Short stories in kannada

Short stories in Kannada | ಕನ್ನಡದಲ್ಲಿ ಸಣ್ಣ ಕಥೆಗಳು

Here you will find short stories in Kannada which can be easily understood by children. Along with each short story you can also find the moral of the story.

ಕೆಳಗೆ ಮಕ್ಕಳಿಗೆ ಅರ್ಥವಾಗುವಂತಹ ಕೆಲ ಸಣ್ಣ ಕಥೆಗಳನ್ನು ಕನ್ನಡದಲ್ಲಿ (Short Stories in Kannada) ನೀತಿಯೊಂದಿಗೆ ಕೊಡಲಾಗಿದೆ.

Short stories in Kannada | ಕನ್ನಡದಲ್ಲಿ ಸಣ್ಣ ಕಥೆಗಳು

ಹಸುಗಳು ಮತ್ತು ಹುಲಿಗಳ ಕಥೆ | Cows and Tigers Short stories in Kannada

hasugalu matthu huligala kathe

ಹುಲ್ಲುಗಾವಲಿನ ಸಮೀಪವಿರುವ ಕಾಡಿನಲ್ಲಿ ನಾಲ್ಕು ಹಸುಗಳು ವಾಸಿಸುತ್ತಿದ್ದವು. ಅವು ಉತ್ತಮ ಸ್ನೇಹಿತರಾಗಿದ್ದವು ಮತ್ತು ಯಾವಾಗಲೂ ಒಟ್ಟಿಗೆ ಇರುತ್ತಿದ್ದವು ಹಾಗೂ ಎಲ್ಲಿಗೆ ಹೋದರೂ ಒಟ್ಟಿಗೆ ಹೋಗುತ್ತಿದ್ದವು. ಇದರಿಂದಾಗಿ ಯಾವುದೇ ಹುಲಿಗಳು ಅವುಗಳನ್ನು ಆಹಾರಕ್ಕಾಗಿ ಕೊಲ್ಲಲು ಸಾಧ್ಯವಾಗಲಿಲ್ಲ.

ಆದರೆ ಒಂದು ದಿನ, ಎಲ್ಲ ಹಸುಗಳು ಚಿಕ್ಕ ಕಾರಣದಿಂದಾಗಿ ಜಗಳ ಆಡಿಕೊಂಡು  ಮಾತು ಬಿಟ್ಟವು ಮತ್ತು ಹಸುಗಳು  ಬೇರೆ ಬೇರೆ ಕಡೆ ಹುಲ್ಲು ಮೇಯಲು ಹೋದವು. ಇದಕ್ಕೆ ಹೊಂಚು ಹಾಕಿ ಕಾಯುತಿದ್ದ ಹುಲಿಗಳು ಗೋವುಗಳನ್ನು ಕೊಲ್ಲಲು ಇದೇ ಸೂಕ್ತ ಅವಕಾಶ ಎಂದು ನಿರ್ಧರಿಸಿದವು. ಅವು ಪೊದೆಗಳಲ್ಲಿ ಅಡಗಿಕೊಂಡು ಹಸುಗಳು ಬರುವುದನ್ನೇ ಕಾದವು ಮತ್ತು ಹಸುಗಳು ಹಿಂತಿರುಗುವಾಗ  ಒಂದೊಂದಾಗಿ ಅವನ್ನು ಹುಲಿಗಳು ಕೊಂದವು.

ಕಥೆಯ ನೀತಿ / Moral of the short story in Kannada : ಒಗ್ಗಟ್ಟಿನಲ್ಲಿ ಬಲವಿದೆ. ಎಲ್ಲಿಯವರೆಗೂ ನಾವು ಒಗ್ಗಟ್ಟಿನಿಂದ ಇರುತ್ತೇವೆಯೋ,ಅಲ್ಲಿವರೆಗೂ ಯಾರು ನಮಗೆ ತೊಂದರೆ ಕೊಡಲು ಸಾಧ್ಯವಿಲ್ಲ (There is strength in Unity. As long as we are united nobody can create any harm to us).


ನರಿ ಮತ್ತು ದ್ರಾಕ್ಷಿ ಹಣ್ಣಿನ ಕಥೆ | The fox and the grapefruit Short stories in Kannada

nari matthu drakshi hannina kathe

ಒಂದು ದಿನ ನರಿಯೊಂದು ತುಂಬಾ ಹಸಿವಾಗಿ ಆಹಾರ ಹುಡುಕಲು ಹೊರಟಿತು. ಅದು ದೂರ ದೂರದವರೆಗೂ ಹುಡುಕಿದರೂ, ಅದಕ್ಕೆ ತಿನ್ನಬಹುದಾದ ಯಾವ ಆಹಾರ ಕೂಡ ದೊರೆಯಲಿಲ್ಲ. ಅಂತಿಮವಾಗಿ ಅದು ಅತಿದೊಡ್ಡ, ರಸಭರಿತವಾದ ದ್ರಾಕ್ಷಿ ಮರವನ್ನು ನೋಡಿತು. ಹಣ್ಣುಗಳು  ನೇರಳೆ ಬಣ್ಣವನ್ನು ಹೊಂದಿದ್ದವು ಮತ್ತು ತಿನ್ನಲು ಸಿದ್ಧವಾಗಿದ್ದವು. ದ್ರಾಕ್ಷಿಯನ್ನು ತಿನ್ನಲು, ನರಿ ಎತ್ತರಕ್ಕೆ ಜಿಗಿಯಿತು. ಅದು ಮೇಲಕ್ಕೆ ಜಿಗಿದಾಗ ದ್ರಾಕ್ಷಿ ಸಿಗಲಿಲ್ಲ. ಇನ್ನೊಮ್ಮೆ ಬಾರಿ ಜಿಗಿದು ಹಣ್ಣನ್ನು ಪಡೆಯಲು ಪ್ರಯತ್ನಿಸಿತು, ಆಗಲೂ ಹಣ್ಣು ಸಿಗಲಿಲ್ಲ.

ಅದು ಮತ್ತೊಮ್ಮೆ ಪ್ರಯತ್ನಿಸಿತು ಆದರೆ ಎಷ್ಟು ಬಾರಿ ಪ್ರಯತ್ನಿಸಿದರೂ ನರಿಗೆ ಹಣ್ಣು ಸಿಗಲಿಲ್ಲ.

ಅಂತಿಮವಾಗಿ, ನರಿ ತನ್ನ ಪ್ರಯತ್ನ ನಿಲ್ಲಿಸಿ ಮನೆಗೆ ಹೋರಡಲು ನಿರ್ಧರಿಸಿತು. ಹೊರಡುವಾಗ ದಾರಿಯಲ್ಲಿ “ದ್ರಾಕ್ಷಿಗಳು ಹೇಗಾದರೂ ಹುಳಿಯಾಗಿವೆ ಅದಕ್ಕೆ ನನಗೆ ಸಿಗಲಿಲ್ಲ” ಎಂದು ಮನಸ್ಸಿನಲ್ಲಿ ಹೇಳಿಕೊಂಡಿತು.

ಕಥೆಯ ನೀತಿ / Moral of the short story in Kannada : ಯಾವುದು ಅಸಾಧ್ಯವಿಲ್ಲ. ಯಶಸ್ಸು ಸಿಗೋವವರೆಗೂ ನಾವು ಪ್ರಯತ್ನ ಮಾಡುತ್ತಲೇ ಇರಬೇಕು. ಯಾವುದೂ ಸುಲಭವಾಗಿ ಬರುವುದಿಲ್ಲ (Nothing is impossible in this world. We have to keep trying till we succeed. Nothing comes easy).


ಅಕ್ಬರ್ ಮತ್ತು ಬೀರ್ಬಲ್ ನ ಕಥೆ | Akbar and Birbal Short stories in Kannada

akbar matthu beerbal kathe

ಒಂದು ದಿನ, ರಾಜ ಅಕ್ಬರ್ ತನ್ನ ಆಸ್ಥಾನದಲ್ಲಿ ಒಂದು ಪ್ರಶ್ನೆಯನ್ನು ಕೇಳಿದನು, ಅದು ಸಭೆಯಲ್ಲಿದ್ದವರೆಲ್ಲರನ್ನು ಗೊಂದಲಕ್ಕೀಡು ಮಾಡಿತು. ಅವರೆಲ್ಲರೂ ಉತ್ತರವನ್ನು ಕಂಡುಹಿಡಿಯಲು ಚರ್ಚೆ ನಡೆಸುತ್ತಿರುವಾಗ, ಬೀರಬಲ್ ಒಳಗೆ ನಡೆದು ವಿಷಯ ಏನೆಂದು ಕೇಳಿದನು. ಅವರು ಅವನಿಗೆ ಪ್ರಶ್ನೆಯನ್ನು ಪುನರಾವರ್ತಿಸಿದರು.

“ನಗರದಲ್ಲಿ ಎಷ್ಟು ಕಾಗೆಗಳಿವೆ?” ಎಂಬ ಪ್ರಶ್ನೆಯನ್ನು ರಾಜರು ಕೇಳಿದ್ದಾರೆಂದು ತಿಳಿಸಿದರು.

ಬೀರ್ಬಲ್ ತಕ್ಷಣ ಮುಗುಳ್ನಕ್ಕು ಅಕ್ಬರನ ಬಳಿಗೆ ಹೋಗಿ, ನಗರದಲ್ಲಿ ಹತ್ತು ಸಾವಿರದ ಮುನ್ನೂರ  ಇಪ್ಪತ್ತ ಆರು  ಕಾಗೆಗಳು ಇದ್ದಾವೆ ಎಂಬ ಉತ್ತರ ನೀಡಿದನು. ಅಷ್ಟು ನಿಖರವಾಗಿ ಹೇಗೆ ಹೇಳಬಲ್ಲೆ ಎಂದು ಕೇಳಿದಾಗ?

ಬೀರ್ಬಲ್, “ಕಾಗೆಗಳ ಸಂಖ್ಯೆಯನ್ನು ಎಣಿಸಲು ನಿಮ್ಮ ಆಸ್ಥಾನದಲ್ಲಿರುವವರಿಗೆ ಕೇಳಿ. ಹೆಚ್ಚು ಇದ್ದರೆ, ಕಾಗೆಗಳ ಸಂಬಂಧಿಕರು ಹತ್ತಿರದ ನಗರಗಳಿಂದ ಇಲ್ಲಿರುವ ಕಾಗೆಗಳನ್ನು ಭೇಟಿ ಮಾಡಲು ಬಂದಿರಬೇಕು. ಕಡಿಮೆ ಇದ್ದರೆ, ನಮ್ಮ ನಗರದ ಕಾಗೆಗಳು ನಗರದ ಹೊರಗೆ ವಾಸಿಸುವ ತಮ್ಮ ಸಂಬಂಧಿಕರನ್ನು ಭೇಟಿ ಮಾಡಲು ಹೋಗಿರಬೇಕೆಂದು ಹೇಳಿದನು. ಉತ್ತರದಿಂದ ಸಂತೋಷಗೊಂಡ ಅಕ್ಬರ್, ಬೀರ್ಬಲ್‌ಗೆ ಮಾಣಿಕ್ಯ ಮತ್ತು ಮುತ್ತಿನ ಸರವನ್ನು ಉಡುಗೊರೆಯಾಗಿ ನೀಡಿ ಬೀರ್ಬಲ್‌ ಬುದ್ಧಿವಂತಿಕೆಯನ್ನು ಪ್ರಶಂಶೆ ಮಾಡಿದನು. 

ಕಥೆಯ ನೀತಿ / Moral of the short story in Kannada : ನಿಮ್ಮ ಉತ್ತರಕ್ಕೆ ವಿವರಣೆಯನ್ನು ಹೊಂದಿರುವುದು ಉತ್ತರವನ್ನು ಹೊಂದಿರುವಷ್ಟೇ ಮುಖ್ಯವಾಗಿದೆ (Having an explanation to your answer is as important as having answer to your question).


akbar birbal stories kannada


ಇರುವೆ ಮತ್ತು ಪಾರಿವಾಳದ ಕಥೆ | Ant and the Dove Short stories in Kannada

ಬೇಸಿಗೆಯ ಬಿಸಿಲಿನ ದಿನದಲ್ಲಿ, ಇರುವೆಯೊಂದು ನೀರನ್ನು ಹುಡುಕುತ್ತಾ ತಿರುಗಾಡುತ್ತಿತ್ತು. ಸ್ವಲ್ಪ ಹೊತ್ತು ತಿರುಗಾಡಿದ ನಂತರ, ಇರುವೆ ನದಿಯನ್ನು ನೋಡಿತು ಮತ್ತು ಅದನ್ನು ನೋಡಿ ಕುಡಿಯಲು ನೀರು ಸಿಕ್ಕಿತೆಂದು ಸಂತೋಷಗೊಂಡಿತು. ನೀರು ಕುಡಿಯಲು ಚಿಕ್ಕ ಬಂಡೆಯ ಮೇಲೆ ಹತ್ತಿದ ಇರುವೆ ಕಾಲು ಜಾರಿ ನದಿಗೆ ಬಿದ್ದಿತು.

ಹತ್ತಿರದ ಮರದ ಮೇಲೆ ಕುಳಿತಿದ್ದ ಪಾರಿವಾಳವು ಇರುವೆಗೆ ಸಹಾಯ ಮಾಡಲು ಮುಂದಾಯಿತು.ಇರುವೆ ತೊಂದರೆಯಲ್ಲಿರುವುದನ್ನು ನೋಡಿ, ಪಾರಿವಾಳವು ಬೇಗನೆ ಎಲೆಯನ್ನು ನೀರಿಗೆ ಎಸೆಯಿತು. ಇರುವೆ ಎಲೆಯ ಕಡೆಗೆ ಚಲಿಸಿತು ಮತ್ತು ಅದರ ಮೇಲೇರಿ ಕುಳಿತಿತು. ನಂತರ ಪಾರಿವಾಳವು ಎಲೆಯನ್ನು ನಿಧಾನವಾಗಿ ಎಚ್ಚರಿಕೆಯಿಂದ ಹೊರತೆಗೆದು ಭೂಮಿ ಮೇಲೆ  ಇರಿಸಿತು. ಈ ರೀತಿಯಾಗಿ, ಇರುವೆಯ ಜೀವವನ್ನು ಪಾರಿವಾಳ ಉಳಿಸಿತು.

ಭೂಮಿಗೆ ಮೇಲೆ ಬಂದ ನಂತರ ಇರುವೆ ತನ್ನ ಜೀವ ಕಾಪಾಡಿದ್ದಕ್ಕಾಗಿ ಪಾರಿವಾಳಕ್ಕೆ ಧನ್ಯವಾದ ತಿಳಿಸಿ  ತನ್ನ ಸಹಾಯವನ್ನು ಎಂದಿಗೂ ಮರೆಯುವುದಿಲ್ಲವೆಂದು ಹೇಳಿತು.

ಇದಾದ ನಂತರ ಇರುವೆ ಮತ್ತು ಪಾರಿವಾಳವು ಆತ್ಮೀಯ ಗೆಳೆಯರಾದರು ಮತ್ತು ಯಾವಾಗಲೂ ಒಟ್ಟಿಗೆ ಸಂತೋಷದಿಂದ ಇರುತ್ತಿದ್ದವು.  ಒಂದು ದಿನ, ಒಬ್ಬ ಬೇಟೆಗಾರ ಕಾಡಿಗೆ ಬೇಟೆಯಾಡಲು ಬಂದನು. ಅವನು ಮರದ ಮೇಲೆ ಕುಳಿತಿದ್ದ ಸುಂದರವಾದ ಪಾರಿವಾಳವನ್ನು ನೋಡಿ ತನ್ನ ಬಂದೂಕನ್ನು ಪಾರಿವಾಳಕ್ಕೆ ಗುರಿ ಇಟ್ಟನು. ಇದನ್ನು ಕಂಡ ಇರುವೆ ಪಾರಿವಾಳವನ್ನು ಉಳಿಸಬೇಕೆಂದು ನಿರ್ಧಾರ ಮಾಡಿ ಬೇಟೆಗಾರನ ಹಿಮ್ಮಡಿಗೆ ಕಚ್ಚಿತು. ಬೇಟೆಗಾರ ನೋವಿನಿಂದ ಕೂಗಿದ ಮತ್ತು ಬಂದೂಕನ್ನು ಕೈಬಿಟ್ಟ. ಪಾರಿವಾಳವು ಬೇಟೆಗಾರನ ಧ್ವನಿಯಿಂದ ಗಾಬರಿಗೊಂಡಿತು ಮತ್ತು ಅವನೊಂದಿಗೆ ಏನಾಗಿರಬಹುದೆಂದು  ಅರಿತುಕೊಂಡು ಅಲ್ಲಿಂದ ಪಾರಿವಾಳವು ಹಾರಿ ಹೋಯಿತು.

ಕಥೆಯ ನೀತಿ / Moral of the short story in Kannada : ಒಳ್ಳೆಯ ಕಾರ್ಯಕ್ಕೆ ಪ್ರತಿಫಲ ಒಂದಲ್ಲ ಒಂದು ದಿನ ಸಿಕ್ಕೇ ಸಿಗುತ್ತದೆ (For every good work you do, you will get the return one or the other day).


ಹುಲಿ ಮತ್ತು ಜಿಂಕೆಯ ಕಥೆ | The Tiger and the Deer Short stories in Kannada

huli matthu jinkeya kathe

ಒಂದು ದಿನ ಹುಲಿ ಹುಲ್ಲು ಮೇಯುತ್ತಿರುವ ದಷ್ಟ ಪುಷ್ಟವಾಗಿ ಇರುವ  ಜಿಂಕೆಯನ್ನು ನೋಡಿತು. ಹಸಿದಿದ್ದ ಹುಲಿ, ಊಟಕ್ಕಾಗಿ ಜಿಂಕೆಯನ್ನು ಬೇಟೆಯಾಡಲು ಬಯಸಿತು.

ಜಿಂಕೆ ರುಚಿಕರವಾಗಿರಬಹುದೆಂದು ಭಾವಿಸಿದ ಹುಲಿ, ಜಿಂಕೆಯ ವೇಗದ ಬಗ್ಗೆ ಅರಿಯದೆ ತಾನು ಸದ್ದಿಲ್ಲದೆ ಅದರ ಬಳಿ ಹೋಗಿ ದಾಳಿ ಮಾಡಬೇಕೆಂದು ಯೋಜನೆ ರೂಪಿಸಿತು.

ಹುಲ್ಲನ್ನು ಮೇಯುತಿದ್ದ ಜಿಂಕೆ ಇಲ್ಲಿ ತುಂಬ ಹುಲ್ಲು ಇದೆ ಮತ್ತು ಈ ಹುಲ್ಲು ತುಂಬಾ ಸಿಹಿ ಮತ್ತು ತುಂಬಾ ಮೃದುವಾಗಿದೆ. ನಾನು ಪ್ರತಿದಿನ ತನ್ನ ಹೊಟ್ಟೆ ತುಂಬಿಸಿಕೊಳ್ಳಲು ಇಲ್ಲಿಗೆ ಬರಬೇಕು ಎಂದು ಭಾವಿಸಿತು.

ದೂರದಿಂದ ಜಿಂಕೆ ತನ್ನ ಕಡೆ ನಿಧಾನವಾಗಿ ತನ್ನ ಮೇಲೆ ದಾಳಿ ಮಾಡಲು ಬರುತ್ತಿರುವ ಹುಲಿಯನ್ನು ಗಮನಿಸಿತು. ಹೆದರಿದ ಜಿಂಕೆ ಜಿಗಿದು ತನ್ನ ಜೀವ ಕಾಪಾಡಿಕೊಳ್ಳಲು ಓಡಿತು. ಜೀವ ಕಾಪಾಡಿಕೊಳ್ಳಲು ವೇಗವಾಗಿ ಓಡಿದ ಜಿಂಕೆ ಹುಲಿಯ ಕಣ್ಣಿಗೆ ಕಾಣದಷ್ಟು ದೂರ ಹೋಗಿ ಕಣ್ಮರೆಯಾಯಿತು.  ತನ್ನ ಮೂರ್ಖತೆಯ ಬಗ್ಗೆ ತಿಳಿದು ಹುಲಿ ಅಲ್ಲಿಂದ ಬರಿಗೈಯಲ್ಲಿ ತೆರಳಿತು.

ಕಥೆಯ ನೀತಿ / Moral of the short story in Kannadaಅತಿಯಾದ ಆತ್ಮ ವಿಶ್ವಾಸ ಒಳ್ಳೆಯದಲ್ಲ (Too much of confidence is dangerous).


tenali rama stories kannada


ಒರಟ ಬೆಕ್ಕು ಮತ್ತು ಮುಗ್ಧ ಮನುಷ್ಯನ ಕಥೆ | The rough cat and an innocent man Short stories in Kannada

orata bekku matthu mughda manushya

ಒಂದು ದಿನ, ಒಬ್ಬ ವ್ಯಕ್ತಿಯು ರಸ್ತೆಯ ಮೂಲಕ ನಡೆದುಕೊಂಡು ಹೋಗುತ್ತಿದ್ದಾಗ, ಹತ್ತಿರದ ಮರದಿಂದ ಬೆಕ್ಕು ಮಿಯಾಂವ್ ಅನ್ನುವುದನ್ನು ಕೇಳಿದನು. ಬೆಕ್ಕು ಸಿಲುಕಿಕೊಂಡಿರಬಹುದು ಮತ್ತು ಹೊರಬರಲು ಸಹಾಯಕ್ಕಾಗಿ ಕೂಗುತ್ತಿದೆ ಎಂದು ಅರಿತ ದಾರಿಹೋಕ ಕೈ ಚಾಚಿ ಬೆಕ್ಕನ್ನು ಕೆಳಗಿಳಿಸಲು ಪ್ರಯತ್ನಿಸಿದನು. ಆದರೆ ಮನುಷ್ಯ ತನಗೆ ತೊಂದರೆ ಕೊಡಲು ಪ್ರಯತ್ನಿಸುತ್ತಿರಬೇಕೆಂದು ಭಾವಿಸಿದ ಬೆಕ್ಕು ಹೆದರಿ ಆ ಮನುಷ್ಯನನ್ನು ತನ್ನ ಉಗುರಿನಿಂದ ಕೆರೆಯಿತು. ಮನುಷ್ಯನು ನೋವಿನಿಂದ ಕಿರುಚಿದನು, ಆದರೆ ಹಿಂದೆ ಸರಿಯಲಿಲ್ಲ. ಬೆಕ್ಕು ತನ್ನ ಕೈಗಳನ್ನು ಪದೇ ಪದೇ ಗೀಚುವುದನ್ನು ಮುಂದುವರೆಸಿದರೂ ಅವನು ಮತ್ತೆ ಮತ್ತೆ ಬೆಕ್ಕನ್ನು ಕಾಪಾಡುವದರಿಂದ ಹಿಂದೆ ಸರಿಯಲಿಲ್ಲ.

ಇದನ್ನು ಗಮನಿಸಿದ ಇನ್ನೊಬ್ಬ ದಾರಿಹೋಕ , ಇರಲಿ ಬಿಡಿ  ಬೆಕ್ಕು ನಂತರ ಹೊರಬರುತ್ತದೆಂದು ಹೇಳಿದನು. ಆದರೆ ಆ ಮನುಷ್ಯ ದಾರಿಹೋಕನ ಮಾತಿಗೆ ಗಮನ ಕೊಡದೆ ಅವನು ಬೆಕ್ಕನ್ನು  ಕೆಳಗೆ ಇಳಿಸುವವರೆಗೂ ಪ್ರಯತ್ನಿಸಿದನು. ಬೆಕ್ಕನ್ನು ಬಿಡಿಸಿದ ನಂತರ ಅವನು ಆ ಮನುಷ್ಯನಿಗೆ, “ಬೆಕ್ಕು ಒಂದು ಪ್ರಾಣಿ, ಮತ್ತು ಅದರ ಪ್ರವೃತ್ತಿಯು ಅದನ್ನು ಗೀಚುವಂತೆ ಮತ್ತು ಆಕ್ರಮಣ ಮಾಡುವಂತೆ ಮಾಡುತ್ತದೆ. ನಾನು ಮನುಷ್ಯ ಮತ್ತು ನನ್ನ ಪ್ರವೃತ್ತಿಗಳು ನನ್ನನ್ನು ಸಹಾನುಭೂತಿ ಮತ್ತು ಕರುಣೆ ತೋರುವಂತೆ ಮಾಡುತ್ತವೆ” ಎಂದು ಹೇಳಿದನು.

ಕಥೆಯ ನೀತಿ / Moral of the short story in Kannada : ನಿಮ್ಮ ಸುತ್ತಲಿರುವ ಪ್ರತಿಯೊಬ್ಬರನ್ನು ನಿಮ್ಮ ಸ್ವಭಾವ ಗುಣ ಹೇಗಿರುತ್ತದೆಯೋ ಹಾಗೆ ಉಪಚರಿಸಿ. ನಿಮ್ಮ ನಿಯಮಗಳಿಗೆ ಅಥವಾ ನೀತಿಗಳಿಗೆ ಬದ್ಧರಾಗಿರಿ, ಬೇರೆಯವರದ್ದಕ್ಕಲ್ಲ (Treat everyone as how you are not how they are. This means that we should treat everyone in good ways no matter how bad they are).


ಚಿನ್ನದ ಮೊಟ್ಟೆ ಇಡುವ ಕೋಳಿಯ ಕಥೆ | Golden Egg laying Hen Short stories in Kannada

ಒಂದಾನೊಂದು ಕಾಲದಲ್ಲಿ, ಒಬ್ಬ ರೈತನ ಬಳಿ ಪ್ರತಿದಿನ ಚಿನ್ನದ ಮೊಟ್ಟೆ ಇಡುವ ಕೋಳಿ ಇತ್ತು. ರೈತ ಮತ್ತು ಅವನ ಹೆಂಡತಿಗೆ ಅವರ ದೈನಂದಿನ ಅಗತ್ಯಗಳಿಗೆ ಸಾಕಾಗುವಷ್ಟು ಹಣವನ್ನು ಆ ಚಿನ್ನದ ಮೊಟ್ಟೆ ಮಾರಿ ಪಡೆಯುತ್ತಿದ್ದರು. ರೈತ ಮತ್ತು ಅವನ ಹೆಂಡತಿ ಬಹಳ ಕಾಲ ಸಂತೋಷದಿಂದ ಇದ್ದರು. ಆದರೆ ಒಂದು ದಿನ, ರೈತನು, “ನಾನು ದಿನಕ್ಕೆ ಒಂದು ಮೊಟ್ಟೆಯನ್ನು ಏಕೆ ತೆಗೆದುಕೊಳ್ಳಬೇಕು? ಈ ಕೋಳಿಯನ್ನು ಕತ್ತರಿಸಿ ನಾನು ಎಲ್ಲವನ್ನೂ ಒಂದೇ ಬಾರಿಗೆ ತೆಗೆದುಕೊಂಡು ಸಾಕಷ್ಟು ಹಣವನ್ನು ಏಕೆ ಮಾಡಬಾರದು?” ಎಂದು ಮನಸ್ಸಿನಲ್ಲಿ ಯೋಚಿಸಿದನು.

ರೈತ ತನ್ನ ಹೆಂಡತಿ ಜೊತೆ ಈ ವಿಷಯ ಹಂಚಿಕೊಂಡಾಗ ಆಕೆಯು ಕೂಡ ಒಪ್ಪಿಕೊಂಡಳು ಮತ್ತು ಮೊಟ್ಟೆಗಳಿಗಾಗಿ ಕೋಳಿಯ ಹೊಟ್ಟೆಯನ್ನು ಕತ್ತರಿಸಲು ಇಬ್ಬರೂ ನಿರ್ಧಾರ ಮಾಡಿದರು. ಅವರು ಕೋಳಿಯನ್ನು ಕೊಂದು ಹೊಟ್ಟೆಯನ್ನು ತೆರೆದ ತಕ್ಷಣ, ಕರುಳು ಮತ್ತು ರಕ್ತವನ್ನು ಹೊರತುಪಡಿಸಿ ಬೇರೆ ಏನೂ ಸಿಗಲಿಲ್ಲ. ದುರಾಸೆಯಿಂದ ತಾವು ಮಾಡಿದ ಮೂರ್ಖ ಕೆಲಸಕ್ಕೆ ರೈತ ಮತ್ತು ಅವನ ಹೆಂಡತಿ ಅಳುತ್ತಾ ಕುಳಿತುಕೊಂಡರು.

ಕಥೆಯ ನೀತಿ / Moral of the short story in Kannada : ಏನಾದರೂ ಕೆಲಸ ಮಾಡುವ ಮುಂಚೆ ನಾವು ಅದರ ಪರಿಣಾಮವನ್ನು ಯೋಚಿಸಬೇಕು. ಇಲ್ಲದಿದ್ದರೆ ಅದರಿಂದಾಗುವ ದುಷ್ಪರಿಣಾಮವನ್ನು ನಾವೇ ಅನುಭವಿಸಬೇಕಾಗುತ್ತದೆ (We should always think about the consequences before doing something or else we have to face it’s consequences).


ಇನ್ನೂ ಹೆಚ್ಚಿನ ಕಥೆಗಳಿಗಾಗಿ

Moral stories in Kannada

ಕನ್ನಡ ಕಥೆಗಳು / Kannada Kathegalu

ಕನ್ನಡ ನೀತಿ ಕಥೆಗಳು / Kannada Moral Stories

Click on the below link for Hindi stories

Hindi moral stories

हिंदी कहानी

panchatantra stories in Hindi