Akbar Birbal Stories in Kannada

Akbar Birbal Stories in Kannada | ಅಕ್ಬರ್ ಬೀರ್ಬಲ್ ಕಥೆಗಳು

akbar birbal stories in kannada

Here you will find some best Akbar Birbal stories in Kannada language. Akbar was the Mughal emperor, his advisor Birbal. These stories not only entertain the children but also show the wisdom of the Birbal. Quality such as presence of mind makes Birbal unique. These Akbar and Birbal stories in Kannada helps in developing positive thinking among children.

Akbar Birbal stories in Kannada | ಅಕ್ಬರ್ ಬೀರ್ಬಲ್ ಕಥೆಗಳು

ನ್ಯಾಯ ಮತ್ತು ಚಿನ್ನದ ನಾಣ್ಯ | Justice and The Gold Coin ಅಕ್ಬರ್ ಬೀರ್ಬಲ್ ಕಥೆಗಳು

nyaya matthu nanya

ಒಂದು ದಿನ ರಾಜ ಅಕ್ಬರನ ಆಸ್ಥಾನದಲ್ಲಿ ರಾಜ ಅಕ್ಬರ್, ಬೀರ್ಬಲ್ಗೆ “ನಿಮ್ಮ ಮುಂದೆ ನ್ಯಾಯ ಮತ್ತು ಚಿನ್ನದ ನಾಣ್ಯ ಎಂಬ ಎರಡು ಆಯ್ಕೆಗಳನ್ನು ಇಟ್ಟರೆ, ನೀನು ಯಾವುದನ್ನು ಆರಿಸುತ್ತೀ?” ಎಂದು ಪ್ರಶ್ನೆ ಕೇಳಿದನು.

ಇದಕ್ಕೆ ಬೀರ್ಬಲ್ ಹೆಚ್ಚು ಸಮಯ ತೆಗೆದುಕೊಳ್ಳದೆ, “ರಾಜರೇ, ನಾನು ಖಂಡಿತವಾಗಿಯೂ ಚಿನ್ನದ ನಾಣ್ಯವನ್ನು ಆಯ್ಕೆ ಮಾಡುತ್ತೇನೆ” ಎಂಬ ಉತ್ತರವನ್ನು ನೀಡಿದನು. ಬೀರ್ಬಲ್ನ ಉತ್ತರದಿಂದ ರಾಜ ಅಕ್ಬರ್ ಸೇರಿದಂತೆ ಆಸ್ಥಾನದಲ್ಲಿ ನೆರೆದಿದ್ದ ಎಲ್ಲರೂ ಗಾಬರಿಗೊಂಡರು. ಎಲ್ಲರೂ ಬೀರ್ಬಲ್ನ ಈ ತಪ್ಪಿಗೆ ರಾಜ ಸರಿಯಾದ ಶಿಕ್ಷೆ ನೀಡುತ್ತಾನೆ ಎಂದು ಭಾವಿಸಿದರು.

ಇದನ್ನು ಕೇಳಿದ ರಾಜ ಅಕ್ಬರ್ ನಿರಾಶೆಯಿಂದ, “ನ್ಯಾಯದಂತಹ ಬೆಲೆಬಾಳುವ ವಸ್ತುವಿನ ಎದುರು ಚಿನ್ನದ ನಾಣ್ಯದಂತಹ ಕಡಿಮೆ ಮೌಲ್ಯವಿರುವ ವಸ್ತುವನ್ನು ಏಕೆ ಆರಿಸುತ್ತೀರಿ?” ಎಂದು ಕೇಳಿದನು. ಆಗ ಬೀರಬಲ್ ಅದಕ್ಕೆ , “ರಾಜರೇ, ನಮ್ಮ ರಾಜ್ಯದಲ್ಲಿ ನ್ಯಾಯದ ಕೊರತೆಯಿಲ್ಲ ಮತ್ತು ಅದರ ಬಗ್ಗೆ ಚಿಂತಿಸುವ ಅಗತ್ಯತೆ ಕೂಡ ಇಲ್ಲ. ನಿಮ್ಮ ರಾಜ್ಯದಲ್ಲಿ ಎಲ್ಲೆಡೆ ನ್ಯಾಯವಿದೆ. ನನ್ನ ಬಳಿ ಇರುವುದನ್ನು ಕೇಳುವ ಅಗತ್ಯವಿಲ್ಲ ಎಂದು ನಾನು ಭಾವಿಸಿದೆ. ನನ್ನ ಬಳಿ ಹಣದ ಕೊರತೆಯಿದೆ, ನನಗೆ ಖಂಡಿತವಾಗಿಯೂ ಚಿನ್ನದ ನಾಣ್ಯದ ಅವಶ್ಯಕತೆ ಇದೆ” ಎಂದು ಬೀರ್ಬಲ್ ಉತ್ತರಿಸಿದನು.

ಈ ಉತ್ತರವನ್ನು ಕೇಳಿ ರಾಜ ಅಕ್ಬರ್ ಸಂತೋಷಗೊಂಡು ಬೀರಬಲ್ಗೆ 100 ಚಿನ್ನದ ನಾಣ್ಯಗಳನ್ನು ಬಹುಮಾನವಾಗಿ ನೀಡಿದರು.


ಚಕ್ರವರ್ತಿ ಯಾರು? | Who is the King ? – Akbar Birbal Stories in Kannada

akbar birbal stories in kannada

ಒಮ್ಮೆ ಕಾರ್ಯದ ನಿಮಿತ್ತ ಒಂದು ರಾಜ್ಯಕ್ಕೆ ಭೇಟಿ ನೀಡಬೇಕಾದ ಸಂದರ್ಭ ಬಂದಾಗ ಬೀರ್ಬಲ್ ಅಕ್ಬರನ ರಾಯಭಾರಿಯಾಗಿ ಆ ರಾಜ್ಯಕ್ಕೆ ಭೇಟಿ ನೀಡಿದನು. ಬೀರ್ಬಲ್ ನ ಬುದ್ಧಿವಂತಿಕೆಯ ಕುರಿತಾಗಿ ಹಲವು ಬಾರಿ ಕೇಳಿದ್ದ ಆ ರಾಜ್ಯದ ದೊರೆ ಅದನ್ನು ಪರೀಕ್ಷೆ ಮಾಡಲು ಇಚ್ಛಿಸಿದನು. ರಾಜನು ತಾನು ಧರಿಸುವಂತೆ ಒಂದು ಡಜನ್ ಬಟ್ಟೆ ತಂದು ತನ್ನ ಆಸ್ಥಾನದಲ್ಲಿರುವರಿಗೆ ಧರಿಸಲು ಹೇಳಿ  ಮತ್ತು ಅವರನ್ನು ತಾನು ಕೂರುವಂತ ಸಿಂಹಾಸನ ತಯಾರಿಸಿ ಎಲ್ಲರನ್ನೂ ಸಿಂಹಾಸನದ ಮೇಲೆ ಕೂರುವಂತೆ ಹೇಳಿದನು.

ಬೀರಬಲ್ ರಾಜನ ಆಸ್ಥಾನವನ್ನು ಪ್ರವೇಶಿಸಿದ ಮತ್ತು ರಾಜನಂತೆ ಕಾಣುವ 13 ಆಡಳಿತಗಾರರು ಅವನನ್ನು ಸ್ವಾಗತಿಸಿದರು.

ಬುದ್ದಿವಂತ ಬೀರ್ಬಲ್ ಗೆ ರಾಜ ತನ್ನನ್ನು ಪರೀಕ್ಷಿಸುತ್ತಿರುವುದಾಗಿ ತಿಳಿಯಿತು. ಅವನು ಒಂದು ಸುತ್ತು ಹೊಡೆದು ಎಲ್ಲ ರಾಜರನ್ನು  ನೋಡಿದನು. ಎಲ್ಲ ರಾಜರನ್ನು ನೋಡಿದ ನಂತರ ಬೀರಬಲ್ ಒಬ್ಬ ರಾಜನ ಬಳಿ ಬಂದು, ನಮಸ್ಕರಿಸಿದನು.

ಇದನ್ನು ಕಂಡು ರಾಜನು ಆಶ್ಚರ್ಯಚಕಿತನಾದನು ಮತ್ತು ತನ್ನಂತೆ ಕಾಣುವ ಇತರರು ಇದ್ದರೂ ತಾನೇ ರಾಜ ಎಂದು ಹೇಗೆ ಕಂಡು ಹಿಡಿದನು ಎಂದು ಮನಸ್ಸಿನಲ್ಲಿ ಯೋಚಿಸಿದನು.

ಇದರ ಬಗ್ಗೆ ಬೀರ್ಬಲ್ ನ ಬಳಿ “ನಾವು ಹಿಂದೆ ಎಂದೂ ಭೇಟಿ ಮಾಡಿಲ್ಲ, ಆದರೂ ನಾನೇ ರಾಜ ಎಂದು ಹೇಗೆ ಕಂಡು ಹಿಡಿದೆ ?” ಎಂದು ವಿಚಾರಿಸಿದನು.

ಅದಕ್ಕೆ ಬೀರ್ಬಲ್, “ನಾನು ಒಂದು ಸುತ್ತು ಬಂದು ಎಲ್ಲರ ಮುಖವನ್ನು ಪರೀಕ್ಷಿಸುತ್ತಿರುವಾಗ ನೀವು ನನ್ನ ಕಡೆ ನೋಡದೆ ನೇರವಾಗಿ ನೋಡುತ್ತ ಇದ್ದೀರಿ, ನಿಮ್ಮ ಗಾಂಭೀರ್ಯ ಮತ್ತು ಮುಖದಲ್ಲಿದ್ದ ಆತ್ಮವಿಶ್ವಾಸ ನಿಮ್ಮನ್ನು ಗುರುತಿಸುವಲ್ಲಿ ಸಹಾಯ ಮಾಡಿತು” ಎಂದು ಉತ್ತರಿಸಿದನು.

ಹೀಗೆ ವರ್ತಿಸಲು ಒಬ್ಬ ಚಕ್ರವರ್ತಿಗೆ ಮಾತ್ರ ಸಾಧ್ಯ ಎಂದು ಬೀರ್ಬಲ್ ಉತ್ತರಿಸಿದ, ಅದಕ್ಕೆ ರಾಜ ಪ್ರತ್ಯುತ್ತರವಾಗಿ ನಿನ್ನ ಬುದ್ಧಿವತಿಕೆಯ ಬಗ್ಗೆ ಕೇಳಿದ್ದೆ ಆದರೀಗ ಕಣ್ಣಾರೆ ಕಂಡೆ ಎಂದು ಹೇಳಿದನು.


ಇನ್ನೊಬ್ಬ ಅತಿಥಿ | Another Guest – Akbar Birbal Stories in Kannada

stories akbar birbal kannada

ಒಮ್ಮೆ ಧನಿಕನೊಬ್ಬ ಔತಣಕೂಟ ಏರ್ಪಡಿಸಿ ಬೀರ್ಬಲ್ ಅನ್ನು ಆಹ್ವಾನಿಸಿದ. ಬೀರ್ಬಲ್ ಆ ಧನಿಕನ ಮನೆಗೆ ಬಂದಾಗ ಇತರ ಅತಿಥಿಗಳನ್ನು ಕಂಡನು. ಇದನ್ನು ಗಮನಿಸಿದ ಆ ಧನಿಕನಿಗೆ “ನೀವು ಇತರ ಅತಿಥಿಗಳನ್ನು ಆಹ್ವಾನಿಸಿದ್ದೀರೆಂದು ನನಗೆ ತಿಳಿದಿರಲಿಲ್ಲ” ಎಂದನು.

ಅದಕ್ಕೆ ಉತ್ತರವಾಗಿ ಆ ಧನಿಕ “ಇಲ್ಲ. ಇವರು ಅತಿಥಿಗಳಲ್ಲ, ಇವರು ನಮ್ಮ ವ್ಯಾಪಾರದ ಭಾಗವಾಗಿರುವ ಕೆಲಸಗಾರರು. ಆದರೆ ಇಲ್ಲಿ ನಿಮ್ಮಂತೆಯೇ ಒಬ್ಬ ಅತಿಥಿ ಕೂಡ ಇದ್ದಾರೆ. ನೀವು ಅವರು ಯಾರೆಂದು ಕಂಡು ಹಿಡಿಯುವಿರೆ ?” ಎಂದು ಕೇಳಿದ.

ಇದಕ್ಕೆ ಬೀರ್ಬಲ್ “ಅತಿಥಿ ಯಾರೆಂದು ಕಂಡು ಹಿಡಿಯಲು ನಾನು ಸಿದ್ಧ. ಆದರೆ ಅದಕ್ಕೂ ಮುಂಚೆ ನೀವೂ ಎಲ್ಲರಿಗೂ ಒಂದು ಹಾಸ್ಯದ ಸನ್ನಿವೇಶ ಹೇಳಬೇಕು” ಎಂದು ಬೀರ್ಬಲ್ ಉತ್ತರಿಸಿದ.

ಆ ಧನಿಕ ಎಲ್ಲರಿಗೂ ಹಾಸ್ಯದ ಒಂದು ಸನ್ನಿವೇಶ ಕುರಿತು ವಿವರಿಸಿದ, ಅದನ್ನು ಕೇಳಿದ ಮೇಲೆ ಅಲ್ಲಿ ನೆರೆದಿದ್ದ ಎಲ್ಲರೂ ನಗೆಗಡಲಲ್ಲಿ ಮುಳುಗಿದರು.

ಇದನ್ನು ಗಮನಿಸಿದ ಬೀರಬಲ್ ತಕ್ಷಣ ಅಲ್ಲಿ ಇದ್ದ ಒಬ್ಬ ವ್ಯಕ್ತಿಯ ಕಡೆ ತೋರಿಸಿ ಈತನೇ ಆ ಅತಿಥಿ ಎಂದು ಹೇಳಿದ.

ಅಲ್ಲಿದ್ದವರೆಲ್ಲ “ಹೌದು. ಆತನೇ ಆ ಅತಿಥಿ. ಆದರೆ ನೀವು ಹೇಗೆ ಪತ್ತೆ ಮಾಡಿದಿರಿ ?” ಎಂದು ಕೇಳಿದರು.

ಅದಕ್ಕೆ ಬೀರ್ಬಲ್ “ನೀವು ಹೇಳಿದ ಹಾಸ್ಯ ಸನ್ನಿವೇಶ, ಹಾಸ್ಯ ತರಿಸುವಷ್ಟು ಉತ್ತಮವಾಗಿರಲಿಲ್ಲ. ಆದರೂ ನಿಮ್ಮ ಉದ್ಯೋಗಿಗಳು ನಗಲು ಆರಂಭಿಸಿದರು. ಏಕೆಂದರೆ ನೀವು ಅವರ ಒಡೆಯನಲ್ಲವೇ? ಆದರೆ ನಿಮ್ಮ ಅತಿಥಿ ಮಾತ್ರ ಅಷ್ಟೇನೂ ನಗದೇ ಕೇವಲ ಮುಗುಳ್ನಕ್ಕು ಸುಮ್ಮನಾದರು” ಎಂದು ಉತ್ತರಿಸಿದ.


ಕೇವಲ ಒಂದು ಪ್ರಶ್ನೆ | Only one Question – Akbar Birbal Stories in Kannada

birbal stories in kannada

ಒಮ್ಮೆ ಪಂಡಿತರೊಬ್ಬರು ಬೀರ್ಬಲ್ ನ ಬುದ್ಧಿವಂತಿಕೆಯನ್ನು ಪರೀಕ್ಷೆ ಮಾಡುವ ಯೋಚನೆಯಿಂದ ಅಕ್ಬರನ ಆಸ್ಥಾನಕ್ಕೆ ಬಂದರು. ಪಂಡಿತನು ರಾಜನಿಗೆ, “ತಾನು ದೊಡ್ಡ ಜ್ಞಾನಿ ಮತ್ತು ಬೀರ್ಬಲ್ ಸೇರಿದಂತೆ ಇಲ್ಲಿರುವ ಯಾರೂ ಕೂಡ ನನ್ನ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗುವುದಿಲ್ಲ” ಎಂದು ಹೇಳಿದ. ಅಕ್ಬರ್ ಬೀರ್ಬಲ್ನನ್ನು ಆಸ್ಥಾನಕ್ಕೆ ಕರೆದು ಪಂಡಿತನನ್ನು ಪರಿಚಯಿಸಿ ಪಂಡಿತರ ಸವಾಲಿನ ಕುರಿತು ಬೀರ್ಬಲ್ ಗೆ ವಿವರಿಸಿದ.

ಅದಕ್ಕೆ ಬೀರಬಲ್ ಪಂಡಿತರ ಸವಾಲನ್ನು ಸ್ವೀಕರಿಸಲು ತಾನು ಸಿದ್ಧ ಎಂದು ಉತ್ತರಿಸಿದನು.

ಪಂಡಿತರು ಬೀರ್ಬಲ್ ಗೆ, “ನಾನು ನಿಮಗೆ ಎರಡು ಆಯ್ಕೆಗಳನ್ನು ಕೊಡುತ್ತೇನೆ. ನೀವು ಯಾವುದಾದರೂ ಒಂದು ಆಯ್ಕೆಯನ್ನು ಆರಿಸಿಕೊಳ್ಳಬೇಕು. ನೀವು ನೂರು ಸುಲಭವಾದ ಪ್ರಶ್ನೆಗಳಿಗೆ ಉತ್ತರಿಸಲು ಇಷ್ಟ ಪಡುತ್ತೀರೋ ಅಥವಾ ಒಂದು ಕಷ್ಟವಾದ  ಪ್ರಶ್ನೆ ಉತ್ತರಿಸಲು ಇಷ್ಟ ಪಡುತ್ತೀರೋ? ” ಎಂದು ಕೇಳಿದನು.

ಅದಕ್ಕೆ ಬೀರ್ಬಲ್ ನಾನು ಒಂದು ಕಷ್ಟದ ಪ್ರಶ್ನೆಗೆ ಉತ್ತರಿಸಲು ಇಷ್ಟ ಪಡುತ್ತೇನೆ ಎಂದು ಹೇಳಿದರು. ಪಂಡಿತರು, “ಕೋಳಿ ಮೊದಲೋ ಅಥವಾ ಮೊಟ್ಟೆ ಮೊದಲೋ ?” ಎಂಬ ಪ್ರಶ್ನೆ ಮುಂದಿಟ್ಟರು. ಬೀರ್ಬಲ್ ಸ್ವಲ್ಪ ಸಮಯ ಯೋಚಿಸಿದ ನಂತರ, ” ಮೊದಲು ಕೋಳಿ ಬಂದಿತು” ಎಂಬ ಉತ್ತರ ನೀಡಿದ.

ಅದಕ್ಕೆ ಪಂಡಿತ, “ಅದು ಹೇಗೆ ನೀವು ಅಷ್ಟು ಖಚಿತವಾಗಿ ಹೇಳುತ್ತೀರಿ?” ಎಂದು ಕೇಳಿದಾಗ, “ನಾನು ಕೇವಲ ಒಂದು ಕಠಿಣ ಪ್ರಶ್ನೆಗೆ ಉತ್ತರಿಸುವುದನ್ನು ಮಾತ್ರ ಆಯ್ಕೆ ಮಾಡಿಕೊಂಡಿದ್ದೆ ಮತ್ತು ಆ ಪ್ರಶ್ನೆಗೆ ಈಗಾಗಲೇ ಉತ್ತರ ನೀಡಿದ್ದೇನೆ ” ಎಂದು ಹೇಳಿದ. ಪಂಡಿತ ತನ್ನ ಮೂರ್ಖತನಕ್ಕೆ ನಾಚಿಕೆ ಪಟ್ಟು ಅಲ್ಲಿಂದ ಹೊರಟುಹೋದನು.


ಅರ್ಧ ಸೂರ್ಯ, ಅರ್ಧ ನೆರಳು | Half Sun Half Shade – Akbar Birbal Stories in Kannada

akbar birbal stories kannada

ಒಮ್ಮೆ ಅಕ್ಬರ್ ಬೀರ್ಬಲ್ನ ಮೇಲೆ ತುಂಬಾ ಕೋಪಗೊಂಡು, ಅವನು ಬೀರ್ಬಲ್ಗೆ ತನ್ನ ರಾಜ್ಯವನ್ನು ಶಾಶ್ವತವಾಗಿ ತೊರೆಯುವಂತೆ ಹೇಳಿದನು. ಬೀರ್ಬಲ್ ಅದಕ್ಕೆ ಯಾವುದೇ ಪ್ರತಿಕ್ರಿಯೆ ನೀಡದೆ ರಾಜನ ಆಜ್ಞೆ ಪಾಲಿಸುವ ಉದ್ದೇಶದಿಂದ ದೂರದ ಹಳ್ಳಿಗೆ ಬಂದು ಅಲ್ಲಿ ನೆಲೆಸಿದನು. ಬೀರ್ಬಲ್ ದೂರವಾದ ನಂತರ ರಾಜ ಅಕ್ಬರ್ ತುಂಬಾ ದುಃಖಿತನಾಗಿದ್ದನು. ಬೀರ್ಬಲ್ ಅನ್ನು ಮತ್ತೆ ರಾಜ್ಯಕ್ಕೆ ಕರೆತರಬೇಕೆಂದು ನಿರ್ಧರಿಸಿದನು. ಅಕ್ಬರ್ ತನ್ನ ಜನರನ್ನು ರಾಜ್ಯದಾದ್ಯಂತ ಕಳುಹಿಸಿ ಬೀರ್ಬಲ್ನನ್ನು ಪತ್ತೆಹಚ್ಚಲು ಹೇಳಿದನು. ಆದರೆ ಬೀರ್ಬಲ್ ಎಲ್ಲಿದ್ದಾನೆಂದು ಯಾರಿಗೂ ಕಂಡು ಹಿಡಿಯಲಾಗಲಿಲ್ಲ.

ಇದಕ್ಕೆ ರಾಜ ಅಕ್ಬರ್ ಒಂದು ಉಪಾಯ ಮಾಡಿ, ಅರ್ಧ ಸೂರ್ಯ ಮತ್ತು ಅರ್ಧ ನೆರಳಿನಲ್ಲಿ ರಾಜನನ್ನು ಭೇಟಿ ಮಾಡಲು ಬರುವವರಿಗೆ ಬಹುಮಾನ ನೀಡಲಾಗುವುದು ಎಂದು ಘೋಷಿಸಿದನು. ಜನರೆಲ್ಲಾ ಈ ಸವಾಲನ್ನು ಬಗೆಹರಿಸಲು ಪ್ರಯತ್ನಿಸಿದರು ಆದರೆ ಯಶಸ್ವಿ ಆಗಲಿಲ್ಲ. ಬೀರ್ಬಲ್ ಗೆ ಇದರ ಬಗ್ಗೆ ತಿಳಿದಾಗ, ಅವನು ತನ್ನ ನೆರೆಯವರನ್ನು ಕರೆದು ನೇಯ್ದ ಹಾಸಿಗೆಯನ್ನು ತನ್ನ ತಲೆಯ ಮೇಲೆ ಇರಿಸಿಕೊಂಡು ರಾಜನ ಆಸ್ಥಾನಕ್ಕೆ ಭೇಟಿ ನೀಡುವಂತೆ ಹೇಳಿದನು. ಆ ವ್ಯಕ್ತಿ ಬೀರ್ಬಲ್ ಹೇಳಿದಂತೆ ಮಾಡಿ ವಿಜೇತನಾದನು.

ಇದು ಆ ವ್ಯಕ್ತಿಯ ಉಪಾಯವಲ್ಲ ಎಂದು ಅಕ್ಬರ್ಗೆ ತಿಳಿಯಿತು, ಅವನನ್ನು ಹಿಂಬಾಲಿಸಿ ಇದರ ಇದರ ಹಿಂದೆ ಯಾರಿದ್ದಾರೆ ಎಂದು ಪತ್ತೆ ಹಚ್ಚುವಂತೆ ತನ್ನ ಸೇವಕರಿಗೆ ಹೇಳಿದನು. ಸೇವಕರು ಈತನ ಹಳ್ಳಿಗೆ ಬಂದು ಒಬ್ಬ ಬ್ರಾಹ್ಮಣ ಆ ಗ್ರಾಮದಲ್ಲಿ ಕೆಲವು ತಿಂಗಳುಗಳಿಂದ ಇರುವುದನ್ನು ಅಕ್ಬರ್ಗೆ ತಿಳಿಸಿದರು. ಆ ಬ್ರಾಹ್ಮಣ ಬೀರ್ಬಲ್ ಎಂದು ರಾಜನಿಗೆ ಅರಿವಾಯಿತು. ಅಕ್ಬರ್ ಬೀರ್ಬಲ್ ಅನ್ನು ಮರಳಿ ಕರೆತರಲು ತನ್ನ ಸಿಬ್ಬಂದಿಗೆ ಆದೇಶಿಸಿ ಮತ್ತೆ ಬೀರ್ಬಲ್ನನ್ನು ತನ್ನ ಆಸ್ಥಾನಕ್ಕೆ ಕರೆಸಿಕೊಂಡನು.


ಬೀರಬಲ್‌ನ ಅಡುಗೆ |  Birbal’s Cooking – Akbar Birbal Stories in Kannada

birbal stories kannada

ಒಂದು ಚಳಿಗಾಲದ ದಿನದಂದು, ಅಕ್ಬರ್ ಮತ್ತು ಬೀರ್ಬಲ್ ಸರೋವರದ ಬಳಿ ವಾಯುವಿಹಾರದಲ್ಲಿ ತೊಡಗಿದ್ದರು. ಅಕ್ಬರ್ ನಿಲ್ಲಿಸಿ ಹೆಪ್ಪುಗಟ್ಟುವ ನೀರಿನಲ್ಲಿ ಬೆರಳನ್ನು ಹಾಕಿ ತಕ್ಷಣ ಅದನ್ನು ಹೊರತೆಗೆದನು. “ಈ ತಣ್ಣನೆಯ ನೀರಿನಲ್ಲಿ ನಿಂತು ಯಾರೂ ರಾತ್ರಿಯನ್ನು ಕಳೆಯಲು ಸಾಧ್ಯವಿಲ್ಲ ಎಂದು ನಾನು ಭಾವಿಸುತ್ತೇನೆ” ಎಂದು ಅಕ್ಬರ್ ಹೇಳಿದನು. ಸರೋವರದ ತಣ್ಣೀರಿನಲ್ಲಿ ನಿಂತು ರಾತ್ರಿ ಕಳೆಯುವವರಿಗೆ 1000 ಚಿನ್ನದ ನಾಣ್ಯಗಳನ್ನು ಬಹುಮಾನವಾಗಿ ಕೊಡುವುದಾಗಿ ರಾಜ ಅಕ್ಬರ್ ಹೇಳಿದನು. ಬೀರ್ಬಲ್ ಅದನ್ನು ಸವಾಲಾಗಿ ಸ್ವೀಕರಿಸಿ ಮತ್ತು ಈ ಕೆಲಸ ಮಾಡಬಲ್ಲವರನ್ನು ನಾನು ಕಂಡು ಹಿಡಿಯುತ್ತೇನೆ ಎಂದು ಹೇಳಿದನು.

ಶೀಘ್ರದಲ್ಲೇ, ಈ ಸವಾಲನ್ನು ಎದುರಿಸುವಂತಹ ಬಡ ವ್ಯಕ್ತಿಯನ್ನು ಪತ್ತೆ ಮಾಡಿದರು. ರಾಜನು ಈ ಕೆಲಸಕ್ಕೆ ಇಬ್ಬರು ಕಾವಲುಗಾರನು ನೇಮಿಸಿ ಇಡೀ ರಾತ್ರಿ ಆ ವ್ಯಕ್ತಿಯ ಮೇಲೆ ಕಣ್ಣಿಡಲು ಹೇಳಿದನು. ಮಾರನೆಯ ದಿನ ಬಡವನನ್ನು ಬಹುಮಾನ ನೀಡುವುದಕ್ಕಾಗಿ ಆ ವ್ಯಕ್ತಿಯನ್ನು ಆಸ್ಥಾನಕ್ಕೆ ಕರೆ ತರಲಾಯಿತು. ರಾಜ ಆ ವ್ಯಕ್ತಿಗೆ,  “ನೀವು ರಾತ್ರಿಯಿಡಿ ತಣ್ಣೀರಲ್ಲಿ ಹೇಗೆ ನಿಂತಿದ್ದೀರಿ ?” ಎಂದು ಪ್ರಶ್ನಿಸಿದನು. ಅದಕ್ಕೆ ಆ ವ್ಯಕ್ತಿ, “ದೊರೆ ನಾನು ದೂರದಲ್ಲಿ ಉರಿಯುತ್ತಿರುವ ದೀಪವನ್ನು ನೋಡುತ್ತಾ ನಿಂತಿದ್ದೆ” ಎಂದು ಉತ್ತರಿಸಿದನು.

ಇದನ್ನು ಕೇಳಿದ ಅಕ್ಬರ್, “ಈ ಮನುಷ್ಯನು ಬಹುಮಾನಕ್ಕೆ ಅರ್ಹನಲ್ಲ, ಏಕೆಂದರೆ ಅವನು ದೂರದಲ್ಲಿದ್ದ ದೀಪದ ಉಷ್ಣತೆಯಿಂದ ಸರೋವರದಲ್ಲಿ ನಿಲ್ಲಲು ಸಾಧ್ಯವಾಯಿತು” ಎಂದು ಹೇಳಿದನು. ಇದನ್ನು ಕೇಳಿದ ವ್ಯಕ್ತಿ ದುಃಖದಿಂದ ಸಹಾಯಕ್ಕಾಗಿ ಬೀರ್ಬಲ್ ಅವರನ್ನು ಭೇಟಿ ಮಾಡಿ ನಡೆದದ್ದನ್ನೆಲ್ಲ ವಿವರಿಸಿದನು. ಅದಕ್ಕೆ ಬೀರಬಲ್ ನಾನು ನಿನ್ನ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದನು. ಮರುದಿನ ಬೀರಬಲ್ ರಾಜನ ಆಸ್ಥಾನಕ್ಕೆ ಹೋಗಲಿಲ್ಲ. ಬೀರ್ಬಲ್ ಇಂದು ಆಸ್ಥಾನಕ್ಕೆ ಏಕೆ ಬರಲಿಲ್ಲವೆಂದು ತಿಳಿಯಲು ಅವನ ಮನೆಗೆ ಅಕ್ಬರ್ ಭೇಟಿ ನೀಡಿದನು.

ಅಕ್ಬರ್ ಬೆಂಕಿಯ ಪಕ್ಕದಲ್ಲಿ ಸುಮಾರು 5 ಅಡಿ ದೂರದಲ್ಲಿ ನೇತಾಡುವ ಮಡಕೆಯನ್ನು ಕಂಡನು. ಇದರ ಬಗ್ಗೆ ಅಕ್ಬರ್ , ಬೀರ್ಬಲ್ಗೆ  ಕೇಳಿದಾಗ, “ನಾನು ಅಡುಗೆ ಮಾಡುತ್ತಿದ್ದೇನೆ” ಎಂದು ಬೀರ್ಬಲ್ ಉತ್ತರಿಸಿದನು. ಇದನ್ನು ಕೇಳಿದ ನಂತರ ಅಕ್ಬರ್ ನಗಲು ಪ್ರಾರಂಭಿಸಿದನು ಮತ್ತು ಇದು ಸಾಧ್ಯವಿಲ್ಲವೆಂದು ಹೇಳಿದನು. ಅದಕ್ಕೆ ಬೀರಬಲ್, “ಇದು ಸಾಧ್ಯ. ಒಬ್ಬ ಬಡ ವ್ಯಕ್ತಿ ದೂರದಲ್ಲಿ ಉರಿಯುತ್ತಿರುವ ದೀಪವನ್ನು ನೋಡುತ್ತಾ ರಾತ್ರಿಯಿಡಿ ತಣ್ಣೀರಿನಲ್ಲಿ ನಿಲ್ಲಲು ಸಾಧ್ಯವಾದರೆ, ನಾನು ಕೂಡ ಅದೇ ರೀತಿಯಲ್ಲಿ ಅಡಿಗೆಯನ್ನು ತಯಾರಿಸಲು ಸಾಧ್ಯವೆಂಬ ಉತ್ತರ ನೀಡಿದನು. ಅಕ್ಬರ್ ಗೆ ತನ್ನ ತಪ್ಪಿನ ಅರಿವಾಗಿ ಆ ಬಡ ವ್ಯಕ್ತಿಗೆ ಬಹುಮಾನ ನೀಡಿದನು.


ರೂಸ್ಟರ್ ಮತ್ತು ಕೋಳಿಗಳು | Rooster and Hens – ಅಕ್ಬರ್ ಬೀರ್ಬಲ್ ಕಥೆಗಳು

akbar birbal stories kannada

ಒಮ್ಮೆ ಅಕ್ಬರ್ ಬೀರ್ಬಲ್ನ ಬುದ್ಧಿವಂತಿಕೆಯನ್ನು ಪರೀಕ್ಷೆ ಮಾಡಲು ನಿರ್ಧರಿಸುತ್ತಾನೆ. ಅವನು ತನ್ನ ಆಸ್ಥಾನಿಕರಿಗೆ ಬರ ಹೇಳಿ, ಅವರಿಗೆ ಯೋಜನೆಯ ಬಗ್ಗೆ ವಿವರಿಸುತ್ತಾನೆ ಮತ್ತು ಎಲ್ಲರಿಗೂ ಒಂದೊಂದು ಮೊಟ್ಟೆಯನ್ನು ನೀಡುತ್ತಾನೆ. ಮಾರನೆಯ ದಿನ ಆಸ್ಥಾನಕ್ಕೆ ಬರುವ ಸಂದರ್ಭದಲ್ಲಿ ಮೊಟ್ಟೆಯನ್ನು ತಮ್ಮ ಬಟ್ಟೆಯಲ್ಲಿ ಬಚ್ಚಿಟ್ಟುಕೊಂಡು ತರುವಂತೆ ಹೇಳಿ ಕಳುಹಿಸುತ್ತಾನೆ.

ಮರುದಿನ, ಆಸ್ಥಾನದಲ್ಲಿ ಅಕ್ಬರ್ ತನ್ನ ಆಸ್ಥಾನಿಕರ ಪ್ರಾಮಾಣಿಕತೆಯನ್ನು ಪರೀಕ್ಷಿಸಲು ನಿರ್ಧರಿಸಿರುವುದಾಗಿ ಮತ್ತು ಎಲ್ಲಾ ಆಸ್ಥಾನಿಕರು ರಾಜನ ಕೊಳಕ್ಕೆ ಹೋಗಿ ಒಂದೊಂದು ಮೊಟ್ಟೆಯನ್ನು ತರಬೇಕೆಂದು ಆದೇಶಿಸುತ್ತಾನೆ. ಯಾರಿಗೆ ಮೊಟ್ಟೆ ದೊರೆಯುತ್ತದೋ ಅವರು ರಾಜನಿಗೆ ನಿಷ್ಠಾವಂತರು ಮತ್ತು ಯಾರಿಗೆ ಮೊಟ್ಟೆ ಸಿಗುವುದಿಲ್ಲವೋ ಅವರು ನಿಷ್ಠಾವಂತರಲ್ಲ ಎಂದು ಹೇಳುತ್ತಾನೆ.

ಆಸ್ಥಾನಿಕರು ಕೊಳಕ್ಕೆ ಹೋಗಿ ರಾಜ ನಿನ್ನೆ ಹೇಳಿದ್ದಂತೆ ತಮ್ಮ ಬಟ್ಟೆಯಲ್ಲಿ ಬಚ್ಚಿಟ್ಟುಕೊಂಡಿದ್ದ ಮೊಟ್ಟೆಯನ್ನು ಒಂದೊಂದಾಗಿ ಹಿಂತಿರುಗಿಸುತ್ತಾರೆ. ಎಲ್ಲರ ಸರದಿ ಮುಗಿದ ನಂತರ ಬೀರಬಲ್ ಕೊಳಕ್ಕೆ ಹೋಗಿ ಮೊಟ್ಟೆಯನ್ನು ಹುಡುಕುತ್ತಾನೆ. ಬೀರ್ಬಲ್ ಗೆ  ಕೊಳ ಮತ್ತು ಅದರ ಸುತ್ತಮುತ್ತ ಎಲ್ಲಿಯೂ ಮೊಟ್ಟೆ ಸಿಗುವುದಿಲ್ಲ.

ಬೀರ್ಬಲ್ ಮೊಟ್ಟೆ ಸಿಗದಿರುವ ಬಗ್ಗೆ ಆಶ್ಚರ್ಯಪಡುತ್ತಾ ಆಸ್ಥಾನಕ್ಕೆ ಹಿಂತಿರುಗುತ್ತಾನೆ. ಆಸ್ಥಾನಿಕರು ಅವನನ್ನು ನೋಡಿ  ನಗುತ್ತಿರುವುದನ್ನು ಬೀರ್ಬಲ್ ಗಮನಿಸುತ್ತಾನೆ. ಇದನ್ನು ಗಮನಿಸಿದ ಬೀರ್ಬಲ್ ಗೆ ಎಲ್ಲವೂ ಅರ್ಥವಾಗುತ್ತದೆ. ಅವನು ಕೂಡಲೇ ಅಕ್ಬರನ ಸಿಂಹಾಸನದತ್ತ ಸಮೀಪಿಸಿ, ಹುಂಜನಂತೆ ಕೂಗಲು ಆರಂಭಿಸುತ್ತಾನೆ. ಬೀರ್ಬಲ್ ನ ಈ ಕಾರ್ಯ ರಾಜ ಮತ್ತು ಆಸ್ಥಾನಿಕರನ್ನು ಆಶ್ಚರ್ಯಗೊಳಿಸುತ್ತದೆ.

ಆಗ ರಾಜ ಅಕ್ಬರ್ “ನೀನು ಏಕೆ ಹೀಗೆ ಮಾಡಿದೆ ?” ಎಂದು ಬೀರ್ಬಲ್ಗೆ ಕೇಳುತ್ತಾನೆ.

ಅದಕ್ಕೆ ಬೀರ್ಬಲ್ “ಕೋಳಿಗಳು ಮಾತ್ರ ಮೊಟ್ಟೆಗಳನ್ನು ಉತ್ಪಾದಿಸುತ್ತವೆ. ಎಲ್ಲಾ ಆಸ್ಥಾನಿಕರು ಮೊಟ್ಟೆಯನ್ನು ಪ್ರಸ್ತುತಪಡಿಸಿದ್ದರಿಂದ, ಅವರೆಲ್ಲರೂ ಕೋಳಿಗಳು. ನಾನು ಹುಂಜವಾಗಿರುವುದರಿಂದ, ನಾನು ಯಾವುದೇ ಮೊಟ್ಟೆಗಳನ್ನು ಉತ್ಪಾದಿಸಲು ಸಾಧ್ಯವಾಗಲಿಲ್ಲ. ಅದಕ್ಕೆ ನಾನು ನಿಮಗೆ ನಿಷ್ಠನೆಂದು ನಿರೂಪಿಸಲು ಹುಂಜದಂತೆ ಕೂಗಲು ಪ್ರಾರಂಭಿಸಿದೆ” ಎಂದು ಉತ್ತರಿಸಿದನು.

ಇದನ್ನು ಕೇಳಿದ ಅಕ್ಬರ್ ನಗಲು ಪ್ರಾರಂಭಿಸುತ್ತಾನೆ. ಈ ರೀತಿ ಬೀರ್ಬಲ್ ತನ್ನ ಬುದ್ಧಿಶಕ್ತಿಯನ್ನು ಮತ್ತೊಮ್ಮೆ ಸಾಬೀತುಪಡಿಸುತ್ತಾನೆ.

Hope you enjoyed these Akbar and Birbal stories in Kannada. The wisdom of Birbal and the combination of King Akbar and Birbal makes these stories more interesting to read.

Also Read

Moral stories in Kannada