalipata 2 ಚಿತ್ರವೂ ಒಂದು.
Samyuktha Menon
ಮತ್ತೊಬ್ಬ ನಾಯಕಿ ಸಂಯುಕ್ತಾ ಮೆನನ್ ಮಲಯಾಳಂ ಮತ್ತು ತಮಿಳು ಭಾಷೆಯ ಚಿತ್ರಗಳಲ್ಲಿ ನಟಿಸಿರುವ ಖ್ಯಾತ ನಟಿ. Gaalipata 2 movie ಕನ್ನಡದಲ್ಲಿ ಅವರ ಚೊಚ್ಚಲ ಚಿತ್ರ. ಇದುವರೆಗೆ ಸಂಯುಕ್ತಾ ಒಟ್ಟು 14 ಸಿನಿಮಾಗಳಲ್ಲಿ ನಟಿಸಿದ್ದು, ಅವರ ಇನ್ನೂ 5 ಸಿನಿಮಾಗಳು ಬಿಡುಗಡೆಯಾಗಬೇಕಿದೆ. ಬಿಡುಗಡೆಯಾಗಲಿರುವ 5 ಸಿನಿಮಾಗಳಲ್ಲಿ Gaalipata 2 ಕೂಡ ಒಂದು. ಗಾಳಿಪಟ 2 ಚಿತ್ರದ ಮೂಲಕ ಮಠತೊಬ್ಬ ನಟಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ.
Sharmiela Mandre
Gaalipata 2 Kannada Movie ಯಲ್ಲಿ ನಟಿಸಿರುವ ಇನ್ನೊಬ್ಬ ನಟಿಯೆಂದರೆ ಶರ್ಮಿಳಾ ಮಾಂಡ್ರೆ. ಶರ್ಮಿಳಾ ಮಾಂಡ್ರೆ ನಟಿ ಮತ್ತು ನಿರ್ಮಾಪಕಿ. ಶರ್ಮಿಳಾ ಮುಖ್ಯವಾಗಿ ಬಹುತೇಕ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡ ಮಾತ್ರವಲ್ಲದೆ ಒಂದು ತೆಲುಗು ಮತ್ತು ಒಂದು ತಮಿಳಿನ ಸಿನಿಮಾದಲ್ಲೂ ನಟಿಸಿದ್ದಾರೆ. ಅವರು 2007 ರಲ್ಲಿ ಬಿಡುಗಡೆಯಾದ ಸಜನಿ ಚಿತ್ರದ ಮೂಲಕ ಕನ್ನಡ ಚಿತ್ರರಂಗವನ್ನು ಪ್ರವೇಶಿಸಿದರು. ಇದುವರೆಗೆ ಶರ್ಮಿಳಾ ಒಟ್ಟು 16 ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರ ಇನ್ನೂ 3 ಸಿನಿಮಾಗಳು ಬಿಡುಗಡೆಯಾಗಬೇಕಿದೆ. ಶರ್ಮಿಳಾ ಅವರ ಬಿಡುಗಡೆಗೆ ಸಿದ್ದವಾಗಿರುವ ಚಿತ್ರಗಳಲ್ಲಿ Gaalipata 2 ಕೂಡ ಒಂದಾಗಿದೆ.
Gaalipata 2 Kannada Full Movie Trailer and Teaser
Gaalipata 2 movie trailer ಬಗ್ಗೆ ಯಾವುದೇ ಮಾಹಿತಿ ಇಲ್ಲ. ಇದು ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಟ್ರೈಲರ್ ಬಿಡುಗಡೆಯಾದ ನಂತರ ಅದನ್ನು ಶೀಘ್ರದಲ್ಲೇ ಅಪ್ಲೋಡ್ ಮಾಡಲಾಗುತ್ತದೆ.
ಗಾಳಿಪಟ 2 ಚಿತ್ರದ ಮೊದಲ ಟೀಸರ್ ಅನ್ನು 3 ಮಾರ್ಚ್ 2020 ರಂದು ಬಿಡುಗಡೆ ಮಾಡಲಾಯಿತು, 2 ನೇ ಜುಲೈ 2021 ರಂದು ಚಿತ್ರತಂಡವು ಚಿತ್ರದ ಮೋಷನ್ ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ.
How to watch Gaalipata 2 Full Movie Online
Gaalipata 2 Kannada movie online ನಲ್ಲಿ ಬಿಡುಗಡೆ ಮಾಡುವುದರ ಕುರಿತು ಮಾಹಿತಿ ಲಭ್ಯವಾಗಿಲ್ಲ. ಒಂದು ವೇಳೆ Gaalipata 2 movieಯನ್ನು Online Watch ಮಾಡಲು OTT ಪ್ಲಾಟ್ಫಾರ್ಮ್ ನಲ್ಲಿ ಬಿಡುಗಡೆ ಮಾಡುವುದಾದರೆ ಅದರ ಮಾಹಿತಿ ಇಲ್ಲಿ ಹಂಚಿಕೊಳ್ಳಲಾಗುವುದು.
How to Download Gaalipata 2 Full Movie Online
ನೀವು Gaalipata 2 movie download ಮಾಡಲು ಹುಡುಕುತ್ತಿದ್ದರೆ ಅದು ಆನ್ಲೈನ್ ನಲ್ಲಿ ಲಭ್ಯವಿರುವುದಿಲ್ಲ. Gaalipata 2 movie ಯನ್ನು ಪೈರಸಿ ವೆಬ್ಸೈಟ್ ನಿಂದ download ಮಾಡುವುದು ಅಪರಾಧವಾಗಿದೆ. ಭಾರತೀಯ ಕಾನೂನಿನ ಪ್ರಕಾರ ಚಲಚಿತ್ರಗಳನ್ನು ಪೈರಸಿ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ. ಪೈರಸಿ ವೆಬ್ಸೈಟ್ ನಿಂದ ಚಲನಚಿತ್ರಗಳನ್ನು upload ಅಥವಾ download ಅಪರಾಧವಾಗಿದೆ.
ಒಂದು ವೇಳೆ ನೀವು Gaalipata 2 full movieಯನ್ನು ನೋಡಬೇಕೆಂದಿದ್ದರೆ ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲೇ ವೀಕ್ಷಿಸಬೇಕು. ಅಕ್ರಮವಾಗಿ ಚಲನಚಿತ್ರಗಳನ್ನು ವಿತರಿಸುವ ಪೈರಸಿ ವೆಬ್ಸೈಟ್ಗಳಿಂದ ಚಿತ್ರ ಪ್ರಿಯರೆಲ್ಲರೂ ದೂರವಿರಬೇಕು. ಅಂತಹ ವೆಬ್ಸೈಟ್ಗಳನ್ನು ಬಳಸುವುದು ಕಾನೂನುಬಾಹಿರವಾಗಿದೆ.
Disclaimer
ಯಾವುದೇ ಮೂಲ ವಿಷಯವನ್ನು ಪೈರಸಿ ಮಾಡುವುದು ಭಾರತೀಯ ಕಾನೂನಿನ ಅಡಿಯಲ್ಲಿ ಕಾನೂನುಬಾಹಿರವಾಗಿದೆ ಮತ್ತು Kannada Jnaana ಈ ರೀತಿಯ ಪೈರಸಿಯನ್ನು ಬಲವಾಗಿ ವಿರೋಧಿಸುತ್ತದೆ. ಈ ವಿಷಯವನ್ನು ಮಾಹಿತಿಗಾಗಿ ಮಾತ್ರ ಒದಗಿಸಲಾಗಿದೆ. ಇದರ ಉದ್ದೇಶ ಪೈರಸಿ ಅಥವಾ ಕಾನೂನುಬಾಹಿರ ಚಟುವಟಿಕೆಗಳನ್ನು ಉತ್ತೇಜಿಸುವುದು ಅಥವಾ ಯಾವುದೇ ರೀತಿಯಲ್ಲಿ ಉತ್ತೇಜಿಸುವುದು. Gaalipata 2 movieಯನ್ನು ವೀಕ್ಷಿಸಲು ಅಥವಾ download ಮಾಡಲು ಸರಿಯಾದ ಮಾರ್ಗವನ್ನು ಆಯ್ಕೆಮಾಡಿ.
ಪೈರಸಿ ವೆಬ್ಸೈಟ್ಗಳಿಂದ ವಿಷಯವನ್ನು download ಮಾಡುವುದನ್ನು ಭಾರತ ಸರ್ಕಾರವು ನಿಷೇಧಿಸಿದೆ. Gaalipata 2 full movieಯ ಬಗ್ಗೆ ಮಾಹಿತಿ ನೀಡುವುದು ಈ ಲೇಖನದ ಉದ್ದೇಶ.