kannada letter writing format

Letter writing in Kannada format | ಕನ್ನಡದಲ್ಲಿ ಪತ್ರ ಬರೆಯುವ ಶೈಲಿ

Here you will find information about Letter writing in Kannada format along with types of letters. Format of formal letter writing in Kannada and informal letter writing in Kannada along with few examples of letter writing in Kannada.

letter writing in Kannada

ಕೆಳಗೆ ಕನ್ನಡದಲ್ಲಿ ಪತ್ರ ಬರೆಯುವ ಶೈಲಿ, ಔಪಚಾರಿಕ ಪತ್ರ ಬರೆಯುವ ಸ್ವರೂಪ ಮತ್ತು ಅನೌಪಚಾರಿಕ ಪತ್ರ ಬರೆಯುವ ಸ್ವರೂಪದ ಬಗ್ಗೆ ಉದಾಹರಣೆ ಸಹಿತ ಕೊಡಲಾಗಿದೆ.

ಔಪಚಾರಿಕ ಪತ್ರ ಬರೆಯುವ ಸ್ವರೂಪ | Format of Formal Letter Writing in Kannada

ಔಪಚಾರಿಕ ಪತ್ರದ ವಿವರಣೆ / Formal letter definition: ಸ್ವರೂಪವು ಇನ್ನೂ ಪ್ರಮುಖ ಸ್ಥಳಗಳಲ್ಲಿ ಚಲಾವಣೆಯಲ್ಲಿದೆ. ವಾಣಿಜ್ಯ, ವ್ಯಾಪಾರ, ಅಧಿಕೃತ ಪತ್ರವ್ಯವಹಾರ, ಸಾರ್ವಜನಿಕ ಪ್ರಾತಿನಿಧ್ಯ, ಬ್ಯಾಂಕ್, ದೂರುಗಳು ಮತ್ತು ಇತರ ವ್ಯವಹಾರಗಳು, ವಹಿವಾಟುಗಳು ಮತ್ತು ಜನರೊಂದಿಗೆ ಸಂವಹನವನ್ನು ಔಪಚಾರಿಕ ಪತ್ರಗಳ ಮೂಲಕ ನಡೆಸಲಾಗುತ್ತದೆ.

ಆದ್ದರಿಂದ, ಪತ್ರ ಬರೆಯುವ ಕಲೆ ಮತ್ತು ಕೌಶಲ್ಯವನ್ನು ಹೊಂದಿರುವುದು ಕಡ್ಡಾಯವಾಗಿದೆ. ಪತ್ರದಲ್ಲಿ ಯಾವಾಗಲೂ ಸರಳ ಮತ್ತು ಪರಿಣಾಮಕಾರಿ ಭಾಷೆಯನ್ನು ಬಳಸಬೇಕು ಇದರಿಂದ ಪತ್ರವನ್ನು ಸ್ವೀಕರಿಸುವ ವ್ಯಕ್ತಿಯು ನೀವು ಯಾವ ವಿಷಯದ ಬಗ್ಗೆ ಪ್ರಸ್ತಾಪಿಸುತ್ತಿದ್ದೀರೆಂದು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು.


ಔಪಚಾರಿಕ ಪತ್ರದ ಬರವಣಿಗೆಯ ಸ್ವರೂಪವನ್ನು ಕೆಳಗೆ ಉಲ್ಲೇಖಿಸಲಾಗಿದೆ / Format of Kannada formal letter writing is given below:

ಕಳುಹಿಸುವವರ ವಿಳಾಸ / From Address
ದಿನಾಂಕ / Date
ಸ್ವೀಕರಿಸುವವರ ವಿಳಾಸ / To Address
ವಿಷಯ / Subject
ವಂದನೆ / Wishes
ಪತ್ರದ ಸಾರಾಂಶ / Matter or body of the letter
ಪತ್ರ ಕೊನೆಗೊಳಿಸುವುದು / Closing of letter
ಸಹಿ / Signature:  ಕಳುಹಿಸುವವರ ಹೆಸರು / Sender’s Name,  ಕಳುಹಿಸುವವರ  ಸಹಿ / Sender’s Signature

ಕಳುಹಿಸುವವರ ವಿಳಾಸ / From Address :  ಇದು ಕಳುಹಿಸುವವರಿಗೆ ಉತ್ತರ ಪತ್ರ (Return Letter) ಕಳಿಸುವ ವಿಳಾಸವಾಗಿದೆ. ಈ ಸ್ಥಳದಲ್ಲಿ ಪತ್ರವನ್ನು ಕಳುಹಿಸುವ ವ್ಯಕ್ತಿಯ ವಿಳಾಸ(Address) ಮತ್ತು ಸಂಪರ್ಕ ವಿವರಗಳನ್ನು(Contact details) ಇಲ್ಲಿ ಬರೆಯಲಾಗುತ್ತದೆ.

ದಿನಾಂಕ / Date : ಕಳುಹಿಸುವವರ ವಿಳಾಸದ ನಂತರ ಪತ್ರವನ್ನು ಬರೆದ ದಿನಾಂಕವನ್ನು ನಮೂದಿಸಬೇಕು. ದಿನಾಂಕವು ಪತ್ರವು  ಎಂದು ಬರೆಯಲ್ಪಟ್ಟಿದೆ ಎಂದು ಅರಿಯಲು ಸಹಾಯ ಮಾಡುತ್ತದೆ.

ಸ್ವೀಕರಿಸುವವರ ವಿಳಾಸ / To Address : ಪತ್ರ  ಸ್ವೀಕರಿಸುವವರ ವಿಳಾಸವನ್ನು ಇಲ್ಲಿ ನಮೂದಿಸಬೇಕು.  ವ್ಯಕ್ತಿ (ಹುದ್ದೆಯೊಂದಿಗೆ) ಅಥವಾ ಸಂಸ್ಥೆಯ ಹೆಸರು ಮತ್ತು ನಂತರ ಪಿನ್‌ಕೋಡ್ ಸಹಿತ ಪೂರ್ಣ ವಿಳಾಸವನ್ನು ಬರೆಯಬೇಕು.

ವಿಷಯ / Subject : ಇದು ಪತ್ರ ಬರೆಯುವ ಗುರಿಯನ್ನು ಎತ್ತಿ ತೋರಿಸುತ್ತದೆ. ಔಪಚಾರಿಕ ಪತ್ರದ ವಿಷಯವು ಬಹಳ ಸಂಕ್ಷಿಪ್ತವಾಗಿರಬೇಕು  ಮತ್ತು ‘ವಿಷಯ’ ಎಂಬ ಪದವನ್ನು ಮೊದಲು ಬರೆದಿರಬೇಕು. ಓದುವವರು ವಿಷಯದ ಮೂಲಕ ಪತ್ರದ ಉದ್ದೇಶವನ್ನು ಒಂದು ಒಂದೇ ಬಾರಿಗೆ ಸುಲಭವಾಗಿ ಅರ್ಥಮಾಡಿಕೊಳ್ಳುತ್ತಾರೆ.

ವಂದನೆ / Wishes : ಪತ್ರವನ್ನು ಸ್ವೀಕರಿಸುವವರಿಗೆ ಇದು ಸಾಂಪ್ರದಾಯಿಕ ಶುಭಾಶಯವಾಗಿದೆ. ಸ್ವೀಕರಿಸುವವರ ಹೆಸರು ತಿಳಿದಿದ್ದರೆ, ವಂದನೆಯು ‘ಆತ್ಮೀಯ’ ಎಂಬ ಪದದೊಂದಿಗೆ ಪ್ರಾರಂಭವಾಗುತ್ತದೆ, ನಂತರ ಶ್ರೀ / ಶ್ರೀಮತಿ / ಮಿಸ್, ಇತ್ಯಾದಿ ಪದಗಳನ್ನು ಬಳಸಬಹುದು. ವ್ಯಕ್ತಿಯು ಅಪರಿಚಿತರಾಗಿದ್ದರೆ ಅಥವಾ ಲಿಂಗ ತಿಳಿದಿಲ್ಲದಿದ್ದರೆ ಸ್ವೀಕರಿಸುವವರನ್ನು ಆತ್ಮೀಯ ಸರ್ / ಆತ್ಮೀಯ ಮೇಡಮ್ ಎಂದೂ ಕೂಡ  ಸಂಬೋಧಿಸಬಹುದು.

ಸಾರಾಂಶ / Matter or body of the letter : ಸಾರಾಂಶವು ಯಾವುದೇ ಪತ್ರದ ಪ್ರಮುಖ ಅಂಶವಾಗಿದೆ. ಪತ್ರ ಬರೆಯುವ ಮೂಲ ಉದ್ದೇಶವನ್ನು ಇಲ್ಲಿ ತಿಳಿಯಬಹುದು. ಔಪಚಾರಿಕ ಪತ್ರಗಳಲ್ಲಿ, ಸಾರಾಂಶವನ್ನು ತಿಳಿಸಲು ಅಭ್ಯರ್ಥಿಗಳು ಚಿಕ್ಕ ಮತ್ತು ಸ್ಪಷ್ಟವಾಗಿರುವಂತಹ   ಪ್ಯಾರಾಗಳನ್ನು ಬಳಸಬೇಕು.

ಪತ್ರದ ಸಾರಾಂಶವನ್ನು ಸಾಮಾನ್ಯವಾಗಿ 3 ವಿಧಗಳಲ್ಲಿ ವಿಂಗಡಿಸಲಾಗಿದೆ / Body of the letter is been divided into 3 parts:

ಆರಂಭ (Introduction):  ಮುಖ್ಯ ವಿಷಯವನ್ನು ತಿಳಿಸುವ ಪರಿಚಯ.

ಮಧ್ಯ ಭಾಗ (Middle content):  ಪತ್ರ ಬರವಣಿಗೆಯ ಉದ್ದೇಶ ಮತ್ತು ಪತ್ರದ ಪ್ರಾಮುಖ್ಯತೆಯನ್ನು ಸಮರ್ಥಿಸುವ ಅಂಶಗಳು ಮತ್ತು ವಿವರಗಳು.

ತೀರ್ಮಾನ / Conclusion:  ಕ್ರಮ ಕೈಗೊಳ್ಳಲು ವಿನಂತಿ ಅಥವಾ ಪತ್ರದ ಮುಖೇನ ಏನನ್ನು ನಿರೀಕ್ಷಿಸಲಾಗಿದೆ ಎಂಬ ಮಾಹಿತಿ.

ಪತ್ರ ಕೊನೆಗೊಳಿಸುವುದು / Closing of Letter : ಇದು ‘ನಿಮ್ಮ ನಿಷ್ಠೆಯಿಂದ’, ‘ನಿಮ್ಮ ಪ್ರಾಮಾಣಿಕ’, ಇತ್ಯಾದಿ ಶಬ್ಧ ಬಳಸುವ ಮೂಲಕ ಸಭ್ಯ ರೀತಿಯಲ್ಲಿ  ಪತ್ರವನ್ನು ಕೊನೆಗೊಳಿಸುವುದು.

ಸಹಿ / Signature : ಪತ್ರವನ್ನು ಕಳುಹಿಸುವವರು ತನ್ನ ಮೊದಲ ಅಥವಾ ಕೊನೆಯ ಹೆಸರಿನೊಂದಿಗೆ ಸಹಿ ಮಾಡುವ ಕೊನೆಯ ಭಾಗವಾಗಿದೆ.


Kannada letter writing format

ಔಪಚಾರಿಕ ಪತ್ರದ  ಉದಾಹರಣೆ – 1 /  Formal letter writing in Kannada example – 1

ನೀವು ಶಾಲೆಯೊಂದಲ್ಲಿ ಗ್ರಂಥಪಾಲಕರಾಗಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿ. ಶಾಲೆಯ ಮಕ್ಕಳಿಗಾಗಿ 500 ಬರೆಯುವ ಪುಸ್ತಕ ಕಳಿಸಿಕೊಡುವಂತೆ ಸ್ನೇಹ ಪುಸ್ತಕ ಭಂಡಾರ್ ಗೆ ಪತ್ರ ಬೆರೆಯಿರಿ (Assume that you are working as a librarian in a school, write a letter to Sneha book house asking for sending 500 notebooks for school children).

ಇಂದ,
ಸಂಪಿಗೆ ಶಾಲೆ , ಜಯನಗರ
ಬೆಂಗಳೂರು – 560001

ದಿನಾಂಕ :  15 ಜೂನ್ 2021

ರಿಗೆ,
ಮ್ಯಾನೇಜರ್
ಸ್ನೇಹ ಪುಸ್ತಕ ಭಂಡಾರ್ , 5ನೇ  ಕ್ರಾಸ್,  ಅವೆನ್ಯೂ ರಸ್ತೆ
ಬೆಂಗಳೂರು – 560002

ಮಾನ್ಯರೇ,

ವಿಷಯ: ಶಾಲೆಗೆ 500 ಬರೆಯುವ ಪುಸ್ತಕಗಳನ್ನು ಕೋರಿ ಪತ್ರ.

ನಮ್ಮ ಶಾಲಾ ವಿದ್ಯಾರ್ಥಿಗಳಿಗೆ  500 ಬರೆಯುವ ಪುಸ್ತಕಗಳ ಅಗತ್ಯವಿರುವುದರಿಂದ ತಾವು ಆದಷ್ಟು ಬೇಗನೇ  ಪುಸ್ತಕಗಳನ್ನು ಕಳಿಸಿಕೊಡಬೇಕೆಂದು ಮತ್ತು ಈ ಪತ್ರದ ಸ್ವೀಕೃತಿಯನ್ನು ದಯವಿಟ್ಟು ಅಂಗೀಕರಿಸಬೇಕೆಂದು ತಮ್ಮಲ್ಲಿ ವಿನಂತಿಸುತ್ತೇನೆ.

ತಮ್ಮ ವಿಶ್ವಾಸಿ
ಗಣೇಶ್
(ಗ್ರಂಥಪಾಲಕ)


ಔಪಚಾರಿಕ ಪತ್ರದ  ಉದಾಹರಣೆ – 2 /  Formal letter writing in Kannada example – 2

ನೀವು ಮೈಸೂರಿನ ಜಯನಗರದ ನಿವಾಸಿ. ನಿಮ್ಮ ಪ್ರದೇಶದಲ್ಲಿನ ನೀರಿನ ಸಮಸ್ಯೆಗೆ ಪರಿಹಾರ ಕೋರಿ ನಿಮ್ಮ ನಗರದ ಮೇಯರ್‌ಗೆ ಪತ್ರ ಬರೆಯಿರಿ (You are resident of Jayanagar colony Mysore. Write a letter to your city Mayor regarding waterlogging after heavy rainfall along with the water logging problems).

ಇಂದ,
15, ಜಯನಗರ
ಮೈಸೂರು

ದಿನಾಂಕ: 20 ಮೇ 2021

ಗೆ,
ಮೇಯರ್
ಮೈಸೂರು

ವಿಷಯ: ಜಯನಗರದ ಕಾಲೋನಿಯಲ್ಲಿ ನೀರಿನ ಸಮಸ್ಯೆಯ ಬಗ್ಗೆ ದೂರು.

ಸರ್ / ಮೇಡಂ,

ನಾನು ಕುಮಾರ್, ಜಯನಗರದ ಕಾಲೋನಿ ನಿವಾಸಿ. ನೀರು ನಿಲ್ಲುವುದರಿಂದ ಇಲ್ಲಿನ ನಿವಾಸಿಗಳು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.
ಪ್ರತಿ ವರ್ಷ ಮಳೆಗಾಲದ ಸಮಯದಲ್ಲಿ ನೀರು ಹೆಚ್ಚಾಗಿ ಈ ಪ್ರದೇಶ ನೀರಿನಿಂದ ತುಂಬಿಕೊಳ್ಳುತ್ತದೆ. ಪ್ರದೇಶ ಸಮಿತಿಗೆ ಹಲವು ಬಾರಿ ಮನವಿ ಮಾಡಿದ್ದರೂ ಪರಿಸ್ಥಿತಿ ಹಾಗೆಯೇ ಇದೆ. ನೀರಿನಿಂದ ಹರಡುವ ರೋಗಗಳು ಹರಡುತ್ತಿರುವುದರಿಂದ ಇಲ್ಲಿನ ನಿವಾಸಿಗಳ ಬದುಕು ದುಸ್ತರವಾಗಿದೆ. ಮನೆಗಳೆಲ್ಲ ಮುಳುಗಡೆಯಾಗಿದ್ದು, ಸಂಕಷ್ಟದ ಸಮಯ ಎದುರಿಸುತ್ತಿದ್ದೇವೆ.
ದಯವಿಟ್ಟು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಮತ್ತು ಆದಷ್ಟು ಬೇಗ ಪರಿಹಾರವನ್ನು ಕಂಡುಕೊಳ್ಳಿ.

ನಿಮ್ಮ ವಿಶ್ವಾಸಿ
ಕುಮಾರ್


ಅನೌಪಚಾರಿಕ ಪತ್ರ ಬರೆಯುವ ಸ್ವರೂಪ  | Format of informal letter writing in Kannada

ಅನೌಪಚಾರಿಕ ಪತ್ರದ ವಿವರಣೆ / Informal letter Definition : ತಮ್ಮ ಕುಟುಂಬ, ಗೆಳೆಯರಿಗೆ, ಸಂಬಂಧಿಕರು ಅಥವಾ ಪರಿಚಯ ಇರುವವರಿಗೆ ಬರೆಯುವ ಪತ್ರವಾಗಿದೆ. ಇಂತಹ ಪತ್ರ ಬರೆಯಲು ಯಾವುದೇ ನಿರ್ದಿಷ್ಟ ನಿಯಮದ ಅಗತ್ಯವಿರುವುದಿಲ್ಲ ಹಾಗೂ ಔಪಚಾರಿಕ ಪತ್ರದಂತೆ “ವಿಷಯ”ದ ಸಾಲಿನ ಅಗತ್ಯವಿರುವುದಿಲ್ಲ.  ಆದರೆ ಒಳ್ಳೆಯ ಭಾಷೆಯ ಬಳಕೆ ಅಗತ್ಯವಾಗಿದೆ.

ಅನೌಪಚಾರಿಕ ಪತ್ರದ ಬರವಣಿಗೆಯ ಸ್ವರೂಪವನ್ನು ಕೆಳಗೆ ಉಲ್ಲೇಖಿಸಲಾಗಿದೆ / Format of informal letter writing in Kannada :

ಕಳುಹಿಸುವವರ ವಿಳಾಸ / From Address
ದಿನಾಂಕ / Date
ವಂದನೆ / Wishes
ಪತ್ರದ ಸಾರಾಂಶ / Matter or body of the letter
ಸಹಿ / Signature:  ಕಳುಹಿಸುವವರ ಹೆಸರು / Sender’s Name,  ಕಳುಹಿಸುವವರ  ಸಹಿ / Sender’s Signature

ಕಳುಹಿಸುವವರ ವಿಳಾಸ / From Address : ಕಳುಹಿಸುವವರ ವಿಳಾಸವು ಅನೌಪಚಾರಿಕ ಪತ್ರಗಳಲ್ಲಿ ಮುಖ್ಯವಾಗಿದೆ. ಅನೌಪಚಾರಿಕ ಪತ್ರಗಳು ವೈಯಕ್ತಿಕ ಪತ್ರಗಳಾಗಿರುವುದರಿಂದ ಮತ್ತು ಪರಿಚಯಸ್ಥರಿಗೆ ಅಥವಾ ತಿಳಿದಿರುವ ಜನರಿಗೆ ಕಳುಹಿಸಲಾಗುತ್ತದೆ, ಸ್ವೀಕರಿಸುವವರ ವಿಳಾಸವನ್ನು ಪತ್ರವನ್ನು ಹೊಂದಿರುವ ಲಕೋಟೆಯ ಮೇಲೆ ಮಾತ್ರ ನಮೂದಿಸಲಾಗಿದೆ.

ದಿನಾಂಕ / Date : ಕಳುಹಿಸುವವರ ವಿಳಾಸದ ನಂತರ ಪತ್ರವನ್ನು ಬರೆದ ದಿನಾಂಕವನ್ನು ನಮೂದಿಸಬೇಕು. ದಿನಾಂಕವು ಪತ್ರವು  ಎಂದು ಬರೆಯಲ್ಪಟ್ಟಿದೆ ಎಂದು ಅರಿಯಲು ಸಹಾಯ ಮಾಡುತ್ತದೆ.

ವಂದನೆ / Wishes : ಅನೌಪಚಾರಿಕ ಪತ್ರಗಳಲ್ಲಿ ವಂದನೆಯು ಆತ್ಮೀಯ/ ಪ್ರೀತಿಯ /ನಮಸ್ತೆ/ನಮಸ್ಕಾರ ಆಗಿರಬಹುದು ನಂತರ ಸ್ವೀಕರಿಸುವವರ ಮೊದಲ ಹೆಸರು ಅಥವಾ ಅಡ್ಡಹೆಸರು.

ಸಾರಾಂಶ / Matter or body of the letter : ಅನೌಪಚಾರಿಕ ಪತ್ರದಲ್ಲಿ ಸಾರಾಂಶವು ಅನೇಕ ವಾಕ್ಯವೃಂದಗಳನ್ನು(ಪ್ಯಾರಾಗ್ರಾಫ್) ಹೊಂದಿರಬಹುದು. ಇದಲ್ಲದೆ ಭಾವನೆಗಳು, ಅನುಭವಗಳು, ಸಲಹೆ ಅಥವಾ ಯಾವುದಾದರೂ ವಿಷಯವನ್ನು ಕೂಡ ಒಳಗೊಂಡಿರಬಹುದು.

ಸಹಿ / Signature : ಪತ್ರವನ್ನು ಕಳುಹಿಸುವವರು ತನ್ನ ಮೊದಲ ಅಥವಾ ಕೊನೆಯ ಹೆಸರಿನೊಂದಿಗೆ ಸಹಿ ಮಾಡುವ ಕೊನೆಯ ಭಾಗವಾಗಿದೆ.


ಅನೌಪಚಾರಿಕ ಪತ್ರದ ಒಂದು ಉದಾಹರಣೆ – 1 /  Informal letter writing in Kannada example – 1

ನೀವು ಶಾಲಾ ವಿದ್ಯಾರ್ಥಿಯಾಗಿದ್ದು , ವಾರ್ಷಿಕ ಪರೀಕ್ಷೆಗೆ ಹೇಗೆ ತಯಾರಿ ನಡೆಸಿದ್ದೀರೆಂಬುದರ ಕುರಿತಾಗಿ ನಿಮ್ಮ ತಂದೆಗೆ ಪತ್ರ ಬರೆಯಿರಿ (Write a  Letter to your father regarding your examination preparation).

#2, ಆನಂದ ನಿಲಯ
2ನೇ ಮೇನ್, 5ನೇ ಅಡ್ಡ ರಸ್ತೆ , ಜಯನಗರ
ಬೆಂಗಳೂರು – 560001

ದಿನಾಂಕ : 10 ಮಾರ್ಚ್ 2021

ನನ್ನ ಪ್ರೀತಿಯ ತಂದೆ,

ನಾನು ಇಲ್ಲಿ ಆರೋಗ್ಯವಾಗಿದ್ದೇನೆ ಮತ್ತು ನೀವು ಅಲ್ಲಿ ಆರೋಗ್ಯದಿಂದ ಇದ್ದೀರೆಂದು ಭಾವಿಸುತ್ತೇನೆ. ನನ್ನ ವಾರ್ಷಿಕ ಪರೀಕ್ಷೆಯು ಮುಂದಿನ ವಾರ ನಡೆಯಲಿದೆ ಎಂದು ಈ ಪತ್ರದ ಮೂಲಕ ತಿಳಿಸಲು ಬಯಸುತ್ತೇನೆ. ನಾನು ಪರೀಕ್ಷೆ ಒಳ್ಳೆಯ ತಯಾರಿ ನಡೆಸಿದ್ದು ಪರೀಕ್ಷೆ ಎದುರಿಸಲು ಸಂಪೂರ್ಣವಾಗಿ ಸಿದ್ಧನಾಗಿದ್ದೇನೆ ಎಂದು ತಿಳಿಸಲು ಬಯಸುತ್ತೇನೆ. ನಾನು ಈಗಾಗಲೇ  ಎಲ್ಲ ವಿಷಯಗಳ ಎರಡು ಬಾರಿ ಪುನರಾವರ್ತನೆ ಸಂಪೂರ್ಣಗೊಳಿಸಿರುತ್ತೇನೆ. ಎಲ್ಲಾ ಪೇಪರ್‌ಗಳನ್ನು ಸಂಪೂರ್ಣ ಆತ್ಮವಿಶ್ವಾಸದಿಂದ ಮಾಡುತ್ತೇನೆ ಎಂಬ ವಿಶ್ವಾಸವಿದೆ. ಪರೀಕ್ಷೆಗೆ ಇನ್ನೂ ಒಂದು ವಾರ ಸಮಯವಿದ್ದು ಇನ್ನೊಮ್ಮೆ ನನ್ನ ವಿಷಯಗಳ ಪರಿಷ್ಕರಣೆಗಾಗಿ ನಾನು ಈ ಸಮಯವನ್ನು ಬಳಸಿಕೊಳ್ಳಲಿದ್ದೇನೆಂದು ತಿಳಿಸಲು ಇಷ್ಟ ಪಡುತ್ತೇನೆ.

ದಯವಿಟ್ಟು ತಾಯಿ ಮತ್ತು ತಂಗಿಗೆ ನನ್ನ ಶುಭಾಶಯಗಳನ್ನು ತಿಳಿಸಿ ಹಾಗೆಯೇ ಅವರನ್ನು ಕೇಳಿದೆ ಎಂದು ಹೇಳುವುದನ್ನು  ಮರೆಯಬೇಡಿ.

ಇಂತಿ,
ನಿಮ್ಮ ಪ್ರೀತಿಯಿಂದ,
ಕುಮಾರ್


ಅನೌಪಚಾರಿಕ ಪತ್ರದ ಒಂದು ಉದಾಹರಣೆ – 2 /  Informal letter writing in Kannada example – 2

ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿ ಶಾಲೆಗೆ ಅಗ್ರ ಸ್ಥಾನ ಗಳಿಸಿರುವ ನಿಮ್ಮ ಸ್ನೇಹಿತನಿಗೆ ಅಭಿನಂದನಾ ಪತ್ರವನ್ನು ಬರೆಯಿರಿ (Write a letter to your friend who has scored highest marks in the class and secured top position in the school).

15, ಜಯನಗರ
ರಮೇಶ್
ಮೈಸೂರು – 570001

ದಿನಾಂಕ : ಜೂನ್ 15, 2021

ಆತ್ಮೀಯ ರಮೇಶ್,

ನೀನು ನಿನ್ನ ಶಾಲೆಯಲ್ಲಿ ಅಗ್ರಸ್ಥಾನ ಗಳಿಸಿ ನಿನ್ನ ಕನಸನ್ನು ನನಸಾಗಿಸಿಕೊಂಡಿರುವೆ ಎಂದು ತಿಳಿದಾಗ ನನ್ನ ಸಂತೋಷಕ್ಕೆ ಮಿತಿಯೇ ಇರಲಿಲ್ಲ.

ಕಠಿಣ ಪರಿಶ್ರಮ, ಸಂಕಲ್ಪ ಮತ್ತು ಪರಿಶ್ರಮವು ಉತ್ತಮ ಫಲಿತಾಂಶಗಳನ್ನು ತರುತ್ತದೆ ಎಂದು ಈ ನಿನ್ನ ಫಲಿತಾಂಶವು ಸಾಬೀತುಪಡಿಸಿದೆ. ನೀನು ಈ ಬಾರಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯುವೆ ಎಂದು ನಾನು ಮೊದಲೇ ನೀರಿಕ್ಷಿಸಿದ್ದೆ. ನನ್ನ ಪೋಷಕರು ಕೂಡ ನಿನ್ನ ಫಲಿತಾಂಶಕ್ಕೆ ಸಂತೋಷಗೊಂಡಿದ್ದಾರೆ ಮತ್ತು ನಿನಗೆ ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸಿದ್ದಾರೆ.

ಸದ್ಯದಲ್ಲೇ ನಿನ್ನನ್ನು ನೋಡುವ ಭರವಸೆ ಇದೆ.

ಪ್ರೀತಿ ಮತ್ತು ಶುಭಾಶಯಗಳೊಂದಿಗೆ

ನಿನ್ನ ಪ್ರೀತಿಯ ಗೆಳೆಯ
ಕುಮಾರ್


ಮೇಲೆ ನೀವು ಕನ್ನಡದಲ್ಲಿ ಪತ್ರ ಬರೆಯುವ ವಿಧಾನ (format of Letter writing in Kannada) ಮತ್ತು ಪತ್ರಗಳ ವಿಧಗಳಾದ ಔಪಚಾರಿಕ ಪತ್ರ (formal letter writing in Kannada), ಅನೌಪಚಾರಿಕ ಪತ್ರ (informal letter writing in Kannada) ಎಂದರೇನು ಹಾಗೂ ಔಪಚಾರಿಕ ಪತ್ರ, ಅನೌಪಚಾರಿಕ ಪತ್ರದ ಸ್ವರೂಪದ (format of letter writing in Kannada) ಬಗ್ಗೆ ತಿಳಿದಿರುತ್ತೀರಿ. ನಿಮಗೆ ಅನೂಕೂಲವಾಗಲೆಂದು ಉದಾಹರಣೆಗಳನ್ನೂ (examples of letter writing in Kannada) ಸಹ ಕೊಡಲಾಗಿದೆ.

ಪತ್ರ ಬರೆಯಲು ಸಹಾಯವಾಗುವಂತೆ ಕೆಲ ಉದಾಹರಣೆಗಳನ್ನು ಇಲ್ಲಿ ಕೊಡಲಾಗಿದೆ.

Leave Letter in Kannada

Kannada letter writing examples

ಪ್ರಬಂಧ ಎಂದರೇನು (what is an essay) ಹಾಗೂ ಪ್ರಬಂಧ ಬರೆಯುವುದು ಹೇಗೆ (how to write an essay) ಎಂಬುದನ್ನು ಕೆಳಗಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ನೀವು ತಿಳಿಯಬಹುದು. ಅಷ್ಟೇ ಅಲ್ಲದೆ ಉದಾಹರಣೆಗೆ ಪ್ರಬಂಧಗಳನ್ನೂ ಕೆಳಗೆ ಕೊಡಲಾಗಿದೆ(along with examples you can learn about essays).

ಪ್ರಬಂಧ ಎಂದರೇನು ಹಾಗೂ ಪ್ರಬಂಧ ಬರೆಯುವುದು ಹೇಗೆ / What is Essay and how to write essay in Kannada?

ಪ್ರಬಂಧದ ಉದಾಹರಣೆಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

https://kannadajnaana.com/category/kannada-essay-examples/

ಇವುಗಳನ್ನು ಅಧ್ಯಯನ ಮಾಡುವುದರ ಮೂಲಕ ಯಾವುದೇ ವಿಷಯದ ಬಗ್ಗೆ ಪ್ರಬಂಧ ಬರೆಯಲು ನಿಮಗೆ ಅನೂಕೂಲವಾಗುತ್ತದೆ (these essay examples will give you an idea about writing essays).

Click on the below link for Hindi letter writing (हिंदी में पत्र लेखन)

Letter Writing in Hindi