brahma murari surarchita lingam lyrics

Brahma murari surarchita lingam lyrics

Brahma murari surarchita lingam lyrics and meaning in kannada

Here you will find Brahma murari surarchita lingam lyrics in kannada along with the meaning of each sloka in kannada language. Lingashtaka is made of 2 words, “Linga” which means shivalinga and “Ashtakam” means 8 stanzas.

shiva linga

ಲಿಂಗಾಷ್ಟಕ ಇದು ಎರಡು ಪದಗಳಿಂದ ಮಾಡಲ್ಪಟ್ಟಿದೆ “ಲಿಂಗ” ಅಂದರೆ ಶಿವಲಿಂಗ ಮತ್ತು “ಅಷ್ಟಕಂ” ಅಂದರೆ ಎಂಟು ಚರಣಗಳು ಎಂದರ್ಥ.

ಲಿಂಗಾಷ್ಟಕ ಶಿವನನ್ನು ಆರಾಧಿಸುವಾಗ ಪಠಿಸುವ “ಅಷ್ಟಕಂ” (ಎಂಟು ಶ್ಲೋಕಗಳನ್ನು ಹೊಂದಿರುವ ಸ್ತೋತ್ರಮ್). ಇದು ಶಿವನ “ಲಿಂಗ” ರೂಪದಲ್ಲಿ ಆರಾಧನೆಗೆ ಸಮರ್ಪಿತವಾಗಿದೆ. ಲಿಂಗಾಷ್ಟಕವನ್ನು ಪಠಿಸುವುದರಿಂದ ಮಾನಸಿಕ ನೆಮ್ಮದಿ ಸಿಗುತ್ತದೆ ಎಂದು ನಂಬಲಾಗಿದೆ. ಲಿಂಗಾಷ್ಟಕವನ್ನು ಅತ್ಯಂತ ಭಕ್ತಿ ಮತ್ತು ಶ್ರದ್ಧೆಯಿಂದ ಪಠಿಸುವುದರಿಂದ ಮೋಕ್ಷವನ್ನು ಪಡೆಯಬಹುದು ಮತ್ತು ಶಿವಲೋಕವನ್ನು ತಲುಪಬಹುದು ಎಂದು ಹೇಳಲಾಗುತ್ತದೆ.

ಇಲ್ಲಿ ನೀವು  ಲಿಂಗಾಷ್ಟಕ ಸ್ತೋತ್ರವನ್ನು ಇಂಗ್ಲಿಷ್‌ನಲ್ಲಿ, ಕನ್ನಡದಲ್ಲಿ ಅರ್ಥ ಸಹಿತ ಓದಬಹುದು. ಪ್ರತಿ ಸ್ತೋತ್ರದ ಅರ್ಥ ಸಹಿತವಾಗಿ ಇಲ್ಲಿ ವಿವರಿಸಲಾಗಿದೆ. ಇದರೊಂದಿಗೆ ಲಿಂಗಾಷ್ಟಕಂ ಸ್ತೋತ್ರದಿಂದ ಆಗುವ ಲಾಭಗಳೇನು ಎನ್ನುವುದನ್ನು ಕೂಡ ಸ್ತೋತ್ರದ ಕೆಳಗೆ ಉಲ್ಲೇಖಿಸಲಾಗಿದೆ. ಈ ಅಷ್ಟಕವನ್ನು ಆದಿ ಶಂಕರಾಚಾರ್ಯರು ರಚಿಸಿದ್ದಾರೆ, ಅವರು ಶಿವನ ಅವತಾರವೆಂದು ನಂಬಲಾಗಿದೆ. ನಿತ್ಯವೂ ಈ ಅಷ್ಟಕವನ್ನು ಪಠಿಸುವುದರಿಂದ ಎಲ್ಲಾ ತೊಂದರೆಗಳು ದೂರವಾಗುತ್ತವೆ.

 

Brahma murari suraarchita lingam
Nirmala bhasita shobhita lingam
Janmaja dukha vinaashaka lingam
Thath pranamaami sadaashiva lingam

ಬ್ರಹ್ಮಮುರಾರಿ ಸುರಾರ್ಚಿತ ಲಿಂಗಂ
ನಿರ್ಮಲಭಾಸಿತ ಶೋಭಿತ ಲಿಂಗಮ್ ।
ಜನ್ಮಜ ದುಃಖ ವಿನಾಶಕ ಲಿಂಗಂ
ತತ್ಪ್ರಣಮಾಮಿ ಸದಾಶಿವ ಲಿಂಗಮ್

ಶುದ್ಧ, ಹೊಳೆಯುವ ಮತ್ತು ಉತ್ತಮವಾಗಿ ಅಲಂಕರಿಸಲ್ಪಟ್ಟಿರುವ, ಭಗವಾನ್ ಬ್ರಹ್ಮ, ಭಗವಾನ್ ವಿಷ್ಣು ಮತ್ತು ಎಲ್ಲ ದೇವರುಗಳಿಂದ ಆರಾಧಿಸಲ್ಪಡುವ ಆ ಶಿವಲಿಂಗಕ್ಕೆ ನಾನು ನಮಸ್ಕರಿಸುತ್ತೇನೆ.

ಇದು ಜನ್ಮ ಜನ್ಮಾಂತರ ದುಃಖಗಳನ್ನು ನಾಶಪಡಿಸುವ ಶಕ್ತಿ ಇರುವಂತಹ  ಲಿಂಗವಾಗಿದೆ, ಇಂತಹ ಶಿವಲಿಂಗಕ್ಕೆ ನಾನು ಶಿರಬಾಗಿ ನಮಸ್ಕರಿಸುತ್ತೇನೆ.

Devamuni pravararchita lingam
Kaamadahana karunaakara lingam
Raavana darpa vinashaka lingam
Thath pranamaami sadaashiva lingam

ದೇವಮುನಿ ಪ್ರವರಾರ್ಚಿತ ಲಿಂಗಂ
ಕಾಮದಹನ ಕರುಣಾಕರ ಲಿಂಗಮ್ ।
ರಾವಣ ದರ್ಪ ವಿನಾಶನ ಲಿಂಗಂ
ತತ್ಪ್ರಣಮಾಮಿ ಸದಾಶಿವ ಲಿಂಗಮ್

ಎಲ್ಲ ದೇವರುಗಳಿಂದ ಪೂಜಿಸಲ್ಪಟ್ಟ ಮತ್ತು ಋಷಿಗಳಲ್ಲಿ ಉತ್ತಮವಾದ, ಎಲ್ಲಾ ಆಸೆಗಳನ್ನು ಸುಡುವ, ಕರುಣಾಮಯಿಯಾದಂತಹ ಶಿವಲಿಂಗಕ್ಕೆ ನಾನು ಶಿರಬಾಗಿ ನಮಸ್ಕರಿಸುತ್ತೇನೆ.

ರಾವಣನ ಹೆಮ್ಮೆಯನ್ನು ನಾಶಪಡಿಸಿದಂತಹ ಶಾಶ್ವತ ಶಿವಲಿಂಗಕ್ಕೆ ನಾನು ಶಿರಬಾಗಿ ನಮಸ್ಕರಿಸುತ್ತೇನೆ.

Sarva sugandha sulepita lingam
Buddhi vivardhana kaarana lingam
Siddha surasura vanditha lingam
Thath pranamaami sadaashiva lingam

ಸರ್ವ ಸುಗಂಧ ಸುಲೇಪಿತ ಲಿಂಗಂ
ಬುದ್ಧಿ ವಿವರ್ಧನ ಕಾರಣ ಲಿಂಗಮ್ ।
ಸಿದ್ಧ ಸುರಾಸುರ ವಂದಿತ ಲಿಂಗಂ
ತತ್ಪ್ರಣಮಾಮಿ ಸದಾಶಿವ ಲಿಂಗಮ್

ವಿವಿಧ ಪರಿಮಳಯುಕ್ತ ವಸ್ತುಗಳಿಂದ ಸುಂದರವಾಗಿ ಲೇಪಿತವಾಗಿದೆ ಅಲಂಕಾರಗೊಂಡಿರುವ ಮತ್ತು ವ್ಯಕ್ತಿಯ ಆಧ್ಯಾತ್ಮಿಕ ಜ್ಞಾನ,  ಬುದ್ಧಿವಂತಿಕೆ ಮತ್ತು ವಿವೇಚನೆಯ ಉನ್ನತಿಗೆ ಕಾರಣವಾಗಿರುವ  ಶಿವಲಿಂಗಕ್ಕೆ ನಾನು ನಮಸ್ಕರಿಸುತ್ತೇನೆ

ಸಿದ್ಧರು, ದೇವತೆಗಳು ಮತ್ತು ಅಸುರರಿಂದ ಪ್ರಶಂಸಿಸಲ್ಪಟ್ಟಿರುವ, ಶಾಶ್ವತ ಶಿವಲಿಂಗಕ್ಕೆ ನಾನು ಶಿರಬಾಗಿ ನಮಸ್ಕರಿಸುತ್ತೇನೆ.

Kanaka mahaamani bhooshitha lingam
Phanipathi veshtitha shobhitha lingam
Daksha suyajna vinaashaka lingam
Thath pranamaami sadaashiva lingam

ಕನಕ ಮಹಾಮಣಿ ಭೂಷಿತ ಲಿಂಗಂ
ಫಣಿಪತಿ ವೇಷ್ಟಿತ ಶೋಭಿತ ಲಿಂಗಮ್ ।
ದಕ್ಷಸುಯಜ್ಞ ವಿನಾಶನ ಲಿಂಗಂ
ತತ್ಪ್ರಣಮಾಮಿ ಸದಾಶಿವ ಲಿಂಗಮ್

ಚಿನ್ನ, ಅಮೂಲ್ಯವಾದ ರತ್ನ ಮತ್ತು ಸರ್ಪಗಳಿಂದ  ಅಲಂಕರಿಸಲ್ಪಟ್ಟಿರುವಂತಹ ಶಿವಲಿಂಗಕ್ಕೆ ನಾನು ಶಿರಬಾಗಿ ನಮಸ್ಕರಿಸುತ್ತೇನೆ.

ದಕ್ಷನ ಮಹಾ ಯಜ್ಞವನ್ನು ನಾಶಪಡಿಸಿದಂತಹ ಶಿವಲಿಂಗಕ್ಕೆ ನಾನು ಶಿರಬಾಗಿ ನಮಸ್ಕರಿಸುತ್ತೇನೆ.

Kunkuma chandana lepitha lingam
Pankaja haara sushobhitha lingam
Sanchitha paapa vinaashaka lingam
Thath pranamaami Sadaashiva lingam

ಕುಂಕುಮ ಚಂದನ ಲೇಪಿತ ಲಿಂಗಂ
ಪಂಕಜ ಹಾರ ಸುಶೋಭಿತ ಲಿಂಗಮ್ ।
ಸಂಚಿತ ಪಾಪ ವಿನಾಶನ ಲಿಂಗಂ
ತತ್ಪ್ರಣಮಾಮಿ ಸದಾಶಿವ ಲಿಂಗಮ್

ಕುಂಕುಮ (ಕುಂಕುಮ) ಮತ್ತು ಚಂದನದಿಂದ ಅಭಿಷೇಕಿಸಲ್ಪಟ್ಟಿರುವ ಮತ್ತು ಕಮಲದ ಮಾಲೆಗಳಿಂದ ಸುಂದರವಾಗಿ ಕಂಗೊಳಿಸುತ್ತಿರುವ ಶಿವಲಿಂಗಕ್ಕೆ ನಾನು ಶಿರಬಾಗಿ ನಮಸ್ಕರಿಸುತ್ತೇನೆ.

ಹಲವಾರು ಜೀವಗಳ ಸಂಚಿತ ಪಾಪ, ಕರ್ಮಗಳನ್ನು ನಾಶಪಡಿಸುವಂತಹ ಶಕ್ತಿ ಹೊಂದಿರುವ  ಶಿವಲಿಂಗಕ್ಕೆ ನಾನು ಶಿರಬಾಗಿ  ನಮಸ್ಕರಿಸುತ್ತೇನೆ.

Devaganaarchitha sevitha lingam
Bhaavair bhakti bhireva cha lingam
Dinakara koti prabhakara lingam
Thath pranamaami Sadaashiva lingam

ದೇವಗಣಾರ್ಚಿತ ಸೇವಿತ ಲಿಂಗಂ
ಭಾವೈ ರ್ಭಕ್ತಿ ಭಿರೇವ ಚ ಲಿಂಗಮ್ ।
ದಿನಕರ ಕೋಟಿ ಪ್ರಭಾಕರ ಲಿಂಗಂ
ತತ್ಪ್ರಣಮಾಮಿ ಸದಾಶಿವ ಲಿಂಗಮ್

ಇದು ಸಕಲ ದೇವತೆಗಳ ಭಾವ, ಚಿಂತನೆ ಮತ್ತು ಭಕ್ತಿಗಳಿಂದ ಪೂಜಿಸಲ್ಪಟ್ಟಿರುವ ಮತ್ತು ಸೇವೆ ಮಾಡಲ್ಪಟ್ಟಿರುವಂತಹ ಶಿವಲಿಂಗಕ್ಕೆ ನಾನು ಶಿರಬಾಗಿ ನಮಸ್ಕರಿಸುತ್ತೇನೆ.

ಸಾವಿರಾರು ಸೂರ್ಯರ ವೈಭವವನ್ನು ಹೊಂದಿರುವ  ಶಿವಲಿಂಗಕ್ಕೆ ನಾನು ಶಿರಬಾಗಿ ನಮಸ್ಕರಿಸುತ್ತೇನೆ.

Ashta dalopari veshtitha lingam
sarva samudbhava kaarana lingam
Ashta daridra vinaashana lingam
Thath pranamaami sadaashiva lingam

ಅಷ್ಟ ದಲೋಪರಿ ವೇಷ್ಟಿತ ಲಿಂಗಂ
ಸರ್ವ ಸಮುದ್ಭವ ಕಾರಣ ಲಿಂಗಮ್ ।
ಅಷ್ಟ ದರಿದ್ರ ವಿನಾಶನ ಲಿಂಗಂ
ತತ್ಪ್ರಣಮಾಮಿ ಸದಾಶಿವ ಲಿಂಗಮ್

ಎಂಟು ದಳಗಳ ಹೂವುಗಳಿಂದ ಆವೃತವಾಗಿದೆರುವ ಮತ್ತು ಸೃಷ್ಟಿಗೆ ಕಾರಣವಾಗಿರುವ ಶಿವಲಿಂಗಕ್ಕೆ ನಾನು ಶಿರಬಾಗಿ ನಮಸ್ಕರಿಸುತ್ತೇನೆ.

ಎಂಟು ವಿಧವಾದ ದರಿದ್ರಗಳನ್ನು ನಾಶಪಡಿಸುವಂಥ ಶಕ್ತಿ ಹೊಂದಿರುವ ಶಿವಲಿಂಗಕ್ಕೆ ನಾನು ಶಿರಬಾಗಿ ನಮಸ್ಕರಿಸುತ್ತೇನೆ.

Suraguru suravara poojitha lingam
Suravana pushpa sadaarchitha lingam
Paramapadam paramaathmaka lingam
Thath pranamaami sadaashiva lingam

ಸುರಗುರು ಸುರವರ ಪೂಜಿತ ಲಿಂಗಂ
ಸುರವನ ಪುಷ್ಪ ಸದಾರ್ಚಿತ ಲಿಂಗಮ್ ।
ಪರಮಪದಂ ಪರಮಾತ್ಮಕ ಲಿಂಗಂ
ತತ್ಪ್ರಣಮಾಮಿ ಸದಾಶಿವ ಲಿಂಗಮ್

ದೇವತೆಗಳ (ಭಗವಾನ್ ಬೃಹಸ್ಪತಿ) ಪೂಜಿಸಲ್ಪಡುವ ಮತ್ತು ದೇವತೆಗಳ ಅತ್ಯುತ್ತಮವಾದ, ಆಕಾಶದ ಉದ್ಯಾನದ ಹೂವುಗಳಿಂದ ಪೂಜಿಸಲ್ಪಡುವ ಶಿವಲಿಂಗಕ್ಕೆ ನಾನು ಶಿರಬಾಗಿ ನಮಸ್ಕರಿಸುತ್ತೇನೆ.

ಉತ್ತಮರಲ್ಲಿ ಉತ್ತಮರಾಗಿರುವ ಶ್ರೇಷ್ಠರಲ್ಲಿ ಶ್ರೇಷ್ಠವಾಗಿರುವಂತಹ ಶಿವ ಲಿಂಗಕ್ಕೆ ನಾನು ಶಿರಬಾಗಿ ನಮಸ್ಕರಿಸುತ್ತೇನೆ.

Lingashtakamidam punyam yaha pateth shiva sannidhou
Shivaloka mavapnothi shivena sahamodathe

ಲಿಂಗಾಷ್ಟಕಮಿದಂ ಪುಣ್ಯಂ ಯಃ ಪಠೇಶ್ಶಿವ ಸನ್ನಿಧೌ ।
ಶಿವಲೋಕ ಮವಾಪ್ನೋತಿ ಶಿವೇನ ಸಹ ಮೋದತೇ ॥

ಶಿವಲಿಂಗದ ಬಳಿ ಈ ಲಿಂಗಾಷ್ಟಕ  ಸ್ತೋತ್ರವನ್ನು ಪಠಿಸುವವರು, ಸಾಕ್ಷಾತ್ ಶಿವನ ವಾಸಸ್ಥಾನವನ್ನು ಪಡೆಯುತ್ತಾರೆ  ಮತ್ತು ಶಿವಾನಂದವನ್ನು ಅನುಭವಿಸುತ್ತಾರೆ.

ಲಿಂಗಾಷ್ಟಕ  ಸ್ತೋತ್ರದ  ಪ್ರಯೋಜನಗಳು (Benefits of Lingashtaka stotram)

  • ಲಿಂಗಾಷ್ಟಕ ಎಂಟು ಪದ್ಯಗಳನ್ನು ಹೊಂದಿರುವ ಅತ್ಯಂತ ಪ್ರಸಿದ್ಧವಾದ ಸ್ತೋತ್ರವಾಗಿದೆ. ಶಿವಲಿಂಗದ ಬಳಿ ಕುಳಿತು ಈ ಅಷ್ಟಕವನ್ನು ಪಠಿಸುವ ಮೂಲಕ, ಶಿವನು ಬಹಳ ಸಂತೋಷಪಡುತ್ತಾನೆ ಮತ್ತು ಜನ್ಮ ಜನ್ಮಾಂತರದ ಪಾಪಗಳಿಂದ ವ್ಯಕ್ತಿಯನ್ನು ಬಿಡುಗಡೆ ಮಾಡುತ್ತಾನೆ ಎಂದು ನಂಬಲಾಗಿದೆ.
  • ವ್ಯಕ್ತಿಯು ಪ್ರತಿದಿನ ಲಿಂಗಾಷ್ಟಕವನ್ನು ಪಠಿಸಿದರೆ, ಆಗ ಭಗವಂತ ಸದಾಶಿವ ಅವರಿಗೆ ಮೋಕ್ಷವನ್ನು ನೀಡುತ್ತಾನೆ ಮತ್ತು ಅವನು ಶಿವಧಾಮದಲ್ಲಿ ನೆಲೆಸುತ್ತಾನೆ ಎಂದು ಈ ಅಷ್ಟಕದ ಕಡೆಯ ಶ್ಲೋಕದಲ್ಲಿ ವಿವರಿಸಲಾಗಿದೆ. ಈ ರೀತಿಯಾಗಿ, ಲಿಂಗಾಷ್ಟಕವನ್ನು ನಿಯಮಿತವಾಗಿ ಪಠಿಸುವುದರಿಂದ ವ್ಯಕ್ತಿಯು ಪಡೆಯಬಹುದಾದ ಅನೇಕ ಪ್ರಯೋಜನಗಳಿವೆ.
  • ಲಿಂಗಾಷ್ಟಕವನ್ನು ಪಠಿಸುವುದರಿಂದ ವ್ಯಕ್ತಿಯು ಎಲ್ಲ ಕಷ್ಟ, ತೊಂದರೆಗಳಿಂದ ಪಾರಾಗುವುದಲ್ಲದೆ ತನಗೆ ಆವರಿಸಿಕೊಂಡಿರುವ ದುಃಖಗಳಿಂದ ಹೊರಬರಲು ದಾರಿ ಸಿಗುತ್ತದೆ.
  • ಲಿಂಗಾಷ್ಟಕವನ್ನು ವ್ಯಕ್ತಿಯ ಜ್ಞಾನವನ್ನು ಹೆಚ್ಚಿಸುವುದಲ್ಲದೆ ಒಳ್ಳೆಯ ಬುದ್ಧಿಯನ್ನು ಮತ್ತು ಒಳ್ಳೆಯ ಗುಣಗಳನ್ನು ಕರುಣಿಸುತ್ತದೆ.

ಸೂಚನೆ: ಲಿಂಗಾಷ್ಟಕವನ್ನು ಪಠಿಸುವಾಗ ನಿಧಾನವಾಗಿ,  ಸ್ತೋತ್ರವನ್ನು ಸರಿಯಾಗಿ ಅರ್ಥ ಮಾಡಿಕೊಂಡು ಗಟ್ಟಿಯಾಗಿ ಪಠಿಸಬೇಕು.