Jedara Dasimayya

2022 Jedara Dasimayya information in Kannada | ಜೇಡರ ದಾಸಿಮಯ್ಯರ ಬಗ್ಗೆ ಮಾಹಿತಿ

jedara daasimayya information

Here you will find latest information about Jedara Dasimayya in kannada. You will also find complete details like birth, education, marriage , life after marriage and poetry of Jedara Dasimayya in Kannada language.

ಜೇಡರ ದಾಸಿಮಯ್ಯ 10 ನೇ ಶತಮಾನದ ಮೊದಲ ವಚನಕಾರರು. ಅವರು ಕಠಿಣ ತಪಸ್ಸನ್ನಾಚರಿಸಿ ಸಿದ್ಧಿ ಗಳಿಸಿ ಆಧ್ಯಾತ್ಮಿಕತೆಯನ್ನು ಜಗತ್ತಿಗೆ ಸಾರಿದ ಸಾಧುಗಳಲ್ಲೊಬ್ಬರು. ಇವರನ್ನು ದಾಸ, ದಾಸಯ್ಯ, ದಾಸಿಮಯ್ಯ, ದಾಸಿದೇವ, ದೇವದಾಸ, ಜೇಡರ ದಾಸಿಮಯ್ಯ, ದೇವರ ದಾಸಿಮಯ್ಯ ಎಂಬ ಮೊದಲಾದ ಹೆಸರುಗಳಿಂದಲೂ ಕರೆಯುತ್ತಾರೆ. ದಾಸಿಮಯ್ಯನವರು ಶತ ಮಾನಗಳಿಂದ ಬಂದಂತಹ ಹೆಸರುವಾಸಿಯಾದ ಶರಣರಿಗಿಂತಲೂ, ಮೊದಲು ಬಂದಂತಹ ಮೊಟ್ಟ ಮೊದಲ ವಚನಕಾರರಾಗಿದ್ದಾರೆ. ಇವರ ಬಗ್ಗೆ ಹೇಳಬೇಕೆಂದರೆ ವಚನಗಳನ್ನು ತಮ್ಮ ಸಾಮಾಜಿಕ ಜೀವನದಲ್ಲಿಯೇ ಕಂಡುಕೊಂಡು ರಚಿಸಿದವರು.

ತಮ್ಮ ಹುಟ್ಟೂರಿನಲ್ಲಿದ್ದ ರಾಮನಾಥ ದೇವರ ಬಗ್ಗೆ ಅಪಾರವಾದ ಭಕ್ತಿ ಮತ್ತು ಶ್ರದ್ಧೆ ಹೊಂದಿದ್ದರು. ರಾಮನಾಥ ದಾಸಿಮಯ್ಯರ ಆರಾಧ್ಯ ದೈವವಾದ್ದರಿಂದ ಅವರ ವಚನಗಳಲ್ಲಿ “ರಾಮನಾಥ” ಎಂಬ ಅಂಕಿತವನ್ನು ಕಾಣಬಹುದು. “ರಾಮನಾಥ” ಎಂಬ ಅಂಕಿತದೊಂದಿಗೆ ಅವರು 176 ವಚನಗಳನ್ನು ರಚಿಸಿದ್ದಾರೆ. ಭಗವಂತನನ್ನು ಒಲಿಸಿಕೊಳ್ಳಲು ಸನ್ಯಾಸಿ ಆಗಬೇಕೆಂದೇನಿಲ್ಲ ಸಂಸಾರಿ ಆಗಿದ್ದರೂ ಮೋಕ್ಷವನ್ನು ಪಡೆಯಬಹುದು ಎಂದು ಸಾಧಿಸಿದವರು.

ಜೇಡರ ದಾಸಿಮಯ್ಯರ ಜನನ | Jedara Dasimayya Birth

ದಾಸಿಮಯ್ಯನವರ ಜನನ ಈಗಿನ ಕಲಬುರ್ಗಿ ಜಿಲ್ಲೆಯ ಸುರಪುರ ತಾಲೂಕಿನ ಮುದನೂರು ಎಂಬ ಗ್ರಾಮದಲ್ಲಿ ಕ್ರಿ.ಶ. ಹತ್ತನೆಯ ಶತಮಾನದ ಉತ್ತರಾರ್ಧದಲ್ಲಿ ಆಯಿತು. ರಾಮಯ್ಯ ಮತ್ತು ಶಂಕರಿ ದಾಸಿಮಯ್ಯರ ತಂದೆ ತಾಯಿಯ ಹೆಸರು. ದಾಸಿಮಯ್ಯರ ಜನನ ಚೈತ್ರ ಶುದ್ಧ ಪಂಚಮಿ ದಿನದಂದು ಆಯಿತು. ಅವರ ತಂದೆ ತಾಯಿ ವೃತ್ತಿಯಲ್ಲಿ ನೇಕಾರರಾಗಿದ್ದರು. ಅವರು ಬಾಲ್ಯ, ಆಟ, ಪಾಠ, ಪೂಜೆಯನ್ನು ತಮ್ಮ ಹುಟ್ಟೂರಾದ ಮುದನೂರಿನಲ್ಲೇ ಕಳೆದರು.

ಜೇಡರ ದಾಸಿಮಯ್ಯರ ಶಿಕ್ಷಣ | Jedara Dasimayya Education

ದಾಸಿಮಯ್ಯರು ತಮ್ಮ ಬಾಲ್ಯ ಶಿಕ್ಷಣವನ್ನು ಹುಟ್ಟೂರಾದ ಮುದನೂರಿನಲ್ಲೇ ಪೂರೈಸಿದರು. ಆದರೆ ಅವರ ಜ್ಞಾನದ ಹಸಿವು ನೀಗಿರಲಿಲ್ಲ. ಹೆಚ್ಚಿನ ಶಿಕ್ಷಣಕ್ಕಾಗಿ ಮುದನೂರಿನ ಹತ್ತಿರದಲ್ಲಿರುವ ಶೈವ ಕೇಂದ್ರವಾದ ಶ್ರೀಶೈಲದಲ್ಲಿ ಶ್ರೀ ಚಂದ್ರಗುಂಡ ಶಿವಾಚಾರ್ಯರ ಗುರುಕುಲದಲ್ಲಿ ದಾಸಿಮಯ್ಯನವರು ತಮ್ಮ ಆತ್ಮ ತೃಪ್ತಿಗೆ ಬೇಕಾದ ಶಿಕ್ಷಣವನ್ನು ಪಡೆದರು. ಅವರಿಗೆ ಎಲ್ಲವನ್ನೂ ಪ್ರಶ್ನಿಸಿ ನಂತರ ಒಪ್ಪಿಕೊಳ್ಳುವ ಸ್ವಭಾವವಿತ್ತು.

ಜ್ಞಾನ ಸಂಪನ್ನರಾಗಿದ್ದ ದಾಸಿಮಯ್ಯರು ತಮ್ಮ ಶಿಕ್ಷಣದ ನಂತರ ಅನೇಕ ದಿಗ್ಗಜರನ್ನು, ಪಂಡಿತರನ್ನು ತಮ್ಮ ಜ್ಞಾನ ಶಕ್ತಿಯ ವಾದದ ಮೂಲಕ ಸೋಲಿಸಿ ಪ್ರಸಿದ್ಧಿ ಗಳಿಸಿದರು. ಲೋಕ ಕಲ್ಯಾಣದ ಸಂಕಲ್ಪ ತೊಟ್ಟು ಚಾಲುಕ್ಯ ರಾಜ್ಯದ ಪೊಟ್ಟಲ ಕೆರೆಯತ್ತ ಸಾಗುವ ಸಂದರ್ಭದಲ್ಲಿ ಶಿವನ ಗೋಷ್ಠಿಗಳನ್ನು ನಡೆಸುತ್ತಾರೆ ಮತ್ತು ಸಾಗುವ ದಾರಿಯಲ್ಲಿ ಸಾವಿರಾರು ಜನರಿಗೆ ಶಿವದೀಕ್ಷೆ ನೀಡಿ ಎಲ್ಲರಿಗೂ ಜ್ಞಾನದ ಹಾದಿ ತೋರಿಸುತ್ತಾರೆ.

ಜನರಿಗೆ ಹಿಂಸೆ ಕೊಡುತ್ತಾ ಇದ್ದ ಕೆಲ ಬೇಡರಿಗೆ ಅವರು ಮಾಡುತ್ತಿದ್ದ ತಪ್ಪಿನ ಬಗ್ಗೆ ತಿಳಿಸಿ, ಅವರಿಗೆ ಶಿಕ್ಷಣ ಕೊಟ್ಟು, ದೀಕ್ಷೆ ನೀಡಿ ಪರಿವರ್ತನೆ ಮಾಡಿ ಒಳ್ಳೆಯವರನ್ನಾಗಿ ಮಾಡಿದ ಗರಿಮೆ ಅವರದು. ಅಲ್ಲಿಂದ ಮುಂದೆ ಸಾಗಿ ಹಲವು ರೈತರನ್ನು ಭೇಟಿ ಮಾಡಿ ಅವರಿಗೆ ಜ್ಞಾನ ಬೋಧೆ ಮಾಡಿ ವೃತ್ತಿಯ ಮಹತ್ವದ ಬಗ್ಗೆ ತಿಳಿಸುತ್ತಾರೆ. ಈ ಎಲ್ಲ ಕಾರ್ಯಗಳ ನಂತರ ಅವರು ತಮ್ಮ ಹುಟ್ಟೂರಾದ ಮುದನೂರು ಗ್ರಾಮಕ್ಕೆ ಆಗಮಿಸಿದರು. ಮುದನೂರು ಗ್ರಾಮಕ್ಕೆ ಆಗಮಿಸಿದ ನಂತರ ತಮ್ಮ ಕುಟುಂಬ ವೃತ್ತಿಯಾದ ನೇಯ್ಗೆ ವೃತ್ತಿಯಲ್ಲಿ ತೊಡಗಿದರು.

ವಿವಾಹ | Marriage

ಮೊದಲು ಅವರು ವಿವಾಹಕ್ಕೆ ಒಪ್ಪಿರಲಿಲ್ಲ. ನಂತರ ತಂದೆ ತಾಯಿಯರ ಒತ್ತಾಯಕ್ಕೆ ಮಣಿದು ಒಂದು ಪರೀಕ್ಷೆಯನ್ನು ಇಟ್ಟು ಆ ಪರೀಕ್ಷೆಯಲ್ಲಿ ತೇರ್ಗಡೆಯಾದವಳನ್ನು ವಿವಾಹವಾಗುತ್ತೇನೆ ಎಂದು ಹೇಳಿದರು. ಆದರೆ ಹಲವು ವರ್ಷಗಳ ಕಾಲ ಹುಡುಕಿದರೂ ಪರೀಕ್ಷೆಯಲ್ಲಿ ತೇರ್ಗಡೆಯಾಗಬಹುದಾದ ಕನ್ಯೆ ದೊರೆಯದಿದ್ದಾಗ ಗುಲ್ಬರ್ಗ ಜಿಲ್ಲೆಯ ಗೊಬ್ಬುರೂ ಗ್ರಾಮದ ದಂಪತಿಗಳಾದ ಮಹಾದೇವಿ ಮತ್ತು ಮಲ್ಲಿಕಾರ್ಜುನ ಶಿವಯೋಗಿ ಅವರಿಗೆ ತಮ್ಮ ಇಚ್ಛೆಯನ್ನು ತಿಳಿಸುತ್ತಾರೆ.

ಇದನ್ನು ಕೇಳಿದ ದಂಪತಿ ನಿಮಗೆ ಅಂತ ಕನ್ಯೆ ಸಿಗುವುದಿಲ್ಲ ಎಂದು ಹೇಳುತ್ತಿರುವಾಗ ಅಲ್ಲಿಯೇ ಇದ್ದ ಅವರ ಮಗಳಾದ ದುಗ್ಗಳೆ, ನಾನು ಆ ಕೆಲಸ ಮಾಡಬಲ್ಲೆ ಎಂದು ಹೇಳಿ ದಾಸಿಮಯ್ಯರ ಸವಾಲನ್ನು ಸ್ವೀಕರಿಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗುತ್ತಾಳೆ. ದಾಸಿಮಯ್ಯರ ತಮ್ಮ ವಿವಾಹ ಶಿವಪುರದ ದುಗ್ಗಳೆಯೊಂದಿಗೆ ಆಯಿತು. ದುಗ್ಗಳೆ ಒಬ್ಬ ಮಹಾನ್ ಸಾಧ್ವಿಮಣಿ. ಇಬ್ಬರೂ ವಿವಾಹದ ನಂತರ ಅಪಾರ ದೈವಭಕ್ತರಾಗಿದ್ದರು. ಕಷ್ಟ ಎಂದು ಬಂದವರಿಗೆ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದರು. ಕೆಲ ವರ್ಷದ ನಂತರ ದಂಪತಿಗೆ ಸುವರ್ಚಲೆ ಎಂಬ ಪುತ್ರಿಯ ಜನನವಾಯಿತು.

ಜೇಡರ ದಾಸಿಮಯ್ಯರ ವಿವಾಹದ ನಂತರದ ಜೀವನ | Jedara Dasimayya’s Life After Marriage

ದಾಸಿಮಯ್ಯರ ವೃತ್ತಿಯಲ್ಲಿ ನೇಕಾರರಾಗಿದ್ದರು. ವೃತ್ತಿಯಲ್ಲಿ ನೇಕಾರರಾಗಿದ್ದರೂ ಅವರಲ್ಲಿ ಜ್ಞಾನದ ಹಸಿವು ಹೆಚ್ಚಾಗಿತ್ತು. ವಿವಾಹದ ನಂತರ ದಾಸಿಮಯ್ಯರಿಗೆ ಬದುಕಿನಲ್ಲಿ ಎನೋ ಕಳೆದು ಕೊಂಡಂತೆ ಅನಿಸುತ್ತಿತ್ತು. ಬಹಳ ಕಾಲ ಯೋಚಿಸಿದ ನಂತರ ದೇವರನ್ನು ಒಲಿಸಿಕೊಳ್ಳಲು ಸಂನ್ಯಾಸತ್ವವೇ ಸರಿಯಾದ ದಾರಿ ಎಂದು ಮನಗಂಡ ಅವರು, ಕಠಿಣ ತಪಸ್ಸನ್ನು ಆಚರಿಸುವ ಉದ್ದೇಶದಿಂದ ಕಾಡಿಗೆ ಹೋದರು. ಕೆಲವು ವರ್ಷಗಳ ತಪಸ್ಸಿನ ನಂತರ ಶಿವನ ಕೃಪೆಗೆ ಪಾತ್ರರಾದರು. ಶಿವ ಪ್ರತ್ಯಕ್ಷನಾದದ್ದನ್ನು ಕಂಡು ಇಂದು ನನ್ನ ಜನ್ಮ ಪಾವನವಾಯಿತೆಂದು ಅತೀವ ಸಂತೋಷಗೊಂಡರು. ಶಿವ ಏನು ವರ ಬೇಕೆಂದು ಕೇಳಿದಾಗ ದಾಸಿಮಯ್ಯರು, “ನನಗೆ ಮೋಕ್ಷವನ್ನು ದಯಪಾಲಿಸು” ಎಂದು ಕೇಳಿದರು.

ಅದಕ್ಕೆ ಪ್ರತ್ಯುತ್ತರವಾಗಿ ಶಿವನು, ‘ಮೋಕ್ಷವನ್ನು ಪಡೆಯುವುದಷ್ಟೇ ನಿನ್ನ ಗುರಿಯಾಗಬಾರದು, ನೀನು ಮಾಡಬೇಕಾದ ಕಾರ್ಯಗಳು ಅನೇಕ ಇವೆ. ನೇಕಾರನಾಗಿ ದೇವತೆ ಹಾಗೂ ಮನುಜರಿಗೆ, ತಮ್ಮ ಮಾನ ಕಾಪಾಡಿಕೊಳ್ಳಲು ಅಗತ್ಯವಿರುವ ವಸ್ತ್ರ ತಯಾರಿಸುವ ಕೆಲಸ ನೀನು ಮಾಡಿಬೇಕು. ಭಗವಂತನ ಕೃಪೆಗೆ ಪಾತ್ರರಾಗಲು ಸಂನ್ಯಾಸಿ ಆಗಬೇಕೆಂದಿಲ್ಲ. ಸಂಸಾರಿಗಳೂ ಸಹ ಭಗವಂತನ ಕೃಪೆಗೆ ಪಾತ್ರರಾಗಬಹುದು. ಮಾನವರು ತಮ್ಮ ದಿನ ನಿತ್ಯದ ಕಾಯಕಗಳನ್ನು ಶ್ರದ್ದೆ ಮತ್ತು ಭಕ್ತಿಯಿಂದ ಮಾಡುತ್ತಾ ಅದರಲ್ಲೇ ದೇವರನ್ನು ಕಾಣುವ ಪ್ರಯತ್ನ ಮಾಡಬೇಕೆಂದು ಹೇಳಿ, ಇದೇ ನಿನ್ನ ಜೀವನದ ಉದ್ದೇಶವಾಗಬೇಕು ಮತ್ತು ಇದನ್ನು ಮಾನವರಿಗೆ ಅರ್ಥವಾಗುವಂತೆ ಮುಟ್ಟಿಸು’ ಎಂದು ಹೇಳಿದರು.

ಭಗವಂತನದಿಂದ ಉಪದೇಶಿಲ್ಪಟ್ಟಿದ್ದನ್ನು ಪಾಲಿಸಲು ದಾಸಿಮಯ್ಯರು ತಮ್ಮ ಹುಟ್ಟೂರಿಗೆ ಆಗಮಿಸಿದರು. ನಂತರ ದಂಪತಿ ಇಬ್ಬರೂ ನೇಯ್ಗೆ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡು ಭಗವಂತನ ಮಾರ್ಗದರ್ಶನದಂತೆ ಮಾನವರ ಮಾನವನ್ನು ಕಾಪಾಡುವ ವಸ್ತ್ರ ತಯಾರಿಸಲು ಮುಂದಾದರು. ಇಷ್ಟೇ ಅಲ್ಲದೆ ಇತರರಿಗೂ ಈ ಕಾಯಕ ಕಳಿಸಿ ಜೀವನೋಪಾಯಕ್ಕೆ ದಾರಿ ಮಾಡಿಕೊಟ್ಟರು.

ಜೇಡರ ದಾಸಿಮಯ್ಯರ ವಚನ ಸಾಹಿತ್ಯ

ದಾಸಿಮಯ್ಯರು ರಾಮನಾಥ ಎಂಬ ನಾಮಾಂಕಿತದಿಂದ ಅನೇಕ ವಚನಗಳನ್ನು ರಚಿಸಿದ್ದಾರೆ. ಅವರು ಬಸವಣ್ಣ ಮತ್ತು ಅಕ್ಕಮಹಾದೇವಿಯವರಿಗೂ ಮುಂಚಿತನವರು. ಅವರ ವಚನಗಳು ಅರ್ಥೈಸಿಕೊಳ್ಳಲು ಬಹಳ ಸರಳವಾಗಿದ್ದು, ಸಮಾಜಕ್ಕೆ ಒಳ್ಳೆಯ ಧಾರ್ಮಿಕ ಪ್ರಜ್ಞೆಯ ಜೊತೆ ಉತ್ತಮ ಸ್ಫೂರ್ತಿಯನ್ನೂ ನೀಡುತ್ತವೆ.  ಅವರ ವಚನಗಳಲ್ಲಿ ವೀರಶೈವ ನಿಷ್ಠೆ, ಸ್ಪಷ್ಟ ವಾಕ್ಯತೆ, ಔಚಿತ್ಯ ಪೂರ್ಣವಾದ ದೃಷ್ಟಾಂತ ಕಾಣಬಹುದು. ಅವರ ವಚನಗಳು ನಮ್ಮ ದೈನಂದಿನ ಜೀವನಕ್ಕೆ ಸಂಬಂಧಿಸಿದ್ದಾಗಿದೆ.


ಜೇಡರ ದಾಸಿಮಯ್ಯರ ಬಗ್ಗೆ ಕೆಲ ಪ್ರಶ್ನೋತ್ತರಗಳು | FAQ on Jedara Dasimayya

ಪ್ರ. ಜೇಡರ ದಾಸಿಮಯ್ಯ ಯಾವ ಶತಮಾನದ ವಚನಕಾರರು?
ಉ. ದಾಸಿಮಯ್ಯರು ಹತ್ತನೇ ಶತಮಾನದ ವಚನಕಾರರು.

ಪ್ರ. ಜೇಡರ ದಾಸಿಮಯ್ಯರ ಅಂಕಿತ ಯಾವುದು?
ಉ. “ರಾಮನಾಥ” ಎಂಬುದು ಜೇಡರ ದಾಸಿಮಯ್ಯರ ಅಂಕಿತ.

ಪ್ರ. ಜೇಡರ ದಾಸಿಮಯ್ಯರು ಎಷ್ಟು ವಚನಗಳನ್ನು ರಚಿಸಿದ್ದಾರೆ ?
ಉ. ದಾಸಿಮಯ್ಯರು 176 ವಚನಗಳನ್ನು ರಚಿಸಿದ್ದಾರೆ.

ಪ್ರ. ಜೇಡರ ದಾಸಿಮಯ್ಯನವರ ಜನನ ಎಲ್ಲಿ ಆಯಿತು ?
ಉ. ದಾಸಿಮಯ್ಯನವರ ಜನನ ಈಗಿನ ಕಲಬುರ್ಗಿ ಜಿಲ್ಲೆಯ ಸುರಪುರ ತಾಲೂಕಿನ ಮುದನೂರು ಎಂಬ ಗ್ರಾಮದಲ್ಲಿ ಆಯಿತು.

ಪ್ರ. ಜೇಡರ ದಾಸಿಮಯ್ಯರ ಪತ್ನಿಯ ಹೆಸರೇನು ?
ಉ. ಜೇಡರ ದಾಸಿಮಯ್ಯರ ಪತ್ನಿಯ ಹೆಸರು ದುಗ್ಗಳೆ.

ಪ್ರ. ಜೇಡರ ದಾಸಿಮಯ್ಯರು ಶಿಕ್ಷಣ ಎಲ್ಲಿ ಪಡೆದರು ?
ಉ. ಮುದನೂರಿನ ಹತ್ತಿರದಲ್ಲಿರುವ ಶೈವ ಕೇಂದ್ರವಾದ ಶ್ರೀಶೈಲದಲ್ಲಿ ಶ್ರೀ ಚಂದ್ರಗುಂಡ ಶಿವಾಚಾರ್ಯರ ಗುರುಕುಲದಲ್ಲಿ ದಾಸಿಮಯ್ಯನವರು.

ಪ್ರ. ಜೇಡರ ದಾಸಿಮಯ್ಯರು ವೃತ್ತಿ ಏನಾಗಿತ್ತು ?
ಉ. ಜೇಡರ ದಾಸಿಮಯ್ಯರು ವೃತ್ತಿಯಲ್ಲಿ ನೇಕಾರರಾಗಿದ್ದರು.

ಪ್ರ. ಜೇಡರ ದಾಸಿಮಯ್ಯರ ಆರಾಧ್ಯ ದೈವ ಯಾವುದು ?
ಉ. ಮುದನೂರು ಗ್ರಾಮದಲ್ಲಿದ್ದ “ರಾಮನಾಥ” ದೇವರು ಜೇಡರ ದಾಸಿಮಯ್ಯರ ಆರಾಧ್ಯ ದೈವ.