Feeling Kannada Quotes
Here you will find some best feeling kannada quotes along with their meaning. Feeling is nothing but emotion. Feeling quotes are used to express your feelings to others. These quotes tell exactly how you are feeing. Feeling can be anything happy, sad, serious, inspirational etc. Here you will find all types of feeling quotes in kannada. Sometimes even sad quotes can help to change your mood.
Here you will find short feeling quotes, one line quotes, quotes by some of the famous people and successful people. Hope these feeling quotes help you to change your mood.
ಇಲ್ಲಿ ನೀವು ಕೆಲವು ಉತ್ತಮ ಭಾವನೆಯ ಕನ್ನಡ ಉಲ್ಲೇಖಗಳನ್ನು(Feeling kannada quotes) ಅವುಗಳ ಅರ್ಥದ ಜೊತೆ ಕಾಣಬಹುದು. ನಿಮ್ಮ ಭಾವನೆಗಳನ್ನು ಇತರರಿಗೆ ವ್ಯಕ್ತಪಡಿಸಲು ಭಾವನೆಯ ಉಲ್ಲೇಖಗಳು ಸಹಾಯ ಮಾಡುತ್ತವೆ. ಈ ಉಲ್ಲೇಖಗಳು ನಿಮಗೆ ಹೇಗೆ ಅನಿಸುತ್ತಿದೆ ಎಂಬುದನ್ನು ನಿಖರವಾಗಿ ಹೇಳುತ್ತವೆ. ಭಾವನೆಯು ಸಂತೋಷ, ದುಃಖ, ಗಂಭೀರ, ಸ್ಪೂರ್ತಿದಾಯಕ ಇತ್ಯಾದಿ ಯಾವುದಾದರೂ ಆಗಿರಬಹುದು. ಇಲ್ಲಿ ನೀವು ಎಲ್ಲಾ ರೀತಿಯ ಭಾವನೆಯ ಉಲ್ಲೇಖಗಳನ್ನು ಕನ್ನಡದಲ್ಲಿ ಕಾಣಬಹುದು.
ಇಲ್ಲಿ ನೀವು ಭಾವನೆಯ ಉಲ್ಲೇಖಗಳು (feeling kannada quotes), ಒಂದು ಸಾಲಿನ ಉಲ್ಲೇಖಗಳು, ಕೆಲವು ಪ್ರಸಿದ್ಧ ವ್ಯಕ್ತಿಗಳು ಮತ್ತು ಯಶಸ್ವಿ ವ್ಯಕ್ತಿಗಳ ಉಲ್ಲೇಖಗಳನ್ನು ಕಾಣಬಹುದು.
Best Feeling Kannada Quotes
ವಿಶ್ವದ ಸುಂದರವಾದ ವಸ್ತುಗಳನ್ನು ನೋಡಲು ಅಥವಾ ಸ್ಪರ್ಶಿಸಲು ಸಾಧ್ಯವಿಲ್ಲ, ಅವುಗಳನ್ನು ಹೃದಯದಿಂದ ಅನುಭವಿಸಬೇಕು.
ಅರ್ಥ : ಈ ಪ್ರಕೃತಿಯಲ್ಲಿ ಇರುವ ಸುಂದರವಾದ ವಸ್ತುಗಳನ್ನು ನಮ್ಮಿಂದ ನೋಡಲಾಗಲಿ ಅಥವಾ ಸ್ಪರ್ಶಿಸಲಾಗಲಿ ಸಾಧ್ಯವಿಲ್ಲ. ಅವುಗಳನ್ನು ನಮ್ಮ ಮನಸ್ಸಿನ ಭಾವನೆಗಳಿಂದ ಅನುಭವಿಸಲು ಸಾಧ್ಯವಷ್ಟೇ.
ಇತರರ ದೌರ್ಬಲ್ಯಗಳ ಮೇಲೆ ನಿಮ್ಮ ಭಾವನಾತ್ಮಕ ಜೀವನವನ್ನು ಎಂದಿಗೂ ನಿರ್ಮಿಸಬೇಡಿ.
ಅರ್ಥ : ಯಾರು ದುರ್ಬಲರಿರುತ್ತಾರೋ ಅವರನ್ನು ತುಳಿಯುವ ಮೂಲಕ ಅಥವಾ ಅವರ ದೌರ್ಬಲ್ಯಗಳನ್ನು ವಶವಾಗಿಟ್ಟುಕೊಂಡು ಅವುಗಳ ಜೊತೆ ಆಟವಾಡುವುದು ತಪ್ಪು. ಅವರ ಭಾವನೆಗಳ ಮೇಲೆ ನಿಮ್ಮ ಜೀವನವನ್ನು ಕಟ್ಟಿಕೊಳ್ಳಲು ಪ್ರಯತ್ನಿಸಬೇಡಿ.
ಎಲ್ಲಿ ಪ್ರೀತಿ ಇರುತ್ತದೆಯೋ ಅಲ್ಲಿ ಜೀವನವಿರುತ್ತದೆ.
ಅರ್ಥ : ಎಲ್ಲಿ ನಿಜವಾದ ಪ್ರೀತಿ ಇರುತ್ತದೆಯೋ ಅಲ್ಲಿ ನಿಜವಾದ ಜೀವನವಿರುತ್ತದೆ. ಆದ್ದರಿಂದ ಎಲ್ಲರಿಗೂ ಪ್ರೀತಿಯನ್ನು ಹಂಚಿ ಮತ್ತು ಎಲ್ಲರನ್ನು ಪ್ರೀತಿಯಿಂದ ಕಾಣಿ.
ಅಸೂಯೆಯು ಮನುಷ್ಯನನ್ನು ಕುರುಡನನ್ನಾಗಿ ಮಾಡುತ್ತದೆ ಮತ್ತು ಅದರಿಂದ ಸ್ಪಷ್ಟವಾಗಿ ಯೋಚಿಸಲು ಅಸಾಧ್ಯವಾಗುತ್ತದೆ.
Feeling Kannada Quotes ಅರ್ಥ : ಅಸೂಯೆಯೂ ಮನಷ್ಯನನ್ನು ಕುರುಡನನ್ನಾಗಿ ಮಾಡುತ್ತದೆ ಮತ್ತು ಮನುಷ್ಯನ ಯೋಚನೆಯ ಮೇಲೆ ಪ್ರಭಾವ ಬೀರುತ್ತದೆ. ಅಸೂಯೆಯಿಂದ ಸರಿಯಾಗಿ ಯೋಚನೆ ಮಾಡಲು ಸಾಧ್ಯವಾಗುವುದಿಲ್ಲ ಮತ್ತು ಇಂತಹ ಸಮಯದಲ್ಲಿ ನಾವು ತೆಗೆದುಳ್ಳುವ ನಿರ್ಧಾರ ತಪ್ಪಾಗಿರುತ್ತದೆ.
ಒಮ್ಮೊಮ್ಮೆ ಮನಸ್ಸು ಬೇಡ ಎಂದು ಹೇಳುತ್ತದೆ ಆದರೆ ಹೃದಯ ಮಾಡು ಎಂದು ಹೇಳುತ್ತದೆ.
ಅರ್ಥ : ಕೆಲವೊಮ್ಮೆ ನಮ್ಮ ಮನಸ್ಸು ಕೆಲವು ಕೆಲಸಗಳನ್ನು ಮಾಡಬೇಡ ಎಂದು ಹೇಳುತ್ತದೆ. ಇಲ್ಲಿ ನಮ್ಮ ಮನಸ್ಸು ಎಂದರೆ ನಮ್ಮ ಬುದ್ಧಿ. ಆದರೆ ನಮ್ಮ ಹೃದಯ ಮಾತ್ರ ಆ ಕೆಲಸಗಳನ್ನು ಮಾಡು ಎಂದು ಹೇಳುತ್ತಿರುತ್ತದೆ. ಇಂತಹ ಸಮಯದಲ್ಲಿ ನಮಗೆ ಹೃದಯದ ಮಾತು ಕೇಳಬೇಕೆ ಅಥವಾ ನಮ್ಮ ಬುದ್ಧಿಯ ಮಾತು ಕೇಳಬೇಕೆ ಎಂಬ ಗೊಂದಲ ಉಂಟಾಗುತ್ತದೆ.
ಬೆನ್ನತ್ತುವ ಧೈರ್ಯವಿದ್ದರೆ ಕನಸುಗಳು ನನಸಾಗಬಹುದು.
ಅರ್ಥ : ಪ್ರತಿಯೊಬ್ಬರಿಗೂ ಅವರದೇ ಆದ ಕನಸಿರುತ್ತದೆ. ಕನಸನ್ನು ನನಸು ಮಾಡಲು ನಾವು ಪ್ರಯತ್ನ ಪಡಬೇಕಾಗುತ್ತದೆ. ಯಾವಾಗ ನಾವು ಛಲ ಬಿಡದೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆಯೋ ಆಗ ನಮ್ಮ ಕನಸು ನನಸಾಗದೇ ಸಾಧ್ಯವಿರುವುದಿಲ್ಲ. ಒಂದು ವೇಳೆ ಈ ಪ್ರಯತ್ನದಲ್ಲಿ ನಾವು ಸೋತರೆ ಛಲಗುಂದದೆ ಧೈರ್ಯದಿಂದ ಸರಿಯಾದ ಮಾರ್ಗವನ್ನು ಅನುಸರಿಸಿದರೆ ನಮ್ಮ ಕನಸು ನನಸಾಗುತ್ತದೆ.
ನಾವೂ ಕೂಡ ಬದಲಾವಣೆಯನ್ನು ಮಾಡಬಹುದು ಎಂದು ನಂಬುವುದು ಪ್ರಪಂಚದ ಶ್ರೇಷ್ಠ ಭಾವನೆಗಳಲ್ಲಿ ಒಂದಾಗಿದೆ.
ಅರ್ಥ : ಕೆಲವು ಸಲ ಇದು ನನ್ನಿಂದ ಸಾಧ್ಯವಿಲ್ಲ, ನನ್ನಿಂದ ಏನೂ ಆಗುವುದಿಲ್ಲ ಎಂದು ಮನಸಿನಲ್ಲಿ ನಾವು ಚಿಂತಿಸುತ್ತಿರುತ್ತೇವೆ. ಆದರೆ ದೊಡ್ಡ ಸಾಧನೆಗಳನ್ನು ಮಾಡಿದವರೆಲ್ಲ ನಮ್ಮಂತೆ ಸಾಮಾನ್ಯ ಮನುಷ್ಯರೆನ್ನುವುದನ್ನು ನಾವು ಮರೆಯುತ್ತೇವೆ. ನಾವು ಕೂಡ ಏನಾದರೂ ಸಾಧಿಸಬಹುದು ನಮ್ಮಿಂದಲೂ ಎಲ್ಲ ಕೆಲಸಗಳು ಸಾಧ್ಯ ಎಂಬುದು ಜಗತ್ತಿನಲ್ಲಿ ಅತ್ಯಂತ ಶ್ರೇಷ್ಠ ಭಾವನೆಯಾಗಿದೆ.
Nice Feeling Kannada Quotes
ನಮ್ಮ ಕಣ್ಣೀರಿನ ಬಗ್ಗೆ ನಾವು ಎಂದಿಗೂ ನಾಚಿಕೆಪಡಬೇಕಾಗಿಲ್ಲ.
Feeling Kannada Quotes ಅರ್ಥ : ನಮ್ಮ ಮನಸ್ಸಿಗೆ ನೋವಾದಾಗ, ದುಃಖವಾದಾಗ ನಮಗೆ ಕಣ್ಣೀರು ಬರುವುದು ಸಹಜ. ಇಂತಹ ಸಮಯದಲ್ಲಿ ಅತ್ತರೆ ನಮ್ಮ ಮನಸ್ಸಿಗೆ ಹಗುರಾಗುತ್ತದೆ. ಇದರಲ್ಲಿ ನಾಚಿಕೆ ಪಡುವ ಯಾವುದೇ ವಿಷಯವಿಲ್ಲ ಏಕೆಂದರೆ ಮನುಷ್ಯನಾಗಿ ಹುಟ್ಟಿದ ಪ್ರತಿಯೊಬ್ಬರಿಗೂ ನೋವಾಗುವುದು ಮತ್ತು ಕಷ್ಟಗಳು ಬರುವುದು ಸಹಜ.
ನೀವು ಹೇಳಿದ್ದನ್ನು ಅವರು ಮರೆತುಬಿಡಬಹುದು, ಆದರೆ ನೀವು ಅವರನ್ನು ಹೇಗೆ ನಡೆಸಿಕೊಂಡಿರಿ ಎಂಬುದನ್ನು ಅವರು ಎಂದಿಗೂ ಮರೆಯುವುದಿಲ್ಲ.
ಅರ್ಥ : ನೀವು ಯಾರಿಗಾದರೂ ಏನನ್ನಾದರೂ ಇಂದು ಹೇಳಿದರೆ ಅಥವಾ ಬೈದರೆ ಕೆಲವು ದಿನಗಳ ನಂತರ ಅವರು ಅದನ್ನು ಮರೆತು ಬಿಡಬಹುದು. ಆದರೆ ಇಂದು ನೀವು ಯಾರೊಂದಿಗಾದರೂ ಕೆಟ್ಟದಾಗಿ ನಡೆದುಕೊಂಡರೆ ಅವರು ಅದನ್ನು ಎಂದಿಗೂ ಮರೆಯುವುದಿಲ್ಲ. ಆದ್ದರಿಂದ ಎಲ್ಲರೊಂದಿಗೂ ಒಳ್ಳೆಯ ರೀತಿಯಲ್ಲಿ ನಡೆದುಕೊಳ್ಳೋಣ.
ನಿಮಗೆ ಏನು ಮಾಡಬೇಕೆಂದು ನೀವು ಬಯಸುವುದಿಲ್ಲವೋ ಅದನ್ನು ಇತರರಿಗೆ ಮಾಡಬೇಡಿ.
Feeling Kannada Quotes ಅರ್ಥ : ನೀವು ನಿಮಗೆ ಯಾವಾಗಲೂ ಒಳ್ಳೆಯದನ್ನು ಮಾಡಲು ಬಯಸುತ್ತೀರಿ. ನಿಮಗೆ ಎಂದಿಗೂ ನೀವಿ ಕೆಟ್ಟದ್ದನ್ನು ಬಯಸುವುದಿಲ್ಲ. ಹಾಗೆಯೇ ನಾವು ಇತರರಿಗೂ ಒಳ್ಳೆಯದನ್ನೇ ಬಯಸೋಣ ಮತ್ತು ಯಾರಿಗೂ ಕೆಟ್ಟದ್ದನ್ನು ಬಯಸುವುದು ಬೇಡ.
ಭಾವನೆ ಆಳವಾದಷ್ಟು, ನೋವು ಹೆಚ್ಚಾಗುತ್ತದೆ.
ಅರ್ಥ : ನಮ್ಮ ಭಾವನೆ ಆಳವಾದಷ್ಟು ನೋವು ಅಷ್ಟೇ ಹೆಚ್ಚಾಗುತ್ತದೆ. ಆದ್ದರಿಂದ ಯಾವುದರೊಂದಿಗೂ ಹಾಗೂ ಯಾರೊಬ್ಬರ ಬಗ್ಗೆಯೂ ಅತಿ ಹೆಚ್ಚಾಗಿ ಭಾವನೆ ಬೆಳೆಸಿಕೊಳ್ಳಬೇಡಿ. ನಮ್ಮ ಭಾವನೆಗಳಿಗೆ ಧಕ್ಕೆಯಾದರೆ ನಮ್ಮ ನೋವು ಹೆಚ್ಚಾಗುತ್ತದೆ.
ಸಂತೋಷವೆಂದರೆ ಉತ್ತಮ ಆರೋಗ್ಯ ಮತ್ತು ಕೆಟ್ಟ ಜ್ಞಾಪಕ ಶಕ್ತಿಗಿಂತ ಹೆಚ್ಚೇನೂ ಅಲ್ಲ.
ಅರ್ಥ : ನಿಜವಾದ ಸಂತೋಷವೆಂದರೆ ಉತ್ತಮ ಆರೋಗ್ಯವನ್ನು ಹೊಂದಿರುವುದು. ಏಕೆಂದರೆ ಹಣ ಕೊಟ್ಟರೆ ಎಲ್ಲವೂ ಸಿಗುತ್ತದೆ ಆದರೆ ಉತ್ತಮ ಆರೋಗ್ಯವನ್ನು ಕೊಂಡು ಕೊಳ್ಳಲು ಸಾಧ್ಯವಿಲ್ಲ. ಹಾಗೆಯೇ ಕೆಟ್ಟ ಜ್ಞಾಪಕ ಶಕ್ತಿ ಇದ್ದಾರೆ ನಾವು ನಮಗಿರುವ ನೋವುಗಳನ್ನು, ಕೆಟ್ಟ ವಿಷಯಗಳನ್ನು ಮತ್ತು ನಮ್ಮ ದುಃಖಗಳನ್ನು ಬೇಗ ಮರೆಯಬಹುದು.
ಕೋಪಕ್ಕೆ ದೊಡ್ಡ ಪರಿಹಾರವೆಂದರೆ ತಾಳ್ಮೆ.
Feeling Kannada Quotes ಅರ್ಥ : ಮನುಷ್ಯನಿಗೆ ಕೋಪ ಬರುವುದು ಸಹಜ. ಕೋಪ ಬಂದಾಗ ನಾವು ತಾಳ್ಮೆಯಿಂದ ವರ್ತಿಸುವುದು ಅವಶ್ಯಕ. ಕೋಪಕ್ಕೆ ಬೇರೆ ಯಾವುದೇ ಮದ್ದಿಲ್ಲ. ತಾಳ್ಮೆಯೊಂದೇ ಕೋಪಕ್ಕಿರುವ ನಿಜವಾದ ಮದ್ದು. ಕೆಲವೊಮ್ಮೆ ಇತರರು ಮಾಡುವ ತಪ್ಪುಗಳು ಮತ್ತು ಅವರ ಕೆಲಸಗಳು ನಮ್ಮನ್ನು ಕೋಪಕ್ಕೆ ಈಡು ಮಾಡುತ್ತವೆ. ಆಗಲೂ ತಾಳ್ಮೆ ಕಳೆದುಕೊಳ್ಳದೆ ಇರುವುದು ಅವಶ್ಯ. ಕೋಪಕೊಳ್ಳುವುದರಿಂದ ಆಗುವ ಪರಿಣಾಮಗಳನ್ನು ನಾವು ಮನಸ್ಸಿನಲ್ಲಿ ಇಡಬೇಕಾಗುತ್ತದೆ.
ಕೋಪಗೊಳ್ಳುವ ಪ್ರತಿ ನಿಮಿಷಕ್ಕೂ ನೀವು ಅರವತ್ತು ಸೆಕೆಂಡುಗಳ ಮನಸ್ಸಿನ ಶಾಂತಿಯನ್ನು ಕಳೆದುಕೊಳ್ಳುತ್ತೀರಿ.
ಅರ್ಥ : ನಾವು ಕೋಪಗೊಳ್ಳುವುದರಿಂದ ನಮಗೆ ಯಾವುದೇ ಲಾಭ ಆಗುವುದಿಲ್ಲ. ಇದರಿಂದ ನಮ್ಮ ಮನಸ್ಸಿನ ನೆಮ್ಮದಿ ಮತ್ತು ಶಾಂತಿ ಹಾಳಾಗುತ್ತದೆಯೇ ಹೊರತು ನಮಗೆ ಇದರಿಂದ ಯಾವುದೇ ಒಳ್ಳೆಯದಾಗುವುದಿಲ್ಲ. ನಮಗೆ ಕೋಪ ತರಿಸುವ ವಿಚಾರಗಳಿಂದ ಮತ್ತು ಜನರಿಂದ ಅಂತರ ಕಾಯ್ದುಕೊಳ್ಳುವುದು ಒಳ್ಳೆಯದು.
Top Feeling Kannada Quotes
ವಿಷಯಗಳು ಬದಲಾಗುತ್ತವೆ ಮತ್ತು ಹತ್ತಿರದವರು ದೂರವಾಗುತ್ತಾರೆ ಆದರೆ ಜೀವನ ಯಾರಿಗಾಗಿಯೂ ನಿಲ್ಲುವುದಿಲ್ಲ.
ಅರ್ಥ : ನಮ್ಮ ಸುತ್ತಮುತ್ತಲಿನ ವಿಷಯಗಳು ನಿರಂತರವಾಗಿ ಬದಲಾಗುತ್ತಿರುತ್ತವೆ ಮತ್ತು ನಮಗೆ ಇಂದು ನಮಗೆ ಹತ್ತಿರವಿರುವವರು ಒಂದಿಲ್ಲೊಂದು ಕಾರಣದಿಂದ ಇಲ್ಲವೇ ತಮ್ಮ ಕೆಲಸವಾದ ನಂತರ ದೂರವಾಗುತ್ತಾರೆ ಆದರೆ ಇವುಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ ಸಮಯ ಹಾಳು ಮಾಡದೆ ನಮ್ಮ ಕೆಲಸಗಳನ್ನು ಮುಂದುವರಿಸುತ್ತಾ ಸಾಗಬೇಕು. ಏಕೆಂದರೆ ಜೀವನ ಯಾರಿಗಾಗಿಯೂ ನಿಲ್ಲುವುದಿಲ್ಲ ಮತ್ತು ಈ ಎಲ್ಲದರ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಾ ಕುಳಿತರೆ ನಾವು ಮುಂದುವರಿಯಲು ಸಾಧ್ಯವಾಗುವುದಿಲ್ಲ.
ನಿಮ್ಮಲ್ಲಿ ನಗು ಇದ್ದರೆ ಅದನ್ನು ನೀವು ಪ್ರೀತಿಸುವವರಿಗೆ ನೀಡಿ.
Feeling Kannada Quotes ಅರ್ಥ : ನೀವು ಯಾರಿಗಾದರೂ ಒಳ್ಳೆಯ ಉಡುಗೊರೆ ನೀಡಬೇಕೆಂದಿದ್ದರೆ ನಿಮ್ಮಲ್ಲಿರುವ ನಗುವನ್ನು ನೀಡಿ. ಏಕೆಂದರೆ ನೀಮಾ ಆತ್ಮೀಯರಿಗೆ ಮತ್ತು ನಿಮ್ಮನ್ನು ಅತಿಯಾಗಿ ಪ್ರೀತಿಸುವವರಿಗೆ ನಿಮ್ಮ ನಗುವಿಗಿಂತ ಒಳ್ಳೆಯ ಉಡುಗೊರೆ ಮತ್ತೊಂದಿಲ್ಲ.
ಕಣ್ಣೀರು ಬರುವುದು ಹೃದಯದಿಂದ ಹೊರತು ಬುದ್ಧಿಯಿಂದಲ್ಲ.
ಅರ್ಥ : ನಮ್ಮ ಮನಸ್ಸಿಗೆ ನೋವಾದಾಗ ಕಣ್ಣೀರು ಬರುವುದು ಸಹಜ. ನಾವು ಎಷ್ಟೇ ಅಳಬಾರದೆಂದು ಯೋಚಿಸಿದರೂ ಇದರ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು ಎಂದು ಕೊಂಡರೂ ಸಹ ನಮಗೆ ಕಣ್ಣೀರನ್ನು ತಡೆಯಲು ಆಗುವುದಿಲ್ಲ. ಏಕೆಂದರೆ ಕಣ್ಣೀರು ಬರುವುದು ನಮ್ಮ ಹೃದಯದಿಂದ.
ಖಿನ್ನತೆಯು ಕೇವಲ ಉತ್ಸಾಹವಿಲ್ಲದ ಕೋಪವಾಗಿದೆ.
Feeling Kannada Quotes ಅರ್ಥ : ಖಿನ್ನತೆಗೂ ಕೋಪಕ್ಕೂ ಹೆಚ್ಚೇನೂ ವ್ಯತ್ಯಾಸವಿಲ್ಲ. ಖಿನ್ನತೆ ಕೋಪದ ಇನ್ನೊಂದು ರೂಪ. ಆದರೆ ವ್ಯತ್ಯಾಸ ಏನಂದರೆ ನಾವು ಖಿನ್ನರಾದಾಗ ಮೌನ ವಹಿಸುತ್ತೇವೆ, ಕೋಪಗೊಂಡಾಗ ಉಗ್ರ ರೂಪ ತಾಳುತ್ತೇವೆ.
ದುಃಖ ಎಂದರೆ ನಿಮಗೆ ತಿಳಿದಿರುವ ವ್ಯಕ್ತಿ ನಿಮಗೆ ತಿಳಿಯದಿರುವ ವ್ಯಕ್ತಿ ಆದಾಗ.
ಅರ್ಥ : ಕೆಲವೊಮ್ಮೆ ಕೆಲ ಜನ ನಮ್ಮಿಂದ ನಾನಾ ಕಾರಣಗಳಿಂದ ದೂರವಾಗುತ್ತಾರೆ. ನಾವು ಅತಿಯಾಗಿ ಇಷ್ಟ ಪಡುವ ವ್ಯಕ್ತಿ ನಮಗೆ ಅತಿ ಹತ್ತಿರವಾದ ವ್ಯಕ್ತಿ ನಮಗೆ ದೂರವಾದಾಗ ನಮಗೆ ತುಂಬಾ ನೋವು ಕೊಡುತ್ತದೆ. ಯಾವಾಗ ಆ ವ್ಯಕ್ತಿ ದೂರವಾಗುತ್ತಾರೋ ಆಗ ನಮಗೆ ನಿಜವಾದ ದುಃಖದ ಅರಿವಾಗುತ್ತದೆ.
ಹೃದಯ ಮತ್ತು ಬುದ್ಧಿಯ ಸಂಘರ್ಷದಲ್ಲಿ, ನಿಮ್ಮ ಹೃದಯದ ಮಾತನ್ನು ಕೇಳಿ.
ಅರ್ಥ : ಕೆಲವೊಮ್ಮೆ ಕೆಲ ವಿಚಾರಗಳಿಗಾಗಿ ನಮ್ಮ ಹೃದಯ ಮತ್ತು ಬುದ್ದಿಯ ನಡುವೆ ಗೊಂದಲ ಉಂಟಾಗುತ್ತದೆ. ಹೃದಯ ಒಂದು ರೀತಿ ಯೋಚಿಸಿದರೆ ನಮ್ಮ ಬುದ್ಧಿ ಇನ್ನೊಂದು ರೀತಿಯಲ್ಲಿ ಯೋಚಿಸುತ್ತದೆ. ಇಂತಹ ಸಂದರ್ಭದಲ್ಲಿ ನಾವು ಸರಿಯಾದ ನಿರ್ಧಾರಕ್ಕೆ ಬರದೇ ಗೊಂದಲಕ್ಕೆ ಒಳಗಾಗುತ್ತೇವೆ.
ನಾವು ಏನನ್ನು ನಿರೀಕ್ಷಿಸುತ್ತೇವೆಯೋ ಅದನ್ನು ನೀಡಲು ಜೀವನವು ಯಾವುದೇ ಬಾಧ್ಯತೆ ಹೊಂದಿಲ್ಲ.
Feeling Kannada Quotes ಅರ್ಥ : ಪ್ರತಿಯೊಬ್ಬರಿಗೂ ಜೀವನದಲ್ಲಿ ಹಲವಾರು ನೀರಿಕ್ಷೆಗಳಿರುತ್ತವೆ. ಜೀವನದಲ್ಲಿ ನಮಗೆ ಅದು ಸಿಗಬೇಕು, ಇದು ಸಿಗಬೇಕು ಎಂದು ಬಯಸುತ್ತಿರುತ್ತೇವೆ. ಇನ್ನೂ ಕೆಲವೊಮ್ಮೆ ಬೇರೆಯವರ ಬಳಿ ಇರುವ ವಸ್ತುಗಳನ್ನು ಕಂಡು ಜೀವನದಲ್ಲಿ ನಮಗೂ ಅವೆಲ್ಲ ಸಿಗಬೇಕು ಎಂದು ಆಸೆ ಪಡುತ್ತೇವೆ. ಆದರೆ ಅವೆಲ್ಲವನ್ನು ಪಡೆಯಲು ನಾವು ಕಷ್ಟ ಪಡುತ್ತಿದ್ದೇವೆಯೇ ಅಥವಾ ಎಲ್ಲ ಹೊಂದಿರುವವರು ಎಷ್ಟು ಕಷ್ಟ ಪಟ್ಟು ಮೇಲೆ ಬಂದಿರುತ್ತಾರೆ ಎಂಬುದನ್ನು ಅರಿಯುವ ಪ್ರಯತ್ನವನ್ನೇ ನಾವು ಮಾಡುವುದಿಲ್ಲ. ಕೇವಲ ಬೇಸರಪಡುವುದರಿಂದ ಅಥವಾ ದೂಷಿಸುವುದರಿಂದ ಯಾವುದೇ ಲಾಭವಾಗುವುದಿಲ್ಲ. ನಮಗೆ ಬೇಕಾಗಿರುವುದನ್ನೆಲ್ಲ ನೀಡಲು ಜೀವನವು ಯಾವುದೇ ಕರ್ತವ್ಯ ಅಥವಾ ಜವಾಬ್ದಾರಿಯನ್ನು ನಿರ್ವಹಿಸುತ್ತಿಲ್ಲ. ನಮಗೆ ಏನೇ ಬೇಕೆಂದರೂ ನಾವು ಕಷ್ಟ ಪಡಲೇ ಬೇಕು.
ಭಯವು ಮನಸ್ಸಿನ ಒಂದು ಸ್ಥಿತಿ.
Feeling Kannada Quotes ಅರ್ಥ : ಪ್ರತಿಯೊಬ್ಬರಿಗೂ ಒಂದಿಲ್ಲೊಂದು ರೀತಿ ಭಯ ಆವರಿಸಿರುತ್ತದೆ. ಭಯ ಪಡುತ್ತಲಿದ್ದರೆ ನಾವು ಮೇಲೆ ಬರುವಲು ಸಾಧ್ಯವಾಗುವುದಿಲ್ಲ. ಈ ಭಯ ನಮ್ಮನ್ನು ನಮ್ಮನ್ನು ಹಿಂದಕ್ಕೆ ತಳ್ಳುತ್ತದೆಯೇ ಹೊರತು ಮುಂದಕ್ಕೆ ಬರುವಲು ಬಿಡುವುದಿಲ್ಲ. ಸಂತೋಷ, ಕೋಪ, ದುಃಖ ಎಂಬ ಮನಸ್ಸಿನ ಸ್ಥಿತಿಗಳಂತೆ, ಭಯ ಎಂಬುದು ಕೂಡ ಕೇವಲ ಒಂದು ಮನಸ್ಸಿನ ಸ್ಥಿತಿ ಎಂಬುದನ್ನು ನಾವು ಅರಿಯಬೇಕು.
ಚಿಂತೆಯು ನಾಳೆಯ ದುಃಖವನ್ನು ಎಂದಿಗೂ ಕಸಿದುಕೊಳ್ಳುವುದಿಲ್ಲ, ಅದು ಇಂದಿನ ಸಂತೋಷವನ್ನು ಕಸಿದುಕೊಳ್ಳುತ್ತದೆ.
ಅರ್ಥ : ಇಂದು ನಾವು ಮಾಡುವ ಚಿಂತೆಯು ನಮಗಾಗಿರುವ ದುಃಖವನ್ನು ಎಂದಿಗೂ ಸರಿಪಡಿಸುವುದಿಲ್ಲ. ಅದು ಕೇವಲ ನಮ್ಮ ದುಃಖವನ್ನು ಹೆಚ್ಚಿಸುತ್ತದೆ. ಚಿಂತೆಯಿಂದ ಯಾವುದೇ ಉಪಯೋಗವಾಗಲಿ ಅಥವಾ ಲಾಭವಾಗಲಿ ಆಗುವುದಿಲ್ಲ. ಚಿಂತೆ ಮಾಡುವುದರಿಂದ ನಮ್ಮ ದುಃಖ ಕಡಿಮೆ ಆಗುವುದಿಲ್ಲ. ಚಿಂತೆಯಿಂದ ಕೇವಲ ನಮ್ಮ ಸಮಯ ಹಾಳಾಗುತ್ತದೆ ಮತ್ತು ಅದರಿಂದ ನಮ್ಮ ಇಂದಿನ ಸಂತೋಷ ಹಾಳಾಗುತ್ತದೆ. ಆದ್ದರಿಂದ ಚಿಂತೆ ಮಾಡುವುದನ್ನು ಬಿಟ್ಟು ನಮ್ಮ ಸಮಯವನ್ನು ಒಳ್ಳೆಯ ಸದುಪಯೋಗವಾಗುವಂಥ ಕೆಲಸಗಳಿಗಾಗಿ ಬಳಸೋಣ.
ನಿಮ್ಮ ಮನಸ್ಥಿತಿಯನ್ನು ಬದಲಾಯಿಸಲು ಈ ಭಾವನೆಯ ಉಲ್ಲೇಖಗಳು (Feeling Kannada Quotes) ನಿಮಗೆ ಸಹಾಯ ಮಾಡುತ್ತವೆ ಎಂದು ಭಾವಿಸುತ್ತೇವೆ.