Swami Vivekananda Quotes in Kannada

Swami Vivekananda Quotes in Kannada

Here you will find Swami Vivekananda quotes in Kannada. Vivekananda quotes are famous because these quotes are purely towards spirituality, success and about life. These positive quotes can help someone to discover his strength, ability, powers, one’s ambition and goal. Below these Swami Vivekananda quotes you will also find the meaning of the quote in Kannada language. These quotes encourage to follow what your heart says.

Best Swami Vivekananda Quotes in Kannada

ಪ್ರತಿ ತಪ್ಪು ತಿಳುವಳಿಕೆಗೆ ಕಾರಣವೆಂದರೆ ನಾವು ಜನರನ್ನು ನಮ್ಮಂತೆ ನೋಡುತ್ತೇವೆ ಆದರೆ ಅವರಂತೆ ಅಲ್ಲ.

best swami vivekananda quotes in kannada

ಅರ್ಥ : ಹಲವು ಬಾರಿ ತಪ್ಪು ತಿಳುವಳಿಕೆಗೆ ಕಾರಣ ಏನೆಂದರೆ ಇತರರನ್ನು ನಾವು ನಮ್ಮ ದೃಷ್ಟಿಕೋನದಲ್ಲಿ ನೋಡುವುದು. ಇತರರನ್ನು ಅವರ ದೃಷ್ಟಿಕೋನದಂತೆ ನೋಡಿದರೆ ತಪ್ಪು ತಿಳುವಳಿಕೆಗಳಿಗೆ ಆಸ್ಪದ ಇರುವುದಿಲ್ಲ.


ಯಾರಿಗಾಗಿ ಅಥವಾ ಯಾವುದಕ್ಕೂ ಕಾಯಬೇಡಿ. ನಿಮ್ಮ ಕೈಲಾದಷ್ಟು ಮಾಡಿ, ಯಾವುದರ ಮೇಲೂ ನಿಮ್ಮ ಭರವಸೆಯನ್ನು ಇಡಬೇಡಿ.

best swami vivekananda quotes in kannada

ಅರ್ಥ : ನಾವು ಯಾವಾಗಲೂ ಇತರರ ಸಹಾಯಕ್ಕಾಗಿ ಕಾಯದೆ ಇತರರ ಮೇಲೆ ಭರವಸೆ ಇಡದೆ ಮತ್ತು ಅವಲಂಬಿತವಾಗದೆ, ನಮ್ಮ ಕೈಲಿ ಏನಾಗುತ್ತದೆಯೋ ಅದನ್ನು ಮಾಡಬೇಕು. ಇತರರಿಗಾಗಿ ಕಾಯುತ್ತ ಕುಳಿತರೆ ನಮ್ಮ ಸಮಯ ಹಾಳಾಗಬಹುದು.


ನಮ್ಮನ್ನು ಬೆಚ್ಚಗಾಗಿಸುವ ಬೆಂಕಿ ನಮ್ಮನ್ನು ದಹಿಸಲೂಬಹುದು, ಅದು ಬೆಂಕಿಯ ತಪ್ಪಲ್ಲ.

ಅರ್ಥ : ನಮ್ಮನ್ನು ಬೆಚ್ಚಗೆ ಮಾಡಿಕೊಳ್ಳಲು ಬಳಸುವ ಬೆಂಕಿ ಎಚ್ಚರ ತಪ್ಪಿದರೆ ನಮಗೆ ಅಪಾಯವನ್ನು ಉಂಟು ಮಾಡಬಹುದು. ಆದ್ದರಿಂದ ನಾವು ಯಾವಾಗಲೂ ಎಲ್ಲದರ ಬಗ್ಗೆ ಎಚ್ಚರದಿಂದ ಇರುವುದು ಅಗತ್ಯವಾಗಿದೆ. ಯಾವುದನ್ನು ಎಲ್ಲಿಡಬೇಕು, ಹೇಗೆ ಬಳಸಬೇಕು ಮತ್ತು ಯಾವುದರ ಬಗ್ಗೆ ಹೇಗೆ ಎಚ್ಚರದಿಂದ ಇರಬೇಕು ಎನ್ನುವುದರ ಅರಿವು ಅಗತ್ಯ.


ನಿಮ್ಮ ಜೀವನದಲ್ಲಿ ಸವಾಲುಗಳನ್ನು ಎದುರಿಸಿ ಗೆದ್ದರೆ ಮುನ್ನಡೆಸಬಹುದು, ಸೋತರೆ ಮಾರ್ಗದರ್ಶನ ಮಾಡಬಹುದು.

best swami vivekananda quotes in kannada

ಅರ್ಥ : ಜೀವನದಲ್ಲಿ ಹೊಸ ಕೆಲಸಗಳನ್ನು ಮಾಡಿ, ಪ್ರಯತ್ನಗಳನ್ನು ಮಾಡಿ. ಒಂದು ವೇಳೆ ಯಶಸ್ವಿಯಾದರೆ ನೀವು ಮುಂದುವರಿಯಬಹುದು ಇಲ್ಲವೇ ಸೋತರೆ ಇತರರಿಗೆ ಸರಿಯಾದ ದಾರಿಯಲ್ಲಿ ಸಾಗಲು ಮಾರ್ಗದರ್ಶನ ಮಾಡಬಹುದು.


ತಮ್ಮ ಸಹಾಯ ತಾವೇ ಮಾಡಿಕೊಳ್ಳುವವರಿಗೆ, ದೇವರು ಸಹಾಯ ಮಾಡುತ್ತಾನೆ.

best swami vivekananda quotes in kannada

ಅರ್ಥ : ಯಾರಿಗೆ ಸಹಾಯ ಮಾಡಲು ಯಾರು ಇರುವುದಿಲ್ಲವೋ ಅಥವಾ ಯಾರು ತಮ್ಮ ಕೆಲಸಗಳನ್ನು ಸ್ವಂತ ತಾವೇ ಮಾಡುತ್ತಾರೋ ಅಂಥವರಿಗೆ ದೇವರು ಸ್ವತಹ ತಾನೇ ಸಹಾಯ ಮಾಡುತ್ತಾನೆ. ನಿಮಗೆ ಸಹಾಯ ಮಾಡಲು ಯಾರು ಇಲ್ಲವೆಂದು ಭಾವಿಸಬೇಡಿ ದೇವರನ್ನು ನಂಬಿ ಮುನ್ನಡೆಯಿರಿ.


ನೀವು ನಿಮ್ಮನ್ನು ನಂಬುವವರೆಗೂ ದೇವರನ್ನು ನಂಬಲು ಸಾಧ್ಯವಿಲ್ಲ.

best swami vivekananda quotes in kannada

ಅರ್ಥ : ನಮ್ಮ ಮೇಲೆ ನಾವು ನಂಬಿಕೆ ಇಡುವುದು ಬಹಳ ಅಗತ್ಯ. ನಮ್ಮಿಂದ ಎಲ್ಲವೂ ಸಾಧ್ಯ, ಪ್ರಯತ್ನ ಪಟ್ಟರೆ ಅಸಾಧ್ಯವಾದದ್ದು ಯಾವುದು ಇಲ್ಲ ಎಂಬ ಆತ್ಮವಿಶ್ವಾಸ ಬೆಳೆಸಿಕೊಳ್ಳುವುದು ಅಗತ್ಯ. ನಾವು ನಮ್ಮನ್ನು ನಂಬುವವರೆಗೂ ದೇವರನ್ನು ನಂಬಲು ಸಾಧ್ಯವಿಲ್ಲ.


ಯಾರು ನಿಮಗೆ ಸಹಾಯ ಮಾಡುತ್ತಿದ್ದಾರೆ, ಅವರನ್ನು ಮರೆಯಬೇಡಿ. ಯಾರು ನಿಮ್ಮನ್ನು ಪ್ರೀತಿಸುತ್ತಾರೆ, ಅವರನ್ನು ದ್ವೇಷಿಸಬೇಡಿ. ಯಾರು ನಿಮ್ಮನ್ನು ನಂಬುತ್ತಾರೆ, ಅವರಿಗೆ ಮೋಸ ಮಾಡಬೇಡಿ.

best swami vivekananda quotes in kannada

ಅರ್ಥ : ಯಾರು ನಿಮಗೆ ಕಷ್ಟ ಕಾಲದಲ್ಲಿ ಸಹಾಯ ಮಾಡಿರುತ್ತಾರೆ ಅವರನ್ನು ಎಂದಿಗೂ ಮರೆಯಬೇಡಿ, ಯಾರು ನಿಮ್ಮನ್ನು ಪ್ರೀತಿಸುತ್ತಾರೆ, ಅವರನ್ನು ಎಂದೂ ದ್ವೇಷಿಸಲು ಹೋಗಬೇಡಿ, ಯಾರು ನಿಮ್ಮನ್ನು ನಂಬುತ್ತಾರೆ ಅವರಿಗೆ ಎಂದೂ ಮೋಸ ಮಾಡಬೇಡಿ. ಇದಕ್ಕಿಂತ ದೊಡ್ಡ ತಪ್ಪು ಮತ್ತೊಂದಿಲ್ಲ.


ಎಂದಿಗೂ ಪ್ರಯತ್ನಿಸದವನಿಗಿಂತ ಪ್ರಯತ್ನದಲ್ಲಿ ಕಷ್ಟ ಪಡುತ್ತಿರುವವನು ಉತ್ತಮ.

best swami vivekananda quotes in kannada

ಅರ್ಥ : ಜೀವನದಲ್ಲಿ ನಾವು ಕೆಲವು ಬಾರಿ ವಿಫಲವಾಗುವ ಭಯದಿಂದ ಅಥವಾ ಸೋಲಿನ ಭಯದಿಂದ ಪ್ರಯತ್ನಗಳನ್ನು ಮಾಡದೆ ಹಾಗೆ ಇರುತ್ತೇವೆ. ಹೀಗೆ ಪ್ರಯತ್ನ ಪಡದೆ ಇರುವುದಕ್ಕಿಂತ ಸೋತರೂ ಪರವಾಗಿಲ್ಲ ಎಂದು ಪ್ರಯತ್ನ ಪಡುವವರೇ ಉತ್ತಮ. ಒಂದು ವೇಳೆ ನಾವು ಸೋತರೆ ಇತರರಿಗೆ ಮಾರ್ಗದರ್ಶನ ಮಾಡಬಹುದು.


Top Swami Vivekananda Quotes in Kannada

ಹೃದಯ ಮತ್ತು ಬುದ್ದಿಯ ನಡುವಿನ ಸಂಘರ್ಷದಲ್ಲಿ, ನಿಮ್ಮ ಹೃದಯವನ್ನು ಅನುಸರಿಸಿ.

top swami vivekananda quotes in kannada

ಅರ್ಥ : ಕೆಲವೊಮ್ಮೆ ಕೆಲ ವಿಷಯಗಳಿಗಾಗಿ ನಮ್ಮ ಹೃದಯ ಮತ್ತು ಬುದ್ಧಿಯ ನಡುವೆ ಸಂಘರ್ಷವಾಗುವುದು ಸಹಜ. ಇಂತಹ ಗೊಂದಲದ ಸಮಯದಲ್ಲಿ ನಾವು ನಮ್ಮ ಹೃದಯದ ಮಾತನ್ನು ಕೇಳಬೇಕೆಂದು ಸ್ವಾಮಿ ವಿವೇಕಾನಂದರು ಹೇಳುತ್ತಾರೆ.


ನಿಮ್ಮ ಸ್ವಭಾವಕ್ಕೆ ತಕ್ಕಂತೆ ಇರುವುದೇ ಶ್ರೇಷ್ಠ ಧರ್ಮ. ನಿಮ್ಮ ಮೇಲೆ ನಂಬಿಕೆ ಇಡಿ.

top swami vivekananda quotes in kannada

ಅರ್ಥ : ನಿಮ್ಮ ಸ್ವಭಾವ ಹೇಗೆ ಇರುತ್ತದೆಯೋ ಹಾಗೆ ಇರಿ. ಇತರರಿಗಾಗಿ ನೀವು ಬದಲಾಗುವುದು ಬೇಡ. ನೀವು ಸರಿಯಾದ ಮಾರ್ಗದಲ್ಲಿ ನಡೆಯುತ್ತಿದ್ದರೆ ನಿಮ್ಮ ಮೇಲೆ ನಂಬಿಕೆ ಇತ್ತು ಮುಂದೆ ಸಾಗಿ. ಇತರರು ಏನು ಯೋಚಿಸುತ್ತಾರೆ ಎಂಬುದರ ಬಗ್ಗೆ ಚಿಂತಿಸಬೇಡಿ.


ಒಂದು ಸಮಯದಲ್ಲಿ ಒಂದು ಕೆಲಸವನ್ನು ಮಾಡಿ, ಮತ್ತು ಅದನ್ನು ಮಾಡುವಾಗ ನಿಮ್ಮ ಸಂಪೂರ್ಣ ಆತ್ಮವನ್ನು ಅದರಲ್ಲಿ ತೊಡಗಿಸಿ.

top swami vivekananda quotes in kannada

ಅರ್ಥ : ನಾವು ಯಾವಾಗಲೂ ಒಂದು ಸಮಯದಲ್ಲಿ ಏಕಾಗ್ರತೆಯಿಂದ ಒಂದೇ ಕೆಲಸವನ್ನು ಮಾಡಬೇಕು. ಆಗ ನಾವು ಖಂಡಿತವಾಗಿ ಅದರಲ್ಲಿ ಯಶಸ್ವಿ ಆಗುತ್ತೇವೆ. ಒಟ್ಟಿಗೆ ಹಲವು ಕೆಲಸಗಳನ್ನು ಮಾಡಲು ಮುಂದಾದರೆ ಸರಿಯಾಗಿ ಏಕಾಗ್ರತೆಯ ಕೊರತೆಯಿಂದ ತಪ್ಪುಗಳು ಆಗುವ ಸಾಧ್ಯತೆ ಇರುತ್ತದೆ. ಹಾಗೂ ಒಂದು ಕೆಲಸ ಮಾಡುವಾಗ ನಮ್ಮ ಸಂಪೂರ್ಣ ಸಾಮರ್ಥ್ಯವನ್ನು ಅದರಲ್ಲಿ ತೊಡಗಿಸಿದರೆ ನಾವು ಗೆದ್ದೇ ಗೆಲ್ಲುತ್ತೇವೆ.


ಯಾವ ವಸ್ತುವಿನಿಂದಲೂ ವಿಚಲಿತನಾಗದ ಮನುಷ್ಯ ಅಮರತ್ವವನ್ನು ತಲುಪಿದ್ದಾನೆ.

top swami vivekananda quotes in kannada

ಅರ್ಥ : ನಮ್ಮ ಸುತ್ತಲೂ ನಮ್ಮ ಏಕಾಗ್ರತೆಗೆ ಭಂಗ ತರುವ ನಮ್ಮನ್ನು ವಿಚಲಿತಗೊಳಿಸುವ ಅನೇಕ ಸಂಗತಿಗಳಿರುತ್ತವೆ. ಯಾರೂ ಈ ಎಲ್ಲ ವಿಚಲಿತಗೊಳಿಸುವ ಸಂಗತಿಗಳಿಂದ ದೂರ ಇರುತ್ತಾರೋ ಅಂತಹವರು ಅಮರತ್ವವನ್ನು ಪಡೆಯುತ್ತಾರೆ.


ಹಣ ಇಲ್ಲದ ಮನುಷ್ಯ ಬಡವನಲ್ಲ ಆದರೆ ಕನಸು ಮತ್ತು ಗುರಿ ಇಲ್ಲದ ಮನುಷ್ಯ ನಿಜವಾದ ಬಡವ.

top swami vivekananda quotes in kannada

ಅರ್ಥ : ಯಾವ ಮನುಷ್ಯನಿಗೆ ಕನಸುಗಳು, ಉದ್ದೇಶ ಮತ್ತು ಗುರಿ ಇರುವುದಿಲ್ಲವೋ ಅವನು ನಿಜವಾದ ಬಡವ. ಒಂದು ವೇಳೆ ನಮಗೆ ಕನಸು, ಗುರಿ ಇದ್ದರೆ ಅವುಗಳ ಬೆನ್ನತ್ತಿದಾಗ ನಾವು ಖಂಡಿತವಾಗಿ ಏನಾದರೂ ಸಾಧಿಸುತ್ತೇವೆ. ಆಗ ಹಣ ತಾನಾಗಿಯೇ ನಮ್ಮ ಹಿಂದೆ ಬರುತ್ತದೆ. ಆದ್ದರಿಂದ ಹಣ ಇಲ್ಲದವನು ನಿಜವಾದ ಬಡವನಲ್ಲ.


ದೈಹಿಕವಾಗಿ, ಬೌದ್ಧಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ದುರ್ಬಲಗೊಳಿಸುವ ಯಾವುದಾದರೂ ಅದನ್ನು ವಿಷ ಎಂದು ತಿರಸ್ಕರಿಸಿ.

top swami vivekananda quotes in kannada

ಅರ್ಥ : ನಮ್ಮನ್ನು ದೈಹಿಕವಾಗಿ, ಮಾನಸಿಕನಾಗಿ ಮತ್ತು ಆಧ್ಯಾತ್ಮಿಕವಾಗಿ ದುರ್ಬಲಗೊಳಿಸುವ ಯಾವುದೇ ಸಂಗತಿಯಾಗಲಿ ಅದನ್ನು ತಿರಸ್ಕರಿಸುವುದು ಉತ್ತಮ. ಏಕೆಂದರೆ ಈ ಸಂಗತಿಗಳು ನಾವು ಸಾಗುವ ಹಾದಿಯಲ್ಲಿ ಅಡಚಣೆ ಉಂಟು ಮಾಡಿ ನಮ್ಮ ಗುರಿ ತಲುಪಲು ಅಡ್ಡಿ ಪಡಿಸುತ್ತವೆ. ನಾವು ಮಾಡಬೇಕಾಗಿರುವ ಕೆಲಸಗಳ ಮೇಲೆ ನಮ್ಮ ಗಮನ ಹರಿಸುವುದು ಅವಶ್ಯಕ.


ನಿಜವಾದ ಪ್ರಗತಿ ನಿಧಾನ ಆದದ್ದಾದರೂ ಖಚಿತ ಆದದ್ದು.

nice swami vivekananda quotes in kannada

ಅರ್ಥ : ಯಾವುದೇ ಮರವಾಗಲಿ ಒಂದು ದಿನದಲ್ಲಿ ಹಣ್ಣು ಕೊಡಲು ಸಾಧ್ಯವಿಲ್ಲ. ಅದೇ ರೀತಿ ಪ್ರಗತಿಯು ಕೂಡ. ಯಾವುದೇ ಕೆಲಸವಾದರೂ ಅದರ ಫಲ ದೊರೆಯಲು ಸಮಯ ಹಿಡಿಯುತ್ತದೆ. ಒಂದೇ ದಿನದಲ್ಲಿ ಪ್ರಗತಿ ಸಾಧ್ಯವಿಲ್ಲ. ಒಂದೇ ದಿನದಲ್ಲಿ ದೊರೆಯುವ ಪ್ರಗತಿ ಖಚಿತವಾದದ್ದಾಗಿರುವುದಿಲ್ಲ. ನಿಧಾನವಾಗಿ ದೊರೆಯುವ ಪ್ರಗತಿ ಖಚಿತವಾದದ್ದಾಗಿರುತ್ತದೆ.


ಜ್ಞಾನ ದಾನವು ಪ್ರಪಂಚದ ಅತ್ಯುನ್ನತ ದಾನವಾಗಿದೆ.

nice swami vivekananda quotes in kannada

ಅರ್ಥ : ಜ್ಞಾನ ದಾನ ಎಂಬುದು ಎಲ್ಲಕ್ಕಿಂತ ಶ್ರೇಷ್ಟ ದಾನಗಳಲ್ಲಿ ಒಂದಾಗಿದೆ. ಜ್ಞಾನದಿಂದ ವಿವೇಕವೂ ಹೆಚ್ಚುತ್ತದೆ. ಜ್ಞಾನದಿಂದ ವ್ಯಕ್ತಿಯ ಜೀವನ ಬದಲಾಗುದಲ್ಲದೆ ಇದು ಸ್ವಾವಲಂಬನೆಗೂ ದಾರಿ ತೋರುತ್ತದೆ. ಜ್ಞಾನ ವ್ಯಕ್ತಿ ತನ್ನ ಬದುಕು ಕಟ್ಟಿಕೊಳ್ಳಲು ಕೂಡ ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೆ ಜ್ಞಾನದಿಂದ ಎಲ್ಲ ವಿಷಯಗಳ ಅರಿವು ಮೂಡುತ್ತದೆ.


Nice Swami Vivekananda Quotes in Kannada

ಜಗತ್ತು ದೊಡ್ಡ ವ್ಯಾಯಾಮ ಶಾಲೆಯಂತೆ, ನಾವು ಇಲ್ಲಿ ನಮ್ಮನ್ನು ಬಲ ಪಡಿಸಿಕೊಳ್ಳಲು ಬಂದಿದ್ದೇವೆ.

nice swami vivekananda quotes in kannada

ಅರ್ಥ : ಈ ಜಗತ್ತು ಒಂದು ರೀತಿಯ ಶಾಲೆಯಂತೆ. ಇಲ್ಲಿ ನಾವು ಒಂದಿಲ್ಲೊಂದು ವಿಷಯಗಳನ್ನು ಕಲಿಯಲು, ನಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳಲು ಮತ್ತು ನಮ್ಮ ಶಕ್ತಿಯನ್ನು ಬಲ ಪಡಿಸಿಕೊಳ್ಳಲು ಬಂದಿದ್ದೇವೆ. ಆದ್ದರಿಂದ ನಮಗೆ ದೊರೆತಿರುವ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕಾಗಿರುವುದು ನಮ್ಮೆಲ್ಲರ ಜವಾಬ್ದಾರಿ.


ಏಳಿ! ಎದ್ದೇಳಿ! ಮತ್ತು ನಿಮ್ಮ ಗುರಿಯನ್ನು ತಲುಪುವವರೆಗೆ ನಿಲ್ಲಬೇಡಿ.

nice swami vivekananda quotes in kannada

ಅರ್ಥ : ಇಲ್ಲಿ ಸ್ವಾಮಿ ವಿವೇಕಾನಂದರು ನಮ್ಮನ್ನು ಜಾಗ್ರತಗೊಳಿಸಲು ಈ ಉಲ್ಲೇಖವನ್ನು ಹೇಳಿದ್ದಾರೆ. ಒಂದು ವೇಳೆ ನೀವು ಜಾಗ್ರತರಾಗಿಲ್ಲದಿದ್ದರೆ, ಏಳಿ ಎದ್ದೇಳಿ, ಎಚ್ಚರಗೊಳ್ಳಿ. ಮಾನವರು ದೈಹಿಕವಾಗಿ ಎಚ್ಚರಗೊಂಡಿದ್ದರೂ ಸಹ ಮಾನಸಿಕವಾಗಿ ನಾವು ಎಚ್ಚರವಾಗಿರುವುದಿಲ್ಲ. ನಾವು ಸಾಧಿಸಬೇಕಾಗಿರುವುದನ್ನು ಸಾಧಿಸಲು ಮತ್ತು ನಮಗೆ ತಲುಪ ಬೇಕಾಗಿರುವ ಗುರಿಯನ್ನು ತಲುಪಲು ನಾವು ಮಾನಸಿಕವಾಗಿ ಮತ್ತು ದೈಹಿಕವಾಗಿ ಎಚ್ಚರವಾಗಿರುವ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ.


ನಾವು ಹೊರಗೆ ಬಂದು ಇತರರಿಗೆ ಒಳ್ಳೆಯದನ್ನು ಮಾಡಿದರೆ, ನಮ್ಮ ಹೃದಯಗಳು ಹೆಚ್ಚು ಶುದ್ಧವಾಗುತ್ತವೆ ಮತ್ತು ಅಂತಹ ಹೃದಯದಲ್ಲಿ ದೇವರು ನೆಲೆಸುತ್ತಾನೆ.

nice swami vivekananda quotes in kannada

ಅರ್ಥ : ನಾವು ಎಷ್ಟು ಜನರಿಗೆ ಒಳ್ಳೆಯದನ್ನು ಮಾಡುತ್ತೇವೆಯೋ ಅಷ್ಟು ನಮ್ಮ ಹೃದಯಗಳು ಶುದ್ಧವಾಗುತ್ತವೆ. ಇಂತಹ ಶುದ್ಧ ಹೃದಯಗಳಲ್ಲಿ ಆ ದೇವರು ಬಂದು ನೆಲೆಸುತ್ತಾನೆ. ಆದ್ದರಿಂದ ನಾವು ನಮ್ಮ ಕೈಲಿ ಎಷ್ಟಾಗುತ್ತದೆಯೋ ಅಷ್ಟು ಜನರಿಗೆ ಒಳ್ಳೆಯದು ಮಾಡೋಣ.


ನೀವು ಕಾರ್ಯನಿರತರಾಗಿರುವಾಗ ಎಲ್ಲವೂ ಸುಲಭ. ಆದರೆ ನೀವು ಸೋಮಾರಿ ಆದಾಗ ಯಾವುದೂ ಸುಲಭವಲ್ಲ.

nice swami vivekananda quotes in kannada

ನಾವು ಕೆಲಸ ಮಾಡಬೇಕೆಂಬ ನಿರ್ಧಾರ ಮಾಡಿದರೆ ಎಲ್ಲವೂ ಸುಲಭವಾಗುತ್ತದೆ. ಸರಿಯಾದ ಹಾದಿಯಲ್ಲಿ ಶ್ರಮ ಪಟ್ಟರೆ ನಾವು ಮಾಡಬೇಕಾಗಿರುವ ಕೆಲಸ ಸುಲಭವೂ ಆಗುತ್ತದೆ ಮತ್ತು ನಾವು ಅದರಲ್ಲಿ ಯಶಸ್ಸನ್ನು ಸಾಧಿಸುತ್ತೇವೆ. . ಆದರೆ ನಾವು ಸೋಮಾರಿಯಾದರೆ ಎಲ್ಲವೂ ಕಷ್ಟಕರವಾಗಿ ತೋರುತ್ತದೆ ಮತ್ತು ನಮ್ಮಿಂದ ಏನೂ ಸಾಧ್ಯವಾಗುವುದಿಲ್ಲ.


ನಮ್ಮ ಹೃದಯದಲ್ಲಿ ಮತ್ತು ಪ್ರತಿ ಜೀವಿಯಲ್ಲಿ ದೇವರನ್ನು ಕಾಣದಿದ್ದರೆ ಇನ್ನೆಲ್ಲಿ ಕಾಣಬಹುದು.

swami vivekananda quotes in kannada

ಅರ್ಥ : ದೇವರು ಯಾವಾಗಲೂ ನಮ್ಮ ಮನಸ್ಸಿನಲ್ಲಿ ಮತ್ತು ಇತರರ ಮನಸ್ಸಿನಲ್ಲಿ ಇರುತ್ತಾನೆ. ಅದನ್ನು ಬಿಟ್ಟು ನಾವು ದೇವರನ್ನು ಬೇರೆ ಎಲ್ಲೆಡೆ ಹುಡುಕುವ ಕೆಲಸ ಮಾಡುತ್ತೇವೆ. ನಮ್ಮ ಆತ್ಮ ಶುದ್ಧವಾದರೆ ದೇವರು ಅಲ್ಲಿಯೇ ಬಂದು ನೆಲೆಸುತ್ತಾನೆ. ನಾವು ಯಾವಾಗ ದೇವರನ್ನು ಇತರರಲ್ಲಿಯೂ ಕಾಣಲು ಪ್ರಯತ್ನಿಸುತ್ತೇವೆಯೋ ಆಗ ಜಗತ್ತು ಸುಂದರವಾಗಿ ಕಾಣಲು ಪ್ರಾರಂಭಿಸುತ್ತದೆ.


ನಿಮ್ಮ ಗುರಿಗಳನ್ನು ನಿಮ್ಮ ಸಾಮರ್ಥ್ಯಗಳ ಮಟ್ಟಕ್ಕೆ ಇಳಿಸಬೇಡಿ. ಬದಲಾಗಿ, ನಿಮ್ಮ ಸಾಮರ್ಥ್ಯಗಳನ್ನು ನಿಮ್ಮ ಗುರಿಗಳ ಎತ್ತರಕ್ಕೆ ಹೆಚ್ಚಿಸಿ.

nice swami vivekananda quotes in kannada

ಅರ್ಥ : ನಮ್ಮಿಂದ ಏನೂ ಮಾಡಲು ಸಾಧ್ಯವಿಲ್ಲ ಎಂದು ನಮ್ಮ ಸಾಮರ್ಥ್ಯದ ಬಗ್ಗೆ ಅನುಮಾನ ಪಡುವ ಬದಲು ನಮ್ಮ ಸಾಮರ್ಥ್ಯವನ್ನು ವೃದ್ಧಿ ಪಡಿಸಿಕೊಳ್ಳುವುದರತ್ತ ಗಮನ ನೀಡಬೇಕು. ನಾವು ಮಾಡಬೇಕಾಗಿರುವ ಕೆಲಸಗಳನ್ನು ನಮ್ಮ ಗುರಿಗಳನ್ನು ನಮ್ಮ ಸಾಮರ್ಥ್ಯದ ಮೇಲೆ ಬದಲಾಯಿಸಿಕೊಳ್ಳುವುದರ ಬದಲು ಆ ಗುರಿಗಳನ್ನು ತಲುಪಲು ಬೇಕಾಗಿರುವ ಸಾಮರ್ಥ್ಯವನ್ನು ವೃದ್ಧಿ ಪಡಿಸಿಕೊಳ್ಳುವುದು ಅವಶ್ಯಕ.


ಶಕ್ತಿಯೇ ಜೀವನ , ದೌರ್ಬಲ್ಯವೇ ಮರಣ.

swami vivekananda quotes in kannada

ಅರ್ಥ : ಶಕ್ತಿವಂತರಾಗಿರುವುದು ಎಂದರೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಸಬಲವಂತರಾಗಿರುವುದು ಅಥವಾ ಸದೃಢವಾಗಿರುವುದು. ನಾವು ದುರ್ಬಲರಾದರೆ ನಮ್ಮ ಮನಸ್ಸು ಕುಗ್ಗಿ ಹೋಗುತ್ತದೆ ಮತ್ತು ನಮ್ಮಿಂದ ಏನೂ ಮಾಡಲು ಸಾಧ್ಯವಾಗುವುದಿಲ್ಲ. ನಾವು ದುರ್ಬಲರಲ್ಲ ಎನ್ನುವುದನ್ನು ಅರಿತಾಗ ನಮ್ಮ ಮನೋಬಲ ಹೆಚ್ಚಾಗುವುದರೊಂದಿಗೆ ಅಸಾಧ್ಯವನ್ನು ಸಾಧಿಸಲು ನೆರವಾಗುತ್ತದೆ.


ನಿಮ್ಮನ್ನು ನೀವು ಬಲಶಾಲಿ ಎಂದು ಭಾವಿಸಿದರೆ, ನೀವು ಬಲಶಾಲಿಯಾಗುತ್ತೀರಿ.

swami vivekananda quotes in kannada

ಅರ್ಥ : ನಿಮ್ಮನ್ನು ನೀವು ದುರ್ಬಲ ಎಂದು ಭಾವಿಸಿದರೆ ನೀವು ದುರ್ಬಲರಾಗುತ್ತೀರಿ. ಆದರೆ ನಿಮ್ಮನ್ನು ನೀವು ಬಲಶಾಲಿ ಎಂದು ಎಂದುಕೊಂಡರೆ ನಿಮಗಿಂತ ಬಲಶಾಲಿ ಇನ್ನೊಬ್ಬರಿರುವುದಿಲ್ಲ. ನೀವು ಏನು ಅಂದುಕೊಳ್ಳುತ್ತೀರೋ ಅದೇ ಆಗುತ್ತೀರಿ. ಆದ್ದರಿಂದ ಯಾವಾಗಲೂ ಸಕಾರಾತ್ಮಕ ಚಿಂತನೆ ಬೆಳೆಸಿಕೊಳ್ಳುವುದು ಅಗತ್ಯ. ಇದರಿಂದ ನಾವು ಏನು ಬೇಕಾದರೂ ಸಾಧಿಸಲು ಸಾಧ್ಯವಾಗುತ್ತದೆ.


ನೀವು ನಿಮ್ಮ ಹಣೆಬರಹದ ಸೃಷ್ಟಿಕರ್ತರು.

swami vivekananda quotes in kannada

ಅರ್ಥ :  ನಮ್ಮ ಹಣೆಬರಹವನ್ನು ನಾವೇ ಬರೆಯಬೇಕೆ ಹೊರತು ಇತರರಲ್ಲ. ನಾವು ಏನಾಗಬೇಕೆಂದು ಮತ್ತು ಏನು ಮಾಡಬೇಕೆಂದು ನಾವೇ ನಿರ್ಧರಿಸಬೇಕು. ಇಷ್ಟೇ ಅಲ್ಲದೆ ಪ್ರಯತ್ನವನ್ನೂ ನಾವೇ ಪಡಬೇಕಾಗುತ್ತದೆ. ಆದ್ದರಿಂದ ನಮ್ಮ ಜೀವನದ ಸೃಷ್ಟಿಕರ್ತರು ನಾವೇ.

Hope you liked these Swami Vivekananda Quotes in Kannada. For more quotes click on the below link.

Kannada Inspirational Quotes